LOCAL NEWS

ಬೆಳಗಾವಿಯಲ್ಲಿ ಬೃಹತ್ ಆಟೋಮೊಬೈಲ್ ಉದ್ಯಮ ಸ್ಥಾಪನೆಗೆ ಉತ್ತೇಜನ: ಮುಖ್ಯಮಂತ್ರಿ ಬೊಮ್ಮಾಯಿ

ಬೆಳಗಾವಿ, ನ. 24-ಬೆಳಗಾವಿಯಲ್ಲಿ ಬೃಹತ್ ಆಟೋಮೊಬೈಲ್ ಉದ್ಯಮ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು  ಬೆಳಗಾವಿಯ ಶಾಸಕ ಅಭಯ್ ಪಾಟೀಲ ನೇತೃತ್ವದ ಬೆಳಗಾವಿಯ ವಾಣಿಜ್ಯೋದ್ಯಮಿಗಳ ನಿಯೋಗದೊಂದಿಗೆ ಬೆಳಗಾವಿಯ ಅಭಿವೃದ್ಧಿ ಕುರಿತ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಬೆಳಗಾವಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಹಾಗೂ ಕೈಗಾರಿಕಾ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಜಿಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಉದ್ಯಮ ಸ್ಥಾಪನೆಯಿಂದ ಕೈಗಾರಿಕಾ ಅಭಿವೃದ್ಧಿ ಇನ್ನಷ್ಟು …

Read More »

ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ..,ಯತ್ನಾಳಗೌಡ್ರ ವಿಶ್ವಾಸ.‌‌‌ !

ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ,ಯತ್ನಾಳಗೌಡ್ರ ವಿಶ್ವಾಸ.‌‌‌ ಧಾರವಾಡ- ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ ಎಂದು ಧಾರವಾಡದಲ್ಲಿ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಮೇಶ ಜಾರಕಿಹೊಳಿ ಜೆಡಿಎಸ್ ಸೇರುತ್ತಾರೆಂಬ ವಿಚಾರವಾಗಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ರಮೇಶ್ ಜಾರಕಿಹೊಳಿ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ,ಆದಷ್ಟು ಬೇಗ ಅವರು ಮಂತ್ರಿ ಆಗ್ತಾರೆ,ಅವರಿಗೆ ಎಲ್ಲ ಭವಿಷ್ಯ ಬಿಜೆಪಿದಲ್ಲಿಯೇ ಇದೆ,ಬಿಜೆಪಿ ಬಿಟ್ಟರೆ ಜೆಡಿಎಸ್‌ನಿಂದ ಏನು ಆಗುವುದಿದೆ? ಅವರು ಬಿಜೆಪಿ ಬಿಟ್ಟು ಹೋಗೋದಿಲ್ಲ ಎಂದು ಬಸನಗೌಡ ಪಾಟೀಲ …

Read More »

ಬೆಳಗಾವಿ ಗಡಿವಿವಾದ: ರಾಘ ಬದಲಿಸಿದ ಮಹಾರಾಷ್ಟ್ರ ಸಿಎಂ…!!

*ಮತ್ತೆ ಹೊಸ ವರಸೆ ಶುರು ಮಾಡಿದ ಮಹಾರಾಷ್ಟ್ರ ಸಿಎಂ; ಗಡಿ ವಿವಾದ ಮಾತುಕತೆ ಮೂಲಕ ಬಗೆಹರಿಯಲಿ ಎಂದ ಏಕನಾಥ ಶಿಂಧೆ..!* ಬೆಳಗಾವಿ: ಗಡಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ತಾನೇ ಧಾವೆ ಹೂಡಿರುವ ಮಹಾರಾಷ್ಟ್ರ ಸರ್ಕಾರ ಇದೀಗ ಮತ್ತೆ ಹೊಸ ವರಸೆ ಶುರು ಮಾಡಿದ್ದು ಮಾತುಕತೆ ಮೂಲಕ ಬಗೆಹರಿಯಬೇಕು ಎಂದು ವಾದ ಮಂಡಿಸುತ್ತಿದೆ.ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಗಡಿ ವಿವಾದ ಮಾತುಕತೆ ಮೂಲಕ ಬಗೆಹರಿಯಬೇಕೆಂಬುದು …

Read More »

ಬೆಳಗಾವಿಯಲ್ಲಿ ಅಧಿವೇಶನ ಈಗಿನಿಂದಲೇ ತಯಾರಿ…!!

ಬೆಳಗಾವಿ-ಡಿಸೆಂಬರ್ 19 ರಿಂದ ಹತ್ತು ದಿನಗಳ ಕಾಲ ವಿಧಾನಮಂಡಳ ಚಳಿಗಾಲ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ವಸತಿ, ಊಟೋಪಾಹಾರ, ಸಾರಿಗೆ, ವೈದ್ಯಕೀಯ ಸೇರಿದಂತೆ ಎಲ್ಲ ಬಗೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ನ.23) ನಡೆದ ವಿವಿಧ ಸಮಿತಿಗಳ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿವೇಶನಕ್ಕೆ ಆಗಮಿಸುವ ಸಚಿವರು, …

Read More »

ಇವರಿಬ್ಬರು ಮಾಡಿದ ಕಾರ್ಯ ರಾಜ್ಯದಲ್ಲೇ ಮೊದಲು, …!!

*ಬೆಳಗಾವಿ ಪಿಯುಸಿ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಶಾಸಕ ದ್ವಯರ ಹೊಸ ಪ್ರಯೋಗ* ಬೆಳಗಾವಿ-ಅಭಿವೃದ್ಧಿಗೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಶಾಸಕ ಅನೀಲ ಬೆನಕೆ,ಅವರ ಜೋಡಿ, ಅಭಿವೃದ್ಧಿಪರ ಯಾವುದೇ ಯೋಜನೆ ಹಾಕಿಕೊಂಡರೆ ಅದು ಜನಪರ ಪ್ರಯೋಗಿಶೀಲವಾಗಿರುತ್ತದೆ. ಹೀಗಾಗಿ, ಅವರ ಅಭಿವೃದ್ಧಿ ಯೋಜನೆಗಳು ವಿಶೇಷ ಗಮನ ಸೆಳೆಯುತ್ತವೆ. ಈಗ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಜೊತೆಗಾರ ಅನಿಲ್ ಬೆನಕೆ ಅವರ ಕೈಹಿಡಿದುಕೊಂಡು ಇಬ್ಬರೂ …

Read More »

ಬೆಳಗಾವಿ ಗಡಿವಿವಾದ: ಆಲ್ ಪಾರ್ಟಿ ಮೀಟೀಂಗ್ ಕರೆಯಲು ಟ್ವೀಟ್…!!

ಬೆಳಗಾವಿ ಗಡಿ ವಿವಾದ: ಇದೇ 23ಕ್ಕೆ ಸುಪ್ರೀಂನಲ್ಲಿ ವಿಚಾರಣೆ, ಸರ್ವಪಕ್ಷ ಸಭೆ ಕರೆಯಲು ಸಿದ್ದರಾಮಯ್ಯ ಒತ್ತಾಯ ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ಆಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ಸರ್ವಪಕ್ಷಗಳ ಸಭೆ ಕರೆದು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬೆಳಗಾವಿ ಗಡಿ ವಿವಾದದ ಬಗ್ಗೆ ನವಂಬರ್ …

Read More »

ಬೆಳಗಾವಿ ಗಡಿವಿವಾದ,ಬೆಂಗಳೂರಿನಲ್ಲಿ ತುರ್ತು ಸಭೆ ನಡೆಸಿದ ಸಿಎಂ

ಬೆಳಗಾವಿ- ಬೆಳಗಾವಿ ಗಡಿವಿವಾದದ ಕುರಿತು ನವೆಂಬರ್ 23 ರಂದು ಸುಪ್ರೀಂ ಕೋರ್ಟಿನಲ್ಲಿ ಅಂತಿಮ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಡ್ರ ಸರ್ಕಾರ ಮುಂಬಯಿ ನಲ್ಲಿ ಸರ್ವಪಕ್ಷಗಳ ಸಭೆ ನಡೆಸಿದ ಬೆನ್ನಲ್ಲಿಯೇ ಕರ್ನಾಟಕ ಸರ್ಕಾರವೂ ಎಚ್ಚೆತ್ತುಕೊಂಡಿದ್ದು ಇದೇ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಂಗಳೂರಿನಲ್ಲಿ ತುರ್ತು ಸಭೆ ನಡೆಸಿದ್ದಾರೆ. ಕರ್ನಾಟಕದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಅವರನ್ನು ತುರ್ತಾಗಿ ಕರೆಯಿಸಿ ರೇಸ್ ಕೋರ್ಸಿನ ನಿವಾಸದಲ್ಲಿ ಸಭೆ ನಡೆಸಿದ ಸಿಎಂ ಬಸವರಾಜ್ ಬೊಮ್ಮಾಯಿ ಬೆಳಗಾವಿ ಗಡಿ …

Read More »

ಬೆಳಗಾವಿ ಗಡಿವಿವಾದ ಮುಂಬಯಿನಲ್ಲಿ ನಡೆದ ಮೀಟೀಂಗ್ ನಲ್ಲಿ ಏನೇನಾಯ್ತು ಗೊತ್ತಾ…??

ಬೆಳಗಾವಿ/ಮುಂಬಯಿ- ನವೆಂಬರ್ 23 ರಂದು ಬೆಳಗಾವಿಯ ಗಡಿ ವಿವಾದದ ಬಗ್ಗೆ ಮಾನ್ಯ ಸುಪ್ರೀಂ ಕೋರ್ಟಿನಲ್ಲಿ ಅಂತಿಮ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಹರಾಷ್ಟ್ರ ಸರ್ಕಾರ ಇಂದು ಮುಂಬಯಿ ಯಲ್ಲಿನ ಸಹ್ಯಾದ್ಯಿ ಗೆಸ್ಟ್ ಹೌಸ್ ನಲ್ಲಿ ಮಹಾರಾಷ್ಟ್ರ ಸರ್ವ ಪಕ್ಷಗಳ ಸಭೆ ನಡೆಸಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಆರಂಭವಾದ ಸಭೆ ಮಧ್ಯಾಹ್ನ ,3 ಗಂಟೆಗೆ ಮುಕ್ತಾಯವಾಯಿತು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ …

Read More »

ಬೆಳಗಾವಿ, ಗಡಿವಿವಾದ, ಮಹಾರಾಷ್ಟ್ರದಲ್ಲಿ ಹೈ ಪವರ್, ಕರ್ನಾಟಕದಲ್ಲಿ ಡೋಂಟ್ ಕೇರ್…!!

ಬೆಳಗಾವಿ-ಬೆಳಗಾವಿ ಗಡಿ ವಿವಾದವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಈ ಕುರಿತು ಮುಂಬಯಿ ಮಹಾನಗರದಲ್ಲಿ ಹೈ- ಪವರ್ ಮೀಟೀಂಗ್ ಮಾಡುತ್ತಿದೆ. ನವೆಂಬರ್ 23 ರಂದು ಬೆಳಗಾವಿ ಗಡಿ ವಿವಾದದ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆ ನಡೆಯಲಿದೆ.ಗಡಿ ವಿವಾದದ ಸುಪ್ರೀಂ ಕೋರ್ಟಿನ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ಅನ್ನೋದರ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಣಯ ಪ್ರಕಟಿಸಲಿದ್ದು ಈ ವಿಚಾರವಾಗಿ ಚರ್ಚಿಸಲು ಮಹಾರಾಷ್ಟ್ರ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸುತ್ತಿದ್ದು ಈ ಸಭೆಗೆ ಕಾನೂನು …

Read More »

ಯಲ್ಲಮ್ಮನಗುಡ್ಡ: ಮಳಿಗೆಗಳ ಹರಾಜಿನಿಂದ ಕೋಟಿ, ಕೋಟಿ ಆದಾಯ

ಬೆಳಗಾವಿ, : ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಹೊಸ ಮಳಿಗೆಗಳ ಬಹಿರಂಗ ಹರಾಜಿನಿಂದ ಸುಮಾರು ಎರಡು ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಶನಿವಾರ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 226 ಮಳಿಗೆಗಳ ಹರಾಜಿನ ಮೂಲಕ ಈಗಾಗಲೇ 1,74,22,000 ರೂಪಾಯಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. 39 ಮಳಿಗೆಗಳಿಗೆ ಸರಕಾರಿ ಸವಾಲಿಗಿಂತ ಕಡಿಮೆ ಮೊತ್ತಕ್ಕೆ ಕೇಳಲಾಗಿರುತ್ತದೆ. ಇದಲ್ಲದೇ ಬೇಡಿಕೆ ಇಲ್ಲದ 24 ಮಳಿಗೆಗಳನ್ನು …

Read More »

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ. ಭರ್ಜರಿ ತಯಾರಿ…

ಬೆಳಗಾವಿ, -ವಿಧಾನಮಂಡಳದ ಚಳಿಗಾಲ  30 ರವರೆಗೆ ನಡೆಯಲಿದ್ದು, ಸಚಿವರು, ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಪ್ರತಿವರ್ಷದಂತೆ ಅತ್ಯುತ್ತಮ ವಸತಿ ಮತ್ತಿತರ ಸೌಕರ್ಯಗಳನ್ನು ಒದಗಿಸುವ ಅಗತ್ಯವಿದೆ. ಆದ್ದರಿಂದ ಈ ನಿಟ್ಟಿನಲ್ಲಿ ನಗರದ ಎಲ್ಲ ಹೋಟೆಲ್ ಮಾಲೀಕರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಬೆಳಗಾವಿ ಚಳಿಗಾಲ ವಿಧಾನಮಂಡಳ ಅಧಿವೇಶನದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ(ನ.19) ನಡೆದ ನಗರದ ಹೋಟೆಲ್ ಮಾಲೀಕರುಗಳ ಸಭೆಯ ಅಧ್ಯಕ್ಷತೆ …

Read More »

ಬಾರ್ ಗೆ ನುಗ್ಗಿ ಬಾಗಿಲು ಬಂದ್ ಮಾಡಿಸಿದ ಜಿಲ್ಲಾಧಿಕಾರಿ!:

ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಕಾರಿನಿಂದಿಳಿದ ಜಿಲ್ಲಾಧಿಕಾರಿ ‌ನಿತೇಶ್ ಪಾಟೀಲರು ನೇರವಾಗಿ ಪಕ್ದಲ್ಲೇ ಇರುವ ಆನಂದ ಬ್ರ್ಯಾಂಡಿ ಶಾಪ್ ಗೆ ತೆರಳಿ ಲೈಸೆನ್ಸ್, ಲಭ್ಯವಿರುವ ಮದ್ಯದ ಸಂಗ್ರಹ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ಕೈಗೊಂಡರು. ಜಿಲ್ಲಾಧಿಕಾರಿಗಳು ಬಸವೇಶ್ವರ ವೃತ್ತದಲ್ಲಿ ಇರುವ ಆನಂದ ಬ್ರ್ಯಾಂಡಿ ಅಂಗಡಿ ಮತ್ತು ಲಕ್ಷ್ಮೀ ಬಾರ್ ಮತ್ತು ರೆಸ್ಟೋರೆಂಟ್ ಗೆ ಸ್ವತಃ ತೆರಳಿ ಪರಿಶೀಲನೆ ಕೈಗೊಂಡರು. ಖುದ್ದಾಗಿ ಕೆಲವು ಮದ್ಯದ ಬಾಟಲ್ ಗಳನ್ನು ತೆಗೆದುಕೊಂಡು …

Read More »

ಜೆಡಿಎಸ್ ಸೆರೋಲ್ಲ…ಬಿಜೆಪಿ ಬಿಡೋಲ್ಲ,- ರಮೇಶ್ ಜಾರಕಿಹೊಳಿ

ಬೆಳಗಾವಿ- ನಾನು ಜೆಡಿಎಸ್ ಸೇರುತ್ತಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಸೇರುವದಿಲ್ಲ.ನಾನು ಬಿಜೆಪಿ ಬಿಡೋಲ್ಲ,ಬಿಡೋಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾದ್ಯಮಗಳ ಎದುರು ಸ್ಪಷ್ಟಪಡಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಸಮೀಪದಲ್ಲಿ ರಮೇಶ್ ಜಾರಕಿಹೊಳಿ ಅವರ ಆಪ್ತ ನಾಗೇಶ್ ಮನ್ನೋಳಕರ ಮಾಲಿಕತ್ವದ ಸ್ಮಾರ್ಟ್ ಕ್ಯಾಶ್ಯು ಕಾರ್ಖಾನೆಯನ್ನು ಉದ್ಘಾಟಿಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ,ಕಾಂಗ್ರೆಸ್ ನಲ್ಲಿ ನಾನು ಮಂತ್ರಿಯಾಗಿದ್ದೆ,ಆ …

Read More »

ಬೆಳಗಾವಿ: ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ತಾಯಿ….

ಬೆಳಗಾವಿ- ಜೀವನದಲ್ಲಿ ಜಿಗುಪ್ಸೆ ಹೊಂದಿದ ತಾಯಿಯೊಬ್ಬಳು ವೇದನೆಯನ್ನು ತಾಳಲಾರದೆ ಇಬ್ಬರು ಮಕ್ಕಳೊಂದಿದೆ ಮಲಪ್ರಭಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ತಾಲ್ಲೂಕಿನಲ್ಲಿ ನಡೆದಿದೆ. ಸವದತ್ತಿ ಪೋಲೀಸ್ ಠಾಣೆಯ ವ್ಯಾಪ್ತಿಯ ವಟ್ನಾಳ ಗ್ರಾಮದ ಹದ್ದಿಯಲ್ಲಿ ಮಲಪ್ರಭಾ ಹಿನ್ನೀರಿನ ದಡದಲ್ಲಿ ಮೂವರ ಶವ ಪತ್ತೆಯಾಗಿದೆ.ರಾಮದುರ್ಗ ತಾಲ್ಲೂಕಿನ ಚುಂಚನೂರು ಗ್ರಾಮದ 32 ವರ್ಷ ವಯಸ್ಸಿನ ಶಶಿಕಲಾ ಅಲಿಯಾಸ್ ತನುಜಾ ಪರಸಪ್ಪ ಗೋಡಿ,ಮಕ್ಕಳಾದಸುದೀಪ 4, ರಾಧಿಕಾ 3 ಇವರ ಶವಗಳು ಪತ್ತೆಯಾಗಿವೆ. ತಾಯಿ ತನುಜಾ, …

Read More »

ಬೆಂಗಳೂರಿನ ಫೇಮಸ್ ನಾಟಿ ಮನೆ ಈಗ ಬೆಳಗಾವಿಯಲ್ಲಿ….!!

ಬೆಳಗಾವಿ- ಬೆಂಗಳೂರಿನ ಫೇಮಸ್ ನಾಟಿ ಮನೆ ಈಗ ಬೆಳಗಾವಿಯಲ್ಲಿ ಶುರುವಾಗಿದ್ದು,ನಾನ್ ವೇಜ್ ಪ್ರೀಯರು ಬೆಳಗಾವಿಯ ನಾಟಿ ಮನೆಗೆ ಮುಗಿಬೀಳುತ್ತಿದ್ದಾರೆ. ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ ಆಝಂ ನಗರದ ಬಳಿ,ಅಜೀಜ್ ಬಿಲ್ಡೀಂಗ್ ನಲ್ಲಿ ಬೆಂಗಳೂರಿನ ಫೇಮಸ್ ನಾಟಿ ಮನೆಯ ಶಾಖೆ ಶುರುವಾಗಿದ್ದು, ಈ ನಾಟಿ ಮನೆ ಬೆಳಗಾವಿಯಲ್ಲೂ ಫೇಮಸ್ ಆಗುತ್ತಿದೆ. ಈ ನಾಟಿ ಮನೆಯಲ್ಲಿ ಚಿಕನ್ ಬಿರ್ಯಾನಿ,ಮಟನ್ ಬಿರಿಯಾನಿ, ಮಟನ್ ಕರಿ,ಚಿಕನ್ ಕರಿ, ಮಟನ್ ಪಾಯಾ,ಅಂದ್ರೆ ಕಾಲು ಸೂಪು,ಸೇರಿದಂತೆ ಎಲ್ಲ ರೀತಿಯ ನಾನ್ …

Read More »