Home / Breaking News / ಬೆಳಗಾವಿಯ ಹಾಸ್ಟೇಲ್ ಮೇಲೆ, ಯುವಕರ ದಾಳಿ ಕಲ್ಲು ತೂರಾಟ, ಗಾಜು ಪುಡಿಪುಡಿ

ಬೆಳಗಾವಿಯ ಹಾಸ್ಟೇಲ್ ಮೇಲೆ, ಯುವಕರ ದಾಳಿ ಕಲ್ಲು ತೂರಾಟ, ಗಾಜು ಪುಡಿಪುಡಿ

 

ಬೆಳಗಾವಿ- ಬೆಳಗಾವಿ ನಗರದ ಸಂಗಮೇಶ್ವರ ನಗರದಲ್ಲಿರಯವ,ಬಾಬು ಜಗಜೀವನರಾಮ ಉದ್ಯಾನವನದ ಪಕ್ಕದಲ್ಲಿರುವ ಹಾಸ್ಟೇಲ್ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳು ಹಾಸ್ಟೇಲ್ ಗಾಜುಗಳನ್ನು ಪುಡಿ ಪುಡಿ ಮಾಡಿದ ಘಟನೆ ರಾತ್ರಿ ಎಂಟು ಘಂಟೆಗೆ ನಡೆದಿದೆ

ರಾತ್ರಿ ಎಂಟು ಘಂಟೆಗೆ ಏಕಾಏಕಿ ಹಾಸ್ಟೇಲ್ ಮೇಲೆ ದಾಳಿ ಮಾಡಿರುವ ಯುವಕರ ಗುಂಪು ಕೈಯಲ್ಲಿ ರಾಡ್ ಹಿಡಿದು ,ಹಾಸ್ಟೇಲ್ ಮೇಲೆ ಕಲ್ಲು ತೂರಾಟ ನಡೆಸುತ್ತಲೇ ಹಾಸ್ಟೇಲ್ ಗೆ ನುಗ್ಗಿದ ಇವರು ಮನಬಂದಂತೆ ಹಾಸ್ಟೇಲ್ ಗಾಜುಗಳನ್ನು ಒಡೆದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ನಗರ ಪೋಲೀಸ್ ಆಯುಕ್ತರು ಸೇರಿದಂತೆ ಇತರ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

ಹುಡುಗರು ಹಡುಗಿಯನ್ನು ಚುಡಾಯಿಸಿದ್ದೇ ಈ ಘಟನೆಗೆ ಕಾರಣವೆಂದು ಹೇಳಲಾಗುತ್ತಿದ್ದು, ಯುವಕರು ಹಾಸ್ಟೇಲ್ ಮೇಲೆ ಮಾಡಿರುವ ದಾಳಿಯ ದೃಶ್ಯಾವಳಿಗಳು ಸಿಸಿ ಟಿವ್ಹಿಯಲ್ಲಿ ಸೆರೆಯಾಗಿವೆ ತನಿಖೆ ಮುಂದುವರೆದಿದೆ.

Check Also

ಬೆಳಗಾವಿಯಲ್ಲಿ ಗಾಂಜಾ,,,ಮಾಂಜಾ…ಮಟಕಾ ದಂಧೆಗೆ ಮಹಾ ಬ್ರೇಕ್….!

ಬೆಳಗಾವಿ- ಡಿಸಿಪಿ ವಿಕ್ರಮ್ ಅಮಟೆ ಅವರು ಬೆಳಗಾವಿಗೆ ಬಂದ ಬಳಿಕ,ನಗರದಲ್ಲಿ ಪೋಲೀಸ್ ಖದರ್ ಕಾಣಿಸುತ್ತಿದೆ. ಬೆಳಗಾವಿ ಮಹಾನಗರ ಮತ್ತು ಜಿಲ್ಲೆಯಾದ್ಯಂತ …

Leave a Reply

Your email address will not be published. Required fields are marked *