Breaking News
Home / LOCAL NEWS (page 551)

LOCAL NEWS

ಡಾ ಅದೃಶ್ಯ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯ

ಬೆಳಗಾವಿ- ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣುರಮರಡಿಮಠದ ಡಾ ಅದೃಶ್ಯ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಕೆಎಲ್ಇ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು ನಾಳೆ ರವಿವಾರ ಮರಡಿಮಠದಲ್ಲಿ ಶ್ರಿಗಳ ಅಂತ್ಯೆಕ್ರಿಯೆ ನಡೆಯಲಿದೆ ಸ್ವಾಮಿಜಿ ಅವರಿಗೆ 77 ವರ್ಷ ವಯಸ್ಸಾಗಿತ್ತು ಹಲವು ದಿನಗಳ ಹಿಂದೆ ಅವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಗೋಕಾಕ ತಾಲುಕಿನ ಸುಪ್ರಸಿದ್ಧ ಮರಡಿಮಠದಲ್ಲಿ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ

Read More »

ಶಾಸಕ ಅಶೋಕ ಪಟ್ಟಣ ರಾಜೀನಾಮೆ ಕಥೆ ಏನಾಯ್ತು?

ಬೆಳಗಾವಿ:ಕಳಸಾ ಬಂಡೂರಿ ಹಾಗೂ ಮಹಾದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಪ್ರಕಟವಾದ ದಿನ ಸರಕಾರದ ಮುಖ್ಯ ಸಚೇತಕ ರಾಮದುರ್ಗ ಶಾಸಕ ಅಶೋಕ ಪಟ್ಟಣ ಸ್ಥಳೀಯ ತಹಶೀಲ್ದಾರರಿಗೆ ರಾಜೀನಾಮೆ ಸಲ್ಲಿಸಿ ಅಪಾರ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಅವರ ರಾಜೀನಾಮೆ ಪ್ರಹಸನ ಈಗ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ. ಮಹಾದಾಯಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದನ್ನು ಖಂಡಿಸಿ ರಾಜ್ಯದ ಯಾವೊಬ್ಬ ಶಾಸಕ, ಸಂಸದನಾಗಲಿ, ಸಚಿವರಾಗಲಿ ರಾಜೀನಾಮೆ ಕೊಡುವ ಧೈರ್ಯ ಮಾಡಿರಲಿಲ್ಲ. ಆದರೆ ನ್ಯಾಯಾಧೀಕರಣದ ತೀರ್ಪು ಹೊರಬಿದ್ದ ಮಾರನೇ ದಿನ …

Read More »

ಸಚಿವರ ಸಭೆಗೆ ಗೈರು ಅಧಿಕಾರಿಗಳಿಗೆ ನೋಟಿಸ್…!

ಬೆಳಗಾವಿ: ಆಗಸ್ಟ ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದರಿಂದ ಪ್ರತಿಯೊಂದು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸೆಗಳ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಚಿಕ್ಕೋಡಿ ಉಪ ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿಯನ್ನು ಜನರಿಗೆ ಕಾಣುವಂತೆ …

Read More »

ದಾಸೋಹದ ಹಣ ಗುಳುಂ ಮಾಡಿದ ಆಧಿಕಾರಿಯ ವಿರುದ್ಧ ದೂರು

ಬೆಳಗಾವಿ-ಸರ್ಕಾರಿ- ಶಾಲೆ ಅಡುಗೆ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಗೌರವಧನ ಪಾವತಿಸು ಎಂದರೆ, ಆತ ತನ್ನ ಖಾತೆಗೇ ಹಣ ಜಮಾ ಮಾಡಿಕೊಂಡು ಅಕಾರಿಗಳ ತಲೆ ಕೆಡಿಸಿದ ಅಕ್ಷರ ದಾಸೋಹ ವಿಭಾಗದ ಪ್ರಥಮ ದರ್ಜೆ ಸಹಾಯಕನ (ಎಸ್‍ಡಿಎ) ವಿರುದ್ಧ ಚಿಕ್ಕೋಡಿ ಪೆÇಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ. ಎಸ್‍ಡಿಎ ಆರ್.ಡಿ. ಇಂಗಳೆ ವಿರುದ್ಧ ಚಿಕ್ಕೊಡಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕಿ ಎನ್.ಎಂ. ಪಿಂಜಾರ್ ಅವರು ದೂರು ನೀಡಿದ್ದಾರೆ. ಇಲಾಖಾ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಖನ್ ಸ್ಪರ್ದೆ ಇಲ್ಲ-ಸಹೋದರರ ಸ್ಪಷ್ಠನೆ

ಬೆಳಗಾವಿ: ಮುಂಬರುವ 2018 ರ ವಿಧಾನ ಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಟಿಕೇಟ್ ಖಚಿತ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು. ಬೆಳಗಾವಿ ತಾಲೂಕಿನ ಹಿರೇಭಾಗೇವಾಡಿ ಗ್ರಾಮದ ಫಡಿ ಬಸವೇಶ್ವರ ದೇವಸ್ಥಾನದ ಕಲ್ಯಾಣಮಂಟಪದಲ್ಲಿ ಶನಿವಾರ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಘಟಕದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು, ವಿಧಾನಪರಿಷತ್ ಸದಸ್ಯರು, …

Read More »

ಶನಿವಾರ ಹಿರೇಬಾಗೇವಾಡಿಯಲ್ಲಿ ಜಿಲ್ಲಾ ಮಂತ್ರಿಗಳ ಸತ್ಕಾರ

ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಘಟಕದ ವತಿಯಿಂದ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಆ.13 ರಂದು ಬೆಳಗ್ಗೆ 11 ಗಂಟೆಗೆ ತಾಲೂಕಿನ ಹಿರೇಬಾಗೇವಾಡಿಯ ಶ್ರೀ ಫಡಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಬಡೇಕೊಳ್ಳಮಠದ ನಾಗೇಂದ್ರ ಸ್ವಾಮೀಜಿಗಳು, ಮುತ್ನಾಳ ಕೇದಾರ ಶಾಖಾಪೀಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು, ಹಿರೇಬಾಗೇವಾಡಿಯ ದರ್ಗಾ ಅಜ್ಜನವರು ಮತ್ತು ಹಿರೇಬಾಗೇವಾಡಿಯ ಕಲ್ಲಯ್ಯಾ ಸ್ವಾಮೀಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಹಿರೇಬಾಗೇವಾಡಿ ಬ್ಲಾಕ್ ಅಧ್ಯಕ್ಷ ಸಿ.ಸಿ.ಪಾಟೀ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ …

Read More »

ಕಿತ್ತೂರ ತಾಲೂಕಿಗೆ ತಿಮ್ಮಪ್ಪನ ಆಶಿರ್ವಾದ..!

ಬೆಳಗಾವಿ- ಕಂದಾಯ ಸಚಿವ ಕಾಗೋಡು ತಮಪ್ಪನವರು ಕಿತ್ತೂರ ತಾಲೂಕವನ್ನಾಗಿ ಮಾಡಲು ಎಲ್ಲ ರೀತಿಯ ಪ್ರಕ್ರಿಯೆಗಳನ್ನ ಕೂಡಲೇ ಆರಂಭಿಸುಂತೆ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿ ದೂರವಾಣಿ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಬೆಳಗಾವಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿದ ಅವರು ಹೋಬಳಿಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಶಾಸಕ ಲಕ್ಷ್ಷಮಣ ಸವದಿ ಅವರು ಕಿತ್ತೂರ ತಾಲೂಕಿನ ವಿóಯವನ್ನು ಪ್ರಾಸ್ತಾಪಿಸಿದರು ಈ ಹಿಂದೆ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ …

Read More »

ಯರಝರ್ವಿ ಗ್ರಾಪಂ ಗೆ ಬೀಗ,ಪ್ರತಿಭಟನೆ

ಯರಝರ್ವಿ ಗ್ರಾಪಂ ಗೆ ಬೀಗ,ಪ್ರತಿಭಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ಯಾವುದೇ ರೀತಿಯ ಅಭವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಗ್ರಾಮ ಪಂಚಾಯತಿ ಪಿಡಿಓ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿ ಯರಝರ್ವಿ ಗಾಮಸ್ಥರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸುತ್ತಿದ್ದಾರೆ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಸಮಸ್ಯೆಗಳ ನಿವಾರಣೆಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಮೇಲಾಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಯುವವರೆಗೆ ಪ್ರತಿಭಟನೆ ನಿಲ್ಲಿಸುವದಿಲ್ಲ …

Read More »

ಬೆಳೆಹಾನಿ ಜಂಟಿ ಸಮೀಕ್ಷೆಗೆ ತಂಡ ರಚನೆ-ಜಿಲ್ಲಾಧಿಕಾರಿ

ಬೆಳಗಾವಿ: ಆಗಸ್ಟ : 09 :(ಕರ್ನಾಟಕ ವಾರ್ತೆ): ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಎನ್ ಜಯರಾಮ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ತಾಲೂಕಿನ ಮಾಂಜರಿ ಬಳಿಯ ಕೃಷ್ಣಾ ನದಿಯ ಸೇತುವೆ, ಚಂದೂರ, ಯಡೂರ ಗ್ರಾಮದ ಜಮೀನುಗಳಿಗೆ ಜಿಲ್ಲಾಧಿಕಾರಿ ಭೇಟಿ ಮಾಡಿ ಬೆಳೆಹಾನಿ ಹಾಗೂ ನದಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಗಣೇಶ ಹುಕ್ಕೇರಿ ಅವರು ಚಿಕ್ಕೋಡಿ ವ್ಯಾಪ್ತಿಯಲ್ಲಿ …

Read More »

ಪ್ರವಾಹ ಪರಿಸ್ಥಿ ಎದುರಿಸಲು ಆಂದ್ರದ ರಕ್ಷಣಾ ತಂಡ ಬೆಳಗಾವಿ ಜಿಲ್ಲೆಗೆ ಆಗಮನ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗು ರಾಯಬಾಗ ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಆಂದ್ರ ಪ್ರದೇಶದಿಂದ ಎನ್.ಡಿ ಆರ್ ಎಫ್ ತಂಡ ಸೋಮವಾರ ಬೆಳಿಗ್ಗೆ ಚಿಕ್ಕೋಡಿಗೆ ಆಗಮಿಸಿದೆ ನುರಿತ ಈಜುಗಾರರು ಹಾಗು ಬೋಟುಗಳ ಸಮೇತ ಆಗಮಿಸಿರುವ ಈ ತಂಡ ಚಿಕ್ಕೋಡಿ ಹಾಗು ರಾಯಬಾಗ ತಾಲೂಕುಗಳ ಪ್ರವಾಹ ಪರಿಸ್ಥಿಯ ಮೇಲೆ ನಿಗಾ ವಹಿಸಿದೆ ಜಿಲ್ಲೆಯಲ್ಲ ಪ್ರವಾಹ ಪರಿಸ್ಥಿತಿ ಎದುರಾದರೆ ರಕ್ಷಣಾ ಕಾರ್ಯಕ್ಕೆ ಈ ತಂಡವನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಆಂದ್ರ ಪ್ರದೇಶದ …

Read More »