Breaking News

LOCAL NEWS

ಕೊರೋನಾ ಬಂದ್ಮೇಲೆ ಬದಲಾಗಿದೆ ಬೆಳಗಾವಿ…..!!

ಬೆಳಗಾವಿ- ಕೊರೋನಾ ಬಂದ್ಮೇಲೆ ಬೆಳಗಾವಿ ಯಾವ ರೀತಿ ಬದಲಾಗಿದೆ ಎಂದು ನೋಡಬೇಕಾದ್ರೆ ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿರುವ ಮೆಜೆಸ್ಟೀಕ್ ಹೊಟೇಲ್ ಗೆ ಹೋಗಲೇಬೇಕು . ಕೊರೋನಾ ಬಂದ್ಮೇಲೆ ಎರಡು ತಿಂಗಳು ಬಂದ್ ಆಗಿದ್ದ ಬೆಳಗಾವಿ ನಗರದ ಹೊಟೇಲ್ ಗಳು ಒಂದೊಂದಾಗಿ ಬಾಗಿಲು ತೆರೆಯುತ್ತಿವೆ.ಇಂದು ಅಕಸ್ಮಾತ್ ಫೋರ್ಟ್ ರಸ್ತೆಗೆ ಹೋಗಿದ್ದೆ ಇಲ್ಲಿಯ ಮೆಜಸ್ಟೀಕ್ ಹೊಟೇಲ್ ಗೆ ಚಹಾ ಕುಡಿಯಲು ಹೊಟೇಲ್ ಪ್ರವೇಶಿಸಿದಾಗ ಅಲ್ಲಿಯ ವ್ಯೆವಸ್ಥೆ,ನೋಡಿ ಅಚ್ಚರಿ ಯಾಯಿತು ಟೇಬಲ್ ಗಳು ದೂರ..ದೂರ, ಇಡಲಾಗಿದೆ. …

Read More »

ಪರಿಣಾಮಶೂಲ ಚೂರ್ಣ…ನೋವು ಮಾಯ ಆಗುತ್ತೆ ಸಂಪೂರ್ಣ….!!

ಬೆಳಗಾವಿ- ಆಯುರ್ವೇದ ಕ್ಷೇತ್ರದಲ್ಲಿ ಬೆಳಗಾವಿ ಸದ್ದಿಲ್ಲದೇ ಕ್ರಾಂತಿ ಮಾಡುತ್ತಿದೆ. ಬೆಳಗಾವಿಯಲ್ಲಿ ಬೆನ್ನು,ನೋವು,ಸಂದಿವಾತ,ಹಿಮ್ಮಡಿ ನೋವು,ಮೊನಕಾಲು ನೋವು ಸೇರಿದಂತೆ ಎಲ್ಲ ರೀತಿಯ ಕೀಲು ನೋವುಗಳನ್ನು ನಿವಾರಿಸುವ ಪರಿಣಾಮಶೂಲ ಚೂರ್ಣ ಎಂಬ ಆಯುರ್ವೇದಿಕ್ ಔಷಧಿಯನ್ನು ಬೆಳಗಾವಿಯಲ್ಲಿ ತಯಾರಿಸಲಾಗುತ್ತಿದೆ. ತೆಂಗಿನಲ್ಲಿ ವಿವಿಧ ಗಿಡಮೂಲಿಕೆ ಗಳನ್ನು ಹಾಕಿ ನಂತರ ಈ ತೆಂಗನ್ನು ಬೆಂಕಿಯಲ್ಲಿ ಸುಟ್ಟು ಪರಿಣಾಮಶೂಲ ಎಂಬ ನೋವು ನಿವಾರಕ ಔಷಧಿಯನ್ನು ಬೆಳಗಾವಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಬೆಳಿಗ್ಗೆ ಮತ್ತು ರಾತ್ರಿ ಬಿಸಿ ನೀರಿನಲ್ಲಿ ಎರಡು ಚಮಚ ಬಿಸಿ ನೀರಿನಲ್ಲಿ …

Read More »

ಮುಂಬಯಿಂದ ಬೆಳಗಾವಿ ತಾಲ್ಲೂಕಿಗೆ ಮರಳಿದ್ದ, ವ್ಯೆಕ್ತಿಯ ಸಾವು……

ಬೆಳಗಾವಿ- ಮುಂಬೈಯಿಂದ ಬೆಳಗಾವಿ ತಾಲ್ಲೂಕಿನ ಕಟ್ಟನಬಾಂವಿ ಗ್ರಾಮಕ್ಕೆ ಮರಳಿ, ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದ 50 ವರ್ಷದ ವ್ಯೆಕ್ತಿಯೊಬ್ಬ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ,ಇಂದು ಬೆಳಿಗ್ಗೆ ಮೃತಪಟ್ಟ ಘಟನೆ ನಡೆದಿದೆ. ನಿನ್ನೆಯಷ್ಟೇ ಕಟ್ಟನಬಾಂವಿ ಗ್ರಾಮದಲ್ಲಿ ಐದು ಜನ ಸೊಂಕಿತರು ಪತ್ತೆಯಾಗಿದ್ದರು. ಇಂದು ಮೃತಪಟ್ಟ 50 ವರ್ಷದ ವ್ಯೆಕ್ತಿ ಸೊಂಕಿತನಲ್ಲ,ಆದರೆ ಈತ ಮುಂಬೈಯಿಂದ ಮರಳಿ ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದ ಜೂನ್ 4 ರಂದು ಎದೆ ನೋವು …

Read More »

ಜೂನ್ 30 ರವರೆಗೆ ಸವದತ್ತಿ ಯಲ್ಲಮ್ಮ,ಚಿಂಚಲಿ ಮಾಯಕ್ಕನ ದೇಗುಲ ಬಂದ್….

ಬೆಳಗಾವಿ- ಬೆಳಗಾವಿ,ಕರ್ನಾಟಕ,ಗೋವಾ ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿ,ಈ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಚೆಲ್ಲಾಟ ಮುಂದುವರೆದಿದ್ದು ಮಹಾರಾಷ್ಟ್ರದ ನಂಜು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜೂನ್ 8 ರಿಂದ ರಾಜ್ಯದ ,ಎಲ್ಲ ದೇಗುಲಗಳು,ಮಸೀದಿ ,ಚರ್ಚಗಳು ಓಪನ್ ಆಗುತ್ತಿವೆ. ಆದರೆ ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ದೇಗುಲಗಳಾದ ಸವದತ್ತಿ ಯಲ್ಲಮ್ಮ,ಚಿಂಚಲಿಯ ಮಾಯಕ್ಕ,ಚುಗಳಬಾವಿ ದೇವಸ್ಥಾನಗಳು ಜೂನ್ 30 ರವರೆಗೆ ಓಪನ್ ಆಗುವದಿಲ್ಲ‌‌. ಯಾಕಂದ್ರೆ ಈ ಮೂರು ಸುಪ್ರಸಿದ್ಧ ದೇಗುಲಗಳಿಗೆ ಪಕ್ಕದ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು …

Read More »

ಹೆಮ್ಮಾರಿಯ ಕಾಟ,ಶೀಲ್ ಡೌನ್ ಸಂಕಷ್ಟದಿಂದ ಹಿರೇಬಾಗೇವಾಡಿ ಮುಕ್ತ…ಮುಕ್ತ…!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಮೊದಲು ಎಂಟ್ರಿ ಮಾಡಿದ್ದು ಹಿರೇಬಾಗೇವಾಡಿ ಗ್ರಾಮದಲ್ಲಿ ಡೇ ಒನ್ ನಿಂದ ಇಂದಿನವರೆಗೆ ಈ ಗ್ರಾಮ ಅನೇಕ ಸಂಕಷ್ಟ,ಅಪಮಾನಗಳನ್ನು ಸಹಿಸಿ ನಿನ್ನೆ ರಾತ್ರಿ ಹೆಮ್ಮಾರಿ ಕೊರೋನಾ ಕಾಟದಿಂದ ಮುಕ್ತವಾಗಿದೆ. ಬೆಳಗಾವಿ ತಾಲ್ಲೂಕಿನ ಈ ಗ್ರಾಮವೊಂದರಲ್ಲೇ ಬರೊಬ್ಬರಿ 49 ಸೊಂಕಿತರು ಪತ್ತೆಯಾಗಿ ಎಲ್ಲರೂ ಗುಣಮುಖರಾಗಿದ್ದಾರೆ.ಹಲವಾರು ದಿನಗಳಿಂದ ತಲ್ಲಣಗೊಂಡಿದ್ದ ಈ ಗ್ರಾಮ ಇಂದಿನಿಂದ ನಿರಾಳವಾಗಿದೆ. ತಬ್ಲೀಗ್ ನಂಟಿನಿಂದ ಈ ಗ್ರಾಮಕ್ಕೆ ಹೆಮ್ಮಾರಿ ಕೊರೋನಾ ಕಾಲಿಟ್ಟಿತ್ತು,ಅದಾದ ಬಳಿಕ ಸೊಂಕು …

Read More »

ಬೆಳಗಾವಿಯಲ್ಲಿ ಮುಂಬಯಿ ವೈರಸ್ ದಾಳಿ, ಇಂದು ಮತ್ತೆ 36 ಸೊಂಕಿತರ ಪತ್ತೆ

ಬೆಳಗಾವಿ- ಬೆಳಗಾವಿಯಲ್ಲಿ ಮುಂಬಯಿ ನಂಜು ಏರುತ್ತಲೇ ಇದೆ‌ ಇಂದಿನ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 36 ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಪತ್ತೆಯಾದ ಸೊಂಕಿತರುಬಂಬರಗಾ,ವಂಟಮೂರಿ ಕೇದನೂರು. ಹೊನಗಾ ಗ್ರಾಮದವರು ಎಂದು ತಿಳಿದು ಬಂದಿದೆ. positive cases from the following Honaga Bambaraga Kedanur Vantmuri 36 positives on Belagavi District today

Read More »

ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ,ಕಿಟ್ ವಿತರಿಸಿದ ರಮೇಶ್ ಜಾರಕಿಹೊಳಿ

ಬೆಳಗಾವಿ- ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಶುಕ್ರವಾರ ದಿನಸಿ ಕಿಟ್ ಗಳನ್ನು ವಿತರಿಸಿದರು. ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ, ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಭೇಟಿ ನೀಡಿದ ರಮೇಶ್ ಜಾರಕಿಹೊಳಿ …

Read More »

ರಾಜ್ಯಸಭಾ ಟಿಕೆಟ್ ಕುರಿತು ನಮ್ಮ ಅಭಿಪ್ರಾಯ ಹೈಕಮಾಂಡ್ ಗೆ ತಿಳಿಸಿದ್ದೇವೆ- ರಮೇಶ್ ಜಾರಕಿಹೊಳಿ

ಬೆಳಗಾವಿ- ಉಮೇಶ್ ಕತ್ತಿ ಬಂಡಾಯ ಮಾಡಿಲ್ಲ ಶಾಸಕರಿಗೆ ಊಟ ಮಾಡಿಸಿದ್ದಾರೆ, ಲಾಕ್‌ಡೌನ್ ನಿಂದ ಹೋಟೆಲ್ ಬಂದ್ ಇದ್ದಾವೆ, ಹೀಗಾಗಿ ಉಮೇಶ್ ಕತ್ತಿ ನಿವಾಸದಲ್ಲಿ ಊಟಕ್ಕೆ ಶಾಸಕರು ಸೇರಿದ್ರು ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದುಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಪ್ರಥಮ ಬಾರಿಗೆ ಬೆಳಗಾವಿಗೆ ಆಗಮಿಸಿ ಜಿಪಂ ಸಭಾಂಗಣದಲ್ಲಿ ಸಭೆ ನಡೆಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, …

Read More »

ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪ್ರಥಮ ಸಭೆಯಲ್ಲಿ “ಮಹಾ” ಆತಂಕ

ಬೆಳಗಾವಿ- ದೆಹಲಿಯಿಂದ ತಬ್ಲಿಘಿಗಳು, ಅಜ್ಮೇರ್ ನಿಂದ ಜನರು ಹಿಂದಿರುಗಿದ ಬಳಿಕವೂ ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿತ್ತು. ಇದೀಗ ಮಹಾರಾಷ್ಟಗರದಿಂದ ಅತೀ ಹೆಚ್ಚು ಜನರು ಬರುತ್ತಿರುವುದರಿಂದ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿ ಸೂಚನೆ ನೀಡಿದ್ರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್-೧೯ ನಿಯಂತ್ರಣ ಹಾಗೂ ನೆರೆಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು …

Read More »

ಲಾಕ್ ಡೌನ್ ಸಂಕಷ್ಟ, ಬೆಳಗಾವಿಯ ನೇಕಾರ ಕೂಲಿ ಕಾರ್ಮಿಕನ ಆತ್ಮಹತ್ಯೆ

ಬೆಳಗಾವಿ- ಲಾಕ್‌ಡೌನ್‌ನಿಂದ ಉದ್ಯೋಗ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಂಕಷ್ಟೊಳಗಾದ ಬೆಳಗಾವಿಯ ನೇಕಾರ ಕೂಲಿಕಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ವಡಗಾವಿಯಲ್ಲಿ ನಡೆದಿದೆ. ಬೆಳಗಾವಿಯ ನೇಕಾರ ಕೂಲಿಕಾರ್ಮಿಕ ಸುಜಿತ್ ಉಪರಿ(38) ನೇಣಿಗೆ ಶರಣಾಗಿದ್ದಾನೆ. ಬೆಳಗಾವಿಯ ವಡಗಾವಿಯ ಲಕ್ಷ್ಮೀ ನಗರದಲ್ಲಿ ಘಟನೆ ನಡೆದಿದೆ. ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಾಕ್‌ಡೌನ್ ಹಿನ್ನೆಲೆ ಬೆಳಗಾವಿಯಲ್ಲಿ ವಿದ್ಯುತ್ ಮಗ್ಗಗಳು ಬಂದ್ ಆಗಿದ್ದವು. ಕೆಲಸ ಇಲ್ಲದೇ ಕೈಸಾಲ ಮಾಡಿದ್ದ ನೇಕಾರ ಕಾರ್ಮಿಕ ಸುಜಿತ್. ವಿದ್ಯುತ್ ಮಗ್ಗವಿದ್ದ ನೇಕಾರರ ಬಳಿ …

Read More »

ಒಂದ ವರ್ಷದಾಗ ಬೆಳಗಾವಿ ರೇಲ್ವೆ ಸ್ಟೇಶನ್ ಲಕ,ಲಕಾ ಅಂತ ಹೊಳಿತೈತಿ…..!!!

ನೂತನ ರೈಲುನಿಲ್ದಾಣ ಕಾಮಗಾರಿ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಸಚಿವ ಸುರೇಶ್ ಅಂಗಡಿ ಸೂಚನೆ ಬೆಳಗಾವಿ, ಜೂನ್ 4(ಕರ್ನಾಟಕ ವಾರ್ತೆ): ನಗರದ ನೂತನ ರೈಲುನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಗುರುವಾರ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಮಗಾರಿಯು ನವೆಂಬರ್ 2020 ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ಕಾಮಗಾರಿ ನಿಧಾನಗೊಂಡಿರುತ್ತದೆ ಎಂದು ತಿಳಿಸಿದರು. ಆದಾಗ್ಯೂ ಸ್ಥಳೀಯ …

Read More »

ಮುತ್ತಿಗೆ ಹಾಕಿದ ನೇಕಾರ ಕಾರ್ಮಿಕರಿಗೆ ಸುರೇಶ ಅಂಗಡಿ ಅವರಿಂದ ಗಿಫ್ಟ್…..!!

ಬೆಳಗಾವಿ- ಒಂದು ವಾರದ ಹಿಂದೆ ನೂರಾರು ಜನ ನೇಕಾರ ಕೂಲಿ ಕಾರ್ಮಿಕರು,ಏಕಾ ಏಕಿ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಕಚೇರಿಗೆ ಮುತ್ತಿಗೆ ಹಾಕಿ ಆಹಾರ ಸಾಮುಗ್ರಿಗಳ ಕಿಟ್ ಕೊಡುವಂತೆ ಒತ್ತಾಯಿಸಿದ್ದರು. ಸುರೇಶ್ ಅಂಗಡಿ ಅವರು ಆಹಾರ ಸಾಮುಗ್ರಿಗಳ ಕಿಟ್ ಕೊಡುತ್ತಿದ್ದಾರೆ ಎಂಬ ಸುಳ್ಳು ವದಂತಿ ಹರಡಿಸಿದ ಹಿನ್ನಲೆಯಲ್ಲಿ ನೂರಾರು ಜನ ಕಾರ್ಮಿಕರು,ಕಾಡಾ ಕಚೇರಿಯಲ್ಲಿನ ಸುರೇಶ ಅಂಗಡಿಯವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಆಹಾರದ ಕಿಟ್ ವಿತರಿಸುವಂತೆ ಒತ್ತಾಯ ಮಾಡಿದ್ದರು. ಇದಕ್ಕೆ …

Read More »

ಗಡಿನಾಡ ಗುಡಿಯಲ್ಲಿ ಬಾಷಾ ಬಾಂಧವ್ಯದ ಬೆಸುಗೆ…….!!!

ಬೆಳಗಾವಿ-ರಾಜ್ಯ ಸರ್ಕಾರದ ಇಚ್ಛಾಶಕ್ತಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ವಿಶೇಷ ಪ್ರಯತ್ನದ ಫಲವಾಗಿ ಗಡಿನಾಡ ಗುಡಿಯಲ್ಲಿ ಭಾಷಾ ಬಾಂಧವ್ಯ ಬೆಳೆಸುವ ಮಹತ್ವದ ಕಾರ್ಯ ನಡೆದಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಗ್ರಾಮದಲ್ಲಿರುವ ಗುಡ್ಡದ ಮೇಲಿನ ಕೋಟೆಯನ್ನು ಅಭಿವೃದ್ಧಿ ಪಡಿಸಿ ಈ ಕೋಟೆಯ ಮುಂಬಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಪ್ರತಿಮೆ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 3.5 ಕೋಟಿ ರೂಗಳನ್ನು ಮಂಜೂರು ಮಾಡಿದ್ದು 50 …

Read More »

ರಾಜ್ಯಹೆಲ್ತ್ ಬುಲೀಟೀನ್ ನಲ್ಲಿ ಶೂನ್ಯ ಲೋಕಲ್ ಬುಲಿಟೀನ್ ನಲ್ಲಿ 12 ಜನ ಸೊಂಕಿತರು ಮಾನ್ಯ……..!

ಬೆಳಗಾವಿ-ಇಂದು ಬುಧವಾರದ ರಾಜ್ಯ ಹೆಲ್ತ್ ಬುಲೀಟಿನ್ ಬಿಡುಗಡೆ ಆಗಿದೆ ಈ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಸೊಂಕಿತರ ಸಂಖ್ಯೆ ಶೂನ್ಯ ಆದ್ರೆ ಜೊತೆಗೆ ಬೆಳಗಾವಿ ಜಿಲ್ಲಾ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಈ ಬುಲಿಟೀನ್ ನಲ್ಲಿ 12 ಸೊಂಕಿತರ ಸಂಖ್ಯೆ ಹೆಚ್ಚಾಗಿದೆ. ಬೆಳಗಾವಿ ಜಿಲ್ಲಾ ಹೆಲ್ತ್‌ ಬುಲಿಟೀನ್ ನಲ್ಲಿ ನಿನ್ನೆ ಸೊಂಕಿತರ ಸಂಖ್ಯೆ 204 ಇತ್ತು ಇಂದು ಬಿಡುಗಡೆಯಾದ ಬುಲೆಟಿನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 216 ಇದೆ ಅಂದ್ರೆ …

Read More »

ನಿನ್ನೆ ಮಂಗಳವಾರ ಬೆಳಗಾವಿಯಲ್ಲಿ ಪತ್ತೆಯಾದ 51ಜನ ಸೊಂಕಿತರು ಯಾವ,ಯಾವ ಗ್ರಾಮದವರು ಗೊತ್ತಾ..?

ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆಯ ದಿನ ಮಂಗಳವಾರ ಪತ್ತೆಯಾದ 51 ಜನ ಸೊಂಕಿತರು ಯಾವ ಗ್ರಾಮದವರು ಮಾಹಿತಿ ಇಲ್ಲಿದೆ ನೋಡಿ. ಬೆಳಗಾವಿ ತಾಲ್ಲೂಕು Belagavi Taluka: Attiwad – 11 Balekundri HK – 1 Balekundri BK – 1 Mutaga -2 Sambra -1 Savagaon -1 Sulaga – 2 Uchagaon – 3 Hukkeri Taluka Daddi -12 Kot -3 Modaga – 2 …

Read More »