ಘಟಪ್ರಭಾದ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಹುಬ್ಬಳ್ಳಿಯ ಮೂರುಸಾವಿರ ಮಠದವರೆಗೆ ಭಕ್ತಿ ಪ್ರದರ್ಶನ ಯಾತ್ರೆ ಆರಂಭವಾಗಿದೆ.
ಹುಬ್ಬಳ್ಳಿ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸತ್ಯ ದರ್ಶನ ಸಭೆ ನಡೆಸಿದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲೆಯ ಘಟಪ್ರಭಾದ ಮಠದಿಂದ ಹುಬ್ಬಳ್ಳಿಗೆ ಭಕ್ತಿ ಪ್ರದರ್ಶನ ಯಾತ್ರೆ ಆರಂಭ ವಾಗಿರುವದುವಿಶೇಷವಾಗಿದೆ.
ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಮಾದ್ಯಮಗಳ ಜೊತೆ ಮಾತನಾಡಿ ನಾವು ನಮ್ಮ ಭಕ್ತರು ಹುಬ್ಬಳ್ಳಿ ಮಠಕ್ಕೆ ಹೋಗಿ ಗದ್ದುಗೆ ದರ್ಶನ ಪಡೆಯಲು ಹೊರಟಿದ್ದೇವೆ ಅಲ್ಲಿ ಹೋಗಿ ನಾವು ಯಾವುದೆ ಸಭೆ ಸಮಾರಂಭಕ್ಕೆ ಹೊರಟಿಲ್ಲ ಸತ್ಯ ದರ್ಶನ ಸಭೆಗೂ ನಮಗೆ ಯಾವುದೆ ಸಂಭಂದ ಇಲ್ಲಾ ನಾವು ಪ್ರತ್ಯೇಕವಾಗಿ ನಮ್ಮ ಭಕ್ತರ ಜೊತೆ ಗುರುಗಳನ್ನ ಭೇಟಿ ಮಾಡುತ್ತೆವೆ ಮೂರು ಸಾವಿರ ಮಠಕ್ಕೆ ನಮಗೂ ಹಕ್ಕು ಇದೆ ಎಂದರು
ನಾವು ಶಾಂತಿಯನ್ನು ಕದಲುವ ವ್ಯಕ್ತಿ ಅಲ್ಲಾ
ನಾವು ಶಕ್ತಿ ಪ್ರದರ್ಶನ ಮಾಡಲು ಹೊರಟಿಲ್ಲ ನಾವು ಭಕ್ತಿ ಪ್ರದರ್ಶನ ಮಾಡಲು ಹೊರಟಿದ್ದೇವೆ ನಾನು ಉತ್ತರಾಧಿಕಾರಿ ಈಗಾಗಲೆ ಇದೀನಿ ಬೇರೆ ಉತ್ತರಾಧಿಕಾರಿ ಮಾಡುವ ಅವಶ್ಯಕತೆ ಇಲ್ಲಾ, ಈಗಿರುವ ಗುರುಸಿದ್ದ ಸ್ವಾಮೀಜಿ ಮುಂದುವರೆಯಬೇಕು
ಸುಳ್ಲಿಗೆ ಪ್ರಚಾರ ಸಿಗುತ್ತಿದೆ ಆದ್ರೆ ಅದಕ್ಕೆ ಅಸ್ತಿತ್ವ ಇಲ್ಲಾ ಸತ್ಯಕ್ಕೆ ಪ್ರಚಾರ ಸಿಗದೇ ಇರಬಹುದು ಆದ್ರೆ ಅದಕ್ಕೆ ಅಸ್ತಿತ್ವ ಇದೆ ಹಾಗಾಗಿ ನಾವು ಸತ್ಯದ ಪರವಾಗಿ ಇದೀವಿ ಎಂದು ಘಟಪ್ರಭಾದಲ್ಲಿ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು
ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ನಡೆದಿದ್ದು ಬೆಳಗಾವಿ ಜಿಲ್ಲೆಯಿಂದಲೂ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಭಕ್ತರು ಮಲ್ಲಿಕಾರ್ಜುನ್ ಸ್ವಾಮೀಜಿ ಅವರ ನೇತ್ರತ್ವದಲ್ಲಿ ಹುಬ್ಬಳ್ಳಿಗೆ ತೆರಳಿ ಈಗಿರುವ ಮೂರು ಸಾವಿರ ಮಠದ ಸ್ವಾಮೀಜಿಗಳಿಗೆ ಬೆಂಬಲ ಸೂಚಿಸಿದ್ದು ಸ್ವಾಮೀಜಿಗಳ ಬದಲಾವಣೆ ಬೇಡ ಅವರೇ ಮುಂದುವರೆಯಲಿ ಎನ್ನುವ ಕೂಗು ಬೆಳಗಾವಿ ಜಿಲ್ಲೆಯಿಂದಲೂ ಕೇಳಿ ಬಂದಿದೆ