Breaking News

LOCAL NEWS

ಬೆಳಗಾವಿ ಫುಲ್ ರಿಲ್ಯಾಕ್ಸ್… ಪಾಸಿಟೀವ್ ಇಲ್ಲವೇ ಇಲ್ಲ. ಕರುಣೆ ತೋರಿದ ಸೋಮವಾರ……!!!!

ಬೆಳಗಾವಿ- ಸೋಮವಾರ ಬಸವಣ್ಣನ ವಾರ ಬಸವಾದೀಶ ಬೆಳಗಾವಿ ಪಾಲಿಗೆ ಕರುಣೆ ತೋರಿದ್ದು, ಸೋಮವಾರ ಸಂಜೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಇಲ್ಲವೇ ಇಲ್ಲ ಸೋಮವಾರ ಬೆಳಗಿನ ಬುಲಿಟೀನ್ ಬೆಳಗಾವಿ ಪಾಲಿಗೆ ಸಿಹಿ ಸುದ್ಧಿ ನೀಡಿತ್ತು ಸಂಜೆ ಬುಲಿಟೀನ್ ಕೂಡ ಬೆಳಗಾವಿ ಜನತೆಗೆ ಫುಲ್ ರಿಲ್ಯಾಪ್ಸ್ ನೀಡಿದೆ. ಯಾವುದೇ ಪಾಸಿಟೀವ್ ಕೇಸ್ ಬಂದಿಲ್ಲ ಅಂತ ನಿಶ್ಕಾಳಜಿ ಬೇಡ,ಕೊರೋನಾ ಸರಪಳಿ ಕಳಚುವವರೆಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿ …

Read More »

ಬೆಳಗಾವಿಗೆ ಗುಡ್ ನ್ಯುಸ್ ಇವತ್ತೂ ಯಾವದೇ ಪಾಸಿಟೀವ್ ಪ್ರಕರಣ ಇಲ್ಲ

  ಬೆಳಗಾವಿ – ಕಳೆದ ಎರಡು ದಿನಗಳಿಂದ ಬೆಳಗಾವಿ ನಿರಾಳವಾಗುತ್ತಿದೆ, ಪೋಲೀಸರ ಬಿಗಿ ಲಾಕ್ ಡೌನ್,ಜಿಲ್ಲಾಡಳಿತದ ಕ್ವಾರಂಟೈನ್ ಕಾರ್ಯಚರಣೆಯ ಪರಿಣಾಮವಾಗಿ ಬೆಳಗಾವಿಗೆ ಬಿಗ್ ರಿಲೀಫ್ ಸಿಗುತ್ತಿದೆ . ಇಂದು ಬೆಳಗಿನ ಹೆಲ್ತ ಬುಲಿಟೀನ್ ಬಿಡುಗಡೆಯಾಗಿದ್ದು ಕಲಬುರಗಿಯ ಐದು ಪಾಸಿಟೀವ್ ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿದ್ದು ಭಾನುವಾರ,ಸೋಮವಾರ ಬೆಳಗಾವಿ ಪಾಲಿಗೆ ಕೊಂಚ ನೆಮ್ಮದಿ ನೀಡಿವೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸರಪಳಿ ಕಳಚಿ ಬೀಳುವತ್ತ ಸಾಗಿದೆ. ಬೆಳಗಾವಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

Read More »

ಬೆಳಗಾವಿಯಲ್ಲಿ ಸೇವೆ ಮಾಡಿದ ರಾಜ್ಯಮಟ್ಟದ ಮಹಿಳಾ ಕಬ್ಬಡ್ಡಿ ಖಿಲಾಡಿ ಇನ್ನಿಲ್ಲ

ಬೆಳಗಾವಿ – ನಗರದ ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ಎರಡು ವರ್ಷಗಳ ಕಾಲ ಮಹಿಳಾ ಪೋಲೀಸ್ ಪೇದೆಯಾಗಿ ಕರ್ತವ್ಯ ನಿಭಾಯಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಬ್ಬಡ್ಡಿ ಆಟಗಾರ್ತಿ ಯಾಗಿದ್ದ ಕುಮಾರಿ ಗೌರಿ ಜೀವಾಜಿಗೋಳ (28) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ರಾಗಿದ್ದಾರೆ. ಗೌರಿ ಜೋವಾಜಿಗೋಳ ಮೂಲತಹ ವಿಜಯಪೂರದ ಬಬಲೇಶ್ವರ ಗ್ರಾಮದವರು.ಸ್ಪೋರ್ಟ್ಸ್ ಕೋಟಾದಲ್ಲಿ ಮಹಿಳಾ ಪೋಲೀಸ್ ಪೇದೆಯಾಗಿ ಬೆಳಗಾವಿಯ ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು …

Read More »

ಎರಡು ಲಾರಿಗಳ ಡಿಕ್ಕಿ, ನಂತರ ಪಲ್ಟೀ,,ಕ್ಲೀನರ್ ಸಾವು,ಇಬ್ಬರು ಚಾಲಕರಿಗೆ ಗಾಯ

ಬೆಳಗಾವಿ- ಮಹಾರಾಷ್ಟ್ರದಿಂದ ತಮಿಳುನಾಡಿಗೆ ಸಕ್ಕರೆ ತುಂಬಿಕೊಂಡು ಎರಡು ಲಾರಿಗಳು ಡಿಕ್ಕಿಯಾಗಿ,ನಂತರ ಪಲ್ಟೀಯಾಗಿ ತಮಿಳುನಾಡು ಮೂಲದ 42 ವರ್ಷದ ಕ್ಲೀನರ್ ಮೃತಪಟ್ಟ ಘಟನೆ ಹಿರೇಬಾಗೇವಾಡಿ ಸಮೀಪದ ಬಡೇಕೊಳ್ಳ ಮಠದ ಬಳಿ ನಡೆದಿದೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು ಪಲ್ಟಿಯಾದ ಎರಡೂ ಲಾರಿಗಳು ಹೋಗುತ್ತಿರುವಾಗ ಹಿಂದಿನ ಲಾರಿ ಮುಂದಿನ ಲಾರಿಗೆ ಡಿಕ್ಕಿ ಹೊಡೆದಿದೆ ,ಹಿಂದಿನ ಲಾರಿಯ ಕ್ಲೀನರ್ ಮೃತಪಟ್ಟಿದ್ದು ಎರಡೂ ಲಾರಿಗಳ ಚಾಲಕರು ಗಾಯಗೊಂಡಿದ್ದಾರೆ. ಎರಡೂ ಲಾರಿಗಳು ಒಂದೇ ಟ್ರಾನ್ಸಪೋರ್ಟ್ …

Read More »

ಮಾಸ್ಕ,ಹಾಕಿಸಿ,ತರಕಾರಿ ಮುಟ್ಟಿಸಿ,ಕೊರೋನಾ ಓಡಿಸಲು ಕಠಿಣ ಕ್ರಮ ಜರುಗಿಸಿ….!!!

ಬೆಳಗಾವಿ: ಕೊರೋನಾ ವೈರಾಣು ಸೋಂಕು ಪ್ರಕರಣ ಪತ್ತೆಯಾಗಿರುವ ಪ್ರದೇಶಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ನಿಷೇಧಿತ ವಲಯದಲ್ಲಿ ಕೆಲ ಜನರು ಮಾಸ್ಕ್ ಧರಿಸದೇ ಓಡಾಡುತ್ತಿದ್ದು, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ದಕ್ಷಿಣಶಾಸಕ ಅಭಯ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಗಾವಿ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಭಾನುವಾರ ಕೊರೋನಾ ವೈರಾಣು ಸೋಂಕಿನ ತಡೆಯುವಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು, ಔಷದಿ ಅಂಗಡಿ ಹಾಗೂ ಕಿರಾಣಿ ಅಂಗಡಿ ವ್ಯಾಪರಸ್ಥರ ಜೊತೆಗೆ …

Read More »

ರುಚಿ ನೋಡಿದ್ರು…..ಖರೀಧಿ ಮಾಡಿದ್ರು.,..ಉಚಿತವಾಗಿ ಹಂಚ್ರಿ ಅಂದ್ರು ಸಾಹುಕಾರ್….!!!!

  ಬೆಳಗಾವಿ – ಬೆಳಗಾವಿ ಜಿಲ್ಲೆಯ ಯಮಕನಮರಡಿ ಯಲ್ಲಿ ಅರ್ಥಪೂರ್ಣವಾದ ಸೇವೆ ಆಂದೋಲನದ ರೂಪದಲ್ಲಿ ನಡೆಯುತ್ತಿದೆ.ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗ ಜನಸೇವೆಯಲ್ಲಿ ತೊಡಗಿಸಿಕೊಂಡಿದೆ. ಲಾಕ್ ಡೌನ್ ನಿಂದಾಗಿ ರೈತರು ಬೆಳೆದ ಫಸಲು ಹೊದಲ್ಲೇ ಕೊಳೆಯುವ ಪರಿಸ್ಥಿತಿ ಎದುರಾಗಿದೆ ,ಅನ್ನದಾತನ ಸಂಕಷ್ಟವನ್ನು ಅರ್ಥ ಮಾಡಿಕೊಂಡ ಸತೀಶ್ ಅಭಿಮಾನಿಗಳು ಊರೂರು ಸುತ್ತಾಡಿ ಯಾವ ಗದ್ದೆಯಲ್ಲಿ ಏನು ಬೆಳೆದಿದೆ ಅಂತಾ ಮಾಹಿತಿ ಪಡೆದು ತಕ್ಷಣ ಸತೀಶ್ ಸಾಹುಕಾರ್ ಗೆ ಮಾಹಿತಿ ತಿಳಿಸಿ ತೋಟದಲ್ಲಿ ಬೆಳೆದು …

Read More »

ಮುಸ್ಲೀಂ ಮುಖಂಡರ ಜತೆ ಕೇಂದ್ರ ಸಚಿವರ ಸಭೆ

ಬೆಳಗಾವಿ, ಕೋವಿಡ್- ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಜತೆ ಸಹಕರಿಸಬೇಕು ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರಿಗೆ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಮನವಿ ಮಾಡಿಕೊಂಡರು. ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ(ಏ.೧೯) ನಡೆದ ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ತಬ್ಲಿಘಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದವರು ಹಾಗೂ ಅವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲಿ …

Read More »

ಸಂಡೇ ಮಾರ್ನಿಂಗ್ ಬೆಳಗಾವಿಗೆ ಬಿಗ್ ರಿಲೀಫ್…..!!!

ಬೆಳಗಾವಿ- ದಿನಬೆಳಗಾದ್ರೆ ಎದೆಯಲ್ಲಿ ಢವ ಢವ…ಹೆಲ್ತ ಬುಲಿಟೀನ್ ನಲ್ಲಿ ಇವತ್ತೆಷ್ಟು ಪಾಸಿಟೀವ್ ಪ್ರಕರಣಗಳು ಬರುತ್ತವೆಯೋ ಎನ್ನುವ ಆತಂಕ ಆದ್ರೆ ಇಂದು ಸಂಡೇ ಬೆಳಗಾವಿ ಪಾಲಿಗೆ ಸ್ವಲ್ಪ ರಿಲೀಫ್ ಯಾಕಂದ್ರೆ ಬೆಳಗಾವಿಯ ಯಾವುದೇ ಹೊಸ ಪ್ರಕರಣಗಳು ಇಂದು ಬೆಳಕಿಗೆ ಬಂದಿಲ್ಲ. ರಾಜ್ಯದಲ್ಲಿ ಮೈಸೂರು ಜಿಲ್ಲೆಯ ನಾಲ್ಕು ಪಾಸಿಟೀವ್ ಪ್ರಕರಣಗಳು ಮಾತ್ರ ಬುಲಿಟಿನ್ ನಲ್ಲಿವೆ. ಬೆಳಗಾವಿಯಲ್ಲಿ ನಿನ್ನೆಯಷ್ಟೆ ಬೆಳಗುಂದಿಯ ಪಾಸಿಟೀವ್ ಪ್ರಕರಣವನ್ನು ಬೆಳಗಾವಿಯ ನಮ್ಮ ಹೆಮ್ಮೆಯ ವೈದರು ನೆಗೆಟೀವ್ ಮಾಡುವಲ್ಲಿ ಯಶಸ್ವಿಯಾಗಿ ಬೆಳಗಾವಿ …

Read More »

ಬೆಳಗಾವಿಯಲ್ಲಿ ಔಷಧಿ ಅಂಗಡಿಗೆ ಬೆಂಕಿ,ಲಕ್ಷಾಂತರ ರೂ ಹಾನಿ

ಬೆಳಗಾವಿ- ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ಧಾಣದ ಎದರಿನಲ್ಲಿರುವ ಔಷಧಿ ಅಂಗಡಿಗೆ ಆಕಸ್ಮಿಕ ವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆಯ ಔಷಧಿಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ನಿನ್ನೆ ಮದ್ಯರಾತ್ರಿ ಶ್ರೀರಾಮ ಮೆಡಿಕಲ್ಸ ಎಂಬ ಔಷಧಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದಾಗ ಅಗ್ನಿ ಶಾಮಕ ದಳ ಬೆಂಕಿಯನ್ನು ನಿಯಂತ್ರಿಸುವಷ್ಟರಲ್ಲಿ ಔಷಧಿಗಳು ಬೆಂಕಿಗಾಹುತಿ ಯಾಗಿವೆ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರೆದಿದೆ.

Read More »

ಗಲ್ಲಿ… ಗಲ್ಲಿ..ಸುತ್ತಾಡುತ್ತಿರುವ ಕಿರಣ,ಹಳ್ಳಿ ಹಳ್ಳಿ ಅಲೆದಾಡುತ್ತಿರುವ ಅಶೋಕ…..!!!!

ಗಲ್ಲಿ… ಗಲ್ಲಿ..ಸುತ್ತಾಡುತ್ತಿರುವ ಕಿರಣ,ಹಳ್ಳಿ ಹಳ್ಳಿ ಅಲೆದಾಡುತ್ತಿರುವ ಅಶೋಕ…..!!!! ಬೆಳಗಾವಿ- ಲಾಕ್ ಡೌನ್ ಸಂಧರ್ಭದಲ್ಲಿ ಅನೇಕ ಜನ ಯಾವುದೇ ಪ್ರಚಾರದ ಗಿಲ್ಲದೇ ಬಡವರ,ಅಸಹಾಯಕರ ನೆರವಿಗೆ ನಿಂತಿದ್ದಾರೆ.ಕನ್ನಡ ಕ್ರಿಯಾ ಸಮೀತಿಯ ಅಧ್ಯಕ್ಷ ಅಶೋಕ ಚಂದರಗಿ ದಿನನಿತ್ಯ ನಗರದ ಅಕ್ಕ ಪಕ್ಕದಲ್ಲಿರುವ ಹಳ್ಳಿಗಳಿಗೆ ದಿನನಿತ್ಯ ಸುತ್ತಾಡಿ ಆಹಾರ ಸಾಮುಗ್ರಿಗಳು ಯಾರಿಗೆ ಮುಟ್ಟಿಲ್ಲವೋ ಅಂತವರನ್ನು ಹುಡುಕಿ ಹುಡುಕಿ ಆಹಾರ ಸಾಮುಗ್ರಿಗಳ ಕಿಟ್ ಹಂಚುತ್ತಿದ್ದಾರೆ ಬಿಜೆಪಿಯ ಯುವ ನಾಯಕ ಕಿರಣ ಜಾಧವ ಅವರು ಬೆಳಗಾವಿ ನಗರದ ವಿವಿಧ …

Read More »

ಚಪ್ಪಾಳೆ ತಟ್ಟಿ ಬೀಳ್ಕೊಟ್ಟ ವೈದ್ಯರು

ಕೋವಿಡ್-೧೯ ಸೋಂಕಿತ ವ್ಯಕ್ತಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆಳಗಾವಿ, ಏ.೧೮(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಬೆಳಗುಂದಿ ಗ್ರಾಮದ ೭೦ ವರ್ಷದ ವ್ಯಕ್ತಿ(ಪಿ-೧೨೬)ಯನ್ನು ಶನಿವಾರ (ಏ.೧೮) ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿದೆ. …

Read More »

ಬೆಳಗುಂದಿಯ ಕೊರೋನಾ ಪಾಸಿಟೀವ್ ಈಗ ನೆಗೆಟೀವ್

ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ದಿನಾಂಕ ೧೮-೪-೨೦೨೦ ರಂದು ನಡೆಸಿದ ಪತ್ರಿಕಾಗೋಷ್ಠಿ ಪ್ರಮುಖಾಂಶಗಳು.. * ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣದ ವ್ಯಕ್ತಿ ಗುಣಮುಖರಾಗಿದ್ದು, ಇದೀಗ ಮರು ಪರೀಕ್ಷೆ ವರದಿ ನೆಗೆಟಿವ್ ಬಂದಿರುತ್ತದೆ. * ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣ ಪಿ-೧೨೬ ಈಗ ಗುಣಮುಖರಾಗಿದ್ದು, ಮರು ಪರೀಕ್ಷೆ ಬಳಿಕವೂ ವರದಿ ನೆಗೆಟಿವ್ ಬಂದಿರುತ್ತದೆ. * ಹಿರೇಬಾಗೇವಾಡಿ ಹಾಗೂ ಕುಡಚಿಯಲ್ಲಿ …

Read More »

ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಗಣಾಚಾರಿ ಪಾರ್ಥಿವ ಶರೀರಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರಿಂದ ಅಂತಿಮ ನಮನ

ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಗಣಾಚಾರಿ ಪಾರ್ಥಿವ ಶರೀರಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರಿಂದ ಅಂತಿಮ ನಮನ ಬೆಳಗಾವಿ, ಕೊರೋನಾ ಸೊಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯ ಪಿ‌ಎಸ್ಐ ಮನೋಹರ ಗಣಾಚಾರಿ ಅವರ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಶ್ರದ್ಧಾಂಜಲಿ …

Read More »

ಹಿರೇಬಾಗೇವಾಡಿಯ ಮತ್ತೋರ್ವನ ರಿಪೋರ್ಟ ಪಾಸಿಟೀವ್ 42 ಕ್ಕೇರಿದ ಸೊಂಕಿತರ ಸಂಖ್ಯೆ…..

ಹಿರೇಬಾಗೇವಾಡಿಯ ಮತ್ತೋರ್ವನ ರಿಪೋರ್ಟ ಪಾಸಿಟೀವ್ 42 ಕ್ಕೇರಿದ ಸೊಂಕಿತರ ಸಂಖ್ಯೆ….. ಬೆಳಗಾವಿ – ಇಂದು ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಹಿರೇಬಾಗೇವಾಡಿಯ ಮತ್ತೋರ್ವ ಸೊಂಕಿತನಿಗೆ ಕೊರೋನಾ ಪಾಸಿಟೀವ್ ಇರುವದು ದೃಡವಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 42 ಕ್ಕೇರಿದೆ

Read More »

ಲಾಕ್ ಡೌನ್ ಸಂಕಟ..ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ರಸ್ತೆಯಲ್ಲೇ ಹೆರಿಗೆ….

ಬೆಳಗಾವಿ- ಬೆಳಗಾವಿಯ ಶಹಾಪೂರ ಪ್ರದೇಶದ ಮಾಹಿ ಆಸ್ಪತ್ರೆ ಬಳಿ ಮಹಿಳೆಯಬ್ಬಳ ರಸ್ತೆಯಲ್ಲೇ ಹೆರಿಗೆ ಆದ ಘಟನೆ ನಡೆದಿದೆ. ಮಹಿಳೆಯನ್ನು ಹೆರಿಗೆಗಾಗಿ ಮಕ್ಕಳ ಆಸ್ಪತ್ರೆಗೆ ತರಲಾಗಿತ್ತು ಆದರೆ ಈ ಆಸ್ಪತ್ರೆ ಬಂದ್ ಆಗಿತ್ತು ಅದಕ್ಕೆ ಈ ಮಹಿಳೆಯನ್ನು ಬೇರೆ ಆಸ್ಪತ್ರೆಗೆ ವಾಪಸ್ ಕರೆದುಕೊಂಡು ಹೋಗುವ ಸಂಧರ್ಭದಲ್ಲಿ ಮಹಿಳೆಯ ಹೆರಿಗೆ ರಸ್ತೆಯಲ್ಲೇ ಆಗಿದೆ . ವಡಗಾವಿ ಮೂಲದ ಈ ಮಹಿಳೆಯನ್ನು ಲಾಕ್ ಡೌನ್ ಸಂಧರ್ಭದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವ ಹಿನ್ನಲೆಯಲ್ಲಿ …

Read More »
Sahifa Theme License is not validated, Go to the theme options page to validate the license, You need a single license for each domain name.