LOCAL NEWS

ಬೆಳಗಾವಿ ಗ್ರಾಮಂತರ ಜಿಲ್ಲೆ ರಾಜ್ಯದಲ್ಲೇ ನಂ.1 – ವಿಜಯೇಂದ್ರ

ಬೆಳಗಾವಿ-ಕಾರ್ಯಕರ್ತರ ಸಂಕಲ್ಪ ಪೂರಿತ ಬದ್ಧತೆ ಭಾರತೀಯ ಜನತಾ ಪಾರ್ಟಿಯ ಸಂಘಟನಾ ಶಕ್ತಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಳಗಾವಿ ಗ್ರಾಮಾಂತರ ಜಿಲ್ಲೆಯು ಸಂಘಟನಾ ಪರ್ವದಲ್ಲಿ ಬೂತ್ ಕಮಿಟಿ ರಚನೆಯಲ್ಲಿ ರಾಜ್ಯದಲ್ಲಿ ಶೇ 100% ಗುರಿ ತಲುಪುವ ಮೂಲಕ ಸಂಘಟನಾ ಪರ್ವ ಅಭಿಯಾನದ ಅತ್ಯುನ್ನತ ಗುರಿ ಸಾಧಿಸಿದ್ದಾರೆ, ಇದಕ್ಕಾಗಿ ರಾಜ್ಯ ಅಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಅವರು ಹೆಚ್ಚಿನ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲಿಕ್ಕೆ ಶಕ್ತಿಯನ್ನು ತುಂಬಿದ್ದಾರೆ ಪ್ರೇರಣಾದಾಯಕ ಮಾತುಗಳನ್ನು ಆಡಿದ್ದಾರೆ, ಈ …

Read More »

ಬೆಳಗಾವಿಯ ಸಿಂಹ ಇನ್ನಿಲ್ಲ

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಭೂತರಾಮನಟ್ಟಿ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹೆಣ್ಣು ಸಿಂಹ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಮೃಗಾಲಯ ಅಧಿಕಾರಿಗಳು ತಿಳಿಸಿದ್ದಾರೆ. ನಿರುಪಮಾ ಎಂಬ 15 ವರ್ಷ ಈ ಹೆಣ್ಣು ಸಿಂಹವು ಕಳೆದ 15 ದಿನಗಳಿಂದ ವನ್ಯಜೀವಿ ವೈದ್ಯರ ಸಲಹೆಯಂತೆ ಉಪಚರಿಸಲಾಗುತ್ತಿತ್ತು. ಆದರೆ, ಇಂದು ಮಧ್ಯಾಹ್ನ 12.55ಕ್ಕೆ ಚಿಕಿತ್ಸೆ ಫಲಕಾರಿ ಆಗದೇ ಮೃಗಾಲಯದಲ್ಲಿ ಸಾವನ್ನಪ್ಪಿದೆ. ವನ್ಯಜೀವಿ ವೈದ್ಯರ ಸಲಹೆಯಂತೆ ಮರಣೋತ್ತರ ಪರೀಕ್ಷೆ ಮಾಡಿ …

Read More »

ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ

ಬೆಳಗಾವಿ- ಪ್ರತಿವರ್ಷ ಕಬ್ಬು ಕಟಾವ್ ಮಾಡುವ ಹಂಗಾಮು ಶುರುವಾದ್ರೆ ಸಾಕು ಪಕ್ಕದ ಮಹಾರಾಷ್ಟ್ರ ದಿಂದ ಬೆಳಗಾವಿ ಜಿಲ್ಲೆಗೆ ಸಾವಿರಾರು ಕುಟುಂಬಗಳು ಕಬ್ಬು ಕಟಾವ್ ಬರುತ್ತವೆ.ಈ ಕುಟುಂಬಗಳ ಬಡತನದ ಕಹಾನಿ ಕೇಳಿದ್ರೆ ಕಣ್ಣೀರು ಕಪಾಳಕ್ಕೆ ಬರುವದರಲ್ಲಿ ಸಂದೇಹವಿಲ್ಲ. ಕಬ್ಬು ಕಟಾವ್ ಮಾಡಲು ಗೋಕಾಕಿಗೆ ಬಂದಿದ್ದ ಮಹಾರಾಷ್ಟ್ರ ಮೂಲದ ಕುಟುಂಬದಲ್ಲಿ ಕರಾಳ ಘಟನೆ ನಡೆದಿದೆ. ಪತಿ ತನ್ನ ಪತ್ನಿಯನ್ನೇ ಭೀಕರವಾಗಿ ಹತ್ಯೆ ಮಾಡಿದ ಬಳಿಕ ತಾಯಿಯ ಶವಕ್ಕೆ ಮಗು ಅಪ್ಪಿಕೊಂಡು ಅಳುತ್ತಿರುವ. ದೃಶ್ಯ …

Read More »

ಹಿರೇಬಾಗೇವಾಡಿ ಬಳಿ ಭೀಕರ ರಸ್ತೆ ಅಪಘಾತ

ಬೆಳಗಾವಿ-ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಬೆಳಂಬೆಳಗ್ಗೆ ಲಾರಿ-ಕಾರು ಮಧ್ಯೆ ಅಪಘಾತ ಸಂಭವಿಸಿದೆ.ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಪತಿಯ ಎದುರೇ ಪತ್ನಿ ಮೃತಪಟ್ಟಿದ್ದಾಳೆ.ಬೆಳಗಾವಿ ತಾಲೂಕಿನ ‌ಹಿರೇಬಾಗೇವಾಡಿ ಸಮೀಪ ನಡೆದ ದುರ್ಘಟನೆ ಮೂಡಲಗಿ ತಾಲೂಕಿನ ಸಂಗಣಕೇರಿಯ ವೈದ್ಯೆ ಡಾ. ಆಶಾ ಕೋಳಿ (32) ಸ್ಥಳದಲ್ಲೇ ಸಾವನ್ಬೊಪ್ಪಿದ್ದಾರೆಆಶಾ ಪತಿ ಡಾ. ಭೀಮಪ್ಪ ಕೋಳಿ, ಚಾಲಕ ಮಹೇಶ ಖೋತ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಲಾರಿ ಹಿಂಬದಿಗೆ ರಭಸವಾಗಿ ಡಿಕ್ಕಿ, ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜುಗಿದೆ.ಧಾರವಾಡದಿಂದ ಬೆಳಗಾವಿ …

Read More »

ಕುಂಭಮೇಳದಿಂದ ಬೆಳಗಾವಿಗೆ ಬರುವಾಗ ಬೆಳಗಾವಿಯ ವ್ಯಕ್ತಿ ಸಾವು

ಬೆಳಗಾವಿ-ಪ್ರಯಾಗರಾಜ್ ಯಾತ್ರೆಗೆ ತೆರಳಿದ್ದ ಬೆಳಗಾವಿಯ ಮತ್ತೋರ್ವ ವ್ಯಕ್ತಿ ಸಾವನ್ನೊಪ್ಪಿದ್ದಾನೆ.ಬೆಳಗಾವಿ ದೇಶಪಾಂಡೆ ಗಲ್ಲಿಯ ನಿವಾಸಿ ರವಿ ಜಟಾರ (61) ಹೃದಯಾಘಾತದಿಂದ ಸಾವನ್ಬೊಪ್ಪಿದ್ದಾನೆ ಪ್ರಯಾಗರಾಜ್ ದಿಂದ ಮರಳಿ ಬೆಳಗಾವಿಗೆ ಬರುವಾಗ ರೈಲಿನಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ರೈಲಿನಲ್ಲಿ ಬರುವಾಗ ಪುಣೆಯಲ್ಲಿ ಹೃದಯಾಘಾತವಾಗಿ ರವಿ ಮೃತಪಟ್ಟಿದ್ದಾನೆ.ಕಾಲ್ತುಳಿತದಲ್ಲಿ‌ ನಾಲ್ವರು ಮತ್ತು ಹೃದಯಾಘಾತದಿಂದ ಓರ್ವ ಒಟ್ಟು ಐದು ಜನ ಬೆಳಗಾವಿಯ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.

Read More »

ಇಬ್ಬರ ಮೃತದೇಹಗಳು ಬೆಳಗಾವಿಗೆ ಇನ್ನಿಬ್ಬರ ಮೃತದೇಹಗಳು ಗೋವಾಕ್ಕೆ

ಬೆಳಗಾವಿ – ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟಿರುವ ಬೆಳಗಾವಿಯ ನಾಲ್ಕು ಜನ ಯಾತ್ರಾರ್ಥಿಗಳ ಮೃತದೇಹಗಳು ಬೆಳಗಾವಿಗೆ ರವಾನೆಯಾಗಿವೆ. ಬೆಳಗಾವಿಯ ಅರುಣ ಗೋರ್ಪಡ್ (61), ಮಹಾದೇವಿ ಬಾವನೂರ ( 48) ಇಬ್ಬರ ಮೃತದೇಹಗಳು ಸಂಜೆ ಐದು ಗಂಟೆಗೆ ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ಧಾಣಕ್ಕೆ ತಲುಪಲಿವೆ. ಮೇಘಾ ಹತ್ತವರವಾಠ್ ( 24), ಜ್ಯೋತಿ ಹತ್ತರವಠ ( 44) ತಾಯಿ ಮತ್ತು ಮಗಳು ಮೃತಪಟ್ಟಿದ್ದು ಇವರಿಬ್ಬರ ಮೃತದೇಹಗಳು ದೆಹಲಿಯಿಂದ ಗೋವಾಕ್ಕೆ ತಲುಪಿ …

Read More »

ಕುಂಭಮೇಳದಲ್ಲಿ ಕಾಲ್ತುಳಿತ,ಬೆಳಗಾವಿಯಿಂದ ವಿಶೇಷ ತಂಡ ರವಾನೆ

ಬೆಳಗಾವಿ- ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದು ಬೆಳಗಾವಿ ಜಿಲ್ಲಾಡಳಿತ ವಿಶೇಷ ತಂಡ ರಚನೆ ಮಾಡಿ ಪ್ರಯಾಗರಾಜ್ ಗೆ ರವಾನೆ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ತಿಳಿಸಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟಿರುವ ನಾಲ್ವರ ಮೃತದೇಹಗಳನ್ನು ನಾಳೆ ಮಧ್ಯಾಹ್ನದವರೆಗೆ ಬೆಳಗಾವಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್ ಹೇಳಿದರು. ಪ್ರಯಾಗ್ ರಾಜ್ ದಲ್ಲಿ ಕುಂಭ ಮೇಳದಲ್ಲಿ ಬೆಳಗಾವಿಯ ಅರುಣ ಗೋರ್ಪಡ್ …

Read More »

ಬೆಳಗಾವಿಯ ಒಟ್ಟು ನಾಲ್ವರ ದುರ್ಮರಣ, ಸಚಿವರ ಸಂತಾಪ

ಮಹಾಕುಂಭಮೇಳದಲ್ಲಿ ಬೆಳಗಾವಿಯ ನಾಲ್ವರ ದುರ್ಮರಣ: ಸಚಿವ ಸತೀಶ್‌ ಜಾರಕಿಹೊಳಿ ಸಂತಾಪ ಬೆಳಗಾವಿ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠ್ (50) ಮೇಘಾ ಹತ್ತರವಾಠ್, ಶೆಟ್ಟಿಗಲ್ಲಿ ನಿವಾಸಿ ಅರುಣ್ ಕೋಪರ್ಡೆ ಹಾಗೂ ಶಿವಾಜಿ ನಗರದ ಮಾಹಾದೇವಿ ಭವನೂರ ಅವರು ಮೃತಪಟ್ಟಿರುವುದು ತಿಳಿದು ದುಃಖಿತನಾಗಿದ್ದೇನೆ. ಆ ದೇವರು ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಹಾಗೆ ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ …

Read More »

ಕುಂಭಮೇಳದಲ್ಲಿ ಕಾಲ್ತುಳಿತ ಬೆಳಗಾವಿಯ ಮೂವರ ಬಲಿ

ಬೆಳಗಾವಿ-ಕುಂಭಮೇಳದಲ್ಲಿ ಕಾಲ್ತುಳಿತ‌ ಪ್ರಕರಣದಲ್ಲಿ ‌ಬೆಳಗಾವಿಯ ತಾಯಿ-ಮಗಳು ಸೇರಿದಂತೆ ಒಟ್ಟು ಮೂವರು ಜನ ಮೃತಪಟ್ಟಿದ್ದಾರೆ.ಕಾಲ್ತುಳಿತದ ಬಳಿಕ ಇಂದು‌‌ ಬೆಳಗ್ಗೆ ಪ್ರಯಾಗ್‌ರಾಜ್‌ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಮತ್ತು ಮಗಳು, ಚಿಕಿತ್ಸೆ ಫಲಕಾರಿ ಆಗದೇ ಸಾವನ್ನೊಪ್ಪಿದ್ದಾರೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50)ಮೇಘಾಹತ್ತರವಾಠ್‌(25)ಮೃತಪಟ್ಟಿದ್ದಾರೆ.ಚಿದಂಬರ್ ಎಂಬುವವರು ಅವರ ಜೊತೆಗೆ ಇರುವವರಿಂದ ಮಾಹಿತಿ ಸಿಕ್ಕಿದೆ.ಈ ವರೆಗೂ ಸಂಪರ್ಕಕ್ಕೆ ಬಂದಿರಲಿಲ್ಲ. ಮೃತಪಟ್ಟಿದ್ದಾರೆ ಅಂತಾ ಅವರ ಜೊತೆಗೆ ಇದ್ದ ಚಿದಂಬರ ತಿಳಿಸಿದ್ದಾರೆ.ಸಾವು ಖಚಿತ ಪಡಿಸಿದ ಮೇಘಾ …

Read More »

ಬೆಳಗಾವಿಯಲ್ಲಿ ಮೈನೀಂಗ್ ಕಿಂಗ್ ದೊಡ್ಡಣ್ಣವರ ಮನೆ ಮೇಲೆ ಮದ್ಯರಾತ್ರಿ ಐಟಿ ದಾಳಿ..!

ಬೆಳಗಾವಿ-ಬೆಳಗಾವಿಯಲ್ಲಿ ಮಧ್ಯರಾತ್ರಿ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ.ಮೈನಿಂಗ್ ಉದ್ಯಮಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದ್ದು ಐಟಿ ಶಾಕ್ ಕೊಟ್ಟಿದೆ.ಬೆಳಗಾವಿಯ ಮೈನೀಂಗ್ ಕಿಂಗ್,ವಿನೋದ್ ದೊಡ್ಡಣ್ಣವರ್, ಪುರುಷೋತ್ತಮ ದೊಡ್ಡಣ್ಣವರ್ ಒಡೆತನದ ಕಂಪನಿಗಳ ಮೇಲೆ ದಾಳಿ ನಡೆದಿದೆ.ಮೈನಿಂಗ್ ಮತ್ತು ಸಕ್ಕರೆ ಕಾರ್ಖಾನೆ ಉದ್ಯಮಿಗಳಾಗಿರುವ ದೊಡ್ಡಣ್ಣವರ್ ಬ್ರದರ್ಸ್ ಮನೆ ಮತ್ತು ಕಚೇರಿಗಳ ಮೇಲೆ,ಒಟ್ಟು ಐದು ತಂಡಗಳಿಂದ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಭಾಗ್ಯನಗರದ ನಿವಾಸ, ಉದ್ಯಮಬಾಗದಲ್ಲಿರುವ ಕಚೇರಿ ಮೇಲೆ ದಾಳಿ ಮಾಡಲಾಗಿದೆ.ಗೋವಾದಿಂದ …

Read More »

ಬ್ಯುಟಿ ಪಾರ್ಲರ್ ಮೇಲೆ ಸೈಬರ್ ರೇಡ್…..!!

ಬೆಳಗಾವಿ : ವೇಶಾವಾಟಿ ನಡೆಸುತ್ತಿದ್ದ ಸ್ಪಾ ಮತ್ತು ಬ್ಯೂಟಿ ಪಾರ್ಲರ ಸೆಂಟರ್ ಒಂದರ ಮೇಲೆ ದಾಳಿ ಮಾಡಿರುವ ಬೆಳಗಾವಿಯ ಸಿಇಎನ್ ಪೊಲೀಸರು 6 ಮಹಿಳೆಯರನ್ನು ರಕ್ಷಣೆ ಮಾಡುವ ಮೂಲಕ ಮಾಲಿಕಳನ್ನು ವಶಕ್ಕೆ ಪಡೆದಿರುವ ಘಟನೆ ಗುರುವಾರ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಅನಗೂಳದ ಮುಖ್ಯ ರಸ್ತೆಯಲ್ಲಿ ಇರುವ ಅಂಜಲಿ ಸ್ಪಾ ಮತ್ತು ಬ್ಯೂಟಿ ಪಾರ್ಲ ರ್ ಮೇಲೆ ಈ ದಾಳಿಯನ್ನು ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಆಯುಕ್ತ ಹಾಗೂ …

Read More »

ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯ…!!

ಬೆಳಗಾವಿ-ಬೆಳಗಾವಿಯಲ್ಲಿ ಅಕ್ರಮವಾಗಿ ಮಕ್ಕಳ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ.ಎರಡನೇ ಮದುವೆ ಮಾಡಿಸಿದ್ದ ದಲ್ಲಾಳಿಯಿಂದಲೇ ಮಕ್ಕಳ ಮಾರಾಟದ ಕೃತ್ಯ ನಡೆದಿದೆ.ಹೊಸದಾಗಿ ಮದುವೆ ಆಗಿದ್ದೀರಿ ಮಗು ಸ್ವಲ್ಪ ದಿನ ನನ್ನ ಬಳಿ ಇರ್ಲಿ ಎಂದು ನಂಬಿಸಿ ಮಗು ಮಾರಾಟ ಮಾಡಿದ ಪ್ರಕರಣ ಬಯಲಾಗಿದೆ. ಪ್ರಕರಣ ಸಂಬಂಧ ನಾಲ್ಕು ಜನ ಆರೋಪಿಗಳನ್ನು ಹುಕ್ಕೇರಿ ಪೋಲೀಸರು ಬಂಧಿಸಿದ್ದಾರೆ. ಮಾರಾಟವಾಗಿದ್ದ ಮಗುವನ್ನು ಪತ್ತೆಮಾಡಿದ ಪೋಲೀಸರು ತಾಯಿಗೆ ಮಗುವನ್ನು ಮರಳಿಸಿದ್ದಾರೆ. ಹುಕ್ಕೇರಿ ತಾಲೂಕಿನ ಸುಲ್ತಾಪುರ ಗ್ರಾಮದ ಸಂಗೀತಾ ಎರಡನೇ …

Read More »

ಬೆಳಗಾವಿ ಹೈವೇಯಲ್ಲಿ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣ

ಬೆಳಗಾವಿ: ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ನಿನ್ನೆ ತಡರಾತ್ರಿ ಬೆಳಗಾವಿ ತಾಲ್ಲೂಕಿನ ಮುತ್ಯಾನಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೆಳಗಾವಿ ತಾಲ್ಲೂಕಿನ ಗೌಂಡವಾಡ ಗ್ರಾಮದ ಛತ್ರಪತಿ ಶಿವಾಜಿ ಗಲ್ಲಿಯ ಸಕ್ಷಮ್ ಪಾಟೀಲ್ (20) ಮತ್ತು ಸಿದ್ದಾರ್ಥ ಪಾಟೀಲ್ (23) ಮೃತರು. ಇಬ್ಬರೂ ಬೈಕ್ ಮೇಲೆ ಕಾಕತಿಯ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಹೊರಟಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವಾಹನ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ …

Read More »

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮ ಗಣೇಶ ಹೀರಾಮಣಿ ಸುತಾರ್ (15) ನಿನ್ನೆ ಮಂಗಳವಾರ ಶಾಲೆಗೆ ರಜೆಯಿದ್ದ ಕಾರಣ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನಿನ್ನೆ ದಿನವಿಡಿ ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಎಲ್ಲ ಕಡೆ ಹುಡುಕಿದರು. ಆದರೇ ಕೆರೆಯ ಬಳಿ ಆತನ ಬಟ್ಟೆ ಕಂಡು ಬಂದಾಗ ಮುಳುಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.ಕೂಡಲೇ …

Read More »

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಗ್ಯ ವಿಚಾರಿಸಿದ ಪ್ರೀಯಾಂಕಾ ಗಾಂಧಿ

ಬೆಳಗಾವಿ- ಇಂದು ಬೆಳಗ್ಗೆ ದೆಹಲಿಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವಿಶೇಷ ವಿಮಾನ ಮೂಲಕ ಆಗಮಿಸಿದ ಪ್ರೀಯಾಂಕಾ ಗಾಂಧಿ ಅವರನ್ನು ಸಿಎಂ ಸಿದ್ರಾಮಯ್ಯ ಸೇರಿದಂತೆ ಇತರ ಗಣ್ಯರು ಸ್ವಾಗತಿಸಿದರು. ಗಣ್ಯರು ಸ್ವಾಗತಿಸಿದ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ ಮೃಣಾಲ ಜೊತೆ ಪ್ರತ್ಯೇಕವಾಗಿ ಸಮಾಲೋಚಿಸಿದ ಪ್ರೀಯಾಂಕಾ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಆರೋಗ್ಯವನ್ನು ವಿಚಾರಿಸಿದರು. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ …

Read More »