Breaking News

“ಪತ್ರಿಕೋದ್ಯಮದಲ್ಲಿ ಹಾಸ್ಯ” ಕಾರ್ಯಕ್ರಮ

ಬೆಳಗಾವಿ 7- ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೆ ದಿ. 8 ಶನಿವಾರ ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ “ಪತ್ರಿಕೋದ್ಯಮದಲ್ಲಿ ಹಾಸ್ಯ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಚಾಲನೆಯನ್ನು ಹಿರಿಯ ಪತ್ರಕರ್ತರಾದ ಭೀನಸೇನ ತೊರಗಲ್ಲ ನೀಡಲಿದ್ದಾರೆ. ಪ್ರಾಯೋಜಕತ್ವವನ್ನು ಹಿರಿಯ ಪತ್ರಕರ್ತರಾದ ಹುಕ್ಕೇರಿಯ ಪ್ರಕಾಶ ದೇóಶಪಾಂಡೆ ವಹಿಸಿಕೊಂಡಿದ್ದಾರೆ. ಹಾಸ್ಯಸಾಹಿತಿ ಪತ್ರಕರ್ತ ದಿ. ಪಾ. ವೆಂ. ಆಚಾರ್ಯ ಅವರ ಸಾಹಿತ್ಯ ಕುರಿತು ಹಿರಿಯ ಪತ್ರಕರ್ತರಾದ ಎಲ್. ಎಸ್. ಶಾಸ್ತ್ರಿ ಮಾತನಾಡಲಿದ್ದಾರ. ಅತಿಥಿಗಳಾಗಿ ಪತ್ರಕರ್ತರಾದ ವೀರಯ್ಯ ಹೊಸಮಠ, ಪಿ. ವಿಜಯಕುಮಾರ ಹಾಗೂ ಎಂ. ಕೆ ಹೆಗಡೆ ಆಗಮಿಸಲಿದ್ದಾರೆ. ಸಭಾಪತಿ ಸ್ಥಾನವನ್ನು ಹಿರಿಯ ಪತ್ರಕರ್ತ ಪುಂಡಲೀಕ ಪಾಟೀಲ ಅವರು ವಹಿಸಲಿದ್ದಾರೆ. ಮೆಹಬೂಬ ಮಕಾನದಾರ, ಮುರುಗೇಶ ಶಿವಪೂಜಿ ಕೀರ್ತಿ ಕಾಸರಗೋಡ, ಮಹಾಂತೇಶ ಗದ್ದಿಹಳ್ಳಿಶೆಟ್ಟಿ, ಶ್ರೀಶೈಲ ಮಠದ, ಕುಂತಿನಾಥ ಕಲಮನಿ ಪತ್ರಕೋದ್ಯಮದಲ್ಲಿ ನಡೆದಿರುವ ನಗೆಪ್ರಸಂಗಳನ್ನು ಹಂಚಿಕೊಳ್ಳಲಿದ್ದಾರೆ. ನಗೆಮಾತುಗಾರರಾದ ಬೈಲಹೊಂಗಲದ ಎಂ. ಬಿ. ಹೊಸಳ್ಳಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಹಾಸ್ಯಕೂಟ ಕಲಾವಿದರಾದ ಪ್ರೊ. ಜಿ .ಕೆ. ಕುಲಕರ್ಣಿ, ಜಿ. ಎಸ್. ಸೋನಾರ, ಅಶೋಕ ಮಳಗಲಿ ಉಪಸ್ಥಿತರಿರುತ್ತಾರೆ.
ಪತ್ರಕರ್ತರಿಗಾಗಿಯೇ ಹಮ್ಮಿಕೊಳ್ಳಲಾಗಿರುವ ವಿಶೇಷ ಕಾರ್ಯಕ್ರಮ ಇದಾಗಿದ್ದು ಎಲ್ಲ ಮಾಧ್ಯಮ ಮಿತ್ರರು ಸಹಕುಟುಂಬ ಸಹಪರಿವಾರದೊಂದಿಗೆ ಭಾಗವಹಿಸಬೇಕು. ಅಲ್ಲದೇ ಎಲ್ಲ ಹಾಸ್ಯಪ್ರಿಯರಿಗೂ ಉಚಿತ ಪ್ರವೇಶವಿದ್ದು ಕಾರ್ಯಕ್ರಮಕ್ಕೆ ಆಗಮಿಸಿ ನಕ್ಕು ಹಗುರಾಗಬೇಕೆಂದು ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯ ಆರ್. ಬಿ. ಕಟ್ಟಿ ಕೋರಿದ್ದಾರೆ.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.