ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ಬೆಳಗಾವಿ, -: ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಪ್ರಧಾನಮಂತ್ರಿಗಳ 15 ಹೊಸ ಅಂಶಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ವಿನಾಕಾರಣ ನೆಪವೊಡ್ಡದೆ ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು. ಅಲ್ಪಸಂಖ್ಯಾತರ ಸಮುದಾಯಕ್ಕೆ ಶಿಕ್ಷಣ, ಕೌಶಲ್ಯ ಹಾಗೂ ಇತರೆ ಉದ್ಯೋಗಗಳಿಗೆ ತರಬೇತಿ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ …
Read More »ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ- ಬಾಲಚಂದ್ರ ಜಾರಕಿಹೊಳಿ
ಗೋಕಾಕ- ಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರ ಸಂಜೆ ನಗರದ ಬ್ಯಾಳಿ ಕಾಟಾ ಹತ್ತಿರ ಇರುವ ಎನ್ಎಸ್ಎಫ್ ಕಛೇರಿಯಲ್ಲಿ ಜರುಗಿದ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಸಮೀಕ್ಷೆಗಳು ಕೂಡ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು …
Read More »ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡಲು ಬಂದಿದೆ ಹೊಸ ಇಂಜೆಕ್ಷನ್…
[ಬೆಳಗಾವಿ: ಅತ್ಯಧಿಕ ಕೊಲೆಸ್ಟಾçಲ್, ರಕ್ತದೊತ್ತಡ ಸೇರಿದಂತೆ ದೀರ್ಘಕಾಲದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅಳವಡಿಸಿಕೊಂಡಿರುವ ‘ದಿನನಿತ್ಯದ ಮಾತ್ರೆ’ ಸೇವನೆಯ ಚಿಕಿತ್ಸೆಗೆ ಭವಿಷ್ಯದಲ್ಲಿ ಸ್ಥಗಿತಗೊಳ್ಳುವ ಸಂದರ್ಭ ಬಂದೊದಗಲಿದೆ. ಕೊಲೆಸ್ಟಾçಲ, ಅಧಿಕ ರಕ್ತದೊತ್ತಡ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾಗಿರುವ ಔಷಧವು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಲಬ್ಯವಿದೆ. ಡಿಸಿಜಿಐ, ಯುಎಸ್ ಎಫ್‌ಡಿಎ, ಸಿಇ ಹಾಗೂ ಇಎಂಎ ಅನುಮೋದಿತ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, …
Read More »ಡಾ.ಸೋನಾಲಿ ಸರ್ನೋಬತ್ ಅವರಿಗೆ ಮಹತ್ವದ ಜವಾಬ್ದಾರಿ…!!
ಬೆಳಗಾವಿ-ಬಿಜೆಪಿ ಪಕ್ಷದಲ್ಲಿ ಅತ್ಯಂತ ಸಂಘಟನಾತ್ಮಕವಾಗಿ,ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸೇವೆ ಮಾಡುತ್ತಿರುವ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಅವರಿಗೆ ಮರಾಠಾ ಸಮಾಜ ಮಹತ್ವದ ಜವಾಬ್ದಾರಿ ನೀಡಿದೆ.ಕ್ಷತ್ರಿಯ ಮರಾಠಾ ಸಮಾಜದ ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರಾಗಿರುವ ಸುರೇಶ ಸಾಠೆ ಅವರು ನೇಮಕ ಮಾಡಿದ್ದಾರೆ. ಬೆಂಗಳೂರಿನ ಕ್ಷತ್ರಿಯ ಮರಾಠಾ ಸಮಾಜದ ಕಚೇರಿಯಲ್ಲಿ ಬೆಳಗಾವಿಯ ಡಾ. ಸೋನಾಲಿ ಸರ್ನೋಬತ್ ಅವರಿಗೆ ಸಮಾಜದ ರಾಜ್ಯಮಟ್ಟದ ಪದಾಧಿಕಾರಿಗಳು ಮರಾಠಾ ಸಮಾಜದ ಮುಖಂಡರ …
Read More »ಸಂಗೊಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ…??
ಸಂಗೊಳ್ಳಿ, ನಂದಗಡ ಸಮಗ್ರ ಅಭಿವೃದ್ಧಿಗೆ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಬೆಳಗಾವಿ, – ಕ್ರಾಂತಿವೀರ ರಾಯಣ್ಣನ ಹುಟ್ಟೂರು ಸಂಗೊಳ್ಳಿ ಮತ್ತು ನೇಣುಗಂಬಕ್ಕೇರಿದ ಖಾನಾಪುರ ತಾಲ್ಲೂಕಿನ ನಂದಗಡದ ಸಮಗ್ರಅಭಿವೃದ್ಧಿಗೆ ಸರಕಾರ ಬದ್ಧವಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಲಾಖೆಯ ಆಶ್ರಯದಲ್ಲಿ ಬೈಲಹೊಂಗಲ್ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ(ಜ.17) ಏರ್ಪಡಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ …
Read More »ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ- ರಮೇಶ್ ಜಾರಕಿಹೊಳಿ
ಬೆಳಗಾವಿ-ಅಯೋಧ್ಯಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಯಲ್ಲಿ ಈದಿನ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆಯ ನಿಮಿತ್ಯ ಗೋಕಾಕ್ ನಿವಾಸದಲ್ಲಿ ಪೂರ್ವಭಾವಿ ಸಭೆ ನಡೆಸಿದ ಶಾಸಕ ರಮೇಶ ಜಾರಕಿಹೊಳಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಮಾಜಿ ಸಚಿವ ಜಾರಕಿಹೊಳಿ.ಉತ್ತರ ಭಾರತದ ರಾಜ್ಯಗಳಲ್ಲಿ …
Read More »ಇಂದು ಬೆಳಗಾವಿಗೆ ಸಿಎಂ ಸಿದ್ರಾಮಯ್ಯ….
ಬೆಳಗಾವಿ-ಬೈಲಹೊಂಗಲ್ ತಾಲ್ಲೂಕಿನಸಂಗೊಳ್ಳಿಯಲ್ಲಿ ಬುಧವಾರ(ಜ.17) ಮಧ್ಯಾಹ್ನ 12 ಗಂಟೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ರಾಂತಿವೀರ ಸಂಗೊಳ್ಳಿ ಉತ್ಸವ, ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ಶಿಲ್ಪವನ(ರಾಕ್ ಗಾರ್ಡನ್) ಉದ್ಘಾಟಿಸಲಿದ್ದಾರೆ. ಇಂದು ಬೆಳಗ್ಗೆ ಬೆಳಗಾವಿಯ ಸಾಂಭ್ರಾ ವಿಮಾನ ನಿಕ್ಧಾಣಕ್ಕೆ ಆಗಮಿಸುವ ಅವರು ಹೆಲಿಕಾಪ್ಟರ್ ಮೂಲಕ ಸಂಗೊಳ್ಳಿ ಗ್ರಾಮಕ್ಕೆ ತೆರಳಲಿದ್ದಾರೆ.ಕ್ರಾಂತಿವೀರ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ರಾಯಣ್ಣನ ಹುಟ್ಟು,ಹೋರಾಟ,ಸಾವು.ಇಡೀ ಜೀವನ ಚರಿತ್ರೆಯನ್ನು ಕಣ್ತುಂಬಿಸುವ ರಾಯಣ್ಣನ ಹೋರಾಟದ ಇತಿಹಾಸದ ಗತವೈಭವ ಬಿಂಬಿಸುವ ರಾಕ್ ಗಾರ್ಡನ್ ಉದ್ಘಾಟಿಸಿದ ಬಳಿಕ …
Read More »ಅಯೋಧ್ಯೆಯ ರಾಮಮಂದಿರದ ಮೂರ್ತಿಯ ಶಿಲ್ಪಿ ಯಾರು ಗೊತ್ತಾ..???
ಬೆಳಗಾವಿ- ಅಯೋಧ್ಯೆಯಲ್ಲಿ ನಿರ್ಮಿಸಿದ ರಾಮಮಂದಿರದ ಶ್ರೀರಾಮನ ಮೂರ್ತಿ ಸಿದ್ಧವಾಗಿದ್ದು ಕರ್ನಾಟಕದಲ್ಲಿ ಮೂರ್ತಿಯ ಶಿಲ್ಪಿ ಕೂಡಾ ನಮ್ಮ ನೆಲದವರು,ಮೂರ್ತಿಗೆ ನಮ್ಮ ನೆಲದ ಕಲ್ಲನ್ಬು ಉಪಯೋಗಿಸಲಾಗಿದೆ. ಇದು ಶ್ರೀರಾಮ ಮೂರ್ತಿಯ ವೈಶಿಷ್ಟ್ಯ. ರಾಜ್ಯದ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಕರ್ನಾಟಕಕ್ಕೆ ಮತ್ತೊಂದು ಗರಿ. ಶ್ರೀರಾಮನ ಮೂರ್ತಿ ಕೆತ್ತುವ …
Read More »ಬೆಳಗಾವಿಯ, ಜಿಲ್ಲೆಗಳಿಗೆ ಹೊಸ ಅಧ್ಯಕ್ಷರ ನೇಮಕ
ಬೆಖಗಾವಿ- ಬೆಳಗಾವಿಯ ಸಂಘಟನಾತ್ಮಕ ಜಿಲ್ಲೆಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಗ್ರಾಮಂತರ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿ ಅರಭಾಂವಿ ಕ್ಷೇತ್ರದ ಸುಭಾಷ್ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ಬೆಳಗಾವಿ ನಗರ ಜಿಲ್ಲಾಧ್ಯಕ್ಷರಾಗಿ ಗೀತಾ ಸುತಾರ ಅವರು ನೇಮಕ ಗೊಂಡಿದ್ದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸತೀಶ್ ಅಪ್ಪಾಜಿಗೋಳ್ ಅವರನ್ನು ನೇಮಿಸಲಾಗಿದೆ.
Read More »ನಿಗಮ ಬೆಳಗಾವಿ ಜಿಲ್ಲೆಯ ಕೈ ಶಾಸಕರಿಗೆ ದಾರಿ ಸುಗಮ….!!
ಬೆಳಗಾವಿ- ಮಕರ ಸಂಕ್ರಾಂತಿಯ ಸಂಭ್ರಮದ ಹೊಸ್ತಿಲಲ್ಲಿ ಬೆಳಗಾವಿ ಜಿಲ್ಲೆಯ ಕೆಲವು ಕಾಂಗ್ರೆಸ್ ಶಾಸಕರಿಗೆ ನಿಗಮ ಮಂಡಳಿಗಳು ದಕ್ಕುವುದು ಖಚಿತವಾಗಿದೆ. ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ,ಕಾಗವಾಡ ಶಾಸಕ ರಾಜು ಕಾಗೆ ಮತ್ತು ಬೈಲಹೊಂಗಲದ ಶಾಸಕ ಮಹಾಂತೇಶ್ ಕೌಜಲಗಿ ಅವರಿಗೆ ಈ ಬಾರಿ ನಿಗಮಗಳಿಗೆ ದಾರಿ ಸುಗಮವಾಗಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ. ಒಳ್ಳೆಯ ನಿಗಮ ಸಿಕ್ರೆ ಮಾಡ್ತೀನಿ,ಇಲ್ಲಾ ಅಂದ್ರೆ ಶಾಸಕನಾಗಿ ಸೇವೆ ಮಾಡ್ತೀನಿ ಎಂದು ಬೈಲಹೊಂಗಲ ಶಾಸಕ ಮಹಾಂತೇಶ್ …
Read More »