SSLC ಫಲಿತಾಂಶ ಪ್ರಕಟ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ(ಕೆಎಸ್‌ಇಎಬಿ) ಸೋಮವಾರ ( ಮೇ 8 ರಂದು) ರಾಜ್ಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ಈ ವರ್ಷದ ಫಲಿತಾಂಶ ಶೇ.83.89ರಷ್ಟಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಬಾರಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಮಂಡ್ಯ ದ್ವಿತೀಯ, ಹಾಸನ ತೃತೀಯ ಸ್ಥಾನ ಪಡೆದುಕೊಂಡಿವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 12 ಮತ್ತು …
Read More »ಬೆಳಗಾವಿ ದಕ್ಷಿಣದಲ್ಲಿ ಅಮೀತ್ ಶಾ ಖುಷ್ ಹುವಾ..!!
ಬೆಳಗಾವಿ- ಬಿಜೆಪಿ ಚಾಣಕ್ಯ ಅಮಿತ್ ಶಾ ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ರೋಡ್ ಶೋ ಜೊತೆಗೆ 20 ಸಾವಿರಕ್ಕೂ ಅಧಿಕ ಬೈಕ್‌ಗಳ ಮೂಲಕ ರ್ಯಾಲಿ ನಡೆಯಿತು. ವಿಶ್ವದಾಖಲೆ ರೀತಿಯಲ್ಲಿ ನಡೆದ ಬೈಕ್ ರ್ಯಾಲಿ ಕಂಡು ಸ್ವತಃ ಅಮಿತ್ ಶಾ ಬೆರಗಾದರು. ರೋಡ್ ಶೋದಲ್ಲಿ ಪಾಲ್ಗೊಂಡ ಅಪಾರ ಜನಸ್ತೋಮ ಬಿಜೆಪಿ, ಅಮಿತ್ ಶಾ, ಅಭಯ ಪಾಟೀಲ ಪರ ಘೋಷಣೆ ಕೂಗಿದರು. ಗಲ್ಲಿ ಗಲ್ಲಿಗಳಲ್ಲಿ ಹೂಮಳೆಗೈದು ಅಮಿತ್ …
Read More »: ಬಿಜೆಪಿಗೆ ಮೋಸ ಮಾಡಿದ ಸವದಿಯನ್ನು ಸೋಲಿಸಿ-ಅಮೀತ್ ಶಾ
ಅಥಣಿ :ಬಿಜೆಪಿಗೆ ಮೋಸ ಮಾಡಿದ ಲಕ್ಷ್ಮಣ ಸವದಿ ಅವರನ್ನು ಈ ಸಲದ ಚುನಾವಣೆಯಲ್ಲಿ ಸೋಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಕರ ನೀಡಿದರು. ಇಲ್ಲಿಯ ಭೋಜರಾಜ ಕ್ರೀಡಾಂಗಣದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.ರ್ನಾಟಕ ಚುನಾವಣೆಯೇ ಬೇರೆ. ಅಥಣಿ ಚುನಾವಣೆಯೇಬೇರೆ. ಅಧಿಕಾರದ ಆಸೆಗೆ ತನ್ನ ಸ್ವಾರ್ಥಕ್ಕೆ ಬಿಜೆಪಿಗೆ ಮೋಸ ಮಾಡಿದ ಸವದಿಯನ್ನು ಈ ಸಲ ಸೋಲಿಸಲೇಬೇಕು ಎಂದು ಕರೆಕೊಟ್ಟರು. ಕಾಂಗ್ರೆಸ್ …
Read More »ಬೆಳಗಾವಿಗೆ ಇಂದು ಬಿಜೆಪಿ ಚಾಣಕ್ಯ ನಗರದಲ್ಲಿ ರೋಡ್ ಶೋ..
ಬೆಳಗಾವಿ :ಬೆಳಗಾವಿ ಜಿಲ್ಲೆಯಲ್ಲಿಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬೃಹತ್ ಚುನಾವಣಾ ಪ್ರಚಾರ ನಡೆಸಿಕೊಡಲಿದ್ದಾರೆ. ಬೆಳಗಾವಿ ನಗರದಲ್ಲಿ ಸಂಜೆ 6 ಗಂಟೆಗೆ ಸಮಾದೇವಿ ಮಂದಿರ, ಖಡೇ ಬಜಾರ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ಧರ್ಮವೀರ ಸಂಭಾಜಿ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಸಿಕೊಡಲಿದ್ದಾರೆ. ಇಂದು ಬೆಳಗ್ಗೆ 11:30 ಕ್ಕೆ ಸವದತ್ತಿ, 1:30 ಕ್ಕೆ ಅಥಣಿ, 2.30 ಕ್ಕೆ ರಾಯಬಾಗ ರೋಡ್ ಶೋ, ಸಂಜೆ 4 ಕ್ಕೆ …
Read More »ಲಕ್ಷ್ಮೀ ಹೆಬ್ಬಾಳಕರ ಪ್ರಚಾರಕ್ಕಾಗಿ, ಶಿವರಾಜ್ ಕುಮಾರ್
ನಾಳೆ ಲಕ್ಷ್ಮೀ ಹೆಬ್ಬಾಳಕರ ಪರ ಪ್ರಚಾರಕ್ಕೆ ಆಗಮಿಸಲಿದ್ದಾರೆ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಬೆಳಗಾವಿ: ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅವರು ನಾಳೆ ಮೇ 6ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಪರ ಅವರು ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಬೆಳಗಾವಿ ತಾಲೂಕಿನ ಸುಳೆಬಾವಿಗೆ ಆಗಮಿಸಲಿರುವ ಅವರು ಅಲ್ಲಿನ ಶ್ರೀ ಮಹಾಲಕ್ಷ್ಮೀ ದೇವಿ ದರ್ಶನ ಪಡೆದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು …
Read More »ನಿಮ್ಮ ಸೇವೆ ಮಾಡಲು ಇನ್ನೊಂದು ಅವಕಾಶ ಕೊಡಿ-ಬಾಲಚಂದ್ರ ಜಾರಕಿಹೊಳಿ
ಮೂಡಲಗಿ- ಅರಭಾವಿ ಮತಕ್ಷೇತ್ರದ ಸಮಗ್ರ ಪ್ರಗತಿಗಾಗಿ ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು, ಮೇ. 10 ರಂದು ನಡೆಯುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿ ಜನಸೇವೆಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು. ತಾಲ್ಲೂಕಿನ ಕುಲಗೋಡ ಗ್ರಾಮದಲ್ಲಿ ಚುನಾವಣೆ ಪ್ರಚಾರದ ನಿಮಿತ್ಯ ಮತಯಾಚಿಸಿ ಮಾತನಾಡಿದ ಅವರು, ಅಭಿವೃದ್ಧಿ ಆಧಾರದ ಮೇಲೆ ಮತ ಯಾಚನೆ ಮಾಡುತ್ತಿರುವುದಾಗಿ ತಿಳಿಸಿದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ …
Read More »ಹಾ.! ಹಾ..!! ಅಭ್ಯರ್ಥಿಗಳಿಂದ ಮದುವೆ ಮಾಡಿಸುವ ಗ್ಯಾರಂಟಿ..!!
ಮದುವೆಯಾಗದ ಹೆಣ್ಣು ಸಿಗದ ಯುವಕರಿಗೆ ಮದುವೆ ಭಾಗ್ಯ ಕರುಣಿಸಲಾಗುವುದು ಬೆಳಗಾವಿ : ಗೋಕಾಕ ಹಾಗೂ ಅರಬಾವಿಯಲ್ಲಿ ಪಕ್ಷೇತರ ಸಹೋದರರಿಬ್ಬರೂ(ಕುಳ್ಳೂರ) ಕಣಕ್ಕಿಳಿದಿದ್ದು ಅವರು ನೀಡಿರುವ ಚುನಾವಣಾ ಪ್ರಣಾಳಿಕೆಯ ಭರವಸೆ ವಿಶೇಷ ರೀತಿಯಲ್ಲಿ ಗಮನ ಸೆಳೆದಿದೆ. ಗೋಕಾಕ ಹಾಗೂ ಅರಬಾವಿ ಮತಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗಳು ಬಿಡುಗಡೆಗೊಳಿಸಿರುವ ಪ್ರಣಾಳಿಕೆ ಇದೀಗ ನಾಡಿನೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಅರಬಾವಿ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಮತ್ತು ಗೋಕಾಕ ಮತ ಕ್ಷೇತ್ರದ …
Read More »ಬೆಳಗಾವಿಯ ಬೀಗರು ಬರುತ್ತಿದ್ದಾರೆ ದಾರಿ ಬಿಡಿ..!!
ಶೆಟ್ಟರ್ ಚಿತ್ತ ಬೆಳಗಾವಿಯತ್ತ : ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಇಂದು ಮಾಜಿ ಸಿಎಂ ! ಬೆಳಗಾವಿ : ಇಷ್ಟು ವರ್ಷಗಳ ಕಾಲ ಇವರು ಬಿಜೆಪಿ ನಾಯಕರಾಗಿ ಬೆಳಗಾವಿಗೆ ಆಗಮಿಸುತ್ತಿದ್ದರು. ಆದರೆ, ಇದೀಗ ಕಾಂಗ್ರೆಸ್ ನಾಯಕರಾಗಿ ಆಗಮಿಸುತ್ತಿರುವುದು ಚರ್ಚಿತ ವಿಷಯ. ಬಿಜೆಪಿ ಟಿಕೆಟ್ ವಂಚಿತರಾಗಿ ಕೊನೆಗೆ ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣೆ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇದೇ ಮೊದಲ ಬಾರಿಗೆ ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದಾರೆ. ಅದರಲ್ಲೂ …
Read More »ಪ್ರಸಾದ ನಿಲಯದ ಶ್ರೀಗಳು, ನೆನೆದವರ ಮನದಲ್ಲಿ.
ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಪ್ರಸಾದ ನಿಲಯಗಳ ಮೂಲಕ,ಶೈಕ್ಷಣಿಕ ಕ್ರಾಂತಿ ಮಾಡಿ,ಈ ಭಾಗದ ಲಕ್ಷಾಂತರ ಯುವಕರ ಭವಿಷ್ಯ ರೂಪಿಸಿದ,ಬೆಳಗಾವಿಯ ರುದ್ರಾಕ್ಷಿಮಠ ನಾಗನೂರು ಶ್ರೀ ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳನ್ನು ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಅವರು ಸ್ಮರಿಸಿದ್ದಾರೆ ಬೆಳಗಾವಿಯ ರೇಲ್ವೆ ನಿಲ್ಧಾಣಕ್ಕೆ ಬೆಳಗಾವಿಯ ರುದ್ರಾಕ್ಷಿಮಠ ನಾಗನೂರು, ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳ ಹೆಸರು ನಾಮಕರಣ ಮಾಡಲು ಜೀವ ಇರೋವರೆಗೂ ಹೋರಾಡುತ್ತೇನೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ, …
Read More »SSLC ಫಲಿತಾಂಶ ಗುರುವಾರ ಸಾಧ್ಯತೆ.
ಬೆಂಗಳೂರು :ರಾಜ್ಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಹುನಿರೀಕ್ಷಿತ ಈ ಬಾರಿಯ ಪರೀಕ್ಷಾ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ನಿರೀಕ್ಷಿಸಿದ್ದ ಫಲಿತಾಂಶ ಸದ್ಯವೇ ಪ್ರಕಟವಾಗುವ ಸಾಧ್ಯತೆ ಇದೆ.ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶಮೇ ತಿಂಗಳ 4 ರಂದು ಪ್ರಕಟವಾಗಲಿದೆ ಎನ್ನಲಾಗಿದೆ. ಶಿಕ್ಷಣ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಶಿಕ್ಷಣ ಇಲಾಖೆ ನೀಡಿರುವ ಕೆಲವು ಅಂಕಿಅಂಶ ಹಾಗೂ ಮಾಹಿತಿ ಆಧರಿಸಿ …
Read More »