ಬೆಳಗಾವಿ ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ ಪುಂಡ ಎಂಇಎಸ್ ನಾಯಕರನ್ನು ಪೊಲೀಸರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಂಧಿಸಿದರು. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರು ಇಲ್ಲಿನ ಮರಾಠಿ ಭಾಷಿಕರ ಸಮಸ್ಯೆ ಆಗಲಿಸಲು ಬೆಳಗಾವಿಗೆ ಆಗಮಿಸುತ್ತಿದ್ದರು. ಅವರಿಗೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಸರಕಾರಕ್ಕೆ ಪತ್ರ ಬರೆದು ಬೆಳಗಾವಿ ಗಡಿ ಪ್ರವೇಶಿಸದಂತೆ ಮಾಡಿದ್ದು ಖಂಡನೀಯ ಎಂಇಎಸ್ ಛಾಪಾಗಳು ಮರಾಠಿ ಸುದ್ದಿಗಾರರಿಗೆ ಎಂಇಎಸ್ …
Read More »ಕರವೇ ನಾರಾಯಣಗೌಡ್ರ ಬೆಳಗಾವಿ ನಡೆಗೆ ಹಿರೇಬಾಗೇವಾಡಿಯಲ್ಲೇ ತಡೆ…??
ಬೆಳಗಾವಿ-ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ್ರು ಇಂದು ಬೆಳಗಾವಿಗೆ ಆಗಮಿಸುತ್ತಿದ್ದು ಅವರು ಬೆಳಗಾವಿ ಮಹಾನಗರ ಪ್ರವೇಶ ಮಾಡದಂತೆ ತಡೆಯಲು ಹಿರೇಬಾಗೇವಾಡಿ ಟೋಲ್ ಬಳಿ ಬಿಗಿ ಪೋಲೀಸ್ ಬಂದೋಬಸ್ತಿ ಮಾಡಲಾಗಿದೆ. ಬೆಳಗಾವಿ ಮಹಾನಗರದಲ್ಲಿ ಭಾಷಾ ಧ್ವೇಷದ ಕಿಡಿ ಹೊತ್ತಿದಾಗ, ಬೆಳಗಾವಿ ಪೋಲೀಸ್ರು ವಾಟಾಳ್ ನಾಗರಾಜ್ ಸೇರಿದಂತೆ ಎಲ್ಲ ಕನ್ನಡಪರ ಹೋರಾಟಗಾರರನ್ನು ಹಿರೇಬಾಗೇವಾಡಿ ಟೋಲ್ ಬಳಿ ತಡೆಯುತ್ತಾರೆ. ಇಂದು ಕರವೇ ಅಧ್ಯಕ್ಷ ನಾರಾಯಣಗೌಡ್ರು ಸಾವಿರಾರು ಕಾರ್ಯಕರ್ತರ ಜೊತೆಗೆ ಬೆಳಗಾವಿಗೆ ಮುತ್ತಿಗೆ ಹಾಕಿ ನಾಡದ್ರೋಹಿಗಳ ವಿರುದ್ಧ …
Read More »ಮಹಾರಾಷ್ಟ್ರದ ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ- ಬೆಳಗಾವಿ ಡಿಸಿ ಆದೇಶ
ಬೆಳಗಾವಿ- ನಾಳೆ ಮಂಗಳವಾರ ಮಹಾರಾಷ್ಟ್ರದ ಇಬ್ವರು ಸಚಿವರು ಬೆಳಗಾವಿಗೆ ಬರಲಿದ್ದು, ಈ ಇಬ್ವರು ಸಚಿವರು ಬೆಳಗಾವಿ ಗಡಿ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿ ಬೆಳಗಾವಿ ಜಿಲ್ಕಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ,ಮತ್ತು ಶಂಬುರಾಜೆ ದೇಸಾಯಿ ಇಬ್ಬರೂ ಬೆಳಗಾವಿ ಗಡಿ ಪ್ರವೇಶ ಮಾಡದಂತೆ ಕ್ರಮ ಜರುಗಿಸಲು ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಆಗಮಿಸಿ ಬೆಳಗಾವಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ,ಶಾಂತಿಗೆ …
Read More »ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದ ಗಡಿಬಿಡಿ,…!!
ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಬೆಳಗಾವಿ-ಬೆಳಗಾವಿಯ ಶಾಂತಿಗೆ ಭಂಗ ತರಲು,ನಾಳೆ ಬೆಳಗಾವಿಗೆ ಮಹಾರಾಷ್ಟ್ರದ ಇಬ್ಬರು ಮಂತ್ರಿಗಳು ಬರುತ್ತಿದ್ದು, ಮಹಾರಾಷ್ಟ್ರದ ಮಂತ್ರಿಗಳ ಹಠಮಾರಿ ಧೋರಣೆ ಖಂಡಿಸಿ,ಇವರನ್ನು ಬೆಳಗಾವಿಗೆ ಬಾರದಂತೆ ಯಾವುದೇ ಕಠಿಣ ಕ್ರಮ ಜರುಗಿಸದ ಕರ್ನಾಟಕ ಸರ್ಕಾರದ ನಿರ್ಲಕ್ಷ್ಯ ವನ್ಬು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ಕುಂದಾನಗರಿ ಬೆಳಗಾವಿಯಲ್ಲಿ ಬೀದಿಗಿಳಿದ ಕನ್ನಡ ಹೋರಾಟಗಾರರು,ಹಾಗೂಬೆಂಗಳೂರಿನ ಕರ್ನಾಟಕ ಏಕೀಕರಣ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದ್ದು,ಕರ್ನಾಟಕ ಏಕೀಕರಣ …
Read More »VK ಬಾಸ್ ಗೆ ರಿಲೀಫ್,ತವರಿಗೆ ಬಾ ಅಣ್ಣಾ…!!
ಎರಡು ವರ್ಷಗಳ ಬಳಿಕ ಧಾರವಾಡ ಭೇಟಿಗೆ ಕೋರ್ಟ್ ಅಸ್ತು; ವಿದ್ಯಾಕಾಶಿಯಲ್ಲಿ 3 ಗಂಟೆ ಇರಲಿವೆ ವಿಕೆ ಬಾಸ್ ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಎರಡು ವರ್ಷಗಳ ಬಳಿಕ ಧಾರವಾಡ ಭೇಟಿಗೆ ಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ. ನ್ಯಾಯಾಲಯ ವಿಧಿಸಿದ್ದ ಷರತ್ತಿನಿಂದಾಗಿ ಬೆಳಗಾವಿ ಜೈಲಿನಿಂದ ಬಿಡುಗಡೆಯಾಗಿದ್ದರೂ ಧಾರವಾಡ ಜಿಲ್ಲೆಗೆ ಭೇಟಿ ನೀಡಲು ಸಾಧ್ಯವಾಗಿರದ ಮಾಜಿ ಸಚಿವ ವಿನಯ್ ಕುಲಕರ್ಣಿ ಕೊನೆಗೂ ಭೇಟಿ ನೀಡಲು ಕೋರ್ಟ್ ಷರತ್ತುಬದ್ದ ಅನುಮತಿ ನೀಡಿದೆ.. …
Read More »ತನ್ನ ಹೆಂಡತಿಯ ಜೊತೆ ಅಫೇರ್ ಇದೆ ಇಂದು ಅಣ್ಣನನ್ನೇ ಖಲ್ಲಾಸ್ ಮಾಡಿದ ತಮ್ಮ…
ಚಿಕ್ಕೋಡಿ-.ಅನೈತಿಕ ಸಂಬಂಧ ಅಣ್ಣತಮ್ಮಂದಿರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ,ಚಿಕ್ಕೋಡಿ ತಾಲುಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಉಮ್ರಾಣಿ ಗ್ರಾಮದ ಹೊರವಲಯದಲ್ಲಿ ಶವ ಪತ್ತೆಯಾಗಿದೆ.ಅಕ್ಬರ್ ಅಬ್ದುಲ್ ಶೇಕ್ ಕೊಲೆಯಾದ ವ್ಯಕ್ತಿಯಾಗಿದ್ದು,ಅಮ್ಜದ್ ಶೇಕ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.ಅಮಜದ್ ಮತ್ತು ಅಕ್ಬರ್ ಇಬ್ವರು ಸಹೋದರರಾಗಿದ್ದಾರೆ. ಚಿಕ್ಕೋಡಿ ಪಟ್ಟಣದ ಡಂಬಳ ಪ್ಲಾಟ್ ನಿವಾಸಿಗಿರುವ ಆರೋಪಿ ಪೋಲೀಸರಿಗೆ ಶರಣಾಗಿದ್ದಾನೆ.ಕೊಲೆಯಾದ ಅಕ್ಬರ್ ಕಬ್ಬೂರ ಗ್ರಾಮದಲ್ಲಿ ಬ್ಯಾಟರಿ ಅಂಗಡಿಯನ್ನು ಹೊಂದಿದ್ದ,,ಅಣ್ಣನನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಶರಣಾದ ಅಮ್ಜದ್ ಶೇಕ್.ಚಿಕ್ಕೋಡಿ ಪೊಲೀಸ್ …
Read More »ಕಿತ್ತೂರು ಕ್ಷೇತ್ರದ ಧಣಿ,ಸತೀಶ್ ಸಾಹುಕಾರ್ ಸಮ್ಮಿಲನ….!!!
ಬೆಳಗಾವಿ-ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ,ಶಾಶ್ವತ ಶತ್ರುಗಳೂ ಅಲ್ಲ ಅನ್ನೋದು ನೂರಕ್ಕೆ ನೂರು ಸತ್ಯ,ಒಂದೇ ಪಕ್ಷದಲ್ಲಿದ್ದರೂ ವ್ಯಯಕ್ತಿಕವಾಗಿ ಅಂತರ ಕಾಯ್ದುಕೊಂಡಿದ್ದ ಕಿತ್ತೂರು ಕ್ಷೇತ್ರದ ಧಣಿ ಎಂದೇ ಕರೆಯಲ್ಪಡುವ ಡಿಬಿ ಇನಾಮದಾರ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಸಮ್ಮಿಲನ ವಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಇಂದು ಶನಿವಾರ ಸಂಜೆ ನೇಗಿನಹಾಳ ಗ್ರಾಮದಲ್ಲಿರುವ ಡಿ.ಬಿ ಇನಾಮದಾರ ಮನೆಗೆ ಭೇಟಿ ನೀಡಿ ಸುಧೀರ್ಘ ಚರ್ಚೆ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ …
Read More »ಹೆಬ್ಬಾಳ್ಕರ ಗೆ ಖೆಡ್ಡಾ ತೋಡಲು ಸಾಹುಕಾರ್ ತಯಾರಿ…!!
ಬೆಳಗಾವಿ- ಇಷ್ಟು ದಿನ ಸೈಲೆಂಟ್ ಆಗಿದ್ದ ಸಾಹುಕಾರ ತಮ್ಮ ವಿರೋಧಿಗಳನ್ನ ಸೋಲಿಸಲು ಮತ್ತೊಮ್ಮೆ ಸಜ್ಜಾಗಿದ್ದಾರೆ. ತಮ್ಮ ರಾಜಕೀಯ ಬದ್ದ ಜನ ವೈರಿಯಾಗಿರುವ ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳ್ಕರ ಸೋಲಿಸಲು ಸಜ್ಜಾಗಿರುವ ರಮೇಶ್ ಜಾರಕಿಹೋಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ,ಹಲಗಾ,ಕೆಕೆ ಕೊಪ್ಪ,ಬಡಾಲ ಅಂಕಲಗಿ ಸೇರಿದಂತೆ ಹತ್ತಕ್ಕೂ ಹೆಚ್ವು ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಪ್ರಯತ್ನ. ನಡೆಸಿದ್ದಾರೆ. …
Read More »24 ರಂದು ದಾವಣಗೇರೆಯಲ್ಲಿ ವೀರಶೈವರ ಸಮಾವೇಶ
ಬೆಳಗಾವಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನವನ್ನು ಡಿ.24 ರಿಂದ ಮೂರು ದಿನಗಳ ಕಾಲ ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಘಟದ ಉಪಾಧ್ಯಕ್ಷ ರುದ್ರಣ್ಣ ಹೊಸಕೆರೆ ಹೇಳಿದರು. ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 1904ರಲ್ಲಿ ಹಾನಗಲ್ ಕುಮಾರಸ್ವಾಮಿ ಅವರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸ್ಥಾಪಿತವಾಗಿದ್ದು, ಕಳೆದ 118 ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಗೆ …
Read More »ಯಾವುದೇ ನಿಷೇಧ ಹೇರಿದರೂ ನಾನು ನಿಲ್ಲುವ ಮನುಷ್ಯನಲ್ಲ…!!
ಬೆಳಗಾವಿ-ಮತ್ತೆ ಉದ್ಧಟತನ ಮೆರೆದ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ , ನಾವು ಬೆಳಗಾವಿಗೆ ಹೋಗಿಯೇ ಹೋಗ್ತೀವಿ,ಎಂದು ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಮುಂಬಯಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಮಹಾರಾಷ್ಟ್ರದ ಗಡಿ ಉಸ್ತುವಾರಿ ಮಂತ್ರಿ ಚಂದ್ರಕಾಂತ ಪಾಟೀಲ,ಕರ್ನಾಟಕಕ್ಕೆ ಭೇಟಿ ನೀಡದಂತೆ ಸಂದೇಶ ರವಾನಿಸಿದ್ದೇವೆ ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು,ಡಿಸೆಂಬರ್ 6ರಂದು ನಾವು ಬೆಳಗಾವಿಗೆ ಹೋಗಿಯೇ ತೀರುತ್ತೇವೆ.ಎಂದು ಹೇಳಿಕೆ ನೀಡಿದ್ದಾರೆ. ನನಗೆ ಯಾವುದೇ ಫ್ಯಾಕ್ಸ್ …
Read More »