ಕಿಡ್ನ್ಯಾಪ್ ಕೇಸ್ ನಲ್ಲಿ ಭಾಗಿಯಾದ ಮೂವರು ಜನ ಆರೋಪಿಗಳ ಬಂಧನ ಬೆಳಗಾವಿ- ಚನ್ನಮ್ಮನ ಕಿತ್ತೂರಿನಲ್ಲಿ ಇತ್ತೀಚಿಗೆ ಅಪಹರಣವಾಗಿದ್ದ ಪಟ್ಟಣ ಪಂಚಾಯತಿ ಸದಸ್ಯ ಪತ್ತೆಯಾಗಿದ್ದು ಈ ಪ್ರಕರಣದಲ್ಲಿ ಭಾಗಿಯಾದ ಮೂವರುಚ ಆರೋಪಿಗಳನ್ನು ಬಂಧಿಸಲಾಗಿದೆ.ಕಿಡ್ನ್ಯಾಪ್ ಆಗಿದ್ದ ಕಿತ್ತೂರ ಪಟ್ಟಣ ಪಂಚಾಯತಿಯ ಬಿಜೆಪಿ ಸದಸ್ಯ ನಾಗರಾಜ್ ಅಸುಂಡಿಯನ್ನು ಪೋಲೀಸರು ಸುರಕ್ಷಿತವಾಗಿ ಕರೆತಂದಿದ್ದಾರೆ. ಹಾವೇರಿಯ ಬಂಕಾಪೂರದ ಬಳಿ ಕಿಡ್ಯಾಪ್ ಆಗಿದ್ದ ನಾಗರಾಜ್ ಅಸುಂಡಿ ಅವರನ್ನು ಪತ್ತೆ ಮಾಡಿರುವ ಪೋಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಮೂವರು …
Read More »ಬೆಳಗಾವಿ ಮಹಾನಗರ ಪಾಲಿಕೆಗೆ ತಾತ್ಕಾಲಿಕ ರಿಲೀಫ್……!!
ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆಯ ತಾತ್ಕಾಲಿಕ ರಿಲೀಪ್ ಸಿಕ್ಕಿದೆ. ಮಾನ್ಯ ಉಚ್ಛ ನ್ಯಾಯಾಲಯ ಜಪ್ತಿ ಆದೇಶವನ್ನು ಹಿಂದಕ್ಕೆ ಪಡೆದಿದ್ದು ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ಮುಂದೂಡಿದೆ. ಬೆಳಗಾವಿ ಮಹಾನಗರದ ಮಹಾತ್ಮಾಪುಲೆ ರಸ್ತೆ ಅಗಲೀಕೆಣ ಕಾಮಗಾರಿಯಲ್ಲಿ ಜಮೀನು ಕಳೆದುಕೊಂಡ ಜಮೀನು ಮಾಲೀಕರಿಗೆ 76 ಲಕ್ಷ ರೂ ಪರಿಹಾರ ನೀಡುವ ವಿಚಾರದಲ್ಲಿ ಪಾಲಿಕೆ ಆಸ್ತಿಯನ್ನು ಜಪ್ತಿ ಮಾಡುವಂತೆ ಮಾನ್ಯ ನ್ಯಾಯಾಲಯ ಈ ಹಿಂದೆ ಆದೇಶ ಮಾಡಿತ್ತು.ಈ ನಿಟ್ಟಿನಲ್ಲಿ ನಿನ್ನೆ ಪಾಲಿಕೆ ಕಂದಾಯ …
Read More »ಗುಡಿಯ ಕಟ್ಟೆಯ ಮೇಲೆ ಮಲಗಿದ್ದ ವ್ಯಕ್ತಿಯ ಮರ್ಡರ್….
ಬೆಳಗಾವಿ – ರಾತ್ರಿಹೊತ್ತು ಮಂದಿರದಲ್ಲಿ ನಡೆದ ಭಜನೆ ಕಾರ್ಯಕ್ರಮ ಮುಗಿಸಿ,ಗುಡಿಯ ಕಟ್ಟೆಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬನನ್ನು ಕಬ್ಬು ಕಡಿಯುವ ಕೋಯ್ತಾದಿಂದ ಕೊಚ್ವಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದಿದೆ. ಮಮದಾಪೂರ ಗ್ರಾಮದ ಬೀರ ಸಿದ್ದೇಶ್ವರ ಗುಡಿಯಲ್ಲಿ ಭಜನೆ ಕಾರ್ಯಕ್ರಮ ನಡೆದಿತ್ತು ಈ ಕಾರ್ಯಕ್ರಮ ಮುಗಿಸಿ ಗುಡಿಯ ಕಟ್ಟೆಯ ಮೇಲೆ ಮಲಗಿದ್ದ ಮಡ್ಡೆಪ್ಪ ಯಲ್ಲಪ್ಪ ಬಾನಸಿ (47) ಎಂಬಾತನಿಗೆ ಅದೇ ಗ್ರಾಮದ ಬೀರಪ್ಪ ಸಿದ್ದಪ್ಪ …
Read More »ಬೆಳಗಾವಿ ಪಾಲಿಕೆಗೆ ಮತ್ತೊಂದು ಶಾಕ್..ಕಾರು ಜಪ್ತಿಗೆ ವಿಫಲಯತ್ನ…!
ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭೂಗತವಾಗಿದ್ದ ಹಳೆಯ ಭೂತಗಳು ಒಂದೊಂದಾಗಿ ಏಳುತ್ತಿವೆ.20 ಕೋಟಿ ರೂ ಪರಿಹಾರ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪಾಲಿಕೆ ಸದಸ್ಯರು ವಿಶೇಷ ತುರ್ತುಸಭೆ ನಡೆಸಿ ವಿಶೇಷ ನಿರ್ಣಯ ಕೈಗೊಂಡ ಬೆನ್ನಲ್ಲಿಯೇ ಇದೇ ಮಾದರಿಯ ಮತ್ತೂಂದು ಪ್ರಕರಣದ ತೂಗುಗತ್ತಿ ಈಗ ಬೆಳಗಾವಿ ಪಾಲಿಕೆಯ ಮೇಲೆ ನೇತಾಡುತ್ತಿದೆ. 2008 ರಲ್ಲಿ ಬೆಳಗಾವಿಯ ಮಹಾತ್ಮಾಪುಲೆ ರಸ್ತೆಯಲ್ಲಿ ಐದು ಸಾವಿರ ಸ್ಕ್ವೇರ್ ಫುಟ್ ಜಾಗೆಯನ್ನು ಕಳೆದುಕೊಂಡ ಜಮೀನು ಮಾಲೀಕರಿಗೆ ಮಾನ್ಯ ಉಚ್ಛ ನ್ಯಾಯಾಲಯ …
Read More »ಶರದ್ ಪವಾರ್ ಇಂದು ಬೆಳಗಾವಿಗೆ
ಬೆಳಗಾವಿ – ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಂಧರ್ಭದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಬೆಳಗಾವಿ ಎಂಇಎಸ್ ಸಂಘಟನೆಯ ನಿರ್ಮಾಪಕ ನಿರ್ದೇಶಕರಾಗಿರುವ ಶರದ್ ಪವಾರ್ ಇಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಬೆಳಗಾವಿಯ ಅರ್ಜುನ್ ರಾವ್ ಗೋವೀಂದ್ ರಾವ್ ಘೋರ್ಪಡೆಯವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಬೆಳಗಾವಿಯ ಮರಾಠಾ ಮಂದಿರದಲ್ಲಿ ಇಂದು ಸಂಜೆ 4 ಗಂಟೆಗೆ ಜರುಗಲಿದೆ ಈ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಮಹಾ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಭಾಗವಹಿಸುತ್ತಿದ್ದಾರೆ. ಶರದ್ ಪವಾರ್ …
Read More »ಬೆಳಗಾವಿ ಅಧಿವೇಶನದ ಶತಮಾನೋತ್ಸವ ಬೆಂಗಳೂರಲ್ಲಿ ಸಭೆ
ಬೆಳಗಾವಿ- 1924 ರಲ್ಲಿ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಯ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಸಭೆ ನಡೆಸಿದೆ. ಬೆಳಗಾವಿ-ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಬೆಳಗಾವಿ ಅಧಿವೇಶನದ ಶತಮಾನೋತ್ಸವದ ಅದ್ಧೂರಿ ಆಚರಣೆಯ ಕುರಿತು ಪೂರ್ವ ಭಾವಿ ಸಭೆ ನಡೆದಿದೆ. ಕರ್ನಾಟಕದ ಎರಡನೇ ರಾಜಧಾನಿ ಎನಿಸಿಕೊಂಡಿರುವ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನವನ್ನು ಅದ್ದೂರಿಯಾಗಿ …
Read More »ಗಣೇಶ ಹಬ್ಬಕ್ಕೆ ಜಿಲ್ಲಾಡಳಿತದಿಂದ ಭರ್ಜರಿ ಸಿದ್ಧತೆ
ಶೀಘ್ರ ಅನುಮತಿಗೆ 12 ಕಡೆ ಏಕಗವಾಕ್ಷಿ ವ್ಯವಸ್ಥೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ(ಕರ್ನಾಟಕ ವಾರ್ತೆ) ಆ.31: ಗಣೇಶೋತ್ಸವ ಮಂಡಳಿಗಳಿಗೆ ಸುಲಭವಾಗಿ ಹಾಗೂ ಶೀಘ್ರವಾಗಿ ಒಂದೇ ಕಡೆ ಅನುಮತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಯಾ ಪೊಲೀಸ್ ಠಾಣೆಗಳಲ್ಲಿಯೇ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ(ಆ.31) ಜರುಗಿದ ಗಣೇಶ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ …
Read More »ಬಿಜೆಪಿಯಿಂದಲೂ ಮುಸ್ಲಿಂ ಮಹಿಳೆಗೆ ಅಧ್ಯಕ್ಷ ಸ್ಥಾನ…
*ಮೂಡಲಗಿ*- ಮೂಡಲಗಿ ಪುರಸಭೆಯ ನೂತನ ಅಧ್ಯಕ್ಷೆಯನ್ನಾಗಿ ಮುಸ್ಲಿಂ ಮಹಿಳೆಗೆ ಅಧಿಕಾರ ನೀಡಲು ಕಾರಣಿಕರ್ತರಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪಟ್ಟಣದ ವಿವಿಧ ಸಮಾಜಗಳ ಮುಖಂಡರು ಅಭಿನಂದನೆ ಸಲ್ಲಿಸಿದರು. ಮೂಡಲಗಿ ಪುರಸಭೆಗೆ ಬುಧವಾರದಂದು ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ಮಹಿಳೆಗೆ ಅಧ್ಯಕ್ಷರಾಗುವ ಅದೃಷ್ಟವನ್ನು ನೀಡಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಸ್ಥಾನಕ್ಕೆ …
Read More »ಅರಬ್ ದೇಶದಲ್ಲಿ ಗೋಕಾಕ್ ಮೂಲದ ನಾಲ್ವರ ಸಜೀವ ದಹನ…
ಬೆಳಗಾವಿ-ಓಮಾನ್ ದೇಶದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗೋಕಾಕ ಮೂಲದ ನಾಲ್ವರ ಸಜೀವ ದಹನವಾಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಪವನ್‌ಕುಮಾರ್ ತಹಶೀಲ್ದಾರ್,ಪೂಜಾ ತಹಶಿಲ್ದಾರ್, ವಿಜಯಾ ತಹಶಿಲ್ದಾರ್, ಅದಿಶೇಷ ಬಸವರಾಜ್ ಮೃತ ದುರ್ದೈವಿಗಳಾಗಿದ್ದಾರೆ. ಓಮಾನ್ ನಗರದ ಸಲಾಲಾ ನಗರದಿಂದ ಮುಸ್ಕತ್‌ಗೆ ತೆರಳುವಾಗ ಹೈಮಾ ಬಳಿ ಘಟನೆ ನಡೆದಿದೆ.ಸದ್ಯ ಹೈಮಾ ಆಸ್ಪತ್ರೆಯ ಶವಾಗಾರದಲ್ಲಿ ನಾಲ್ಕೂ ಜನರ ಶವ ಇರಿಸಲಾಗಿದೆ.ಮೃತ ದೇಹಗಳನ್ನು ಭಾರತಕ್ಕೆ ತರಲು ವಿದೇಶಾಂಗ ಇಲಾಖೆಗೆ ಮಾಡಿರುವ ರಾಜ್ಯಸಭಾ …
Read More »ಕಿತ್ತೂರು ಖುರ್ಚಿಗಾಗಿ ಕಿತ್ತಾಟ, ಪ.ಪಂ ಸದಸ್ಯನ ಕಿಡ್ನ್ಯಾಪ್..??
ಬೆಳಗಾವಿ-ಚನ್ನಮ್ಮನ ಕಿತ್ತೂರು: ಸೆ, 3 ರಂದು ಇಲ್ಲಿಯ ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸಮಸ್ಥಾನ ಹೊಂದಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ (34) ಅವರನ್ನು ಗುರುವಾರ ತಡರಾತ್ರಿ ಅಪಹರಣ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. 9 ಬಿಜೆಪಿ ಸದಸ್ಯರು, 5 ಕಾಂಗ್ರೆಸ್ ಸದಸ್ಯರು, ನಾಲ್ವರು ಪಕ್ಷೇತರ ಸದಸ್ಯರು ಪಟ್ಟಣ ಪಂಚಾಯತಿಗೆ ಆಯ್ಕೆಯಾಗಿ ಬಂದಿದ್ದಾರೆ. ಇವರಲ್ಲಿ 4 …
Read More »