Breaking News

Breaking News

ಛಾವಣಿ ಕೆಳಗೆ ಛತ್ರಿ ಹಿಡಿಯುವ ಕಚೇರಿ ಎಲ್ಲಿ ಐತ್ರಿ…??

ಬೆಳಗಾವಿ- ಬೆಳಗಾವಿ ಜನರ ಎಂತಹ ನಸೀಬು ನೋಡ್ರಿ ಇಲ್ಲಿಯ ಜನ ಡಕೋಟಾ ಬಸ್ಸಿನಲ್ಲಿ ಕುಂತ್ರೂ ಛತ್ರಿ ಹಿಡಿಯಬೇಕು, ಕಚೇರಿ ಒಳಗೆ ಹೋದ್ರೂ ಛತ್ರಿ ಹಿಡಿಯಬೇಕು, ಛಾವಣಿ ಕೆಳಗ ಹೆಂಗ್ ಛತ್ರಿ ಹಿಡೀತಾರ ಅನ್ನೋದು ನೋಡಬೇಕಾದ್ರ ನೀವು ನೇರವಾಗಿ ಬೆಳಗಾವಿ ಡಿಡಿಪಿಐ ಕಚೇರಿಗೆ ಹೋಗಬೇಕು ಹೋಗುವಾಗ ಕಯ್ಯಾಗ ಛತ್ರಿ ಹಿಡ್ಕೊಂಡ ಹೋಗಬೇಕು. ಬೆಳಗಾವಿ ಐತಿಹಾಸಿಕ ನಗರ, ಕ್ರಾಂತಿಯ ನೆಲ,ರಾಜ್ಯದ ಎರಡನೇಯ ರಾಜಧಾನಿ, ಸ್ಮಾರ್ಟ್ ಸಿಟಿ,ಕುಂದಾನಗರಿ ಎಂದು ಹಲವಾರು ಹೆಸರುಗಳಿಂದ ಬೆಳಗಾವಿಯನ್ನು ಕರೆಯುತ್ತಾರೆ …

Read More »

ದುಂಡಪ್ಪ ಮಹಾದೇವಪ್ಪಾ ಪಾಟೀಲ, ನಿಧನ

ಮೂಡಲಗಿ- ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ ಅವರ ತಂದೆಯವರಾದ, ದುಂಡಪ್ಪ ಮಹಾದೇವಪ್ಪ ಪಾಟೀಲ ಅವರು ಇಂದು ಬೆಳಗ್ಗೆ ವಿಧಿವಶರಾದರು. ಮೂಡಲಗಿ ತಾಲ್ಲೂಕಿನ ಅವರಾಧಿ ಗ್ರಾಮದ ಹಿರಿಯರಾಗಿದ್ದ ದುಂಡಪ್ಪ ಪಾಟೀಲ ಅವರು ಅನಾರೋಗ್ಯದ ಕಾರಣ ಇಂದು ಬೆಳಗ್ಗೆ ನಿಧನರಾಗಿದ್ದು ಮೃತರ ಅಂತ್ಯಕ್ರಿಯೆ ನಾಳೆ ಮಂಗಳವಾರ ದಿನಾಂಕ 23- 7- 2024 ರಂದು ಸ್ವಗ್ರಾಮ ಅವರಾಧಿ ಗ್ರಾಮದಲ್ಲಿ ಬೆಳಗ್ಗೆ 8-00 ಗಂಟೆಗೆ ನೆರವೇರಲಿದೆ ದುಂಡಪ್ಪ ಮಹಾದೇವಪ್ಪ ಪಾಟೀಲ ಅವರ …

Read More »

ಅನೈತಿಕ ಸವಾರಿ ತಡೆದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ….!!

ಬೆಳಗಾವಿ-ತನ್ನ ಹೆಂಡತಿ ಬೇರೊಬ್ಬನ ಜೊತೆ ಬೈಕ್ ಮೇಲೆ ಹೊರಟಿದ್ದನ್ನು ಗಮನಿಸಿದ ಗಂಡ ಇಬ್ಬರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಓರ್ವನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕುಲಗೋಡ ಠಾಣಾ ವ್ಯಾಪ್ತಿಯ ಲಕ್ಷ್ಮೇಶ್ವರ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆ ಮೌಲಾಸಾಬ್ ಮೋಮೀನ್ ಎಂಬಾತ, ಅಮೋಘ ಢವಳೇಶ್ವರನ ಹೆಂಡತಿಯಾತ ಶಿಲ್ಪಾ ಜೊತೆ ಬೈಕ್ ಮೇಲೆ ಹೊರಟಿದ್ದನ್ನು ಗಮನಿಸಿದ ಅಮೋಘ ಢವಳೇಶ್ವರ, ಬೈಕ್ ಮೇಲೆ ಹೊರಟಿದ್ದ ಮೌಲಾಸಾಬ್ ಮತ್ತು ಶಿಲ್ಪಾ …

Read More »

ಖಾನಾಪುರ ತಾಲ್ಲೂಕಿಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಭೇಟಿ

ಬೆಳಗಾವಿ, ): ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಹಿರಿಯ ಅಧಿಕಾರಿಗಳು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಅವರು ಜತೆಗಿದ್ದರು. ಖಾನಾಪೂರ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಸ್ತುತದ ಸ್ಥಿತಿಗತಿ ಬಗ್ಗೆ, ಸಂಚಾರ ವ್ಯವಸ್ಥೆಯ ಬಗ್ಗೆ ಹಾಗೂ ನದಿ ಹಾಗೂ …

Read More »

ಚಿಕ್ಕೋಡಿ ಅಭಿವೃದ್ಧಿಗೆ 60 ಕೋಟಿ ಅನುದಾನ ನೀಡುವಂತೆ, ಸಿಎಂ ಬಳಿ ಪ್ರಿಯಾಂಕಾ ಪಟ್ಟು..

ಚಿಕ್ಕೋಡಿ ಕ್ಷೇತ್ರಕ್ಕೆ 60 ಕೋಟಿ ರೂ. ವಿಶೇಷ ಅನುದಾನ ನೀಡಲು ಸಿಎಂಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮನವಿ ಬೆಂಗಳೂರು: ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಂಖ್ಯಾಗನುಗುಣವಾಗಿ ವಿದ್ಯಾರ್ಥಿಗಳು, ಸಾರ್ವಜನಿಕರ ಹಿತದೃಷ್ಟಿಯಿಂದ ವಿವಿಧ ಕಾಮಗಾರಿ ಕೈಗೊಳ್ಳಲು ವಿಶೇಷ ಅನುದಾನ ಮಂಜೂರು ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮನವಿ ಸಲ್ಲಿಸಿದರು. ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು …

Read More »

ಬೆಳಗಾವಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ

ವ್ಯಾಪಕ‌ ಮಳೆ: ಬೆಳಗಾವಿ, ಖಾನಾಪುರ ತಾಲ್ಲೂಕಿನ ಶಾಲೆಗಳಿಗೆ ರಜೆ‌ ಘೋಷಣೆ ಬೆಳಗಾವಿ ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜು.22 ರಿಂದ‌ ಜು.23 ರವರೆಗೆ ರಜೆ ಘೋಷಣೆ ಮಾಡಿ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಖಾನಾಪುರ ತಾಲ್ಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ-ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜುಲೈ 22 ರಿಂದ 23 ರವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಜುಲೈ …

Read More »

ಬಸನಗೌಡ ಪಾಟೀಲ ಯತ್ನಾಳ ಇಂದು ಬೆಳಗಾವಿಗೆ

ಬೆಳಗಾವಿ -ಸದನದಲ್ಲಿ ಗುಡುಗುವ ಸರ್ಕಾರವನ್ನು ನಡುಗಿಸುವ,ಹಿಂದೂ ಹುಲಿ ಎಂದೇ ಪ್ರಸಿದ್ಧಿ ಪಡೆದಿರುವ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ ಯತ್ನಾಳ ಇಂದು ಬೆಳಗಾವಿಗೆ ಬಂದಿದ್ದಾರೆ. ಶಾಸಕ ಅಭಯ ಪಾಟೀಲ ಅವರ ಸಹೋದರ ಸಂತೋಷ ಪಾಟೀಲ ಅವರ ಮುಖಂಡತ್ವದಲ್ಲಿ ಉದಯವಾಗುತ್ತಿರುವ ಪಾರಸ ಕೋ.ಆ ಸೌಹಾರ್ದ ಸಹಕಾರಿ ಬ್ಯಾಂಕಿನ ಉದ್ಘಾಟನಾ ಕಾರ್ಯಕ್ರಮ ಇಂದು ಮಧ್ಯಾಹ್ನ 3-30 ಗಂಟೆಗೆ ಬೆಳಗಾವಿಯ ಅನಿಗೋಳ ಮುಖ್ಯ ರಸ್ತೆಯಲ್ಲಿ ಇರುವ ಮಾಲಿನಿ ಪ್ಲಾಝಾ ದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಕೇಂದ್ರ …

Read More »

ಬೆಳಗಾವಿ ಜಿಲ್ಲೆಯ ಯಾವ ಡ್ಯಾಂ ಎಷ್ಟು ಭರ್ತಿಯಾಗಿದೆ ಗೊತ್ತಾ..??

ಬೆಳಗಾವಿ: ಸಪ್ತ ನದಿಗಳ ನಾಡಲ್ಲೀಗ ವರುಣನದ್ದೇ ಅಬ್ಬರ. ಜಿಲ್ಲೆ ಹಾಗೂ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತೀರೊ ಮಳೆಯಿಂದ ಮಲಪ್ರಭಾ, ಘಟಪ್ರಭಾ, ಕೃಷ್ಣಾ ಮೊದಲಾದ ನದಿಗಳು ಉಕ್ಕಿ‌ ಹರಿಯುತ್ತಿವೆ.ಜಿಲ್ಲೆಯ ‌ಜಲಾಶಯಗಳಿಗೆ ಜೀವಕಳೆ ಬಂದಿದೆ. 37.731 ಟಿಎಂಸಿ ಗರಿಷ್ಟ ಸಾಮರ್ಥ್ಯದ ಸವದತ್ತಿಯ ನವಿಲುತೀರ್ಥ ಜಲಾಶಯ ಈಗ ಅರ್ಧದಷ್ಟು ಭರ್ತಿಯಾಗಿದ್ದು, ಜು.20ರಂದು 17.220 ಟಿಎಂಸಿ ನೀರು ಸಂಗ್ರಹವಾಗಿದೆ.15,090 ಕ್ಯೂಸೆಕ್ ಒಳಹರಿವು, 194 ಕ್ಯೂಸೆಕ್ ಹೊರಹರಿವು ಇದೆ. ಕಳೆದ ವರ್ಷ ಈ ವೇಳೆ 8.055 ಟಿಎಂಸಿ …

Read More »

7 ಸೇತುವೆಗಳು ಜಲಾವೃತ, ಮುಳುಗಿದ ದರ್ಗಾ, ಕೃಷ್ಣಾ ತೀರದಲ್ಲಿ ಪ್ರವಾಹದ ಆತಂಕ…

ಬೆಳಗಾವಿ- ಪಕ್ಕದ ಮಹಾರಾಷ್ಡ್ರದಲ್ಲಿ ಮತ್ತು ಬೆಳಗಾವಿಯ ಗಡಿಯಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿರುವ ಕಾರಣ,ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ.ನದಿಗಳುಪಾತ್ರ ಬಿಟ್ಟು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನದಿಯ ನೀರು ಪಕ್ಕದ ಗದ್ದೆಗಳಿಗೆ ನುಗ್ಗುತ್ತಿದೆ.ಕೃಷ್ಣಾ ನದಿಯ ಒಳಹರಿವು ಸಧ್ಯ 95 ಸಾವಿರ ಕ್ಯೂಸೆಕ್ಸ್ ಇಷ್ಟು ದಿನ …

Read More »

ಬೆಳಗಾವಿ ಜಿಲ್ಲೆಯಲ್ಲಿ ಆಪರೇಷನ್ ಮಂಕಿ…!!

ಬೆಳಗಾವಿ- ವಾಹನಸವಾರರ ಮೇಲೆ ದಾಳಿ ಮಾಡುವದು,ಮಕ್ಕಳಿಗೆ ಕಾಟ ಕೊಡುವದು ಮನೆಯ ಹಿತ್ತಲಲ್ಲಿ ಇರುವ ಗಿಡಗಳ ಮೇಲೆ ಜೋತಾಡುವದು, ಮನೆಗೆ ನುಗ್ಗಿ ಮಾಡಿಟ್ಡ ಅಡುಗೆಯನ್ನು ಚೆಲ್ಲಾಪಿಲ್ಲಿ ಮಾಡುವದರ ಜೊತೆಗೆ ಗ್ರಾಮದಲ್ಲಿ ರಂಪಾಟ ನಡೆಸಿದ ಮಂಗಗಳನ್ನು ಬಲೆಗೆ ಬೀಳಿಸುವ ಕಾರ್ಯಾಚರಣೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ತಾವಂಶಿ ಗ್ರಾಮದಲ್ಲಿ ನಡೆದಿದೆ. ತಾವಂಶಿ ಗ್ರಾಮದಲ್ಲಿ ಇತ್ತೀಚಿಗೆ ಮಂಗಗಳ ಕಾಟ ಹೆಚ್ಚಾಗಿತ್ತು, ಇದು ಮಳೆಗಾಲ, ಹಂಚಿನ ಮನೆಗಳಗಳ ಛಾವಣಿಗಳ ಮೇಲೆ ಥೈ..ಥೈ ಕುಣಿತ, ಊರಿನ ಗಿಡಗಳ …

Read More »