ಖಾಕಿ ಖದರ್…ಮೂವರು ಕಳ್ಳರ ಅಂಧರ್…!!!!!
ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯ ಹದ್ದಿಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಜನ ಆರೋಪಿತರನ್ನು ಪತ್ತೆ ಮಾಡುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಸಫಲರಾಗಿದ್ದಾರೆ.
ಬೆಳಗಾವಿ ಗ್ರಾಮೀಣ ಪ್ರದೇಶದ ಹಂಗರಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗಳನ್ನು ದೋಚಿದ್ದ ಮೂವರು ಖದೀಮರು ಪೋಲೀಸರ ಬಲೆಗೆ ಬಿದ್ದಿದ್ದು ಆರೋಪಿಗಳಿಂದ ಸುಮಾರು ಎಂಟು ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಹಾಗು ದ್ವಿಚಕ್ರ ವಾಹನಗಳು ವಶಪಡಿಸಿಕೊಳ್ಳಲಾಗಿದೆ.
ಆರೋಪಿತರಾದ ಸುಳಗಾ ಗ್ರಾಮದ 26 ವರ್ಷದ ಯಲ್ಲಪ್ಪಾ ಭಾವುಕು ಕುಡಚಿಕರ , 26 ವರ್ಷದ ಯೋಗೇಶ್ ಮಲ್ಲಪಾ ಪಾಟೀಲ,ಮೋಹನ್ ಪರುಶರಾಮ ಪಾಟೀಲ33 ವರ್ಷ ಇವರನ್ನು ಬಂಧಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ
ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರ ಕಾರ್ಯಕ್ಕೆ ಇಲಾಖೆ ಪ್ರಶಂಸೆ ವ್ಯೆಕ್ತಪಡಿಸಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ