Breaking News

LOCAL NEWS

ಬೆಳಗಾವಿ ಜಿಲ್ಲೆಗೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಕೊಡುಗೆ ಅಪಾರ- ಡಾ.ಸೋನಾಲಿ

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ,ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಜಾರಿಗೆ ತಂದಿರುವ ಜನಪರ ಯೋಜನೆಗಳಿಗೆ,ಅಪಾರ ಜನಮೆಚ್ಚುಗೆ ವ್ಯೆಕ್ತವಾಗುತ್ತಿದೆ.ಇದರಿಂದ ಹತಾಶಗೊಂಡಿರುವ ಕಾಂಗ್ರೆಸ್ ಕೇವಲ ಟೀಕೆ ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು,ಟೀಕೆಗಳು ಸಾಯುತ್ತವೆ ಸಾಧನೆ ಉಳಿಯುತ್ತದೆ.ಎಂದು ಉಪ ಚುನಾವಣೆಯಲ್ಲಿ ಸಾಭೀತಾಗುತ್ತದೆ ಎಂದು ಬಿಜೆಪಿ ಮಹಿಳಾ ನಾಯಕಿ ಡಾ.ಸೋನಾಲಿ ಸರ್ನೋಬತ್ ಅಭಿಪ್ರಾಯ ಪಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರವಾಗಿ ಮತಯಾಚಿಸಿ …

Read More »

ಬೆಳಗಾವಿ ಜಿಲ್ಲೆಯ 3 ಲಕ್ಷ ಜನರಿಗೆ ಕೋವೀಡ್ ಲಸಿಕೆ

ಬೆಳಗಾವಿ- ಕೋವಿಡ್-೧೯ ಲಸಿಕಾಕರಣ ಅಭಿಯಾನದಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜನರ ಸಹಕಾರದಿಂದ ಕೋವಿಡ್ ವಿರುದ್ಧದ ಹೋರಾಟದಲ್ಲಿ ಒಂದು ಹೆಜ್ಜೆ ಮುಂದಿದೆ. ಏಪ್ರಿಲ್ 7 ರಂದು ಒಂದೇ ದಿನ ಮೊದಲ ಹಾಗೂ ಎರಡನೇ ಡೋಸ್ ಸೇರಿದಂತೆ ಒಟ್ಟಾರೆ 26657 ಜನರಿಗೆ ಲಸಿಕೆ ನೀಡವ ಮೂಲಕ ರಾಜ್ಯದ ಗಮನ ಸೆಳೆದಿದೆ.26,657 ಲಸಿಕೆ ಪೈಕಿ 26,067 ಲಸಿಕೆ ಮೊದಲ ಡೋಸ್ ಆಗಿರುವುದು ಗಮನಾರ್ಹ ಸಂಗತಿಯಾಗಿದೆ. ಜಿಲ್ಲೆಯಲ್ಲಿ 3.07 ಲಕ್ಷ …

Read More »

ಬಿಜೆಪಿಗೆ ನಮ್ಮ ಮತ ಇಲ್ಲ- ಬೆಳಗಾವಿಯಲ್ಲಿ ಬಾಬಾಗೌಡ ಪಾಟೀಲ ಘೋಷಣೆ

ಬೆಳಗಾವಿ-ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆ ಈಉಪಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಮತ ಇಲ್ಲ.ಎಂದು ಬೆಳಗಾವಿಯಲ್ಲಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿಗೆ ನಮ್ಮ ಮತ ಇಲ್ಲಾ ಅನ್ನೋದು,ರೈತರ ಆಂದೋಲನದ ಭಾಗ ಇದು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಸಂದೇಶ ಕಳುಹಿಸುತ್ತೇವೆ.ಎಂದು ಮಾಜಿ ಕೇಂದ್ರ ಮಂತ್ರಿ,ರೈತನಾಯಕ,ಕೃಷಿ ತಜ್ಞ,ಬಾಬಾಗೌಡ ಪಾಟೀಲ ಗುಡುಗಿದ್ದಾರೆ. ಇಂದು ಡಿಕೆಶಿ ನಮ್ಮ ಮನೆ ಬಂದಿದ್ದರು.ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.ನಾವು ಈಗಾಗಲೇ …

Read More »

ತವರಿನಲ್ಲಿ ಸತೀಶ ಸಾಹುಕಾರ್ ಗೆ ಜೈಕಾರ್…!!!

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು ತವರು ಕ್ಷೇತ್ರವಾದ ಗೋಕಾಕ‌ ಮತ್ತು ಅರಬಾವಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್ ಈಗಾಗಲೇ ಗೋಕಾಕ ಮತ್ತು ಅರಬಾವಿಯಲ್ಲಿ ಪ್ರಚಾರ ನಡೆಸಿದ್ದು, ಈಗ ಸತೀಶ ಜಾರಕಿಹೊಳಿ ಅವರು ಗೋಕಾಕ ಮತ್ತು ಅರಬಾವಿ ಕ್ಷೇತ್ರಗಳ ಸಂಚಾರ ಮಾಡಿದ್ದು, ಈ ಎರಡು ಕ್ಷೇತ್ರದಲ್ಲಿ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಸತೀಶ ಜಾರಕಿಹೊಳಿ ಅವರು ಗೋಕಾಕ …

Read More »

ಸುರೇಶ್ ಅಂಗಡಿ ಅವರ ಸಾಧನೆ, ಯಾರೂ ಮರೆಯಲು ಸಾದ್ಯವಿಲ್ಲ- ಟೋಪಣ್ಣವರ….

ಬೆಳಗಾವಿ- ದಿ.ಸುರೇಶ್ ಅಂಗಡಿ ಅವರು ಸಂಸದರಾಗಿ,ಕೇಂದ್ರದ ರಾಜ್ಯ ರೇಲ್ವೆ ಮಂತ್ರಿಗಳಾಗಿ,ಅಲ್ಪಾವಧಿಯಲ್ಲಿಯೇ ಮಾಡಿರುವ ಕ್ರಾಂತಿಯನ್ನು ಈ ರಾಜ್ಯದ ಜನ ಎಂದಿಗೂ ಮರೆಯಲು ಸಾದ್ಯವಿಲ್ಲ ಎಂದು,ಬಿಜೆಪಿ ಯುವ ಮುಖಂಡ ರಾಜೀವ ಟೋಪಣ್ಣವರ ಹೇಳಿದ್ದಾರೆ, ಬೆಳಗಾವಿ ಲೋಕಸಭಾ ಮತಕ್ಷೇತ್ರದ ಸಾವಗಾಂವ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ, ಮಂಗಲಾ ಸುರೇಶ್ ಅಂಗಡಿ ಅವರ ಪರವಾಗಿ ಮತಯಾಚಿಸಿದ ಅವರು,ಸುರೇಶ್ ಅಂಗಡಿ ಅವರ ಪ್ರಯತ್ನದ ಫಲವಾಗಿ ಬೆಳಗಾವಿ ನಗರ ಮೊದಲ ಹಂತದಲ್ಲೇ ಸ್ಮಾರ್ಟ್ ಸಿಟಿ,ಪಟ್ಟಿಯಲ್ಲಿ ಸೇರಲು ಸಾದ್ಯವಾಯಿತು,ಬೆಳಗಾವಿಗೆ ಪಾಸ್ ಪೋರ್ಟ್ …

Read More »

ಲಖನ್ ಮನವೊಲಿಸುವದಿಲ್ಲ-ಡಿ.ಕೆ ಶಿವಕುಮಾರ್

ಬೆಳಗಾವಿ-ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಇಂದು ಬೆಳಗಾವಿಯಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಡಿಕೆಶಿವಕುಮಾರ್ ಸಮ್ಮುಖದಲ್ಲಿ ಸೇರ್ಪಡೆಯಾದರು. ಇದಾದ  ಬಳಿಕ  ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು.ಮಾಜಿ ಶಾಸಕ ಮಧು ಬಂಗಾರಪ್ಪ ಸಹ ಪಕ್ಷ ಸೇರ್ಪಡೆಯಾಗುವ ಕುರಿತು ಅರ್ಜಿ ಸಲ್ಲಿಸಿದ್ದಾರೆ,ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಜಾತ್ಯಾತೀತ ನಿಲುವುಗಳನ್ನ ಹೊಂದಿದ್ದಾರೋ ಅವರಿಗೆ ಪತ್ರ ಬರೆಯುವೆ,ಅವರು ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡುವೆ,ಕಮ್ಯೂನಿಸ್ಟ್‌ ಪಕ್ಷ. ರೈತ ಸಂಘದ ಮುಖಂಡರು, …

Read More »

ಉಪ ಚುನಾವಣೆಯ ಬಳಿಕ ಸರ್ಕಾರ ಪತನ, ಬೆಳಗಾವಿಯಲ್ಲಿ ವೀಣಾ ಹೊಸ ಬಾಂಬ್….

ಬೆಳಗಾವಿಯಲ್ಲಿ ವೀಣಾ ಕಾಶಪ್ಪನವರ ಅವಾಜ್….. ಬೆಳಗಾವಿ-ದೇಶದ ಸೈನಿಕರನ್ನು ಇಟ್ಟುಕೊಂಡು ಬಿಜೆಪಿ  ಆಡಳಿತ ನಡೆಸುತ್ತಿದೆ,ರೈತ ವಿರೋಧಿ, ಜನ ವಿರೋಧಿ ನೀತಿ ಜಾರಿ ಮಾಡಿ ದೇಶದ ಜನತೆಯ ತುಳಿಯುವ ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿ ವೀಣಾ ಕಾಶಪ್ಪನವರ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ,ಪತ್ರಿಕಾಗೋಷ್ಠಿ ನಡೆಸಿದ ಅವರು,ರಾಜ್ಯ ಸರ್ಕಾರದ ಬಜೆಟ್ ಯಾರಗೂ ಅನುಕೂಲವಾಗಿಲ್ಲ, ರಾಜ್ಯ ಸರ್ಕಾರ ಶೇ.50 ಕಮಿಷನ್ ಸರ್ಕಾರವಾಗಿದೆ. ರಾಜ್ಯದ ಬಿಜೆಪಿ ಸಚಿವರಲ್ಲಿ ಹೊಂದಾಣಿಕೆ ಕೊರತೆ ಇದೆ, ಎಂದು ಬೆಳಗಾವಿಯಲ್ಲಿ ರಾಜ್ಯ …

Read More »

ಭರವಸೆ ಉಳಿಸಿಕೊಳ್ಳುವ,ಈಡೇರಿಸುವ ಶಕ್ತಿ ಸರ್ಕಾರಕ್ಕಿಲ್ಲ- ಹೆಚ್.ಕೆ ಪಾಟೀಲ

ಬೆಳಗಾವಿ-ಸರಕಾರದ ನಿರ್ಲಕ್ಷ್ಯದಿಂದ ಇಂದು ಸಾರಿಗೆ ಮುಷ್ಕರ ನಡೆಯುತ್ತಿದೆ,ಗೊಂದಲಮಯ ವಾತಾವರಣ ಸೃಷ್ಠಿಯಾಗೋಕೆ ರಾಜ್ಯ ಸರಕಾರವೇ ಕಾರಣ ಎಂದು,ಬೆಳಗಾವಿಯಲ್ಲಿ ಕಾಂಗ್ರೆಸ್ ‌ಮುಖಂಡ ಎಚ್ ಕೆ ಪಾಟೀಲ ಆರೋಪಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು,ಭರವಸೆ ಉಳಿಸಿಕೊಳ್ಳುವ ಹಾಗೂ ಭರಸವೆ ಈಡೇರಿಸುವ ಶಕ್ತಿ ಸರ್ಕಾರಕ್ಕಿಲ್ಲ,ಸಾರಿಗೆ ನೌಕರರಲ್ಲಿ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಆಗಬಾರದು,ನೌಕರರ ಮುಷ್ಕರ ಬಗೆಹರಿಸುವ ಕೆಲಸ ಬೇಗ ಆಗಬೇಕು ಎಂದರು. ಮೂರು ತಿಂಗಳ ಹಿಂದೆಯೇ ಸಾರಿಗೆ ನೌಕರರ ಸಮಸ್ಯೆ ಬಂದಿತ್ತು, ಈಗ …

Read More »

ಸಾರಿಗೆ ಮುಷ್ಕರ ನಿಲ್ಲಿಸಿ ಮಾತುಕತೆಗೆ ಬನ್ನಿ-ಸಿಎಂ ,

ಬೆಳಗಾವಿ-ಸಾರಿಗೆ ಮುಷ್ಕರ ನಿಲ್ಲಿಸಿ ಮಾತುಕತೆಗೆ ಬನ್ನಿ. ಆಗ ನಾನು ಯಾರ ಜೊತೆಗಾದ್ರು ಮಾತನಾಡಲು ಸಿದ್ದ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಾರಿಗೆ ನೌಕರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು,ಮುಷ್ಕರದ ಬಗ್ಗೆ ೯ ಬೇಡಿಕೆಗಳ ಪೈಕಿ ೮ ಈಡೇರಿಸಿದ್ದೇವೆ. ಹಠ ಮಾಡುವುದು ಸರಿಯಲ್ಲ. ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಖಾಸಗಿಯವರು ಹೆಚ್ಚಿಗ ಹಣ ಪಡೆದ್ರೆ ಕ್ರಮ ಕೈಗೊಳ್ಳುತ್ತೇವೆ. ಅವರಿಗೂ ಮನವಿ ಮಾಡುವೆ ಜನರ ಸುಲಿಗೆ ಮಾಡಬೇಡಿ ಎಂದು ಮನವಿ ಮಾಡುವೆ. …

Read More »

ನನ್ನ ಅಭಿವೃದ್ಧಿ ಕಾರ್ಯಗಳು, ನನ್ನ ಕಾರ್ಯಕರ್ತರು,ನನ್ನ ಕ್ಷೇತ್ರದ ಸ್ಟಾರ್ ಕ್ಯಾಂಪೇನರ್- ಅಭಯ ಪಾಟೀಲ

ಬೆಳಗಾವಿ-ಬೆಳಗಾವಿ ದಕ್ಷಿಣ ಮತಕ್ಷೇತ್ರ ಬಿಜೆಪಿ ಮತಗಳ ಕಣಜ,ಈ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಅವರ ಪಕ್ಷ ನಿಷ್ಠೆ ಪ್ರತಿಯೊಂದು ಲೋಕಸಭಾ ಚುನಾವಣೆಯಲ್ಲಿಯೂ ಸದ್ದು ಮಾಡುತ್ತಲೇ ಬಂದಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ,ದಿ.ಸುರೇಶ್ ಅಂಗಡಿ ಅವರು ಪ್ರತಿಯೊಂದು ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದಿದ್ದು ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಅನ್ನೋದು ವಿಶೇಷ.. ಲೋಕಸಭಾ ಚುನಾವಣೆ ಬಂದಾಗ ಶಾಸಕ ಅಭಯ ಪಾಟೀಲ ತಮ್ಮ ಕ್ಷೇತ್ರವನ್ನು ಬಿಟ್ಟು ಹೊರಗೆ ಹೋಗುವದೇ …

Read More »