Breaking News

LOCAL NEWS

ಸರ್ಕಾರಕ್ಕೆ ಮಾಹಿತಿ ನೀಡದೇ ಕಾರ್ಖಾನೆ ಬಂದ್ ಮಾಡುವಂತಿಲ್ಲ.

ಬೆಳಗಾವಿ,m-ಜಿಲ್ಲೆಯಲ್ಲಿ ೧೭ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಹಣವನ್ನು ಪಾವತಿ ಮಾಡಿದ್ದು, ಒಟ್ಟಾರೆ ಶೇ. ೯೬ರಷ್ಟು ಬಿಲ್ ಮೊತ್ತವನ್ನು ರೈತರಿಗೆ ನೀಡಲಾಗಿದೆ. ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿರುವ ರೈತರ ಕಬ್ಬಿನ ಹಣವನ್ನು ೧೫ ದಿನಗಳಲ್ಲಿ ರೈತರಿಗೆ ಪಾವತಿಸಬೇಕು ಎಂದು ಸಕ್ಕರೆ ಮತ್ತು ಕಾರ್ಮಿಕ ಇಲಾಖೆಯ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ಸೂಚಿಸಿದರು. ಸಕ್ಕರೆ ಮತ್ತು ಕಾರ್ಮಿಕ ಇಲಾಖೆಗೆ ಸಂಬಂದಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜೂ.೨೨) ನಡೆದ ಪ್ರಗತಿ ಪರಿಶೀಲನಾ …

Read More »

ಕೊಳಚೆ ಸಂಸ್ಕರಣ ಘಟಕ ನಿರ್ಮಾಣಕ್ಕೆ ಮುಗಿಯದ ಕಿತ್ತಾಟ….!

ಬೆಳಗಾವಿಯ – ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು, ಬಿಗಿ ಪೋಲೀಸ್ ಭದ್ರತೆಯಲ್ಲಿ ಕೊಳಚೆ ಸಂಸ್ಕರಣ ಘಟಕ ಕಾಮಗಾರಿ ಆರಂಭಿಸಿದ್ದಾರೆ. ಹಲಗಾ ಗ್ರಾಮದಲ್ಲಿ ಇಂದು ಬೆಳಿಗ್ಗೆ ಕಾಮಗಾರಿ ಆರಂಭವಾಗುತ್ತಿದ್ದಂತೆಯೇ,ರೈತರು ಅದಕ್ಕೆ ತೀವ್ರ ಪ್ರತಿರೋಧ ವ್ಯೆಕ್ತ ಪಡಿಸಿದ ಘಟನೆಯೂ ನಡೆಯಿತು. 50 ಕ್ಕೂ ಹೆಚ್ಚು ರೈತರು ಕಾಮಗಾರಿಗೆ ವಿರೋಧ ವ್ಯೆಕ್ತಪಡಿಸಿದಾಗ,ರೈತ ಮುಖಂಡರು ಹಾಗೂ ಪಾಲಿಕೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು‌. ನಾವು ನಮ್ಮ ಜಮೀನಿನಲ್ಲಿ ಮುಂಗಾರು ಬಿತ್ತನೆ ಮಾಡಿದ್ದೇವೆ.ಇಂತಹ ಸಂಧರ್ಭದಲ್ಲಿ ಕಾಮಗಾರಿ …

Read More »

ಬೆಳಗಾವಿಯಲ್ಲಿ ಬಿರ್ಯಾನಿ….ಗೋಕಾಕಿನಲ್ಲಿ ಓನ್ಲೀ ಸ್ನ್ಯಾಕ್ಸ್…..!!

ಬೆಳಗಾವಿ- ಇಂದು ರಾಹುಗ್ರಸ್ತ ಸೂರ್ಯಗ್ರಹಣ ಹಾಗಾಗಿ ಬೆಳಗಾವಿಯ ಜನ,ಗ್ರಹಣ ಬಿಡುವವರೆಗೆ ಮನೆಬಿಟ್ಟು ಹೊರಗೆ ಬರಲೇ ಇಲ್ಲ, ಆದ್ರೆ ಕೆಲವರು ಗ್ರಹಣ ಹಿಡಿದಾಗಲೇ ಬಾಡೂಟ ಮಾಡಿದ್ರು, ಗೋಕಾಕಿನಲ್ಲಿ ಉಪಹಾರ ಸೇವನೆ ಮಾಡಿದ್ರು,ಬೆಳಗಾವಿಯ ವಿವಿಧ ಮಂದಿರಗಳಲ್ಲಿ ವಿಶೇಷ ಪೂಜೆಗಳೂ ನಡೆದವು. ಬೆಳಗಾವಿಯ ದಕ್ಷಿಣಕಾಶಿ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ನಡೆಯಿತು. ಗ್ರಹಣ ಆರಂಭಕ್ಕೂ ಮುನ್ನ ಶಿವಲಿಂಗ ಶುಚಿಗೊಳಿಸಿ ವಿಶೇಷ ಪೂಜೆ ಮಾಡಲಾಯಿತು. ದೇವಸ್ಥಾನ ಆವರಣದಲ್ಲಿರುವ ಎಲ್ಲ ಮೂರ್ತಿಗಳನ್ನು ಶುಚಿಗೊಳಿಸಿ ಬಟ್ಟೆ ಸುತ್ತಿದರು, ಶಿವಲಿಂಗಕ್ಕೆ ಅಭಿಷೇಕ …

Read More »

ಗ್ರಾಮ ಪಂಚಾಯತಿ ಯಲ್ಲಿ ಭ್ರಷ್ಟಾಚಾರ, ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳಗಾವಿ- ಬೆಳಗಾವಿ ತಾಲ್ಲೂಕಿನ ಬಾಳೆಕುಂದ್ರಿ ಖುರ್ದ ಗ್ರಾಮ ಪಂಚಾಯತಿ ಯಲ್ಲಿ ಭ್ರಷ್ಟಾಚಾರ ನಡೆದಿದೆ,ಎಂದು ಆರೋಪಿಸಿ ಮಾರಿಹಾಳ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 2018 ರಲ್ಲಿ ಬಾಳೆಕುಂದ್ರಿ ಖುರ್ದ ಗ್ರಾಮ ಪಂಚಾಯತಿ ಯಲ್ಲಿ ಸಿಸಿಟಿವ್ಹಿ ಕ್ಯಾಮರಾ ಮತ್ರು ಇತರ ಸಾಮುಗ್ರಿಗಳ ಖರೀಧಿಯಲ್ಲಿ,ಬ್ರಷ್ಟಾಚಾರ ನಡೆದಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ , ಬೆಳಗಾವಿ ತಾಲ್ಲೂಕಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಾಳೆಕುಂದ್ರಿ ಗ್ರಾಮ ಪಂಚಾಯತಿ ಅದ್ಯಕ್ಷ ಮತ್ತು ಪಿಡಿಓ ( PDO ) …

Read More »

ಇಬ್ಬರು ರೌಡಿಗಳನ್ನು ಅರೆಸ್ಟ್ ಮಾಡಿದ ಖಡೇಬಝಾರ್ ಪೋಲೀಸರು

ಬೆಳಗಾವಿ-ಬಿಲ್ಡರ್ ಗಳಿಗೆ,ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಫೋನ್ ಮಾಡಿ, ಬೇಡಿದಷ್ಟು ಹಣ ಕೊಡದಿದ್ದರೆ ಖಲ್ಲಾಸ್ ಮಾಡುತ್ತೇವೆ,ಎಂದು ಬೆದರಿಸುತ್ತಿದ್ದ,ಇಬ್ಬರು ರೌಡಿಗಳನ್ನು ಬೆಳಗಾವಿಯ ಖಡೇಬಝಾರ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೋಲೀಸ್ ಠಾಣೆ ಸೇರಿದಂತೆ ನಗರದ ಹಲವಾರು ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದ ಇಬ್ಬರು ರೌಡಿಗಳು ಫೋನ್ ಮುಖಾಂತರವೇ ಹಣವಂತರನ್ನು ಬೆದರಿಸುತ್ತ,ತಲೆಮರೆಸಿಕೊಂಡಿದ್ದರು. ಖಡೇಬಝಾರ್ ಪೋಲೀಸರು ಹಿರಿಯ ಪೋಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಲೆ ಬೀಸಿ ಇಬ್ಬರು ಆರೋಪಿಗಳನ್ನು ಬಂಧಿಸಿ,ಒಂದು ಕಾರು,ಮಾರಕಾಸ್ತ್ರಗಳು,ಮತ್ತು ಒಂದು …

Read More »

ಬೆಳಗಾವಿ ಜಿಲ್ಲೆಯ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗೂ ಸೊಂಕು ದೃಡ

ಬೆಳಗಾವಿ- ಸರ್ಕಾರ SSLC ಪರೀಕ್ಷೆಯ ದಿನಾಂಕ ನಿಗದಿಪಡಿಸಿ,ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡ ಬೆನ್ನಲ್ಲಿಯೇ ಕಿತ್ತೂರು ತಾಲ್ಲೂಕಿನ,ಕಿತ್ತೂರು ಪಟ್ಟಣದ ಸಮೀಪದಲ್ಲೇ ಇರುವ ಗ್ರಾಮವೊಂದರಲ್ಲಿ ಅತ್ಯಂಕ ಕಳವಳಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗೆ ಸೊಂಕು ಇರುವದು ದೃಡವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೆ ಕೊರೊನಾ ಸೋಂಕು ಇರುವದು ದೃಡವಾಗಿರುವದರಿಂದ ಈ ವಿದ್ಯಾರ್ಥಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು …

Read More »

SSLC ಪರೀಕ್ಷೆ ಬರೆಯಲು ಚೆನ್ನೈ ಯಿಂದ ಮರಳಿದ, ಬಾಲಕನ ಮೇಲೆ ನಿಗಾ…!!

ಬೆಳಗಾವಿ- ಸರ್ಕಾರ SSLC ಪರೀಕ್ಷೆಯ ದಿನಾಂಕ ನಿಗದಿಪಡಿಸಿ,ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡ ಬೆನ್ನಲ್ಲಿಯೇ ಕಿತ್ತೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಅತ್ಯಂಕ ಕಳವಳಕಾರಿ ಸಂಗತಿಯೊಂದು ಇಂದು ಬೆಳಿಗ್ಗೆ ಹೊರಬಿದ್ದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೆ ಕೊರೊನಾ ಸೋಂಕು ಇರುವ ಶಂಕೆಯಿಂದ ಈ ವಿದ್ಯಾರ್ಥಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಗ್ರಾವೊಂದರ ಬಾಲಕನನ್ನು ಇಂದು ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ …

Read More »

ಅಗ್ನಿ ಶಾಮಕ ದಳದಲ್ಲಿ 1567 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಜೂನ್ 20 ( ಕರ್ನಾಟಕ ವಾರ್ತೆ ) :ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ವಿವಿಧ ವೃಂದಗಳ ಅಗ್ನಿಶಾಮಕ ಸಿಬ್ಬಂದಿಯ 1567 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಗ್ನಿಶಾಮಕ ಠಾಣಾಧಿಕಾರಿಗಳ 36 ಹುದ್ದೆಗಳು, ಅಗ್ನಿಶಾಮಕ ಚಾಲಕರ 227 ಹುದ್ದೆಗಳು, ಚಾಲಕ ತಂತ್ರಜ್ಞರ 82 ಹುದ್ದೆಗಳು ಹಾಗೂ ಅಗ್ನಿಶಾಮಕರ 1222 ಹುದ್ದೆಗಳಿಗೆ ಈ ನೇಮಕಾತಿ ಒಳಗೊಂಡಿದೆ. ಅಂತರ್ಜಾಲ ತಾಣ www.ksp.gov.in ಲಾಗ್‍ಇನ್ ಆಗಿ …

Read More »

ಸಂಗೊಳ್ಳಿ ರಾಯಣ್ಣ ಸೊಸೈಟಿ ಆಸ್ತಿ ಹರಾಜಿಗೆ,ಪ್ರಕ್ರಿಯೆ ಆರಂಭ

ಬೆಳಗಾವಿ- ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಗೆ ಸೇರಿದ 110 ಆಸ್ತಿಗಳು,16 ಜನರ ಹೆಸರಿನಲ್ಲಿದ್ದು,ಈ ಆಸ್ತಿಗಳ ಹರಾಜಿಗೆ ಅನುಮತಿ ಕೋರಿ,ಬೆಳಗಾವಿ ಉಪವಿಭಾಗಾಧಿಕಾರಿಗಳು ಕೋರ್ಟ್ ಮೊರೆಹೋಗಿದ್ದಾರೆ. ಜಿಲ್ಲಾ ನ್ಯಾಯಾಲಯದಲ್ಲಿ ಈ ಕುರಿತು,ಪ್ರಕರಣ ದಾಖಲಾಗಿದ್ದು,ಸೊಸೈಟಿ ಆಸ್ತಿ ಹೊಂದಿದದವರ 16 ಜನರಿಗೆ ನೋಟೀಸ್ ಜಾರಿಯಾಗಿದೆ. ಸೊಸೈಟಿಯ ಒಟ್ಟು110 ಆಸ್ತಿಗಳು ಹದಿನಾರು ಜನರ ಹೆಸರಿನಲ್ಲಿವೆ, ಕೋಟ್ಯಾಂತರ ರೂ ಬೆಲೆಬಾಳುವ ಈ ಆಸ್ತಿಗಳ ಉತಾರದಲ್ಲಿ ಈಗಾಗಲೇ ಸರ್ಕಾರದ ಆಸ್ತಿ ಎಂದು ನಮೂದಿಸಲಾಗಿದೆ.ನ್ಯಾಯಾಲಯದ ಅನುಮತಿ ಪಡೆದು,ಕ್ರಮಬದ್ಧವಾಗಿ ಈ ಆಸ್ತಿಗಳನ್ನು …

Read More »

ನೇಕಾರರಿಗೂ ಶೂನ್ಯ ಬಡ್ಡಿ ದರದಲ್ಲಿ,ಸಾಲ ಕೊಡಿ

ಬೆಳಗಾವಿ-ಲಾಕ್ ಡೌನ್ ನಿಂದಾಗಿ ನೇಕಾರರು ತೀರಾ ಸಂಕಷ್ಟ ಎದುರಿಸುತ್ತಿದ್ದು,ನೇಕಾರರ ಉದ್ಯಮ ಕುಸಿದು ಬಿದ್ದಿದೆ ,ಸರ್ಕಾರ ಕೂಡಲೇ,ನೇಕಾರರಿಗೆ ವಿಶೇಷ ಪ್ಯಾಕೆಜ್ ಘೋಷಿಸಬೇಕು,ನೇಕಾರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂದು, ನೇಕಾರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ,ಪತ್ರಿಕಾಗೋಷ್ಠಿ ನಡೆಸಿದ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನೇಕಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು,ಆದ್ರೆ ಈ ಪ್ಯಾಕೇಜ್ ನೇಕಾರರ ಕೈ ತಲುಪುವ ಮುನ್ನವೇ ರಾಜ್ಯದಲ್ಲಿ ಕೊರೋನಾ ಹಾವಳಿ ಎದುರಾದ ಕಾರಣ ಈ …

Read More »

ಸುವರ್ಣ ಸೌಧದಲ್ಲಿ ಮಾಹಿತಿ ಆಯೋಗದ ಬೆಳಗಾವಿ ಪೀಠ ಕಾರ್ಯಾರಂಭ

ಬೆಳಗಾವಿ,- ವಿವಿಧ ಇಲಾಖೆಗಳ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂಬ ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆ ಮತ್ತು ಸರ್ಕಾರದ ಆಶಯದಂತೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠವು ಕಾರ್ಯಾರಂಭಿಸಿದೆ. ಈ ಕುರಿತು ಶುಕ್ರವಾರ (ಜೂ.19) ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಗೀತಾ ಬಿ.ವಿ. ಅವರು, ಆಯೋಗದ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ ಜೂ.22 ರಿಂದ ಆರಂಭಗೊಳ್ಳಲಿದೆ ಎಂದು ಪ್ರಕಟಿಸಿದರು. ಆಯೋಗದ …

Read More »

ಹಿರೇಬಾಗೇವಾಡಿ ಟೋಲ್ ಬಳಿ, ವಾಟಾಳ್ ಪೋಲೀಸರ ವಶಕ್ಕೆ

ಬೆಳಗಾವಿ- SSLC ಪರೀಕ್ಷೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಲು,ಬೆಳಗಾವಿಗೆ ಬರುತ್ತಿದ್ದ, ವಾಟಾಳ್ ನಾಗರಾಜ್ ಅವರನ್ನು ಹಿರೇಬಾಗೇವಾಡಿ ಟೀಲ್ ಬಳಿ ತಡೆದ ಪೋಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಧರಣಿಗೆ ಮುಂದಾಗಿದ್ದ ವಾಟಾಳ್ ನಾಗರಾಜ್ ಅವರು ಕಾರಿನಲ್ಲಿ ಬರುವಾಗ,ಹಿರೇಬಾಗೇವಾಡಿ ಟೋಲ್‌ಗೇಟ್ ಬಳಿಯೇ ವಾಟಾಳ್ ನಾಗರಾಜ್‌ ಅವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಸುವರ್ಣ ಸೌಧದ ಮುಂಭಾಗದಲ್ಲಿ ಧರಣಿಗೆ ಅವಕಾಶ ನಿರಾಕರಣೆ ಮಾಡಿದ ಪೋಲೀಸರು ವಾಟಾಳ್ ಅವರನ್ನು ಠಾಣೆಗೆ ಕರೆದುಕೊಂಡು …

Read More »

ರಮೇಶ್ ಸಾಹುಕಾರ್,ಲಖನ್ ಸಾಹುಕಾರ್, ಸಾಥ್ ಸಾಥ್ ಹೈ..‌‌‌‌‌‌‌….!

ಬೆಂಗಳೂರು- ಬೆಂಗಳೂರಿನ ಸದಾಶಿವ ನಗರದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆಯಿತು. ಲಖನ್ ಜಾರಕಿಹೊಳಿ,ಶಾಸಕರಾದ ಅಭಯ ಪಾಟೀಲ,ಮಹಾಂತೇಶ ಕವಟಗಿಮಠ,ಅನೀಲ ಬೆನಕೆ,ರಮೇಶ್ ಕತ್ತಿ ಸೇರಿದಂತೆ ಹಲವಾರು ಜನ ನಾಯಕರು ಬೆಂಗಳೂರಿನ ಸದಾಶಿವ ನಗರದ ಮನೆಗೆ ಭೇಟಿ ನೀಡಿ ಶುಭಕೋರಿದರು. ಲಖನ್ ಜಾರಕಿಹೊಳಿ,ಅವರು ಸಚಿವ ರಮೇಶ್ ಜಾರಕಿಹೊಳಿ ಅವರ ಮನೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.

Read More »

ಬಂತು..ಬಂತು ಬೆಳಗಾವಿಗೆ ಕಚೇರಿ ಬಂತು…..!

ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕರ್ನಾಟಕ ಮಾಹಿತಿ ಆಯೋಗ ಬೆಳಗಾವಿ ಪೀಠವು ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರ, 1 ನೇ ಮಹಡಿ ಕೊಠಡಿ ಸಂಖ್ಯೆ 141 ರಲ್ಲಿ ಕಾರ್ಯಾರಂಭಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು,ಈಗಾಗಲೇ ಹಲವಾರು ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದ್ದು,ಉತ್ತರ ಕರ್ನಾಟಕದ ಜನರಿಗೆ ಅನಕೂಲವಾಗುವ ಪ್ರಮುಖ ಕಚೇರಿಗಳು …

Read More »

15 ಜನರು ಕೊರೋನಾ ಸೊಂಕಿತರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ-, ಕೊರೋನಾ ಸೋಂಕು ತಗುಲಿದ್ದ ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ ಹಾಗೂ ಗೋಕಾಕ ತಾಲ್ಲೂಕಿನ ಒಟ್ಟು 15 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೆಳಗಾವಿ ತಾಲ್ಲೂಕಿನ 7, ಹುಕ್ಕೇರಿ ತಾಲ್ಲೂಕಿನ 4, ಚಿಕ್ಕೋಡಿ ತಾಲ್ಲೂಕಿನ 2, ಗೋಕಾಕ ತಾಲ್ಲೂಕಿನ 1 ಹಾಗೂ ಮಹಾರಾಷ್ಟ್ರದ ಚಂದಗಡ ತಾಲ್ಲೂಕಿನ ಒಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಬಿಡುಗಡೆ …

Read More »