Breaking News

Breaking News

ಪ್ರಪಾತಕ್ಕೆ ಬಿದ್ದರೂ ಪ್ರಾಣಾಪಾಯದಿಂದ ಪಾರು….!!!

ಬೆಳಗಾವಿ- ಅದೃಷ್ಟ ಅಂದ್ರೆ ಏನು ? ಅದು ಹೇಗಿರುತ್ತೆ ಅನ್ನೋದಕ್ಕೆ ಈ ಘಟನೆಯೇ ಅದಕ್ಕೆ ಸಾಕ್ಷಿ.ಬೈಕ್ ಸಮೇತ 100ಅಡಿ ಪ್ರಪಾತಕ್ಕೆ ಬಿದ್ದಿದ್ದ ಯುವಕ ಕೊನೆಗೂ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಚಿಕಲೆ ಫಾಲ್ಸ್ ಬಳಿ ಈ ಘಟನೆ ನಡೆದಿದೆ.ಖಾನಾಪುರ ಗೋವಾ ಗಡಿ ಭಾಗದಲ್ಲಿರುವ ಪ್ರಸಿದ್ಧ ಚಿಕಲೆ ಫಾಲ್ಸ್ ನೋಡಲು ದಿನನಿತ್ಯ ಸಾವಿರಾರು ಪ್ರವಾಸಿಗರು ಹೋಗ್ತಾರೆ,ಸ್ನೇಹಿತರ ಜತೆಗೆ ಚಿಕಲೆ ಫಾಲ್ಸ್ ನೋಡಲು ಹೋದಾಗ,ಬೆಳಗಾವಿ …

Read More »

ನ್ಯಾಶನಲ್ ಹಾಯವೇ.. ಬೆಳಗಾವಿಗೆ ಬಂಪರ್ ಕೊಡುಗೆ….

ಉತ್ತರ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ನೂತನ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಮಹತ್ವದ ಕೊಡುಗೆ-ಸಂಸದ ಈರಣ್ಣ ಕಡಾಡಿ ಬೆಳಗಾವಿ: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರ, ಕಲಬುರಗಿ, ಬೀದರ ಈ ಎಲ್ಲ ಜಿಲ್ಲೆಗಳಿಗೆ ಸುಮಾರು 376 ಕಿ.ಮೀ ಉದ್ದದ ಮತ್ತು 6975 ಕೋಟಿ ರೂ.ಗಳ ವೆಚ್ಚದಲ್ಲಿ ರಾಷ್ಟ್ರೀಯಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ …

Read More »

ಬೆಳಗಾವಿ: ಇಲೆಕ್ಷನ್ ತಂತ್ರ ಬೆಂಗಳೂರಿನಲ್ಲಿ ಕೈ ಪಾರ್ಟಿ ತಂತ್ರ…!!

ಬೆಳಗಾವಿ- ಲೋಕಸಭೆ ಚುನಾವಣೆ ಘೋಷಣೆಯಾಗುವ ದಿನಗಣನೆ ಶುರುವಾದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲೆಯ ರಾಜಕಾರಣ ಚುರುಕಾಗಿದೆ.ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರ ತುರ್ತು ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದಾರೆ. ಬೆಂಗಳೂರಿನಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಇಂದು ರಾತ್ರಿ 8-00 ಗಂಟೆಗೆ ಈ ಸಭೆ ನಡೆಯಲಿದೆ.ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಹಾಲಿ,ಕಾಂಗ್ರೆಸ್ …

Read More »

ಅನ್ನೋತ್ಸವದ ಮಾದರಿಯಲ್ಲಿ ಬೆಳಗಾವಿಯಲ್ಲಿ ಕೃಷಿ ಉತ್ಸವ…

ಬೆಳಗಾವಿ-ಮಾ.7 ರಿಂದ 11ರ ವರೆಗೆ ಜಿಲ್ಲಾಡಳಿತದ ಸಹಕಾರದೊಂದಿಗೆ ನಗರದ ಸಿಪಿಎಡ್ ಮೈದಾನದಲ್ಲಿ ಅನ್ನೋತ್ಸವದ ಮಾದರಿಯಲ್ಲಿ ಕೃಷಿ ಉತ್ಸವ ನಡೆಯಲಿದೆ ಎಂದು ಬೆಳಗಾವಿ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಅಲವಣಿ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿಯಲ್ಲಿ ಇದೇ ಪ್ರಥಮ ಬಾರಿಗೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಉತ್ಸವ ಆಯೋಜಿಸಲಾಗಿದೆ. ಸುಮಾರು‌ 150 ಮಳಿಗೆಗಳ ಸ್ಥಾಪಿಸಿ ರೈತರ ಬೆಳೆಗಳ ಬಗ್ಗೆ ಮಾಹಿತಿ ನೀಡಲು ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ …

Read More »

ಗೋಕಾಕಿನಲ್ಲಿ ಅನ್..ಅಪೋಸ್….!!

ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ *ಗೋಕಾಕ*- ಇಲ್ಲಿಯ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ “ಅ” ವರ್ಗದಿಂದ ಸುಣಧೋಳಿಯ ಬಸಪ್ಪ ಲಕ್ಷ್ಮಪ್ಪ ಕುರಿಬಾಗಿ, ಗೊಡಚಿನಮಲ್ಕಿಯ …

Read More »

ಶಾಂತಾಯಿ ಆಶ್ರಮ್ ಟೂ….ಮುಂಬಯಿ..ಫ್ಲಾಯಿಂಗ್….!

ಆಶ್ರಮದ ಆಶ್ರಿತರಿಗೆ ವಿಮಾನದಲ್ಲಿ ಪ್ರಯಾಣ…! ಬೆಳಗಾವಿ- ಆ ವಯೋವೃದ್ಧರ ಕಣ್ಣಂಚಿನಲ್ಲಿ ಅದೇನೋ ಖುಷಿ. ಅವರು ತಾವೂ ಮುಂದೊಂದು ದಿನ ವಿಮಾನಯಾನ ಮಾಡುತ್ತೇವೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ವಿಮಾನ ಯಾನ ಮಾಡುತ್ತೇವೆ ಎಂದು ಕನಸು ಮನಸ್ಸಿನಲ್ಲೂ ಎಂದುಕೊಂಡಿರಲಿಲ್ಲ. ಸಮಾಜ ಸೇವಕ, ಮಾಜಿ ಮೇಯರ್‌ ವಿಜಯ ಮೋರೆ ನೇತೃತ್ವದಲ್ಲಿ ನಡೆಯುತ್ತಿರುವ ಶಾಂತಾಯಿ ವೃದ್ಧಾಶ್ರಮದಲ್ಲಿ ಉಚಿತವಾಗಿ ಆಶ್ರಯ ಪಡೆದುಕೊಂಡಿರುವ ಹಿರಿಯ ಜೀವಿಗಳಿಗೆ ಇದೀಗ ವಿಮಾನ ಯಾನ ಮಾಡುವ ಸೌಭಾಗ್ಯ ಕೂಡಿಬಂದಿದೆ. ಶಾಂತಾಯಿ ವೃದ್ಧಾಶ್ರಮಕ್ಕೆ ಇದೀಗ …

Read More »

ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ದಾಖಲೆ ದೋಚಿದ್ರು…!!

ಬೆಳಗಾವಿ ಬೆಳಗಾವಿಯ ಬಸವೇಶ್ವರ ವೃತ್ತದ ಬಳಿ ಇರುವ ಬೆಳಗಾವಿ ಮಹಾನಗರ ಪಾಲಿಕೆಯ ದಕ್ಷಿಣ ವಲಯದ ಕಂದಾಯ ಶಾಖೆಯಲ್ಲಿ ಕಳ್ಳತನ ನಡೆದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಪಾಲಿಕೆಯ ಕಚೇರಿಯ ಕಿಡಿಕಿ ಗಾಜು ಒಡೆದು, ಬಾಗಿಲು ಮುರಿದು ಒಳಗೆ ನುಗ್ಗಿ ಲ್ಯಾಪ್‌ಟಾಪ್ ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ. ಆಸ್ತಿ ಮಾಲೀಕತ್ವದ ದಾಖಲಾತಿ, ಆಸ್ತಿ ಮಾಲೀಕರ ಗುರುತಿನ ಚೀಟಿ, ತೆರಿಗೆ ಚೀಟಿ, ಕಟ್ಟಡ ಪರವಾನಗಿ ಪತ್ರ ಸೇರಿದಂತೆ ಒಟ್ಟು 26 ವಾರ್ಡ್‌ಗಳ ನಿವಾಸಿಗಳ ದಾಖಲೆಗಳ …

Read More »

ಮಗನ ಕಳೆದುಕೊಂಡ ಅಜ್ಜಿಗೆ ಲಕ್ಷ್ಮೀ ಕೃಪೆ….!!!

ಬೆಳಗಾವಿ-ಮಗನ ಕಳೆದುಕೊಂಡ ಭಾರವಾದ ತಾಯಿ ಹೃದಯಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನ ಮಿಡಿದಿದ್ದಾರೆ. ಚಿಕಿತ್ಸೆಗಾಗಿ ಮಗನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ,ಚಿಕಿತ್ಸೆ ಫಲಕಾರಿಯಾಗದೇ ಮಗನನ್ನು ಕಳೆದುಕೊಂಡು,ಮಗನ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗದೇ ಅಸಹಾಯಕಳಾಗಿ ನಂತರ ಮಾಜಿ ಮೇಯರ್ ವಿಜಯ ಮೋರೆ ಅವರ ಪುತ್ರ ಅಲೆನ್ ಮತ್ತು ಅವರ ಗೆಳೆಯರ ನೆರವಿನಿಂದ ಮಗನ ಅಂತ್ಯಸಂಸ್ಕಾರ ಮುಗಿಸಿ ಊರಿಗೆ ಹೋಗಿದ್ದ ತಾಯಿಯ ನೆರವಿಗೆ ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳಕರ್ …

Read More »

ಖಾನಾಪುರದ ಹಳ್ಳಿಯಲ್ಲಿ ಕಂಡು ಬಂತು ಚಿರತೆ ಮರಿ…

ಬೆಳಗಾವಿ :ದಟ್ಟ ಕಾಡಿನಿಂದ ಕೂಡಿರುವಖಾನಾಪುರದ ಹಳ್ಳಿಯಲ್ಲಿ ಚಿರತೆ ಮರಿ ಇರುವುದು ಕಂಡು ಬಂದಿದ್ದು, ಜನ ಭಯ ಭೀತರಾಗಿದ್ದಾರೆ.ಚಿರತೆ ಮರಿ ಪ್ರತ್ಯಕ್ಷವಾಗಿರುವುದರಿಂದ ತಾಯಿ ಮರಿಯನ್ನು ಹುಡುಕಿಕೊಂಡು ಬರುವ ಶಂಕೆವ್ಯಕ್ತವಾಗಿದೆ. ಹಲಸಿವಾಡಿ ಗ್ರಾಮದ ಕೃಷಿ ಜಮೀನಿನಲ್ಲಿ ಚಿರತೆ ಮರಿ ಕಾಣಿಸಿಕೊಂಡಿದೆ‌. ಜಮೀನಿನಲ್ಲಿ ರೈತರು ಕೃಷಿ ಕಾರ್ಯ ಕೈಗೊಂಡಿದ್ದಾಗ ಚಿರತೆ ಮರಿ ಜಮೀನಿನ ಒಂದು ಬದಿಯಿಂದ ಮತ್ತೊಂದು ಬದಿಗೆ ಹಾದುಹೋಗಿದೆ. ಜನವಸತಿ ಪ್ರದೇಶದ ಬಳಿ ಚಿರತೆ ಕಾಣಿಸಿಕೊಂಡ ಕಾರಣ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. …

Read More »

ಜ್ಞಾನ ಜ್ಯೋತಿಯನ್ನು ಬೆಳಗುವ ಉತ್ಸವ ಬೆಳಗಾವಿಯಲ್ಲಿ….

ರಾಮಕೃಷ್ಣ ಮಿಷನ್ ವಿಶ್ವಭಾವೈಕ್ಯ ಮಂದಿರ ವಾರ್ಷಿಕೋತ್ಸವ : ಶಿಕ್ಷಕರು ಪ್ರೀತಿಯಿಂದ ಬೋಧಿಸಬೇಕು- ವೀರೇಶಾನಂದಜೀ ಮಹಾರಾಜ ಬೆಳಗಾವಿ : ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೀತಿಯಿಂದ ಬೋಧನೆ ಮಾಡಬೇಕು ಎಂದು ಬೆಂಗಳೂರು ವೀರೇಶಾನಂದಜೀ ಮಹಾರಾಜ ತಿಳಿಸಿದರು. ಇಲ್ಲಿಯ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಉದ್ಘಾಟನೆಯ ಸವಿನೆನಪಿಗೆ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಅವರು ಕಲಿಕೆ ಎಂಬ ಸಂತಸದ ಸಾಹಸ ವಿಷಯವಾಗಿ ಮಾತನಾಡಿದರು. ಮಕ್ಕಳು …

Read More »