Breaking News

LOCAL NEWS

ಬೆಳಗಾವಿ ಜಿಲ್ಲೆಯಲ್ಲಿ ಆಪರೇಷನ್ ಮಂಕಿ…!!

ಬೆಳಗಾವಿ- ವಾಹನಸವಾರರ ಮೇಲೆ ದಾಳಿ ಮಾಡುವದು,ಮಕ್ಕಳಿಗೆ ಕಾಟ ಕೊಡುವದು ಮನೆಯ ಹಿತ್ತಲಲ್ಲಿ ಇರುವ ಗಿಡಗಳ ಮೇಲೆ ಜೋತಾಡುವದು, ಮನೆಗೆ ನುಗ್ಗಿ ಮಾಡಿಟ್ಡ ಅಡುಗೆಯನ್ನು ಚೆಲ್ಲಾಪಿಲ್ಲಿ ಮಾಡುವದರ ಜೊತೆಗೆ ಗ್ರಾಮದಲ್ಲಿ ರಂಪಾಟ ನಡೆಸಿದ ಮಂಗಗಳನ್ನು ಬಲೆಗೆ ಬೀಳಿಸುವ ಕಾರ್ಯಾಚರಣೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ತಾವಂಶಿ ಗ್ರಾಮದಲ್ಲಿ ನಡೆದಿದೆ. ತಾವಂಶಿ ಗ್ರಾಮದಲ್ಲಿ ಇತ್ತೀಚಿಗೆ ಮಂಗಗಳ ಕಾಟ ಹೆಚ್ಚಾಗಿತ್ತು, ಇದು ಮಳೆಗಾಲ, ಹಂಚಿನ ಮನೆಗಳಗಳ ಛಾವಣಿಗಳ ಮೇಲೆ ಥೈ..ಥೈ ಕುಣಿತ, ಊರಿನ ಗಿಡಗಳ …

Read More »

ಸೇತುವೆಗಳಗಳು ಡ್ಯಾಮೇಜ್ ,ಮಾರ್ಗ ಬದಲಿಸಲು ಸೂಚನೆ…

ಬೆಳಗಾವಿ-ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿಬೆಳಗಾವಿಯಿಂದ ಗೋವಾ ಸಂಚರಿಸುವ ಭಾರೀ ವಾಹನಗಳು ಬದಲಿ ರಸ್ತೆ ಬಳಸಲು ಸೂಚನೆ ನೀಡಲಾಗಿದೆ. ಜಾಂಬೋಟಿ, ಚೋರ್ಲಾ ಭಾಗದಲ್ಲಿ ಹಲವು ಸೇತುವೆಗಳು ಶಿಥಿಲಗೊಂಡ ಹಿನ್ನೆಲೆಯಲ್ಲಿ,ಬೆಳಗಾವಿಯಿಂಗ ಗೋವಾ ಹೋಗುವವರು ಪೀರನವಾಡಿಯಿಂದ ಎಡಕ್ಕೆ ತಿರುಗಬೇಕು. ಖಾನಾಪುರ ಮಾರ್ಗವಾಗಿ ಗೋವಾಕ್ಕೆ ಹೋಗಬೇಕು ಎಂದು ಸೂಚನೆ ನೀಡಲಾಗಿದೆ.

Read More »

ಬೆಳಗಾವಿಯ ಭಕ್ತರ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ…

ಬೆಳಗಾವಿ- ಮಹಾರಾಷ್ಡ್ರದ ಪ್ರಸಿದ್ದ ಪಂಡರಪೂರ ವಿಠ್ಠಲನ ದರ್ಶನ ಪಡೆದು ಮರಳುತ್ತಿರುವಾಗ ಬೆಳಗಾವಿಯ ಭಕ್ತರ ಮೇಲೆ ಮಹಾರಾಷ್ಟ್ರದ ಪುಂಡರು ಹಲ್ಕೆ ನಡೆಸಿದ್ದು ಮೂವರು ಜನ ಗಾಯಗೊಂಡ ಘಟನೆ ತಡರಾತ್ರಿ ನಡೆದಿದೆ. ಬೆಳಗಾವಿಯ ಭಕ್ತರು ಲಾರಿಯಲ್ಲಿ ಪಂಢರಪುರಕ್ಕೆ ಹೋಗಿದ್ದರು. ದರ್ಶನ ಪಡೆದು ಬೆಳಗಾವಿಗೆ ವಾಪಸ್ ಬರುವಾಗ ಇವರು ದಾರಿ ತಪ್ಪಿ ಅನ್ಯ ಮಾರ್ಗದಿಂದ ಬಂದಿದ್ದಾರೆ ಅಲ್ಲಿಯ ಗ್ರಾಮವೊಂದರಲ್ಲಿ ರಸ್ತೆಯ ಮೇಲೆ ಕಾರು ನಿಂತಿದೆ.ದಾರಿ ಚಿಕ್ಕದಾಗಿರುವದರಿಂದ ಕಾರು ತೆಗೆಯುವಂತೆ ಲಾರಿ ಚಾಲಕ ಮನವಿ ಮಾಡಿಕೊಂಡಿದ್ದಾನೆ …

Read More »

ತಲಾಠಿ ಕಾರಿನಲ್ಲಿ 1 ಕೋಟಿ ಹತ್ತು ಲಕ್ಷ ₹ ಪತ್ತೆ….!!

ಬೆಳಗಾವಿ- ತಲಾಠಿಯೊಬ್ಬ ತನ್ನ ಕಾರಿನಲ್ಲಿ 1 ಕೋಟಿ 10 ಲಕ್ಷ ರೂ ಸಾಗಿಸುತ್ತಿರುವಾಗ ಪೋಲೀಸರು ದಾಳಿ ಮಾಡಿ ದಾಖಲೆ ಇಲ್ಲದ ಈ ಹಣವನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಲಗತ್ತಿ ಚೆಕ್ ಪೋಸ್ಟ್ ಹತ್ತಿರ ಗ್ರಾಮ ಲೆಕ್ಕಾಧಿಕಾರಿಯ ಕಾರು ನಿಲ್ಲಿಸಿ ಪೋಲೀಸರು ತಪಾಸಣೆ ಮಾಡಿದ ಸಂಧರ್ಭದಲ್ಲಿ ತಲಾಠಿ ಕಾರಿನಲ್ಲಿ ಕೋಟಿ ಹತ್ತು ಲಕ್ಷ ಪತ್ತೆಯಾಗಿದ್ದು ಪೋಲೀಸರು ವಶಕ್ಕೆ ಪಡೆದಿದ್ದಾರೆ.ದಾಖಲೆ‌ ಇಲ್ಲದೆ ಸಾಗಿಸ್ತಿದ್ದ 1 ಕೋಟಿ 10 ಲಕ್ಷ …

Read More »

ಕನ್ನಡಿಗರ ಮುಖವಾಣಿ ಕನ್ನಡಮ್ಮ ದಿನಪತ್ರಿಕೆಗೆ ಪ್ರಶಸ್ತಿಯ ಗೌರವ

ಬೆಳಗಾವಿ- ಕನ್ನಡಿಗರ ಮುಖವಾಣಿ, ಕನ್ನಡಿಗರ ಹೃದಯದಿಂದ ಹೊರಹೊಮ್ಮಿದ ಜನಮನದ ಧ್ವನಿ, ಬೆಳಗಾವಿಯ ಕನ್ನಡಮ್ಮ ದಿನಪತ್ರಿಕೆಗೆ ನಾಡೋಜ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಲಭಿಸಿದೆ. ಬೆಳಗಾವಿಯ ಕನ್ನಡಪರ ಹೋರಾಟದ ಇತಿಹಾಸದ ರೂವಾರಿ ದಿ.ಮಹಾದೇವ ಟೋಪಣ್ಣವರ ಅವರು ಆರಂಭಿಸಿದ ಕನ್ನಡಮ್ಮ ದಿನಪತ್ರಿಕೆ ರಾಜ್ಯಮಟ್ಟದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.ಪತ್ರಿಕಾರಂಗದ ಮೂಲಕ ಕನ್ನಡದ ಆಂದೋಲನ ಮಾಡಿರುವ ಕನ್ನಡಮ್ಮ ದಿನಪತ್ರಿಕೆ ಕನ್ನಡಿಗರ ಅಭಿಮಾನದ ಪತ್ರಿಕೆಯಾಗಿ ಗೌರವಿಸಲ್ಪಡುತ್ತಿದೆ. ಪತ್ರಿಕಾ ಲೋಕದ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದಿರುವ ಕನ್ನಡಮ್ಮ ದಿನಪತ್ರಿಕೆ ಪ್ರದೇಶಿಕ …

Read More »

ಬೆಳಗಾವಿ ಬಿಜೆಪಿ ಕಾರ್ಯಕಾರಿಣಿ ಯಲ್ಲಿ ನಿರಾಣಿ,ಕಾಗೇರಿ ಭಾಗಿ…

ಬೆಳಗಾವಿ-ಹತ್ತಿರದ ಮುತಗಾ ದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲೆ ವತಿಯಿಂದ ವಿಶೇಷ ಜಿಲ್ಲಾ ಕಾರ್ಯಕಾರಿಣಿ ಸಭೆ ಜರುಗಿತು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲೆ ವತಿಯಿಂದ ವಿಶೇಷ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಸಂಸದ ಜಗದೀಶ್ ಶೆಟ್ಟರ್ ಅವರು ಮಾತನಾಡಿ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳು ಯೋಜನೆಗಳ ಬಗ್ಗೆ ಕೇಂದ್ರದ ಮಂತ್ರಿಗಳ ಜೊತೆ ಭೇಟಿಯಾಗಿ ಮಾತನಾಡಿದ್ದೇನೆ ಜಿಲ್ಲೆಗೆ ಹೊಸ …

Read More »

ಶಬ್ದ ಕೇಳಿತು …ಪ್ರಾಣ ಉಳಿಯಿತು….ಆದ್ರೆ ಮನೆ ಕುಸಿಯಿತು…!!!

ಬೆಳಗಾವಿ- ಖಾನಾಪೂರ ಪ್ರದೇಶದಲ್ಲಿ ಮಳೆ ವಿಪರೀತಾಗಿ ಸುರಿಯುತ್ತಿದೆ. ಪ್ರತಿದಿನ ಮನೆಗಳು ಕುಸಿದು ಬೀಳುವ ಪ್ರಕರಣಗಳು ಖಾನಾಪೂರ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿವೆ. ನಿನ್ನೆ ತಡರಾತ್ರಿಯೂ ಮನೆಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾದ ಮತ್ತೊಂದು ಘಟನೆ ನಡೆದಿದೆ. ಖಾನಾಪೂರ ತಾಲ್ಲೂಕಿನ ಕಸಮಳಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾವಂತ್ ತೇಗೂರ್ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ತುಂಬು ಗರ್ಭಿಣಿ ಪ್ರಣಾಪಾಯದಿಂದ ಪಾರಾಗಿದ್ದಾಳೆ. ತಡರಾತ್ರಿ ಮಳೆಯ ಜೊತೆ ಬೀರುಗಾಳಿ ಬೀಸಿದೆ.ಮಳೆಯ …

Read More »

ಖಾನಾಪೂರ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ

ಖಾನಾಪೂರ-ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನ ಎಲ್ಲ ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢಶಾಲೆಗಳು‌ ಹಾಗೂ ಪಿಯು ಕಾಲೇಜುಗಳಿಗೆ ಜುಲೈ 19 ಹಾಗೂ 20 ರಂದು ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಖಾನಾಪೂರ ತಾಲ್ಲೂಕಿನ ಶಾಲಾ ಕಾಲೇಜುಗಳುಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

Read More »

ರಾಕಸಕೊಪ್ಪ ಜಲಾಶಯ ಭರ್ತಿ, ಎರಡು ಗೇಟ್ ಓಪನ್ ನೀರು ಬಿಡುಗಡೆ

ಬೆಳಗಾವಿ – ಬಹುಶ ಬೆಳಗಾವಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಹು ಬೇಗ ಬೆಳಗಾವಿ ಮಹಾನಗರದ ಜಲದ ಮೂಲ ರಾಕಸಕೊಫ್ಪ ಜಲಾಶಯ ಭರ್ತಿಯಾಗಿದ್ದು ಇವತ್ತು ಎರಡು ಗೇಟ್ ಗಳನ್ನು ಓಪನ್ ಮಾಡಿ ನೀರು ಬಿಡುಗಡೆ ಮಾಡಲಾಗಿದೆ. ರಾಕಸಕೊಪ್ಪ ಜಲಾಶಯದಿಂದ ನೀರು ಬಿಡುಗಡೆಯಾದ ಹಿನ್ನಲೆಯಲ್ಲಿ ಬೆಳಗಾವಿ ನಗರದ ಪಕ್ಕದಲ್ಲೇ ಹರಿಯುತ್ತಿರುವ ಮಾರ್ಕಂಡೇಯ ನದಿಯ ಒಳ ಹರಿವು ಹೆಚ್ಚಾಗಿದೆ. ರಾಕಸಕೊಪ್ಪ ಜಲಾಶಯ ಪ್ರತಿವರ್ಷ ಜುಲೈ ತಿಂಗಳ ಅಂತ್ಯದಲ್ಲಿ ಇಲ್ಲವಾದ್ರೆ ಅಗಸ್ಟ ತಿಂಗಳಲ್ಲಿ ತುಂಬುತ್ತದೆ.ಆದ್ರೆ …

Read More »

ಮುಳುಗಿದ ಅಲತ್ರಿ ಸೇತುವೆ ವಾಹನ ಸಂಚಾರ ನಿಷೇಧ

    ಖಾನಾಪೂರ- ಪಶ್ಚಿಮ ಘಟ್ಟದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ , ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು ಖಾನಾಪೂರ ತಾಲೂಕಿನ ಹಳ್ಳಗಳು,ನಾಲೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಖಾನಾಪೂರದ ಮಂತುರ್ಗಾ ಗ್ರಾಮದ ಅಲತ್ರಿ ಸೇತುವೆ ಮುಳುಗಡೆಯಾಗಿದ್ದು ಸಿಂಧನೂರು ಹೆಮ್ಮಡಗಾ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. Water flowing On Alatri Bridge near Manturga village and traffic on Sindhanuru Hemmadaga state highway closed today

Read More »

ಬೆಳಗಾವಿಯಲ್ಲಿ ರಾಜ್ಯಪಾಲ, ಥಾವರಚಂದ್ ಗೆಹ್ಲೋಟ್

ತಂತ್ರಜ್ಞಾನ ಬೆಳವಣಿಗೆಯಿಂದ ವಿಶ್ವದಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಲಿದೆ: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಬೆಳಗಾವಿ, ಜು.1 ಭಾರತದಲ್ಲಿ ಆರ್ಥಿಕ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ, ಕೈಗಾರಿಕೀಕರಣ, ಕೃಷಿ ಕ್ಷೇತ್ರದ ಸುಧಾರಣೆಗಳು, ಶಿಕ್ಷಣ ಮತ್ತು ಆಧುನೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ. ಪ್ರಸ್ತುತ ನಮ್ಮ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ವೇಗದಲ್ಲಿ ಸಾಗುತ್ತಿದೆ, ಮುಂಬರುವ ವರ್ಷಗಳಲ್ಲಿ ದೇಶವನ್ನು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮುಂಚೂಣಿಗೆ ತರಲು ನಾವು ಸಕ್ರಿಯ ಪ್ರಯತ್ನಗಳನ್ನು ಮಾಡಬೇಕಾಗಿದೆ …

Read More »

ಸಮಯ ಪ್ರಜ್ಞೆ ತಪ್ಪಿದ ಅನಾಹುತ, ಮನೆಯಲ್ಲಿ ಮಲಗಿದ ಎಲ್ಲರೂ ಬಚಾವ್….!

ಖಾನಾಪೂರ- ಹೊರಗಡೆ, ಜಿಟಿ ಜಿಟಿ ಮಳೆ,ಗಾಳಿ, ಚಳಿಯಲ್ಲಿ ಅವರು ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದರು. ಗೋಡೆ ಬಿರುಕು ಬಿಡುವ ಶಬ್ದವಾಯಿತು ಇದನ್ನು ಕೇಳಿದ ಮನೆಯ ಯಜಮಾನ ನಿದ್ದೆಯಿಂದ ಎದ್ದು ಮನೆಯಲ್ಲಿ ಮಲಗಿದವರನ್ನು ಎಬ್ಬಿಸಿ ಹೊರಗೆ ಹಾಕುವದಷ್ಟೇ ತಡ ಮನೆಯ ಗೋಡೆ ಕುಸಿದು ಬಿದ್ದಿತು. ಮನೆಯ ಯಜಮಾನನ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೇ ತಪ್ಪಿದೆ. ಧಾರಾಕಾರ ಸುರಿಯುತ್ತಿರುವ ಮಳೆಗೆ ಮನೆ ಗೊಡೆ ಕುಸಿತ ಸ್ವಲ್ಪದರಲ್ಲಿ ಕುಟುಂಬಸ್ಥರು ಬಚಾವಾಗಿದ್ದಾರೆ.ಈ ಘಟನೆ ನಡೆದಿದ್ದು,ಬೆಳಗಾವಿ ಜಿಲ್ಲೆ ಖಾನಾಪೂರ …

Read More »

ಅಂಬೋಲಿ ಪಾಲ್ಸ್ ಹತ್ತಿರ ಉರಳಿದ ಬಂಡೆಕಲ್ಲು…

  ಬೆಳಗಾವಿ-ಪಕ್ಕದ ಮಹಾರಾಷ್ಟ್ರ,ಗೋವಾ,ಮತ್ತು ಬೆಳಗಾವಿಯ ಗಡಿಯಲ್ಲಿ ವಿಪರೀತ ಮಳೆ ಸುರಿಯುತ್ತಿದೆ.ಬೆಳಗಾವಿಯ ಗಡಿಯಲ್ಲಿರುವ ಮಹಾರಾಷ್ಟ್ರದ ಸಾವಂತವಾಡಿ ರಸ್ತೆಯಲ್ಲಿ ಇರುವ ಅಂಬೋಲಿ ಫಾಲ್ಸ್ ಬಳಿ ದೊಡ್ಡ ಬಂಡೆ ಕಲ್ಲು ಉರಳಿ ಬಿದ್ದಿದೆ. ಬೆಳಗಾವಿ- ಸಾವಂತವಾಡಿ ರಸ್ತೆಯಲ್ಲಿ ಬೆಳಗಾವಿ ಗಡಿ ದಾಟಿದ ತಕ್ಷಣ ಪ್ರಸಿದ್ದ ಅಂಬೋಲಿ ಫಾಲ್ಸ್ ಬರುತ್ತದೆ.ಈ ಫಾಲ್ಸ್ ನೋಡಲು,ಬೆಳಗಾವಿ,ಗೋವಾ,ಮತ್ತು ಮಹಾರಾಷ್ಟ್ರದಿಂದ ಸಾವಿರಾರು ಜನ ಬರ್ತಾರೆ ಆದ್ರೆ ಏಕಾಏಕಿ ದೊಡ್ಡ ಗಾತ್ರದ ಬಂಡೆ ಕಲ್ಲು ಇದೇ ಫಾಲ್ಸ್ ಬಳಿ ರಸ್ತೆಯ ಮೇಲೆ ಬಂಡೆ …

Read More »

ಡವರಿ ಹರ್ಯಾಶ್ಮೆಂಟ್ ಕೇಸ್ ವಿರುದ್ಧ ಡವ್ ಕೇಸ್ ಎಂದು ಕೌಂಟರ್ ಕೇಸ್…!!

ಬೆಳಗಾವಿ, ಡವರಿ ಕೇಸ್ ಗೆ ಟ್ವಿಸ್ಟ್ ಕೌಂಟರ್ ಕೇಸ್ ದಾಖಲು….!!! ಬೆಳಗಾವಿ – ಗಂಡ ಮೋಸ ಮಾಡಿದ್ದಾನೆ ವರದಕ್ಷಣೆ ಕಿರುಕಳ ಕೊಟ್ಟಿದ್ದಾನೆ, ಗಂಡನ ಮಾವ ಲೈಂಗಿಕ ಕಿರುಕಳ ಕೊಟ್ಟಿದ್ದಾನೆ, ಎಂದು ಆರೋಪಿಸಿದ ಮಹಿಳೆ ಆತ್ಮಹತ್ಯೆಗೆ ಯತ್ಮಿಸಿದ ಘಟನೆ ದೊಡ್ಡ ಸುದ್ಧಿಯಾಗಿತ್ತು ಆದ್ರೆ ಇದಕ್ಕೆ ಪ್ರತಿಯಾಗಿ ಗಂಡನ ಕುಟುಂಬಸ್ಥರು ಮಹಿಳೆ ಅನ್ಯ ಯುವಕರ ಜೊತೆ ಮೋಜು ಮಾಡಿರುವ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವದರ ಜೊತೆಗೆ ಮಹಿಳೆಯ ವಿರುದ್ದ ಪ್ರತಿದೂರು ದಾಖಲಿಸಿದ್ದಾರೆ. …

Read More »

ರಜೆ ಇದ್ರೂ ಸಹ, ನದಿ ಪಾತ್ರಗಳ ಪರಿಸ್ಥಿತಿ ಪರಶೀಲಿಸಿದ ಜಿಲ್ಲಾಧಿಕಾರಿ…

ನದಿಪಾತ್ರಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ: ಪ್ರವಾಹ ನಿರ್ವಹಣೆ ಸಿದ್ಧತೆ ಪರಿಶೀಲನೆ ಬೆಳಗಾವಿ,-  ಪಕ್ಕದ  ಮಹಾ ನಿನ್ನೆಯ ದಿನ ಮೊಹರಂ ಹಬ್ಬದ ಸರ್ಕಾರಿ ರಜೆ ಇದ್ದರೂ ಸಹ ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರು ಜಿಲ್ಲೆಯ ನದಿಗಳ ಒಳ ಹರಿವು ಹಾಗೂ ಪ್ರವಾಹ ಪರಿಸ್ಥಿತಿ ಎದುರಿಸಲು ಮಾಡಿರುವ ಸಿದ್ಧತೆಗಳನ್ನು ಪರಶೀಲಿಸಿದರು   ರಾಷ್ಟ್ರ ಹಾಗೂ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ವಿವಿಧೆಡೆ ಭೇಟಿ ನೀಡಿ ಘಟಪ್ರಭಾ, ಕೃಷ್ಣಾ …

Read More »