ಬೆಳಗಾವಿ, ): ಇದೇ ಜೂ.29 ರಂದು ಬಕ್ರೀದ್ ಆಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಅನಧಿಕೃತವಾಗಿ ಪ್ರಾಣಿಗಳ ಹತ್ಯೆ ಅಥವಾ ಸಾಗಾಣಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಬ್ಬದ ಆಚರಣೆ ವೇಳೆ ಸರಕಾರದ ಮಾರ್ಗಸೂಚಿ ಮತ್ತು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು. ಬಕ್ರೀದ್ ಸಂದರ್ಭದಲ್ಲಿ ಅನಧಿಕೃತವಾಗಿ ಗೋವು ಹಾಗೂ ಒಂಟೆಗಳು ಸೇರಿದಂತೆ ಸಾಮೂಹಿಕ ಪ್ರಾಣಿಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ರಚಿಸಿರುವ ಜಿಲ್ಲಾ ಮಟ್ಟದ ಸಮಿತಿಯ …
Read More »ಗಂಡನ ಮರ್ಡರ್ ಮಾಡಿ, ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟ ಖಿಲಾಡಿ ಇವಳೇ..!!
ಮರ್ಡರ್ ಮಾಡಲು ಖಿಲಾಡಿ ಪತ್ನಿಗೆ ಸಾಥ್ ಕೊಟ್ಟವರು ಬೆಳಗಾವಿ-ಮದುವೆಯಾಗಿದ್ದರೂ ಅನೈತಿಕ ಸಂಬಂಧ ಹೊಂದಿದ್ದ ಖಿಲಾಡಿ ಪತ್ನಿ ಗೆಳೆಯನೊಂದಿಗೆ ಸೇರಿಕೊಂಡು ಪತಿಯನ್ನು ಕೊಲೆ ಮಾಡಿ ಗಂಡ ಕಾಣೆಯಾಗಿದ್ದಾನೆ ಎಂದು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟ ಪತ್ನಿ ಈಗ ಪೋಲೀಸರ ಬಲೆಗೆ ಬಿದ್ದಿದ್ದಾಳೆ. ಕಳೆದ ಮೂರು ತಿಂಗಳ ಹಿಂದೆ ನನ್ನ ಪತಿ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿ ಈಗ ಖಾಕಿಗೆ ಲಾಕ್ ಆದ ಘಟನೆ ನಡೆದಿದೆ.ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಪತಿಯನ್ನೇ ಗೆಳೆಯನೊಂದಿಗೆ …
Read More »ಬೃಹತ್ ಬೆಳಗಾವಿ ನಿರ್ಮಾಣದತ್ತ ಸಾಹುಕಾರ್,ಚಿತ್ತ…!!!
ಬೆಳಗಾವಿ- ರಾಜಧಾನಿ ಬೆಂಗಳೂರು ಸುತ್ತ ಮುತ್ತಲಿನ ಹಳ್ಳಿಗಳನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿಸಿ ಬೃಹತ್ತ್ ಬೆಂಗಳೂರು ಮಾಡಿದಂತೆ ಈಗ ಬೆಳಗಾವಿ ನಗರದ ಸುತ್ತಮುತ್ತಲಿನ ಹಳ್ಳಿಗಳನ್ನು ಬೆಳಗಾವಿ ಮಹಾನಗರ ಪಾಲಿಕೆಗೆ ಸೇರಿಸಿ,ಬೃಹತ್ ಬೆಳಗಾವಿ ಮಾಡಲು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಹತ್ವದ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಳಗಾವಿಯ ಮಡಿಲಲ್ಲಿ ಇರುವ ಹಿಂಡಲಗಾ,ಕಾಕತಿ,ಹಲಗಾ,ಬಸ್ತವಾಡ,ಕಂಗ್ರಾಳಿ, ಮೋದಗಾ,ಸಾಂಬ್ರಾ,ಮೋದಗಾ ಪೀರನವಾಡಿ ಮಚ್ಛೆ,ಧಾಮಣೆ ಸೇರಿದಂತೆ ಬೆಳಗಾವಿ ನಗರದ ಸುತ್ತಮುತ್ತಲಿನ …
Read More »ಕಬ್ಬು ತೂಕ ಮಾಡುವ ತಕ್ಕಡಿ ರೈತರಿಗೆ ಕೊಡಿ- ಕಡಾಡಿ
ಬೆಳಗಾವಿ: ರಾಜ್ಯದಲ್ಲಿ ಸಕ್ಕರೆ ಉದ್ಯಮ ನಿರೀಕ್ಷೆಗೂ ಮೀರಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಮತ್ತು ಸಕ್ಕರೆ ಕಾರ್ಖಾನೆಗಳು ಸಹ ಒಳ್ಳೆಯ ಲಾಭದಲ್ಲಿವೆ ಆದರೆ ಅವುಗಳಿಂದ ರೈತರಿಗೆ ಅಥವಾ ಸರ್ಕಾರಕ್ಕೆ ಏನೂ ಲಾಭ ಆಗುತ್ತಿಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ವಿಷಾದ ವ್ಯಕ್ತಪಡಿಸಿರುವುದು ಸಕ್ಕರೆ ಉದ್ಯಮದ ಕರಾಳ ಮುಖವನ್ನು ತೋರಿಸಿದಂತಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು. ಗುರುವಾರ …
Read More »ಬೆಳಗಾವಿ ಬಾರ್ ಅಧ್ಯಕ್ಷ ಪ್ರಭು ಯತ್ನಟ್ಟಿ ಸನ್ನದು ಶಾಶ್ವತ ರದ್ದು…!
ಬೆಳಗಾವಿ- ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಭು ಯತ್ನಿಟ್ಟಿ, ಕಕ್ಷಿದಾರನ ಲಕ್ಷಾಂತರ ರೂ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಪರಿಷತ್ತಿನ ಶಿಸ್ತು ಸಮೀತಿ ಮಹತ್ವದ ತೀರ್ಪು ನೀಡಿದೆ.ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಸ್ವಾಧೀನವಾದ ಜಮೀನಿಗೆ ಪರಿಹಾರ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ್ದ ರೈತನಿಗೆ ವಕೀಲರೊಬ್ಬರು ಲಕ್ಷಾಂತರ ರೂ.ವಂಚಿಸಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಕೀಲರ ಪರಿಷತ್ತಿನ ಶಿಸ್ತು ಸಮಿತಿಯು ತಪ್ಪಿತಸ್ಥ ವಕೀಲ ಪ್ರಭು ಯತ್ನಟ್ಟಿ …
Read More »ಸೆವನ್ ಮಿನಿಸ್ಟರ್ ಸಾಹುಕಾರ್ ನಿವಾಸ,ಈಗ ಲಕ್ಷ್ಮೀ ನಿವಾಸ…!!
ಬೆಳಗಾವಿ:ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಗಡಿ ಜಿಲ್ಲೆ ಬೆಳಗಾವಿಯ ಪ್ರಭಾವಿ ನಾಯಕರು. ಈ ಹಿಂದೆ ಜಿಲ್ಲಾ ರಾಜಕಾರಣದಲ್ಲಿ ಅತ್ಯಾಪ್ತರಾಗಿದ್ದ ಈ ನಾಯಕರು ಇಂದು ಇಬ್ಬಾಗವಾಗಿದ್ದಾರೆ. ರಾಜಕೀಯವಾಗಿ ಈ ಇಬ್ಬರ ಮಧ್ಯೆಯೂ ಹಠ ಸಾಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಹೆಬ್ಬಾಳಕರ ಸೋಲಿಸಲು ಪಣ ತೊಟ್ಟಿದ್ದ ರಮೇಶ್‌ಗೆ ನಿರೀಕ್ಷಿತ ಫಲ ದೊರೆತಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳ ಸುನಾಮಿಗೆ ರಮೇಶ್ ಪ್ರಯತ್ನಗಳೆಲ್ಲ ಕೊಚ್ಚಿಹೋದವು. ಈಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಂದು ಹಠ …
Read More »ನಾನು ಹೇಳಿದ್ದು ಪಾಲಿಟಿಕಲ್ ಸ್ಟೇಟಮಂಟ್ ಅಷ್ಟೇ…!!
ನನ್ನದು ಹೇಳಿಕೆ ಕೇವಲ ರಾಜಕೀಯ ಸ್ಟೇಟಮೆಂಟ್ ಅಷ್ಟೆ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ಕೇಂದ್ರ ಸರ್ಕಾರ ನಮ್ಮ ಸರ್ವರ್ ಹಾಗೂ ಸಿಸ್ಟಮ್ಗಳನ್ನು ಇವಿಎಂ ಮಾದರಿಯಲ್ಲಿ ಹ್ಯಾಕ್ ಮಾಡಿದೆ. ಇದರಿಂದ ಗ್ಯಾರಂಟಿ ಯೋಜನೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ. ಇದು ನನ್ನ ಹೇಳಿಕೆ ಕೇವಲ ರಾಜಕೀಯ ಸ್ಟೇಟಮೆಂಟ್ ಅಷ್ಟೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹುಕ್ಕೇರಿ ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಗೆ ಬಿಜೆಪಿಯವರು ಸಾಕಷ್ಟು ತಿರುಚುವ ಕೆಲಸ …
Read More »ಲಾಂಗ್ ತೋರಿಸಿ ಹಣ ದೋಚಿದವರು ಈಗ ಖಾಕಿ ಬಲೆಗೆ..!!
ಹಣ ದೋಚಿ ಪರಾರಿಯಾಗಿದ್ದ ಆರೋಪಿಗಳ ಬಂಧನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಸತೀಶಣ್ಣಾ ಕಲ್ಯಾಣ ಮಂಟಪದ ಬಳಿ ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನ ಮಾಲೀಕರಿಗೆ ಲಾಂಗ್ ತೋರಿಸಿ ಹಣ ದೊಚಿ ಪರಾರಿಯಾಗಿದ್ದ ಹುಬ್ಬಳ್ಳಿ ಮೂಲದ ಇಬ್ಬರನ್ನು ಬಂಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಗಂಗಾಧರ ನಗರದ ವೀರಾಪುರ ಓಣಿಯ ಭಜಂತ್ರಿ ಚಾಳಾದ ನಿವಾಸಿ ಸುರೇಶ ಭಜಂತ್ರಿ (49), ಹುಬ್ಬಳ್ಳಿಯ ಚಾಳ ಮುರಳಿ ಬೀಲ್ಡಿಂಗ್ ಹತ್ತಿರದ ನಿವಾಸಿ ಬಸವರಾಜ ಹೆಬ್ಬಳ್ಳಿ …
Read More »ಬೆಳಗಾವಿಯ ಇಬ್ಬರು ಮಿನಿಸ್ಟರ್ ಗಳು ವ್ಯಾಕ್ಸೀನ್ ಡಿಪೋಗೆ ಹೋಗಿದ್ದು ಯಾಕೆ ಗೊತ್ತಾ..??
ವ್ಯಾಕ್ಸಿನ ಡಿಪೋ ರಕ್ಷಣೆಗೆ ಕ್ರಮ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ಟಿಳಕವಾಡಿ ವ್ಯಾಕ್ಸಿನ ಡಿಪೋವನ್ನು ಯಥಾಸ್ಥಿತಿ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಮಂಗಳವಾರ ಟಿಳಕವಾಡಿಯ ವ್ಯಾಕ್ಸಿನ ಡಿಪೋಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇದು ಐತಿಹಾಸಿಕ ಲಸಿಕಾ ಸಂಸ್ಥೆಯಾಗಿತ್ತು. ೨೦೦೬ರಲ್ಲಿ ಇದನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸ್ಮಾರ್ಟಸಿಟಿ ಕಾಮಗಾರಿಗಳನ್ನು ಆರೋಗ್ಯ ಇಲಾಖೆ ಗಮನಕ್ಕೆ …
Read More »ಬೆಳಗಾವಿ VTU ಗೆ ಟ್ರಬಲ್ ಫೇಸ್ ಕರೆಂಟ್ ಶಾಕ್…!!
ಬೆಳಗಾವಿ-ಈ ತಿಂಗಳ ವಿದ್ಯುತ್ ಬಿಲ್ ಕಂಡು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿಗಳು ಹೌಹಾರಿದ್ದಾರೆ.ಯಾಕಂದ್ರೆ ಈ ಬಾರಿ VTU ಗೆ ಟ್ರಬಲ್ ಫೇಸ್ ಕರೆಂಟ್ ಶಾಕ್ ತಟ್ಟಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ 18 ಲಕ್ಷ ಕರೆಂಟ್ ಬಿಲ್ ಬಂದಿದೆ.ವಿದ್ಯುತ್ ಬಿಲ್‌ನಿಂದ ಶಾಕ್‌ಗೆ ಒಳಗಾದ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್. ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್ ದರ ಏರಿಕೆ ಹಿನ್ನಲೆ,ವಿದ್ಯುತ್ ದರ ಏರಿಕೆಯಿಂದ ಬೆಳಗಾವಿಯ ವಿಟಿಯುಗೆ 5 …
Read More »