Home / LOCAL NEWS (page 184)

LOCAL NEWS

ಬೆಳಗಾವಿ ಜಿಲ್ಲೆಯಲ್ಲಿ 89 ಪೊಲೀಸರಿಗೆ ಕೋವಿಡ್

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರನ್ನು ಬಿಟ್ಟು ಬಿಡದೇ ಕೊರೊನಾ ಮಹಾಮಾರಿ ಕಾಡುತ್ತಲೇ ಇದೆ.ಬೆಳಗಾವಿ ಜಿಲ್ಲೆಯಲ್ಲಿ ಒಟ್ಡು 89 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೊಂಕು ತಗಲಿದ್ದು ದೃಡವಾಗಿದೆ. ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲೇ 39 ಸಿಬ್ಬಂದಿಗೆ ಕೋವಿಡ್ ಸೊಂಕು ತಗಲಿದೆ.ಬೆಳಗಾವಿ ಎಪಿಎಂಸಿ ಠಾಣೆಯ 11 ಸಿಬ್ಬಂದಿ, ಶಹಾಪುರ ಠಾಣೆಯ ಮೂವರು ಸಿಬ್ಬಂದಿಗೆ ಸೊಂಕು ತಗಲಿದೆ. ಟಿಳಕವಾಡಿ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಕೋವಿಡ್ ಹಾಗೂ ಬೆಳಗಾವಿಯ ಓರ್ವ ಇನ್ಸ್‌ಪೆಕ್ಟರ್, ಇಬ್ಬರು ಪಿಎಸ್ಐ ಸೇರಿ ಕಮಿಷನರೇಟ್ …

Read More »

ಮೋಬೈಲ್ ತೆಗೆದುಕೊಳ್ಳಲು ದುಡ್ಡು ಕೊಡದ ಅತ್ತಿಗೆಯ ಮರ್ಡರ್…

ಬೆಳಗಾವಿ ಮೊಬೈಲ್ ತೆಗೆದುಕೊಳ್ಳಲು ಹಣ ನೀಡಲು ನಿರಾಕರಿಸಿದ ಅತ್ತಿಗೆಯನ್ನೇ ಕೊಲೆ ಮಾಡಿದ್ದ ಮೈದುನನ್ನು ಪೊಲೀಸರು ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ಕ್ಷೀಪ್ರ ಕಾರ್ಯಾಚರಣೆಯಿಂದ ಆಕಸ್ಮಿಕ ಸಾವು ಪ್ರಕರಣ ಕೊಲೆಯ ರಹಸ್ಯವನ್ನು ಬಿಚ್ಚಿಡುವಂತೆ ಸಾರಿದೆ. ಮಹಾಂತೇಶ ನಗರದಲ್ಲಿ ವಾಸವಾಗಿದ್ದ ಬಸಲಿಂಗವ್ವ ಅದೃಶಿ ಎಮ್ಮಿನಕಟ್ಟಿ (೨೯) ಹತ್ಯೆಗೀಡಾಗಿದ್ದ ಮಹಿಳೆ. ಮಂಜುನಾಥ ಶಿವಪುತ್ರ ಎಮ್ಮಿನಕಟ್ಟಿ (೩೨) ಬಂಧಿತ ಆರೋಪಿಯಾಗಿದ್ದಾನೆ. ಮೂಲತಃ ಖಾನಾಪುರ ತಾಲೂಕಿನ ಗುಂಡೆನಟ್ಟಿ ಗ್ರಾಮದವರಾದ ಇವರು ಹೊಟ್ಟೆಪಾಡಿಗಾಗಿ ಬೆಳಗಾವಿ ನಗರಕ್ಕೆ ಬಂದು …

Read More »

ತುಂಬು ಗರ್ಭಿಣಿ ಆಕಳಿಗೆ ಸೀಮಂತ…

ಚಿಕ್ಕೋಡಿಯಲ್ಲಿ ಹಸುಗೆ ಸೀಮಂತ ಕಾರ್ಯ ನೆರವೇರಿಸಿ ಸಂಭ್ರಮಿಸಿದ ಕುಟುಂಬಸ್ಥರು ಚಿಕ್ಕೋಡಿ: ತುಂಬು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡುವುದು ವಾಡಿಕೆ.ಆದರೇ, ಇಲ್ಲೋಂದು ಗ್ರಾಮದಲ್ಲಿ ಮನೆಯಲ್ಲಿದ್ದ ಏಳು ತಿಂಗಳ ತುಂಬು ಗರ್ಭಿಣಿ ಆಕಳಿಗೆ ಸೀಮಂತ ಕಾರ್ಯ‌ನೆರವೇರಿಸಿ ಸಂಭ್ರಮಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ‌ಅಪ್ಪಾಸಾಹೇಬ ಪಾಟೋಳೆ ಎಂಬುವವರು ತಮ್ಮ ಆಕಳಿಗೆ ಸೀಮಂತ ಕಾರ್ಯಕ್ರಮ ನೆರೆವೇರಿಸಿದವರು‌. ಕಳೆದ ಹಲವಾರು ವರ್ಷಗಳಿಂದ ಅಪ್ಪಾಸಾಹೇಬ ಪಾಟೋಳೆ ಅವರು ತಮ್ಮ ಮನೆಯಲ್ಲಿರುವಂತಹ ಆಕಳುಗಳಿಗೆ ವಿಶೇಷ ಸ್ಥಾನಮಾನ ನೀಡುವದಲ್ಲದೇ …

Read More »

ಬಡ್ಡಿ ವ್ಯವಹಾರ, ಶೂಟೌಟ್ ಮಹಿಳೆಯ ಮರ್ಡರ್…

ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಶೂಟೌಟ್ ನಡೆಸಿ ಮಹಿಳೆಯ ಕೊಲೆ ಚಿಕ್ಕೋಡಿ: ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಸಂಕೇಶ್ವರ ಪಟ್ಟಣದಲ್ಲಿ‌ ನಡೆದಿದ್ದು ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈಗಾಗಲೇ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ಸಂಕೇಶ್ವರ ಪಟ್ಟಣದ ನಿವಾಸಿ ಶೈಲಾ ನಿರಂಜನ ಸುಭೇದಾರ (56) ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ.ಈ …

Read More »

ಮಾಸ್ಕ್ ಹಾಕೊಳ್ರಿ ಅಂದಿದ್ದಕ್ಕೆ ಕಿರಿಕ್ ಮಾಡಿದ ಡಾಕ್ಟರ್…..!!!

ಬೆಳಗಾವಿ- ಇವತ್ತು ವಿಕೆಂಡ್ ಕರ್ಫ್ಯು ,ಬೆಳ್ಳಂ ಬೆಳಿಗ್ಗೆ ಪೋಲೀಸರು ಅನಗತ್ಯವಾಗಿ ಸುತ್ತಾಡುವ,ವಾಹನಗಳನ್ನು,ಸೀಜ್ ಮಾಡುವದು,ಜೊತೆಗೆ ಹೆಲ್ಮೆಟ್, ಮಾಸ್ಕ ಹಾಕಿಕೊಳ್ಳದ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯಾಚರಣೆ ಶುರು ಮಾಡಿಕೊಂಡಿದ್ದರು. ಬೆಳಗಾವಿಯ ಚನ್ನಮ್ಮಾ ವೃತ್ತ ದಲ್ಲಿ ,ಮಾಸ್ಕ್ ಹಾಕಿಕೊಳ್ಳಿ ಅಂದಿದ್ದಕ್ಕೆ ವೈದ್ಯೆ ಪೋಲೀಸ್ ಅಧಿಕಾರಿಗಳಿಗೆ ಕಿರಿಕ್ ಮಾಡಿದ ಘಟನೆಯೂ ನಡೆಯಿತು. ಡಿಸಿಪಿ ಜತೆಗೆ ಕಿರಿಕ್ ಮಾಡಿದ ಡಾಕ್ಟರ್, ಕೆಲ ಹೊತ್ತು ಅಧಿಕಾರಿಗಳ ಜೊತೆಗೆ ವಾಗ್ವಾದ ಮಾಡಿದ್ರು. ಕಾರಿನಲ್ಲಿ ಮಾಸ್ಕ್ ಹಾಕದೇ ಹೋಗುತ್ತಿದ್ದ ವೈದ್ಯೆ …

Read More »

ಕಾಶ್ಮೀರದ ಕಣಿವೆಯಾದ ಕುಂದಾನಗರಿ…..!!!

ಬೆಳಗಾವಿ- ಸಂಜೆಯಾದ್ರೆ ಸಾಕು ಬೆಳಗಾವಿಯ ಜನ ಮನೆ ಸೇರಿಕೊಳ್ಳುತ್ತಿದ್ದಾರೆ,ಯಾಕಂದ್ರೆ ಸೂರ್ಯ ಮುಳುಗುತ್ತಿದ್ದಂತೆಯೇ ಚಳಿಯ ಆಟ ಇಲ್ಲಿ ಶುರುವಾಗುತ್ತೆ,ಮೈಕೊರೆಯುವ ಈ ಚಳಿ ಬೆಳಗಾವಿಯ ನಿವಾಸಿಗಳನ್ನು ತಲ್ಲಣಗೊಳಿಸಿದೆ. ಬೆಳಿಗ್ಗೆ ಸೂರ್ಯ ಉದಯವಾಗುವ ಮೊದಲು ಮನೆಯಿಂದ ಹೊರಗೆ ಬಂದ್ರೆ, ಪಕ್ಕದ ಮನೆ ಕಾಣಿಸುವದೇ ಇಲ್ಲ,ಯಾಕಂದ್ರೆ ಎಲ್ಲಿ ನೋಡಿದಲ್ಲಿ ದಟ್ಟವಾದ ಮಂಜು ಕಾಣಿಸುತ್ತದೆ,ಬೆಳಗಿನ ವಾತಾವರಣ ನೋಡಿದ್ರೆ ಬೆಳಗಾವಿ ಕಾಶ್ಮೀರದ ಕಣಿವೆಯ ಸ್ವರೂಪ ಪಡೆದಿರುವದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ವರ್ಷದ ಚಳಿ,ಮತ್ತು ದಟ್ಟವಾದ ಮಂಜು ಕುಂದಾನಗರಿ ಬೆಳಗಾವಿಗೆ …

Read More »

ಗೋವಾದಲ್ಲೂ ಜಾರಕಿಹೊಳಿ ಸಾಹುಕಾರ್ ತಂತ್ರ…

ಎಐಸಿಸಿ ಗೋವಾ ಉಸ್ತುವಾರಿ ದಿನೇಶ್‌ ಗೂಂಡುರಾವ್‌ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ದತಾ ಸಭೆ ಗೋವಾ ಚುನಾವಣೆ; ಕಾಂಗ್ರೆಸ್‌ ಗೆಲುವಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ರಣತಂತ್ರ ಪಣಜಿ: ಬೆಳಗಾವಿ ಜಿಲ್ಲೆಯಲ್ಲಿ ವಿಧಾನ ಪರಿಷತ್‌, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಣತಂತ್ರ ಹೆಣದು ಗೆಲುವು ಸಾಧಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಈಗ ಗೋವಾ ವಿಧಾನಸಭೆ ಚುನಾವಣೆಯಲ್ಲೂ” ಕೈ” ಗೆಲುವಿಗೆ ರಣತಂತ್ರ ರೂಪಿಸಿ, ಅವರ ನೇತೃತ್ವದ ತಂಡ ರಚಿಸಿದ್ದಾರೆ. ಎಐಸಿಸಿ ಗೋವಾ ವೀಕ್ಷಕ ಸುನೀಲ್‌ ಹಣಮನವರ್‌, …

Read More »

ನಾಳೆಯಿಂದ ಒಂದು ವಾರ ಮತ್ತೆ ಶಾಲೆಗಳು ಬಂದ್..

ಬೆಳಗಾವಿ- ವಸತಿ ಶಾಲೆಯ ಮಕ್ಕಳಲ್ಲಿ ಕೋವೀಡ್ ಸೊಂಕು ಹರಡುತ್ತಿರುವ ಹಿನ್ನಲೆಯಲ್ಲಿ ತುರ್ತು ಸಭೆ ನಡೆಸಿದ ಬೆಳಗಾವಿ ಜಿಲ್ಲಾಧಿಕಾರಿಗಳು ನಾಳೆಯಿಂದ ಒಂದು ವಾರ ಶಾಲೆಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸೊದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ನಾಳೆ ದಿನಾಂಕ 11 ರಿಂದ 18 ರವರೆಗೆ 1ನೇಯ ತರಗತಿಯಿಂದ 9 ತರಗತಿಗಳನ್ನು ಬಂದ್ ಮಾಡುವಂತೆ ಬೆಳಗಾವಿ ಡಿಸಿ ಆದೇಶ ಹೊರಡಿಸಿದ್ದಾರೆ.ಈ ಆದೇಶ ವಸತಿ ಶಾಲೆಗಳಿಗೂ ಅನ್ವಯಿಸುತ್ತದೆ.

Read More »

ಬಂಡಾಯʼಕ್ಕೆ ಇನ್ನೊಂದು ಹೆಸರು – ಪ್ರೀತಿಯ  ‘ಚಂಪಾʼ

*’ಬಂಡಾಯʼಕ್ಕೆ ಇನ್ನೊಂದು ಹೆಸರು – ಮನುಷ್ಯ ಪ್ರೀತಿಯ  ‘ಚಂಪಾʼ* *( ಪ್ರೀತಿಯ ಗುರುಗಳಿಗೆ ನಮನಗಳು)* *ʼಬಂಡಾಯʼ* ಎಂದಾಗ ಥಟ್ಟನೆ ಎದುರಾಗುವ ಸಾಂಸ್ಕೃತಿಕ ವ್ಯಕ್ತಿತ್ವ *’ಚಂಪಾ’* ಕನ್ನಡ ಅಸ್ಮಿತೆಯ ಜನಪರ ಸಾಂಸ್ಕೃತಿಕ ಧ್ವನಿ ಒಂದುಕಾಲಕ್ಕೆ ಧಾರವಾಡದಿಂದ ಪುಟಿದೆದ್ದು ನಾಡಿನ ತುಂಬಾ ಅನುರಣಿಸುತ್ತಿತ್ತು. ಇಂದು ಈ ಧ್ವನಿ ಬೆಂಗಳೂರಿನಲ್ಲಿ ದೈಹಿಕವಾಗಿ ಅಸ್ತಂಗತವಾಗಿದೆ. ಆದರೆ, ಆ ಧ್ವನಿಯಿಂದ ಹೊರಟ ಪ್ರತಿಧ್ವನಿ ಅಲೆಗಳು ನಮ್ಮ ಮಧ್ಯ ಧ್ವನಿ ಮಾಡುತ್ತಿವೆ. ಕನ್ನಡ ಸಾಂಸ್ಕೃತಿಕ ಲೋಕದ ಜೀವಪರ ಚಂಪಾ ಎಂಬ ಅಗಮ್ಯೆ …

Read More »

ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ರಶೀದ್ ನೇಮಕ..

ಬೆಳಗಾವಿ-ಬ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ್ ಸಂಘಟನೆಯ. ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಗೋಕಾಕಿನ ರಶೀದ್ ಮಕಾನದಾರ ಅವರನ್ನು ನೇಮಕ ಮಾಡಲಾಗಿದೆ. ಈ ಸಂಘಟನೆಯ ಸಂಸ್ಥಾಪಕ, ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ ಧಾರವಾಡಕರ ಅವರು ರಶೀದ್ ಮಕಾನದಾರ್ ಅವರನ್ನು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ್ ಸಂಘಟನೆಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಗೊಳಿಸುವದರ ಜೊತೆಗೆ ಜಿಲ್ಲೆಯಲ್ಲಿ ಬ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುವಂತೆ ಸೂಚಿಸಲಾಗಿದೆ. ರಶೀದ್ ಮಕಾನದಾರ ಅವರು …

Read More »