LOCAL NEWS

ಬೆಳಗಾವಿಯಲ್ಲಿ ಅರ್ದ ಕೋಟಿ ಕಿಮ್ಮತ್ತಿನ ಬಂಗಾರ ಮತ್ತು ಕಂಟ್ರೀ ಪಿಸ್ತೂಲ್ ವಶ..

ಬೆಳಗಾವಿ ಗ್ರಾಮೀಣ ಠಾಣೆ ಪೋಲೀಸರು ಕಾರ್ಯಾಚರಣಿ ನಡೆಸಿ ಸುಮಾರು 51,60,000/- ರೂ. ಕಿಮ್ಮತ್ತಿನ ಬಂಗಾರದ ಆಭರಣ ಮತ್ತು ಒಂದು ಕಾರ್ ಹಾಗೂ ಒಂದು ಕಂತ್ರಿ ಪಿಸ್ತೂಲ್ ವಶಪಡಿಸಿಕೊಂಡು, ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ. ದಿನಾಂಕ 06-12-2020 ರಂದು ಝಾಡಶಹಾಪೂರ ಗ್ರಾಮದಲ್ಲಿ ಮನೆಕಳ್ಳತನ ಮಾಡುವ ಕಾಲಕ್ಕೆ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಜೀವದ ಹಂಗು ತೊರೆದು ಆರೋಪಿತರಾದ 1) ಪ್ರಕಾಶ ದಿನಾಯಕ ಪಾಲ ವಯಾ: 30 ಸಾ|| ಸರಸ್ವತಿ ನಗರ, ಶಹಾಪೂರ …

Read More »

ಬೆಳಗಾವಿಯಲ್ಲಿ ಯುವಕನ ಮರ್ಡರ್

ಬೆಳಗಾವಿ-ಹಳೆ ಬೆಳಗಾವಿ ಪ್ರದೇಶದ ರೈತ ಗಲ್ಲಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಜಯಪಾಲ ಗರಾಣಿ (35) ಕಾರು ಚಾಲಕನಾಗಿದ್ದು ಈತನ ಮೇಲೆ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ಮಾಡಿದ ಗುರುತುಗಳಿವೆ,ಇಂದು ಬೆಳಿಗ್ಗೆ ಶಹಾಪೂರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈತನ ಶವ ದೊರೆತಿದ್ದು ಶಹಾಪೂರ ಪೋಲೀಸರು ತನಿಖೆ ಮಾಡುತ್ತಿದ್ದಾರೆ. ಹತ್ಯೆಯಾಗಿರುವ ಜಯಪಾಲ ಹಳೆ ಬೆಳಗಾವಿಯ ಅಂಬೇಡ್ಕರ್ ಗಲ್ಲಿಯ ನಿವಾಸಿ ಎಂದು ಗುರುತಿಸಲಾಗಿದ್ದು ಕೊಲೆಗೆ ಕಾರಣ ಏನೆಂಬುದು ಗೊತ್ತಾಗಿಲ್ಲ.

Read More »

ನಾಳೆ ಬೆಳಗಾವಿಗೆ ಡಿ‌.ಕೆ ಶಿವಕುಮಾರ್….!!

ಬೆಳಗಾವಿ-ನಾಳೆ ಮಧ್ಯಾಹ್ನ 1-30 ಕ್ಕೆ ಕೆಪಿಸಿಸಿ ಅಧ್ಯಕ್ಷರು ಬೆಳಗಾವಿಗೆ ಆಗಮಿಸಲಿದ್ದು ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ,ಕಾಂಗ್ರೆಸ್ ಪಕ್ಷದ ವಕ್ತಾರರು ಆಗಿರುವ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರಿಯ ಮಗಳ ಮದುವೆ,ನಾಳೆ ಬೆಳಗಾವಿಯಲ್ಲಿ ನಡೆಯಲಿದ್ದು,ಡಿಕೆ ಶಿವಕುಮಾರ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Read More »

ಗ್ರಾಮ ಪಂಚಾಯತಿ ಚುನಾವಣೆ: ಸಿದ್ಧತೆ ಪರಶೀಲನೆ

ಬೆಳಗಾವಿ,- ಗ್ರಾಮ ಪಂಚಾಯತಿ ಚುನಾವಣೆಗೆ ನಿಯೋಜಿತರಾಗಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದರು. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿರುವ ತರಬೇತಿ ಕೇಂದ್ರಗಳಿಗೆ ಗುರುವಾರ (ಡಿ.17) ಭೇಟಿ ನೀಡಿ ಅವರು ಮಾತನಾಡಿದರು. ಚುನಾವಣಾ ಪ್ರಕ್ರಿಯೆಗಳ ಕುರಿತು ಸಂದೇಹಗಳಿದ್ದರೆ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸುವ …

Read More »

ಜಾರಕಿಹೊಳಿ ಆಪ್ತರ ಮೇಲೆ ಫೈರಿಂಗ್…

ಬೆಳಗಾವಿ : ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರಾದ ಕಿರಣ್ ರಜಪೂತ್ ಹಾಗೂ ಭರಮಾ ದೂಪದಾಳೆ ಮೇಲೆ ಫೈರಿಂಗ್ ಮಾಡಲಾಗಿದೆ. ಘಟನೆಯಲ್ಲಿ ಭರಮಾ ದೂಪದಾಳೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಿರಣ್ ರಜಪೂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಸುಮಾರು 7 ಅಡಿ …

Read More »

ಬೆಳಗಾವಿಯಲ್ಲಿ ನಳೀನಕುಮಾರ್ ಕಟೀಲು ಹೇಳಿದ್ದೇನು.?

ಬೆಳಗಾವಿ: ಪ್ರತಿ ಸಲವೂ ನನ್ನ ವಿರುದ್ಧ ವಾಗ್ದಾಳಿ ನಡೆಸುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ನನ್ನ ಮೇಲೆ ತುಂಬಾ ಪ್ರೀತಿ ಇರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​​ ವ್ಯಂಗ್ಯವಾಡಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ನನ್ನ ಮೇಲೆ ತುಂಬಾ ಪ್ರೀತಿ ಇರಬೇಕು. ನಿನ್ನೆ ವಿಧಾನ ಪರಿಷತ್​ನಲ್ಲಿ ಗಲಾಟೆಯಾದ ವಿಚಾರ‌ಕ್ಕೆ ಸಂಬಂಧಿಸಿ, ಬಿಜೆಪಿ ಮತ್ತು ಸರ್ಕಾರ ಕಾನೂನು ಹೋರಾಟಕ್ಕೆ ಪ್ರಯತ್ನ ಮಾಡಿದೆ. ಕಾನೂನು ತಜ್ಞರ ಸಲಹೆ …

Read More »

ನಮ್ಮ ವಾರಿಯರ್ಸ ಹಠಮಾರಿ..ಬೆಳಗಾವಿಯಿಂದ ಮಹಾಮಾರಿ ಪರಾರಿ….!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಜನರ ಜೀವ ಹಿಂಡಿದ ಮಹಾಮಾರಿ ಕೊರೋನಾ ಈಗ ಬೆಳಗಾವಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿರ್ನಾಮ ವಾಗುತ್ತ ಸಾಗಿದೆ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ವು ಸೊಂಕಿತರು ಪತ್ತೆಯಾಗುತ್ತಿದ್ದರು,ಆದರೆ ಈಗ ಸೊಂಕಿತರ ಸಂಖ್ಯೆ ತೀರಾ ಕಡಿಮೆಯಾಗಿದ್ದು,ಇವತ್ತಿನ ಹೆಲ್ತ್ ಬುಲಿಟೀನ್ ಪ್ರಕಾರ ಇವತ್ತು ಕೇವಲ 5 ಜನ ಸೊಂಕಿತರು ಪತ್ತೆಯಾಗಿದ್ದು,ಬೆಳಗಾವಿ ಜಿಲ್ಲೆಯಲ್ಲಿ ಈಗ ಕೇವಲ 207 ಸೊಂಕಿತರು ಇದ್ದಾರೆ. ಪ್ರತಿದಿನ ಸಾವಿರಾರು ಶಂಕತರ ಗಂಟಲು …

Read More »

ಕನ್ನಡಕ್ಕಾಗಿ ಬೆಳಗಾವಿಯಲ್ಲಿ ಏರ್ ಲೈನ್ಸ್ ವಿರುದ್ಧ ಕಿಡಿ ಕಾರಿದ ಐಎಸ್ ಅಧಿಕಾರಿ….

ಬೆಳಗಾವಿ- ಕನ್ನಡದಲ್ಲಿ ಮಾಹಿತಿ ನೀಡದ ಇಂಡಿಗೋ ಏರ್‌ಲೈನ್ಸ್ ವಿರುದ್ಧ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಕಿಡಿಕಾರಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ವೀಕ್ಷಕರಾಗಿರುವ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಇಂದು ಬೆಂಗಳೂರಿನಿಂದ ಬೆಳಗಾವಿಗೆ ಇಂಡಿಗೋ ಏರ್‌ಲೈನ್ಸ್ ವಿಮಾನದ ಮೂಲಕ ಆಗಮಿಸಿದ್ದಾರೆ.ಈ ವೇಳೆ ಕನ್ನಡದಲ್ಲಿ ಮಾಹಿತಿ ನೀಡದ ವಿಮಾನಯಾನ ಸಂಸ್ಥೆಗಳ ವಿರುದ್ಧ ಎಲ್.ಕೆ.ಅತೀಕ್ ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಇಂಡಿಗೋ ಹಾಗೂ ಇತರೆ ವಿಮಾನಯಾನ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ಸಲ್ಲಿಸಲು ಇರುವ ಸಮಸ್ಯೆಯಾದರೂ …

Read More »

ಇವನ ಟ್ಯಾಕ್ಸ್ ತುಂಬಿದ್ರೆ ಗೆಲುವು ಫಿಕ್ಸ್…!!!

ಬೆಳಗಾವಿ- ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತ ಗಾದೆ ಇದೆ,ಈ ಗಾದೆಗೆ ಅತ್ಯಂತ ಸೂಕ್ತವಾದ,ಮತ್ತು ಈ ಗಾದೆಗೆ ಹತ್ತಿರವಾದ ಸಂಪ್ರದಾಯ ಬೆಳಗಾವಿ ಜಿಲ್ಲೆಯಲ್ಲಿದೆ. ಈ ವ್ಯಕ್ತಿಯ ಮನೆ,ನೀರಿನ ಟ್ಯಾಕ್ಸ್ ತುಂಬಿದವರಿಗೆ ಗ್ರಾ.ಪಂ.ಚುನಾವಣೆ ಗೆಲುವು ಗ್ಯಾರಂಟಿ, ಎನ್ನುವ ನಂಬಿಕೆ ಈ ಗ್ರಾಮದಲ್ಲಿ ಇದೆ.ಅದಕ್ಕಾಗಿಯೇ ಚುನಾವಣೆಗೆ ಸ್ಪರ್ದಿಸುವ ಅಭ್ಯರ್ಥಿಗಳು ಈ ವ್ಯೆಕ್ತಿಯ ಟ್ಯಾಕ್ಸ್ ತುಂಬಲು ಮುಗಿಬೀಳುತ್ತಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ಇದ್ದಾನೆ ಈ ಲಕ್ಕಿ ಮ್ಯಾನ್, ಪ್ರತಿ ಗ್ರಾಮ …

Read More »

ಕಬ್ಬಿಣ ದರ ಕಡಿಮೆ ಮಾಡಲು ಡಿಸಿ ಕಚೇರಿಗೆ ದಿಬ್ಬಣ….!!!

ಬೆಳಗಾವಿ- ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಈಗ ಉದ್ಯಮಿಗಳ ಪರವಾಗಿ ನಿಂತಿದೆ ,ಸ್ಟೀಲ್ ದರವನ್ನು ಕಡಿಮೆ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ ಸ್ಟೀಲ್ ದರದಲ್ಲಿ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿಬೆಳಗಾವಿ ಚೇಂಬರ್ ಆಫ್ ಕಾಮಸ್೯, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೋವಿಡ್-19 ಮಹಾಮಾರಿಯ ಭೀತಿಯಿಂದ ಸಣ್ಣ ಕೈಗಾರಿಕೆ ಹಾಗೂ ಮಧ್ಯಮ ಕೈಗಾರಿಕೆಯವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಆದರೆ …

Read More »

ಸೋಶಿಯಲ್ ಮಿಡಿಯಾದಲ್ಲಿ ಪ್ರಚಾರ, ಹೊಲದಲ್ಲಿ ಕ್ಯಾಂಡಲ್ ಪಾರ್ಟಿ…!!!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಯ ಚುನಾವಣೆಯ ಕಾವು ರಂಗೇರಿದೆ, ಚುನಾವಣೆಗೆ ಸ್ಪರ್ದಿಸಿರುವ ಅಭ್ಯರ್ಥಿಗಳು,ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆಯ ಪ್ರಚಾರ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ನಡೆದಿದೆ. ಫೇಸ್ ಬುಕ್ ಓಪನ್ ಮಾಡಿದ್ರೆ ಸಾಕು,ಇಲೆಕ್ಷನ್ ಗೆ ನಿಂತ ಫೇಸ್ ಗಳೇ ಕಾಣಿಸುತ್ತಿವೆ,ವ್ಯಾಟ್ಸನ್‌, ಟ್ವಿಟರ್ ಎಲ್ಲದರಲ್ಲೂ ಈಗ ಚುವಾಣೆಯ ಪ್ರಚಾರ ರಂಗೇರಿದೆ. ಚುನಾವಣೆ ನಡೆಯುತ್ತಿರುವ ಹಳ್ಳಿಗಳಲ್ಲಿ,ಬಾರ್ ರೆಸ್ಟೋರೆಂಟ್ ಗಳ ಬದಲು ಹೊಲ ಗದ್ದೆಗಳಲ್ಲೇ ಚಿಕನ್ ,ಮಟನ್ ಪಾರ್ಟಿಗಳು ನಡೆಯುತ್ತಿವೆ. …

Read More »

ಸುದ್ದಿಗಳ ಸತ್ಯಾಸತ್ಯತೆ ಪರಾಮರ್ಶಿಸಿ ಪ್ರಕಟಿಸಬೇಕು: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ, ): ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ವ್ಯಾಪಕವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಸುದ್ದಿ ಇರಲಿ ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡು ಎಂಬಂತೆ ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವೇ ಮಾಧ್ಯಮಗಳು ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮದವರಿಗಾಗಿ ಸೋಮವಾರ(ಡಿ.14) ಏರ್ಪಡಿಸಲಾಗಿದ್ದ “ಫ್ಯಾಕ್ಟ್ ಚೆಕ್” ಕುರಿತ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿಗಳಿಂದ …

Read More »

ಬೆಳಗಾವಿಯಲ್ಲಿ ಡಿಸಿ ಸಂಧಾನ ಸಕ್ಸೆಸ್ ,ಸಾರಿಗೆ ನೌಕರರು ಡ್ಯುಟಿಗೆ ವಾಪಸ್..

ಬೆಳಗಾವಿ-ಕಳೆದ ಮೂರು ದಿನಗಳಿಂದ ಬೆಳಗಾವಿ ಬಸ್ ನಿಲ್ಧಾಣದಲ್ಲಿ ಧರಣಿ ನಡೆಸುತ್ತಿರುವ ಸಾರಿಗೆ ನೌಕರರ ಮುಖಂಡರ ಜೊತೆ,ಮತ್ತು ರೈತ ಮುಖಂಡರ ಜೊತೆ ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ,ಎಸ್ ಪಿ ನಿಂಬರಗಿ,ಮತ್ತು ನಗರ ಪೋಲೀಸ್ ಆಯುಕ್ತರು ಸಭೆ ನಡೆಸಿದರು. ಜಿಲ್ಲಾಡಳಿತ ಸಾರಿಗೆ ನೌಕರರ ಜೊತೆಗಿದೆ,ನೌಕರರಿಗೆ ಯಾವುದೇ ರೀತಿಯ ಸಮಸ್ಯೆ ಇದ್ದರೆ ಜಿಲ್ಲಾಡಳಿತ ಅದಕ್ಕೆ ತಕ್ಷಣ ಸ್ಪಂದಿಸುತ್ತದೆ. ಕೂಡಲೇ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿ ,ಎಲ್ಲರೂ ಡ್ಯುಟಿ ರಿಪೋರ್ಟ್ ಮಾಡಿ ಎಂದು ಜಿಲ್ಲಾಧಿಕಾರಿ ಹಿರೇಮಠ ಹೋರಾಟಗಾರರಲ್ಲಿ ಮನವಿ …

Read More »

ಬೆಳಗಾವಿಯಲ್ಲಿ, ಪೋಲೀಸ್ ಎಸ್ಕಾಟ್ ನಲ್ಲಿ ಬಸ್ ಸಂಚಾರ ಆರಂಭ…

ಬೆಳಗಾವಿ- ಬೆಳಗಾವಿ ಬಸ್ ನಿಲ್ಧಾಣಕ್ಕೆ ಬೆಳ್ಳಂ ಬೆಳಿಗ್ಗೆ, ಜಿಲ್ಲಾಧಿಕಾರಿ ಹಿರೇಮಠ, ನಗರ ಪೊಲೀಸ ಆಯುಕ್ತ ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ ಆಗಮಿಸಿದ್ದಾರೆ,ಬಿಗಿ ಪೋಲೀಸ್ ಬಂದೋಬಸ್ತಿಯಲ್ಲಿ ಬಸ್ ಸಂಚಾರ ಆರಂಭವಾಗಿದ್ದು ಪ್ರಯಾಣಿಕರು ನಿಶ್ಚಿಂತವಾಗಿ ಬಸ್ ಹತ್ತಬಹುದು ಯಾಕಂದ್ರೆ,ಪ್ರತಿಯೊಂದು ಬಸ್ ನಲ್ಲೂ ಪೋಲೀಸರು ಇದ್ದಾರೆ ಬೆಳಗಾವಿಯಲ್ಲಿ ರಾತ್ರೋರಾತ್ರಿ ಪ್ರತಿಭಟನಾಕಾರರನ್ನು ಜಾಗ ಖಾಲಿ ಮಾಡಿಸಿದ ಪೋಲಿಸರು ತಡರಾತ್ರಿಯೇ ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡಿಸಿದ್ದರು ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿ ಪ್ರತಿಭಟನಾ ಸ್ಥಳಕ್ಕೆ …

Read More »

ಬೆನ್ನಾಳಿ ಗ್ರಾಮದಲ್ಲಿ ಇಬ್ಬರ ಆತ್ಮಹತ್ಯೆ

ಬೆಳಗಾವಿ- ಬೆಳಗಾವಿ ಸಮೀಪದ ಬೆನ್ನಾಳಿ ಗ್ರಾಮದಲ್ಲಿ ಇಬ್ಬರು ಏಕಕಾಲದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಬೆನ್ನಾಳಿ ಗ್ರಾಮದ 31 ವರ್ಷದ ಶಿವಾಜಿ ಗಾಡಿವಡ್ಡರ್ ಗ್ರಾಮದ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದು,35 ವರ್ಷದ ಜಯಶ್ರೀ ಗಾಡಿವಡ್ಡರ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಕಾಕತಿ ಠಾಣೆಯ ಪೋಲೀಸರು ದೌಡಾಯಿಸಿದ್ದು ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ..

Read More »