LOCAL NEWS

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಈ ಫೆಬ್ರವರಿಯಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಆದರೆ ಮುಂಗಾರು ಪೂರ್ವದಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ಇಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ …

Read More »

ರೇಖಾ ಗುಪ್ತಾ ದೆಹಲಿ ಸಿಎಂ ಇಂದು ಪ್ರಮಾಣ ವಚನ

ಬೆಳಗಾವಿ- ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ಕೊಡುತ್ತಾರೆ ಎನ್ನುವ ವಿಚಾರ ಈಗ ಮತ್ತೊಮ್ಮೆ ಸಾಭೀತಾಗಿದೆ. ಪ್ರಥಮ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಇಂದು ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎರಡು ಬಾರಿ ದೆಹಲಿ ಪಾಲಿಕೆಯ ನಗರ ಸೇವಕಿಯಾಗಿ ಒಂದು ಬಾರಿ ಮೇಯರ್ ಆಗಿ ಸೇವೆ ಸಲ್ಲಿಸಿದ್ದ ರೇಖಾ ಗುಪ್ತಾ ಬನಿಯಾ ಸಮಾಜಕ್ಕೆ ಸೇರಿದವರಾಗಿದ್ದು, LLB ಪದವೀಧರೆ ಬಿಜೆಪಿ ಪಕ್ಷದಲ್ಲಿ ಕ್ರೀಯಾಶೀಲರಾಗಿದ್ದ ರೇಖಾ ಗುಪ್ತಾ ಅವರನ್ನು ಬಿಜೆಪಿ …

Read More »

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂತೆ ಬೀದಿಯ ಸೋಮಪ್ಪ ಡೊಂಗರಗಾವಿ(28) ಮೃತ ದುರ್ದೈವಿಯಾಗಿದ್ದು ಮದುವೆಗೆ ಹುಡುಕಿದ್ದ ಮದುವೆ ಸಂಬಂಧಗಳೆಲ್ಲವೂ ರದ್ದಾದ ಹಿನ್ನೆಲೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.ಹೊಲದಲ್ಲಿನ ಬೇವಿನ ಗಿಡದ ತೊಂಗೆಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಹಿರೇಬಾಗೆವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಗೋವಾದಲ್ಲಿ ಕರ್ನಾಟಕದ ವಲಸೆ ಕಾರ್ಮಿಕರಿಗೆ ರಕ್ಷಣೆ ಕೊಡಿ

ಪಣಜಿ: ಜೀವನೋಪಾಯಕ್ಕಾಗಿ ಉತ್ತರ ಕರ್ನಾಟಕ ಭಾಗದಿಂದ ಗೋವಾಕ್ಕೆ ಬರುವ ಕರ್ನಾಟಕದ ವಲಸೆ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಮನವಿ ಮಾಡಿದ್ದಾರೆ. ಈ ಸಂಬಂಧ ಲಾಡ್ ಅವರು ಮನವಿ ಪತ್ರವನ್ನು ಪ್ರಮೋದ್ ಸಾವಂತ್ ಅವರಿಗೆ ಸಲ್ಲಿಸಿದ್ದಾರೆ. ಕರ್ನಾಟಕದ ವಲಸೆ ಕಾರ್ಮಿಕರ ದುಃಸ್ಥಿತಿ ಬಗ್ಗೆ ಕರ್ನಾಟಕ ಸರ್ಕಾರದ ಗಮನಕ್ಕೆ ಬಂದಿದೆ. ಪೊಲೀಸರು …

Read More »

ಮಾಜಿ ಶಾಸಕನ ಮೇಲೆ ಹಲ್ಲೆ ಮಾಡಿದ ಆರೋಪಿ ಅರೆಸ್ಟ್

ಬೆಳಗಾವಿ – ಗೋವಾ ರಾಜ್ಯದ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಮುಖ್ಯ ಆರೋಪಿಯನ್ನು ಮಾರ್ಕೆಟ್ ಠಾಣೆಯ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಗೋವಾ ಮಾಜಿ ಶಾಸಕ ಮಾಮಲೇದಾರ ಮೇಲೆ ಹಲ್ಲೆ ಪ್ರಕರಣದ ಅಟೋ ಚಾಲಕ ಆರೋಪಿ ಮುಜಾಹಿದ್ ಶಕೀಲ ಸನದಿ ಎಂಬಾತನನ್ನು ಬಂಧಿಸಲಾಗಿದೆ.ಬೆಳಗಾವಿ ಸುಭಾಶ ನಗರ ನಿವಾಸಿ ಮುಜಾಹಿದ ನನ್ನು ಬಂಧಿಸಿದ ಮಾರ್ಕೆಟ್ ಪೊಲೀಸ್ರು ತನಿಖೆ ಮುಂದುವರೆಸಿದ್ದು ಸ್ಥಳಕ್ಕೆ ಪೊಲೀಸ್ ಕಮೀಷನರ್ ಭೇಟ್ಟಿ ಪರೀಶಿಲನೆ ಮಾಡಿದ್ದಾರೆ. …

Read More »

ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಸರ್ಜರಿ ಸಕ್ಸೆಸ್…..!!!

ಬೆಳಗಾವಿ-ಗರ್ಭಿಣಿ ಮಹಿಳೆಯಲ್ಲಿದ್ದ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತಿರುವದನ್ನು ಗಮನಿಸಿದ ವೈದ್ಯರು ಹೆರಿಗೆ ನಂತರ, ನವಜಾತ ಶಿಶುವಿನ ಹೊಟ್ಟೆಯೊಳಗೆ ಬೆಳೆಯುತ್ತಿದ್ದ ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಚಂದಗಡದ 7 ತಿಂಗಳ ಗರ್ಭಿಣಿ ಮಹಿಳೆಯೋರ್ವಳನ್ನು ಗಡಹಿಂಗ್ಲಜನ ಡಾ. ಸಂಜಯ ಶಾನಬಾಗ ಅವರು ತಪಾಸಣೆಗೊಳ್ಪಡಿಸಿದಾಗ ಮೊದಲು ಚೀಲದಂತೆ ಕಂಡಿತು. ನಂತರ ಸಮಗ್ರವಾಗಿ ತಪಾಸಿಸಿದಾಗ ಭ್ರೂಣದೊಳಗೆ …

Read More »

ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಪುತ್ರ ಮೃಣಾಲ ಬರ್ತ್ ಡೇ ವಿಶ್ ಮಾಡಿದ್ದು ಹೀಗೆ…..!!!!

ಬೆಳಗಾವಿ- ಇಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಜನುಮದಿನ ಅಭಿಮಾನಿಗಳು,ಬೆಂಬಲಿಗರು ಹಿತೈಷಿಗಳು, ಹಾಗು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಬ್ಬಾಳಕರ್ ನಿವಾಸಕ್ಕೆ ತೆರಳಿ ಜನುಮದಿನದ ಶುಭಾಶಯ ಕೋರುತ್ತಿದ್ದು ಹೆಬ್ಬಾಳಕರ್ ಪುತ್ರ ಮೃಣಾಲ ತಾಯಿಗೆ ಅಮ್ಮ ನೀನೇ ನನ್ನ ಜಗತ್ತು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಬರ್ತ್ ಡೇ ವಿಶ್ ಎಲ್ಲರ ಗಮನ ಸೆಳೆಯುತ್ತಿದೆ. ಅವ್ವ ನೀನೇ ನನ್ನ ಶಕ್ತಿ,ನೀನೇ ನನಗೆ ಪ್ರೇರಣೆ,ನಿನ್ನ ಆಶೀರ್ವಾದವೇ ನನಗೆ ಶ್ರೀರಕ್ಷೆ,ನೀನೇ ನನ್ನ ಜಗತ್ತು …

Read More »

ಬೆಳಗಾವಿ ಜಿಲ್ಲೆಯ ವೀರ ಯೋಧ ನಿಧನ

ಮೂಡಲಗಿ:ಕಲ್ಲೋಳಿ ಪಟ್ಟಣದ ವೀರ ಯೋಧ ಶ್ರೀ ಪ್ರವೀಣ್ ಸುಭಾಸ್ ಖಾನಗೌಡ್ರ (24) ಅವರು ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಿಧನರಾದರು. ನಮ್ಮ ಹೆಮ್ಮೆಯ ವೀರ ಯೋಧ ದೇಶದ ರಕ್ಷಣೆಗಾಗಿ ಅವರು ಸಲ್ಲಿಸಿದ ಸೇವೆ ಎಂದೆಂದಿಗೂ ಅಮರ. ಕಲ್ಲೋಳಿ ಪಟ್ಟಣದಲ್ಲಿ 2000 ನೇ ಇಸ್ವಿಯಲ್ಲಿ ಜನಿಸಿದ ಪ್ರವೀಣ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕಲ್ಲೋಳಿ, ಖನಗಾಂವ ಗ್ರಾಮದಲ್ಲಿ ಮುಗಿಸಿ,ಪಿಯುಸಿ,ಪದವಿ ಶಿಕ್ಷಣವನ್ನು ಗೋಕಾಕದಲ್ಲಿ ಮುಗಿಸಿದರು. ಫೇ 12,2020 ರಲ್ಲಿ …

Read More »

ಭೀಮಗಡ ಅಭಯಾರಣ್ಯದಲ್ಲಿ ಸಫಾರಿ ಯೋಜನೆ ಕೈಬಿಡಲು ಒತ್ತಾಯ

ಬೆಳಗಾವಿ-ರಾಜ್ಯಸರ್ಕಾರ ಖಾನಾಪುರ ತಾಲೂಕಿನ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಸಫಾರಿ ಯೋಜನೆ ಕೈಬಿಡುವಂತೆ ಆಗ್ರಹಿಸಿ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಪದಾಧಕಾರಿಗಳು ಗುರುವಾರ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮತ್ತು ಉಪ ಅರಣ್ಯಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಖಾನಾಪುರ ತಾಲೂಕಿನ ಭೀಮಗಡ ಅಭಿಯಾರಣ್ಯದಲ್ಲಿ ಸಫಾರಿ ಯೋಜನೆ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ 18 ಕಿ.ಮೀ. ಸಫಾರಿಗಾಗಿ …

Read More »

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವರ್ಕ್ ಫ್ರಾಮ್ ಹೋಮ್….!!!

  ಬೆಳಗಾವಿ- ರಸ್ತೆ ಅಪಘಾತದದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಚವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಇಲಾಖೆಯ ಕಾರ್ಯವೈಖರಿಯನ್ನು ಆನ್ ಲೈನ್ ಮೂಲಕ ಪರಶೀಲಿಸುತ್ತಿದ್ದು ವರ್ಕ್ ಫ್ರಾಮ್ ಹೋಮ್ ಸಿಸ್ಟಮ್ ಅನುಸರಿಸುತ್ತಿದ್ದಾರೆ. ಸೋಮವಾರ,ಸಿಎಂ ಸಿದ್ರಾಮಯ್ಯ ಅವರೊಂದಿಗೆ ವಿಡಿಯೋ ಸಂವಾದದ ಮೂಲಕ ನಡೆದ 2025-2026 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರುಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ …

Read More »