Breaking News
Home / Breaking News / ಮಹಾರಾಷ್ಟ್ರದ ಸಾಂಗ್ಲಿ ಕಲೆಕ್ಟರ್ ನಿಂದ ಕನ್ನಡಿಗನಿಗೆ ಬಂತು ಈ ಮೇಲ್…!!

ಮಹಾರಾಷ್ಟ್ರದ ಸಾಂಗ್ಲಿ ಕಲೆಕ್ಟರ್ ನಿಂದ ಕನ್ನಡಿಗನಿಗೆ ಬಂತು ಈ ಮೇಲ್…!!

 

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ
ಜತ್ತ ತಾಲೂಕಿನಲ್ಲಿ ಪ್ರತಿಶತ 50 ಕ್ಕಿಂತಲೂ
ಅಧಿಕ ಸಂಖ್ಯೆಯಲ್ಲಿ ಕನ್ನಡಿಗರಿರುವದರಿಂದ
ಸರಕಾರಿ ದಾಖಲೆಗಳನ್ನು ಕನ್ನಡದಲ್ಲಿಯೂ
ಒದಗಿಸಬೇಕೆಂಬ ಬೇಡಿಕೆಗೆ ಸಾಂಗ್ಲಿ
ಜಿಲ್ಲಾಧಿಕಾರಿಗಳು ಕನ್ನಡಿಗರೊಬ್ಬರಿಗೆ
ಮರಾಠಿಯಲ್ಲಿ ಇ ಮೇಲ್ ಕಳಿಸಿದ್ದು
ನಿಮ್ಮ ಬೇಡಿಕೆಯನ್ನು ಸಂಬಂಧಿಸಿದ
ಇಲಾಖೆಗೆ ಕಳಿಸಲಾಗಿದೆ ಎಂದು
ಉತ್ತರಿಸಿದ್ದಾರೆ.
ಜತ್ತ ತಾಲೂಕಿನ ಬಾಲಗಾಂವದ
ಕನ್ನಡಿಗ ಶ್ರೀ ಮಲ್ಲೇಶಪ್ಪ ತೇಲಿ ಅವರು
ಕನ್ನಡದಲ್ಲಿ ಸರಕಾರಿ ದಾಖಲೆಗಳಿಗೆ
ಒತ್ತಾಯಿಸಿ ಚೆನ್ನೈದಲ್ಲಿರುವ
ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ
ಬರೆದಿದ್ದರು.ಆಯೋಗದ ಸಹಾಯಕ
ಆಯುಕ್ತರಾದ ಶ್ರೀ ಶಿವಕುಮಾರ
ಅವರು ಈ ಸಂಬಂಧ ಮಹಾರಾಷ್ಟ್ರ
ಸರಕಾರಕ್ಕೆ ಮತ್ತು ಸಾಂಗ್ಲಿ ಜಿಲ್ಲಾಧಿಕಾರಿಗೆ
ಪತ್ರ ಬರೆದಿದ್ದರು.
ಯಾವದೇ ತಾಲೂಕಿನಲ್ಲಿ
ಪ್ರತಿಶತ 15 ಕ್ಕಿಂತಲೂ ಅಧಿಕ
ಭಾಷಾ ಅಲ್ಪಸಂಖ್ಯಾತರಿದ್ದಲ್ಲಿ ಸರಕಾರಿ
ದಾಖಲೆಗಳನ್ನು ಅವರ ಭಾಷೆಯಲ್ಲಿ
ಒದಗಿಸಬೇಕೆಂಬ ನಿಯಮದ ಪ್ರಕಾರ
ಪ್ರತಿಶತ 50 ಕ್ಕಿಂತಲೂ ಅಧಿಕ
ಸಂಖ್ಯೆಯಲ್ಕಿರುವ ಜತ್ತ ,ಸೊಲ್ಲಾಪುರ
ಅಕ್ಕಲಕೋಟೆಯ ಕನ್ನಡಿಗರಿಗೆ
ಕನ್ನಡದಲ್ಲಿಯೇ ಸರಕಾರಿ ದಾಖಲೆಗಳನ್ನು
ಪೂರೈಸಬೇಕೆಂಬುದು ಅಲ್ಲಿಯ ಕನ್ನಡಿಗರ
ಬೇಡಿಕೆಯಾಗಿದೆ.ಆದರೆ ಮಹಾರಾಷ್ಟ್ರ
ಸರಕಾರ ಈ ಯಾವದೇ ಬೇಡಿಕೆಗೂ
ಸೊಪ್ಪು ಹಾಕುತ್ತಿಲ್ಲವಲ್ಲದೇ
ಅಂಗಡಿ ,ವಾಣಿಜ್ಯ ಸಂಸ್ಥೆಗಳ
ನಾಮಫಲಕಗಳಲ್ಲಿ ಕೇವಲ ಮರಾಠಿಯನ್ನು
ಮಾತ್ರ ಬಳಸಲು ಅವಕಾಶ
ನೀಡುತ್ತಿದೆ.
ಕರ್ನಾಟಕದ ಗಡಿ ಭಾಗವಾದ
ಬೆಳಗಾವಿ,ಖಾನಾಪುರ,ನಿಪ್ಪಾಣಿ
ಭಾಗಗಳಲ್ಲಿಯ ಅಲ್ಪಸಂಖ್ಯಾತ
ಮರಾಠಿಗರಿಗೆ ಕರ್ನಾಟಕ
ಸರಕಾರ ಮರಾಠಿಯಲ್ಲಿಯೇ ದಾಖಲೆ
ಒದಗಿಸಬೇಕೇಂದು ಮಹಾರಾಷ್ಟ್ರ
ಏಕೀಕರಣ ಸಮಿತಿಯ ನಾಯಕರು
ಇತ್ತೀಚೆಗೆ ರಾಜಕೀಯ ಪ್ರೇರಿತ
ಹೋರಾಟ ನಡೆಸಿದ್ದು ನೆರೆಯ
ಮಹಾರಾಷ್ಟ್ರದಲ್ಲಿ ಇದೇ ರೀತಿಯಲ್ಲಿ
ಕನ್ನಡದಲ್ಲಿ ದಾಖಲೆಗಳನ್ನು ಒದಗಿಸಲು
ಅಲ್ಲಿಯ ಸರಕಾರವನ್ನು ಒತ್ತಾಯಿಸಲು
ಸಿದ್ಧರಿದ್ದಾರೆಯೆ?
ಐವತ್ತಕ್ಕಿಂತಲೂ ಅಧಿಕ
ಪ್ರತಿಶತ ಕನ್ನಡಿಗರಿರುವ ಮಹಾರಾಷ್ಟ್ರದ
ದಕ್ಷಿಣ ಸೊಲ್ಲಾಪುರ,ಜತ್ತ,ಅಕ್ಕಲಕೋಟೆ
ಪ್ರದೇಶಗಳ ಕನ್ನಡಿಗರನ್ನು ಶೈಕ್ಷಣಿಕವಾಗಿ,
ಆರ್ಥಿಕವಾಗಿ,ಸಾಮಾಜಿಕವಾಗಿ
ಹತ್ತಿಕ್ಕುತ್ತಿರುವ ಅಲ್ಲಿಯ ಮರಾಠಿ
ಪ್ರಾಬಲ್ಯದ ಸರಕಾರಗಳು ಒಂದೆಡೆಯಾದರೆ
ಕರ್ನಾಟಕದ ಗಡಿಯಲ್ಲಿ ಇಲ್ಲಿಯ
ಸರಕಾರದಿಂದ ಎಲ್ಲ ರೀತಿಯ ಶೈಕ್ಷಣಿಕ
ಮತ್ತು ಸಾಮಾಜಿಕ ಸೌಲಭ್ಯ,ಸವಲತ್ತು
ಪಡೆದೂ ಕನ್ನಡಿಗರ ಮತ್ತು ಕರ್ನಾಟಕ
ಸರಕಾರದ ವಿರುದ್ಧವೇ ನಾಡದ್ರೋಹಿ
ಚಟುವಟಿಕೆ ನಡೆಸುತ್ತಿರುವ ನಾಡ
ವಿರೋಧಿಗಳ ದೃಶ್ಯ ಕಣ್ಣಿಗೆ
ರಾಚುತ್ತಿವೆ.
ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ,ಬೆಳಗಾವಿ

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *