Breaking News

Breaking News

ಮಹಾರಾಷ್ಟ್ರದಲ್ಲಿ ಮಹಾ ಮಳೆ, ಬೆಳಗಾವಿಯಲ್ಲಿ ತುರ್ತು ಸಭೆ….

  ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ‌ ಪ್ರಾಧಿಕಾರದ ಸಭೆ ———————————— * ಒಳಹರಿವು ಆಧರಿಸಿ‌ ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆಗೆ ಕ್ರಮ: ಮೊಹಮ್ಮದ ರೋಷನ್ ——————————— ಪ್ರವಾಹ ಬಂದರೆ ತಕ್ಷಣವೇ ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ಬೆಳಗಾವಿ, – ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹದ ಹಿನ್ನೆಲೆಯಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಗುರುತಿಸಲಾಗಿರುವ 427 ಕಾಳಜಿ ಕೇಂದ್ರಗಳಿಗೆ ಎಲ್ಲ ತಹಶೀಲ್ದಾರರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಬೇಕು; ತುರ್ತು ಸಂದರ್ಭದಲ್ಲಿ ಗ್ರಾಮಸ್ಥರನ್ನು ತಕ್ಷಣವೇ …

Read More »

ಶಾಸಕರ ಚೆಸ್ ಕಪ್ ನಲ್ಲಿ ಬೆಳಗಾವಿ ಜಿಲ್ಲೆಗೂ ಬಹುಮಾನ

ಬೆಂಗಳೂರು-ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಲೆಜಿಸ್ಲೇಜರ್ ಕಪ್-2024 ಚೆಸ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ವಿಶ್ವ ಚೆಸ್ ದಿನದ ಅಂಗವಾಗಿ ಈ ಪಂದ್ಯಾವಳಿ ಆಯೋಜಿಸಿದ್ದು, ಆರು ಸುತ್ತುಗಳಲ್ಲಿ ಪಂದ್ಯಗಳು ನಡೆದು ನೋಡುಗರ ಹುಬ್ಬೇರುವಂತೆ ಮಾಡಿತು. ಪಂದ್ಯಾಕೂಟದ ಎಲ್ಲಾ ಸುತ್ತಿನಲ್ಲಿ ಜಯ ದಾಖಲಿಸುವ ಮೂಲಕ ಶಾಸಕರಾದ ಅಜಯ್ ಸಿಂಗ್ ಅವರು 2 ಲಕ್ಷ ನಗದನ್ನು ಒಳಗೊಂಡಿರುವ ಪ್ರಥಮ ಬಹುಮಾನ ಗೆದ್ದರೆ, ಖಾನಾಪುರ ಶಾಸಕ ವಿಠ್ಠಲ್ ಸೋಮಣ್ಣ …

Read More »

ಮೂಡನಂಬಿಕೆಗೆ ನಂಬಿ, ಮಕ್ಕಳನ್ನೇ ಕೊಲೆ ಮಾಡಿದ ತಂದೆಗೆ ಶಿಕ್ಷೆ

ಬೆಳಗಾವಿ ಮೂಢನಂಬಿಕೆ ನಂಬಿ ತನ್ನ ಹೆತ್ತ ಇಬ್ಬರು ಹೆಣ್ಣು ಮಕ್ಕಳನ್ನೇ ಹತ್ಯೆ ಮಾಡಿದ ಆರೋಪಿ ತಂದೆಗೆ ಬೆಳಗಾವಿಯ 6ನೇ ಹೆಚ್ಚುವರಿ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಕಂಗ್ರಾಳಿ ಕೆಎಚ್‌ ಗ್ರಾಮದ ನಿವಾಸಿ ಅನಿಲ ಚಂದ್ರಕಾಂತ ಬಾದೇಕರ ಶಿಕ್ಷೆಗೆ ಗುರಿಯಾದ ಆರೋಪಿ. ಆರೋಪಿ ತನ್ನ ಮನೆ ಮಾರಾಟಕ್ಕಿಟ್ಟಿದ್ದು, ಆದರೆ, ಖರೀದಿ ಮಾಡಲು ಯಾರೂ ಬರದ ಕಾರಣ ಮಾನಸಿಕವಾಗಿ ನೊಂದಿದ್ದ. ರಾತ್ರಿ …

Read More »

ನಾಳೆ ಬುಧವಾರ ,ಬೆಳಗಾವಿ,ಕಿತ್ತೂರು, ಬೈಲಹೊಂಗಲ ,ಖಾನಾಪೂರ ಶಾಲೆಗಳಿಗೆ ರಜೆ ಘೋಷಣೆ

ನಾಳೆಯೂ ಶಾಲೆಗಳಿಗೆ ರಜೆ ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಬೆಳಗಾವಿ ಸಿಟಿ,ಬೆಳಗಾವಿ ತಾಲ್ಲೂಕು, ಖಾನಾಪೂರ,ಕಿತ್ತೂರು ಮತ್ತು ಬೈಲಹೊಂಗಲ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಬಬುಧವಾರ  ರಜೆ ಘೋಷಿಸಿ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ನಾಳೆ  ಬುಧವಾರ ಶಾಲೆಗಳಿಗೆ ರಜೆ ಇರುತ್ತದೆ. ವ್ಯಾಪಕ ಮಳೆ: ನಾಲ್ಕು ತಾಲ್ಲೂಕಿನಲ್ಲಿ ಜು.24 ರಂದು ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಖಾನಾಪುರ, ಬೈಲಹೊಂಗಲ …

Read More »

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ನಿರ್ಲಕ್ಷ್ಯ: ಸಂಸದೆ ಪ್ರಿಯಂಕಾ ಜಾರಕಿಹೊಳಿ ಟೀಕೆ

ಬೆಳಗಾವಿ: ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು 7ನೇ ಬಾರಿ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇಂದ್ರ ಬಜೆಟ್‌ ಕುರಿತು ತಮ್ಮ ಅಭಿಪ್ರಾಯವನ್ನು ಪ್ರಕಟಣೆಯಲ್ಲಿ ತಿಳಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ, ಹೈದರಾಬಾದ್-ಕರ್ನಾಟಕ ಕಾರಿಡಾರ್ ಯೋಜನೆ ಬಿಟ್ಟರೆ, ಕರ್ನಾಟಕಕ್ಕೆ ಬಹುಬೇಡಿಕೆಯ ರೈಲ್ವೆ ಯೋಜನೆಯಾಗಲಿ, ನೀರಾವರಿ ಯೋಜನೆಗಳಾಗಲಿ ಘೋಷಣೆ ಮಾಡಿಲ್ಲ ಎಂದು ಟೀಕಿಸಿದ್ದಾರೆ. ಕೇಂದ್ರ …

Read More »

“ಸರ್ವೋತ್ತಮ” ಬಜೆಟ್ – ಬಾಲಚಂದ್ರ ಜಾರಕಿಹೊಳಿ

ಗೋಕಾಕ-* ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಜನ ಮತ್ತು ತೆರಿಗೆ ಸ್ನೇಹಿ ಆಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಬಜೆಟ್ ಸಂಬಂಧಿಸಿದಂತೆ ಮಾಧ್ಯಮಗಳಿಗೆ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿ, ಹೊಸ ರೈಲ್ವೆ ಯೋಜನೆಗಳ ಘೋಷಣೆ, ಹೈದರಾಬಾದ್ ಬೆಂಗಳೂರು ನಡುವೆ ಇಂಡಸ್ಟ್ರಿಯಲ್ ಕಾರಿಡಾರ್ ಘೋಷಣೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ದೇಶದ 100 ಆಯ್ದ ನಗರಗಳಲ್ಲಿ ಫುಡ್ ಸ್ಟ್ರೀಟ್ …

Read More »

ಜಮೀನು ವಿವಾದ, ಪರಸ್ಪರ ಹೊಡೆದಾಡ ಇಬ್ಬರೂ ಖಲ್ಲಾಸ್…

ಬೆಳಗಾವಿ- ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು,ಇಬ್ಬರೂ ಗಾಯಗೊಂಡು ಇಬ್ಬರೂ ಮೃತಪಟ್ಟ ಘಟನೆ ಅಥಣಿ ತಾಲ್ಲೂಕಿನಲ್ಲಿ ನಡೆದಿದೆ. ಹಣಮಂತ ರಾಮಚಂದ್ರ ಖೋತ ( 34) ಮತ್ತು ಖಂಡೂಬಾ ತಾನಾಜಿ ಖೋತ ( 32) ಇವರು ಮೃತಪಟ್ಟಿದ್ದಾರೆ. ಇಬ್ಬರೂ ಅಥಣಿ ತಾಲ್ಲೂಕಿನ ಖೋತವಾಡಿ ಗ್ರಾಮದವರಾಗಿದ್ದಾರೆ. ಜಮೀನಿಗೆ ಸಂಭಂಧಿಸಿದಂತೆ ಇಬ್ಬರ ನಡುವೆ ಹಲವಾರು ದಿನಗಳಿಂದ ವಿವಾದ ನಡೆದಿತ್ತು, ಗ್ರಾಮದ ಹಿರಿಯರೂ ರಾಜಿ ಪಂಚಾಯತಿ ಮಾಡಿಸಿ ಇಬ್ಬರ ನಡುವೆ ರಾಜಿ ಸಂಧಾನ …

Read More »

ಕುಡಚಿ ಸೇತುವೆ ಮುಳುಗಡೆ, ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಬಂದ್

ಚಿಕ್ಕೋಡಿ-( ಬೆಳಗಾವಿ ಸುದ್ದಿ). ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಹೆಚ್ವಾಗಿದೆ.ಜೊತೆಗೆ ಬೆಳಗಾವಿ ಜಿಲ್ಲೆಯಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇದ್ದು, ಕೃಷ್ಣಾ ನದಿಗೆ ಅಡ್ಡಲಾಗಿದ್ದ ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಕುಡಚಿ ಉಗಾರಖುರ್ದ್ ಮದ್ಯದ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.ಸಂಪೂರ್ಣವಾಗಿ ಮುಳುಗಡೆಯಾದ ಕುಡಚಿಯ ಬೃಹತ್ ಸೇತುವೆ ರಸ್ತೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು ಈ ರಸ್ತೆಯಲ್ಲಿ ಸಂಚಾರ ಬಂದ್ …

Read More »

ಉಕ್ಕಿ ಹರಿಯುತ್ತಿರುವ ನದಿಯ ಸುಳಿಯಲ್ಲಿ ಸಿಲುಕಿ ಯುವಕನ ಸಾವು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಅರ್ಭಟ ನಿರಂತರವಾಗಿ ಮುಂದುವರೆದಿದ್ದು ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಯುವಕನೋರ್ವ ನೈವದ್ಯ ಬಿಡಲು ಹೋದಾಗ ಆಯಾ ತಪ್ಪಿ ನದಿಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದಂತಹ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ರೋಹಣ ಪಾಟೀಲ(31) ಮೃತಪಟ್ಟ ಯುವಕ.ಇವತ್ತು ನದಿಗೆ ಸ್ನೇಹಿತನ ಜೊತೆಗೆ ನೈವ್ಯದ್ಯ ಬಿಡಲು ಹೋದಾಗ ನದಿಯ ಸುಳಿಯಲ್ಲಿ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ. ಸೋಮವಾರ ಸಾಯಂಕಾಲ 5 ಗಂಟೆಗೆ ಸುಮಾರಿಗೆ ಶವವನ್ನು ಹೋರತಗೆಯಲಾಯಿತು. …

Read More »

ಬೆಳಗಾವಿ :22 ಸೇತುವೆಗಳು ಮುಳುಗಡೆ, 160 ಮನೆಗಳು ಕುಸಿತ…

ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ.ಜಿಲ್ಲೆಯ ನದಿಗಳು ಅಪಾಯದ ಮಟ್ಡದಲ್ಲಿ ಹರಿಯುತ್ತಿವೆ. ಜಲಾಶಯಗಳು ಭರ್ತಿಯಾಗುತ್ತಿವೆ. ನದಿ ಪಾತ್ರದ ಹೊಲಗದ್ದೆಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವ್ರತಗೊಂಡಿವೆ. ಜಿಲ್ಲೆಯಾದ್ಯಂತ 22 ಸೇತುವೆಗಳು ಮುಳುಗಡೆಯಾಗಿದ್ದು 160 ಮನೆಗಳು ಬಾಗಶ ಕುಸಿದು ಬಿದ್ದಿವೆ. ಬೆಳಗಾವಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಾಗೂ ಜಿಲ್ಲೆಯಲ್ಲಿ ಧಾರಾಕಾರಮಳೆ ಮುಂದುವರೆದಿದೆ. ಕೃಷ್ಣಾ,ಮಲಪ್ರಬಾ,ಘಟಪ್ರಭಾ ಸೇರಿದಂತೆ ಜಿಲ್ಲೆಯನದಿಗಳು, ಹಳ್ಳಕೊಳ್ಳಗಳು ಉಕ್ಕಿಹರಿಯುತ್ತಿವೆ. ಜಿಲ್ಲೆಯಲ್ಲಿ 22 ಸೇತುವೆ ಮುಳುಗಡೆಯಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಖಾನಾಪುರ, ಗೋಕಾಕ, ಮೂಡಲಗಿ, ಹುಕ್ಕೇರಿ, …

Read More »