ಕಳಪೆ ಪೂರಕ ಆಹಾರ ಪೂರೈಕೆಯಾದರೆ ಉಪನಿರ್ದೇಶಕರ ಮೇಲೆ ಕಠಿಣ ಕ್ರಮ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ಯರಗಟ್ಟಿ : ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಪೂರಕ ಆಹಾರ ಉತ್ಪನ್ನಗಳು ಪೂರೈಕೆಯಾದರೆ ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಯರಗಟ್ಟಿಯಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಭೇಟಿ …
Read More »ಹೊಸತನ ಹೊಸ ಹುರುಪು ಬೆಳಗಾವಿ ಅಭಿವೃದ್ಧಿಗೆ ಹೊಸ ಮಾರ್ಗ….!!
ಬೆಳಗಾವಿ ಸಂಸದರಾಗಿ ಜಗದೀಶ್ ಶೆಟ್ಟರ್ ಆಯ್ಕೆಯಾದ ಬಳಿಕ ಬೆಳಗಾವಿ ಅಭಿವೃದ್ಧಿ ಕುರಿತು ಚಿಂತನೆ ಶುರುವಾಗಿದೆ.ದೆಹಲಿಯಲ್ಲಿ ಇರುವ ಶೆಟ್ಟರ್ ರೇಲ್ವೆ ಮಂತ್ರಿಗಳನ್ನು ಭೇಟಿಯಾಗಿ ಹಳೆಯ ಯೋಜನೆ ಬೇಗನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ಹೊಸ ಬೇಡಿಕೆಕೆಗಳನ್ಬು ಈಡೇರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಬೆಳಗಾವಿ – ಕಿತ್ತೂರು – ಧಾರವಾಡ ಮಾರ್ಗಕ್ಕೆ ಹೊಸ ರೈಲು ಮಾರ್ಗ ಯೋಜನೆ ಶೀಘ್ರವಾಗಿ ಆರಂಭಿಸುವಂತೆ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ ಅವರಿಗೆ ಮನವಿ ಸಲ್ಲಿಸಿದ ಬೆಳಗಾವಿ ಸಂಸದರಾದ ಶ್ರೀ ಜಗದೀಶ ಶೆಟ್ಟರ …
Read More »ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರ ದಂಡು.ಡಿಸಿಎಂ ಹುದ್ದೆಗೆ ಫುಲ್ ಡಿಮ್ಯಾಂಡು……!!
ಬೆಳಗಾವಿ- ಸಿಎಂ ಸಿದ್ರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರೂ ಸಹ ದೆಹಲಿಗೆ ಹಾರಿದ್ದಾರೆ.ಅವರ ಹಿಂದೆ.ಮುಂದೆ ಈಗಾಗಲೇ ಡಿಸಿಎಂ ಸ್ಥಾನದ ಆಕಾಂಕ್ಷಿಗಳೂ ಸಹ ದೆಹಲಿಗೆ ಹೋಗಿದ್ದು ಇಂದು ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಕರ್ನಾಟಕ ಕಾಂಗ್ರೆಸ್ ಬೀಡು ಬಿಟ್ಟಿದೆ ಕರ್ನಾಟಕದಲ್ಲಿ ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಯಲಿದೆ.ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದ್ದು ಲೋಕಸಭೆ ಚುನಾವಣೆ ಮುಗಿದ ಬಳಿಕ ಸಿಎಂ ಡಿಸಿಎಂ …
Read More »ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬಾಲಚಂದ್ರ ಜಾರಕಿಹೊಳಿ
*ಗೋಕಾಕ- ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* ಗೋಕಾಕ*: ಸಾರ್ವಜನಿಕರ ಯಾವುದೇ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೂ ಸ್ಥಳದಲ್ಲಿಯೇ ಅಧಿಕಾರಿಗಳು ಪರಿಹರಿಸಬೇಕು. ವಿನಾಕಾರಣ ಅವರಿಗೆ ಅನಗತ್ಯ ತೊಂದರೆಗಳನ್ನು ನೀಡಿದರೇ ಸಹಿಸುವದಿಲ್ಲ. ಅಧಿಕಾರಿಗಳು ತಮಗೆ ನಿಯೋಜಿಸಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಂದ ಅಧಿಕಾರಿಗಳ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದು. ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವದಿಲ್ಲವೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ …
Read More »ಬೈಲವಾಡದಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಎಲ್ಲರ ಗಮನ ಸೆಳೆದ ಮಂತ್ರಿ…..
ಬೈಲಹೊಂಗಲ-ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಇಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಯಾನಗರದಲ್ಲಿ ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಂಡಿರುವ ರೈತ ಪಕೀರಪ್ಪ ಅರೋಳಿ ಅವರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಡು ಸಾಕಾಸಿಕೆ,ಮೇವು ಬೆಳೆ ತಾಕು,ಕೃಷಿ ಹೊಂಡ ,ಎರೆಹುಳು ಗೊಬ್ಬರ ತೊಟ್ಟಿ, ರೇಷ್ಮೆ ಬೆಳೆ ತಾಕುಗಳಿ ಸಚಿವರು ಭೇಟಿ ನೀಡಿದರು. ಬೈಲಹೊಂಗಲ ಪಕ್ಕದ ಬೈಲವಾಡ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಕೃಷಿ ಸಚಿವರು ಎಲ್ಲರ ಗಮನ ಸೆಳೆದರು.ಶಾಸಕರಾದ ಮಹಾಂತೇಶ್ ಕೌಜಲಗಿ, …
Read More »ಮರಬಿದ್ದು ಮೃತಪಟ್ಟ ಯುವಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ: ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮರ ಬಿದ್ದು ಮೃತಪಟ್ಟಿದ್ದ ಕರ್ಲೆ ಗ್ರಾಮದ ಇಬ್ಬರು ಯುವಕರ ಕುಟುಂಬಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರ್ಲೆ ಗ್ರಾಮದ 20 ವರ್ಷದ ಸೋಮನಾಥ ರಾ. ಮುಚ್ಚಂಡಿಕರ ಎಂಬ ಯುವಕ ದ್ವಿಚಕ್ರ ವಾಹನ ಮೇಲೆ ತೆರಳುವ ಸಮಯದಲ್ಲಿ ಆಕಸ್ಮಿಕವಾಗಿ ಮರ ಬಿದ್ದ ಪರಿಣಾಮ ಮೃತಪಟ್ಟಿದ್ದ. …
Read More »ಮೆಡಿಕಲ್ ಡಿಗ್ರಿ ಇಲ್ಲ ಆದ್ರೂ ಇವನು ಡಾಕ್ಟರ್….!!
ಬೆಳಗಾವಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಮುಂದಾಗಿದ್ದು, ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಬಡ್ಕಲಗಲ್ಲಿಯ ಎರಡೂ ಕ್ಲಿನಿಕ್ ಮೇಲೆ ಮಂಗಳವಾರ ದಾಳಿ ನಡೆಸಿದ ಘಟನೆ ನಡೆದಿದೆ. ಕಿತ್ತೂರಿನ ನಕಲಿ ವೈದ್ಯ ಲಾಡಖಾನ್ ಪ್ರಕರಣ ಬೆನ್ನಲ್ಲೆ ಎಚ್ಚೆತ್ತುಕ್ಕೊಂಡಿರುವ ಆರೋಗ್ಯ ಇಲಾಖೆ ಎಲ್ಲೆಲ್ಲಿ ಸಾರ್ವಜನಿಕರು ದೂರು ನೀಡುತ್ತಿದ್ದಾರೋ ಆಯಾ ಕ್ಲಿನಿಕ್ ಮೇಲೆ ದಾಳಿ ನಡೆಸಿ ನಕಲಿ ವೈದ್ಯರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಜಿಲ್ಲೆಯ ನಕಲಿ …
Read More »ಸುಳ್ಳು ಮಾನಭಂಗ ಪ್ರಕರಣ ದಾಖಲಿಸಿದ 13ಜನ ಆರೋಪಿತರಿಗೆ ಜೈಲು…
ಬೆಳಗಾವಿಯಲ್ಲಿ ತುಕಾರಾಂ ಮಜ್ಜಗಿ ಅವರು ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಅವರ ಸಹಾಯಕ ಮಹಿಳಾ ಇಂಜಿನಿಯರ್ ಒಬ್ಬರು ತಮ್ಮ ಮೇಲೆ ಮಜ್ಜಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು, ಮಜ್ಜಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗಿನ ಮುಖ್ಯಮಂತ್ರಿಗಳಿಗೂ ಬಿವಿ ಸಿಂಧೂ ಮನವಿ ಮಾಡಿದ್ದರು ಈ ಘಟನೆ ನಡೆದಿದ್ದು ಹಲವು ವರ್ಷಗಳ ಹಿಂದೆ.ನಂತರ ಈ ಅತ್ಯಾಚಾರ ಆರೋಪದ ಪ್ರಕರಣದ ಕುರಿತು ಬಿ ರಿಪೋರ್ಟ್ ಆಗಿತ್ತು ನಂತರ ಮಜ್ಜಗಿ …
Read More »ನಕಲಿ ಡಾಕ್ಟರ್ ಗೆ ವಾರ ಜೈಲು ಲಕ್ಷ ರೂ ದಂಡ
ಬೆಳಗಾವಿ- ಮೆಡಿಕಲ್ ಪದವಿ ಇಲ್ಲದೇ, ಆಸ್ಪತ್ರೆಯ ಪರವಾನಿಗೆ ಇಲ್ಲದೇ ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ ಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಶಿಸ್ತಿನ ಕ್ರಮ ಜರುಗಿಸಿ ಶಿಕ್ಷೆ ವಿಧಿಸಿದ್ದಾರೆ. ನಕಲಿ ವೈದ್ಯನಿಗೆ ಒಂದು ವಾರ ಜೈಲು ಶಿಕ್ಷೆ ಹಾಗೂ ಲಕ್ಷ ರೂಪಾಯಿ ದಂಡ ವಿಧಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶಿಸಿದ್ದಾರೆ.ಚಿಕ್ಕೋಡಿ ತಾಲೂಕಿನ ಕೇರೂರ್ ಗ್ರಾಮದ ಮುಲ್ಲಾ ಕ್ಲಿನಿಕ್ ನ ರಿಯಾಜ್ ಮುಲ್ಲಾಗೆ ಶಿಕ್ಷೆ ವಿಧಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ …
Read More »ಅರಿಹಂತ ಸಮೂಹದ ಅಧ್ಯಕ್ಷ, ಸಹಕಾರ ರತ್ನ ರಾವಸಾಹೇಬ ಪಾಟೀಲ ನಿಧನ
ಬೆಳಗಾವಿ:ಜಿಲ್ಲೆಯ ಹಿರಿಯ ಸಹಕಾರಿ ಧುರಿಣರು, ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಹಕಾರಿ ಕ್ಷೇತ್ರದ ಹಿರಿಯ ನಾಯಕ, ಸಹಕಾರಿ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ರಾವಸಾಹೇಬ ಪಾಟೀಲ (ವಯಸ್ಸು 83) ಮಂಗಳವಾರ ಬೆಳಿಗ್ಗೆ 10.40 ಕ್ಕೆ ನಿಧನರಾದರು. ಅವರು, ಪತ್ನಿ ಮೀನಾಕ್ಷಿ, ಪುತ್ರರಾದ ಅಭಿನಂದನ ಪಾಟೀಲ, ಉತ್ತಮ ಪಾಟೀಲ ಮತ್ತು ಪುತ್ರಿ ದೀಪಾಲಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಮಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಅವರ ಪಾರ್ಥಿವದ ಅಂತ್ಯಯಾತ್ರೆ ಬೋರಗಾಂವ ಪಟ್ಟಣದಲ್ಲಿಯ ಪ್ರಮುಖ …
Read More »