Breaking News

Breaking News

ದರ್ಶನ್ ಕ್ಯಾಶೀಯರ್, ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್….!!

ಬೆಳಗಾವಿ- ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಕ್ಯಾಶೀಯರ್ ಮ್ಯಾನೇಜರ್ ಆಗಿದ್ದ ಪ್ರದೋಶ್ ನನ್ನು ಇಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ,ಮಾಡಲಾಗಿದೆ. ಕೊಲೆ ಆರೋಪದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಪೋಟೋ ವೈರಲ್ ಆದ ತಕ್ಷಣ ನ್ಯಾಯಾಲಯದ ಆದೇಶದ ಮೇರೆಗೆ ನಟ ದರ್ಶನ್ ಮತ್ತು ಅವನ ಜೊತೆಗಿದ್ದ ಎಲ್ಲ ಆರೋಪಿಗಳನ್ನು ಬೇರೆ,ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. …

Read More »

ಬೆಳಗಾವಿ ಪಾಲಿಕೆಯಿಂದ 20 ಕೋಟಿ ಪರಿಹಾರ ನೀಡಲು ಸಮ್ಮತಿ ಇಲ್ಲ..

ಬೆಳಗಾವಿ- ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಾಡಿರುವ ರಸ್ತೆ ಕಾಮಗಾರಿಗೆ ಬೆಳಗಾವಿ ಮಹಾನಗರ ಪಾಲಿಕೆಯಿಂದ 20 ಕೋಟಿ ರೂ ಪರಿಹಾರ ಕೊಡುವುದು ಸರಿಯಲ್ಲ ಇದಕ್ಕೆ ನನ್ನ ಸಮ್ಮತಿ ಇಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಪಾಲಿಕೆಯಲ್ಲಿ 20 ಕೋಟಿ ರೂ ಪರಿಹಾರ ನೀಡುವ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿ ಇದೆ.ಪಾಲಿಕೆಯಲ್ಲಿ ಕೈಗೊಂಡ ನಿರ್ಣಯಕ್ಕೆ …

Read More »

ಥ್ಯಾಕ್ರೆಯನ್ನು ಕೊಂದು ನಂದಿ ಧ್ವಜ ಹಾರಿಸಿದ್ದು ಅಮಟೂರು ಬಾಳಪ್ಪ…

*ಕಿತ್ತೂರು ರಾಣಿ ಚೆನ್ನಮ್ಮನ ಅಂಗ ರಕ್ಷಕನಾಗಿದ್ದ ಅಮಟೂರು ಬಾಳಪ್ಪನವರು ಸಹ ಹಣಬರ ಸಮಾಜಕ್ಕೆ ಸೇರಿದ್ದು, ಇದೇ ಅಕ್ಟೋಬರ್ 23 ರಂದು ನಡೆಯಲಿರುವ 200 ನೇ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಅಮಟೂರು ಬಾಳಪ್ಪನವರನ್ನು ಸ್ಮರಿಸುವ ಕೆಲಸವಾಗಬೇಕಿದೆ. 1824 ರಲ್ಲಿ ಚೆನ್ನಮ್ಮನ ರಕ್ಷಕನಾಗಿದ್ದ ಅಮಟೂರು ಬಾಳಪ್ಪ ಬ್ರಿಟಿಷ್ ಅಧಿಕಾರಿಯಾಗಿದ್ದ ಥ್ಯಾಕ್ರೆಯನ್ನು ಗುಂಡಿಟ್ಟು ಕೊಂದು ನಂದಿ ಧ್ವಜ* *ಹಾರಿಸಿದ ಕೀರ್ತಿಗೆ ಪಾತ್ರನಾಗಿದ್ದ. ಕಿತ್ತೂರು ಜಯಂತಿ ಉತ್ಸವ ನಡೆಯಲು ಬಾಳಪ್ಪನು ಕೂಡ ಕಾರಣೀಕರ್ತನಾಗಿದ್ದ. ಹೀಗಾಗಿ ಅಮಟೂರು …

Read More »

ಕೊನೆಗೂ ಬೆಳಗಾವಿ ಡಿಡಿಪಿಐ ಹುದ್ದೆ ಭರ್ತಿ

ಬೆಳಗಾವಿ : ಬೆಳಗಾವಿ ಸಾರ್ವಜನಿಕ ‌ಶಿಕ್ಷಣ ಇಲಾಖೆ ಉಪನಿರ್ದೇಶಕರ ಹುದ್ದೆಗೆ ಲೀಲಾವತಿ ಹಿರೇಮಠ ಅವರನ್ನು ನೇಮಕ‌ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಹಲವು ತಿಂಗಳಿನಿಂದ ಖಾಲಿ ಇದ್ದ ಡಿಡಿಪಿಐ ಹುದ್ದೆಗೆ ಲೀಲಾವತಿ ಹಿರೇಮಠ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಬೆಳಗಾವಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ,ಹಾಗೂ ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

Read More »

ಸತೀಶ್‌ ಶುಗರ್ಸ್ ಗೆ ಅತ್ಯುತ್ತಮ ಸಕ್ಕರೆ ಕಾರ್ಖಾನೆ ಅವಾರ್ಡ್…

ಬೆಳಗಾವಿ: ಸತೀಶ್‌ ಶುಗರ್ಸ್ ಲಿಮಿಟೆಡ್, ಹುಣಶ್ಯಾಳ ಪಿ.ಜಿ. ಸಕ್ಕರೆ ಕಾರ್ಖಾನೆಗೆ 2024 ನೇ ಸಾಲಿನ “ಅತ್ಯುತ್ತಮ ಸಕ್ಕರೆ ಕಾರ್ಖಾನೆ ಪ್ರಶಸ್ತಿ” ಯನ್ನು ದಿ. ಡೆಕ್ಕನ್ ಶುಗರ್ ಟೆಕ್ನೋಲೊಜಿಸ್ಟ್ ಅಸೋಸಿಯೇಶನ್ ನೀಡಿ ಗೌರವಿಸಿದೆ. ಕಾರ್ಖಾನೆಯ ಸಕ್ಕರೆ ಘಟಕ, ಸಹ-ವಿದ್ಯುತ್ ಮತ್ತು ಡಿಸ್ಟಿಲರಿ ಘಟಕಗಳ ಉತ್ತಮ ಕಾರ್ಯನಿರ್ವಹಣೆ, ಪೂರ್ಣ ಪ್ರಮಾಣದ ಸಾಮಥ್ರ್ಯದ ಬಳಕೆ, ದಕ್ಷತೆ ಮತ್ತು ಕಾರ್ಯಕ್ಷಮತೆ ಪರಿಗಣಿಸಿ ಪುಣೆಯ ದಿ. ಡೆಕ್ಕನ್ ಶುಗರ್ ಟೆಕ್ನೋಲೊಜಿಸ್ಟ್ ಅಸೋಸಿಯೇಶನ್ ಸಂಸ್ಥೆಯು ಆ. 24 ರಂದು …

Read More »

ಬೆಳಗಾವಿ ಜಿಲ್ಲೆಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಮಹೋತ್ಸವ ಜಾಗೃತಿ ಅಭಿಯಾನ

ಬೆಳಗಾವಿ, ಆ.27: ಸೆಪ್ಟೆಂಬರ್ 3ರಂದು ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಇರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಮಹೋತ್ಸವ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ವೀರಭದ್ರೇಶ್ವರ ಜಯಂತಿ ಮಹೋತ್ಸವದ ರಾಜ್ಯಾಧ್ಯಕ್ಷರಾದ ಬಳ್ಳಾರಿ ಕಲ್ಯಾಣ ಮಠದ ಶ್ರೀ ಮ ನಿ ಪ್ರ ಸ್ವ ಕಲ್ಯಾಣ ಮಹಾಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಗರಗೋಳದ ಮಹಾಂತ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಅಭಿಯಾನ ಕೈಗೊಳ್ಳಲಾಯಿತು. ಬೆಳಗಾವಿ ನಗರದ …

Read More »

ಕಲ್ಲೊಳ್ಳಿ ಪಟ್ಟಣ ಪಂಚಾಯತಿಗೆ ಅವಿರೋಧ ಆಯ್ಕೆ…

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಾಯವ್ವ ಬಸವಂತ ದಾಸನವರ ಮತ್ತು ಉಪಾಧ್ಯಕ್ಷರಾಗಿ ಮೇಘಾ ಬಸವರಾಜ ಖಾನಾಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರದಂದು ಜರುಗಿದ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಹಿಂದುಳಿದ “ಅ”ವರ್ಗ ಮಹಿಳೆಗೆ ಅಧ್ಯಕ್ಷ ಸ್ಥಾನವು ಮೀಸಲಿದ್ದರೇ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನೇತೃತ್ವದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು …

Read More »

ಬೆಳಗಾವಿ ಸಿಪಿಐಗಳ ವರ್ಗಾವಣೆ CEN ಗೆ ಚಾಂಪಿಯನ್…..!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹಲವಾರು ಪೋಲೀಸ್ ಠಾಣೆಗಳ ಸಿಪಿಐ ಗಳ ವರ್ಗಾವಣೆ ಆಗಿದೆ. ಬೆಳಗಾವಿ ನಗರ CEN ಠಾಣೆ ಸೈಬರ್ ಕ್ರೈಂ ಠಾಣೆಗೆ ಗಡ್ಡೇಕರ್ ಅವರನ್ನು ನಿಯೋಜನೆ ಮಾಡಲಾಗಿದೆ. ಇದೇ ಠಾಣೆಯಲ್ಲಿ ಹಲವಾರು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಅಪಾರ ಅನುಭವ ಇರುವ ಸಿಪಿಐ ಗಡ್ಡೇಕರ್ CEN ಠಾಣೆಗೆ ಬಂದಿದ್ದು ಸೈಬರ್ ಕ್ರಿಮಿಗಳಿಗೆ ನಡುಕ ಹುಟ್ಟಿದೆ. ಇತ್ತೀಚಿಗೆ ಸೈಬರ್ ಕ್ರೈಂ ಹೆಚ್ಚುತ್ತಲೇ ಇದೆ. ಡಿಜಿಟಲ್ ಯುಗದಲ್ಲಿ ಆನ್ ಲೈನ್ ಮೂಲಕ ಓಟಿಪಿ …

Read More »

ನಟ ದರ್ಶನ್ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಪ್ಟ್ ಆಗಬಹುದಾ..?

ಬೆಳಗಾವಿ- ಬೆಂಗಳೂರಿನ ಜೈಲಿನಲ್ಲಿ ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಬಾಸ್ ತರಹ ಪೋಜ್ ಕೊಟ್ಟ ಕೊಲೆ ಆರೋಪಿ ದರ್ಶನ್, ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಪ್ಟ್ ಆಗುವ ಸಾಧ್ಯತೆಗಳಿವೆ. ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಸಿಎಂ ತಾಕೀತು ಮಾಡಿದ್ದಾರೆ. …

Read More »

ಸಿದ್ರಾಮಯ್ಯ ಹಿತಕ್ಕಾಗಿ ಗೃಹಲಕ್ಷ್ಮೀ ಹಣದಿಂದ ಊರಿಗೆ ಹೋಳಗಿ ಊಟ ಹಾಕಿಸಿದ ಅಜ್ಜಿ….

  ಬೆಳಗಾವಿ – ಗೃಹಲಕ್ಷ್ಮೀ ಹಣದಿಂದ ಮಹಿಳೆಯರು ಟಿವಿ,ಪ್ರೀಡ್ಜು ಇನ್ನೊಂದು ಮತ್ತೊಂದು ಖರೀಧಿ ಮಾಡ್ತಾ ಇದ್ರೆ ಅಜ್ಜಿಯೊಬ್ಬಳು ಗೃಹಲಕ್ಷ್ಮೀ ಹಣವನ್ನು ಉಳಿಸಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ. ಮುಖ್ಯಮಂತ್ರಿ ಸಿದ್ರಾಮಯ್ಯ ಅನ್ನಭಾಗ್ಯ,ಗೃಹಲಕ್ಷ್ಮೀ ಮೂಲಕ ಜಗತ್ತಿಗೆ ಊಟ ಹಾಕಿಸುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಅಂತಾ ಹರಕೆ ಹೊತ್ತು ಹೋಳಿಗೆ ಊಟ ಹಾಕಿಸುತ್ತಿದ್ದೇನೆ ನಾನೊಬ್ಬಳೇ ಅಲ್ಲ,ದುಂಡವ್ವ ನೂಲಿ,ಲಕ್ಕವ್ಬ ಹಟ್ಟಿಹೊಳಿ,ಇನ್ನು ಹಲವಾರು ಜನ …

Read More »