LOCAL NEWS

ಪಾತಾಳಕ್ಕಿಳಿದ ಕ್ಯಾಬೀಜ್ ಬೆಲೆ…. ಬೀದಿಗೆ ಬಂದ ರೈತ…..!!!!

ಪಾತಾಳಕ್ಕಿಳಿದ ಕ್ಯಾಬೀಜ್ ಬೆಲೆ ಬೀದಿಗೆ ಬಂದ ರೈತ…..!!!! ಬೆಳಗಾವಿ- ಬೆಳಗಾವಿಯ ತರಕಾರಿ ಮಾರ್ಕೆಟ್ ನಲ್ಲಿ ಕ್ಯಾಬೀಜ್ ಬೆಲೆ ಕೆಜಿ ಗೆ 50 ಪೈಸೆ ಇಷ್ಟು ದರದಲ್ಲಿ ಕ್ಯಾಬೀಜ್ ಬೆಳೆದ ರೈತನಿಗೆ ಕ್ಯಾಬೀಜ್ ಕಟಾವ್ ಮಾಡಿದ ಕೂಲಿಯೂ ಸಿಗೋದಿಲ್ಲ ,ಕ್ಯಾಬೀಜ್ ಬೆಲೆ ಪಾತಾಳಕ್ಕೆ ತಲುಪಿರುವ ಕಾರಣ ಕ್ಯಾಬೀಜ್ ಬೆಳೆದ ರೈತ ಬೀದಿಗೆ ಬಂದಿದ್ದಾನೆ ಬೆಳಗಾವಿ ಸಮೀಪದ ಕಡೋಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕ್ಯಾಬೀಜ್ ಬೆಳೆಯಲಾಗುತ್ತಿದೆ.ಅದರ ಬೆಲೆ ಏಕಾ ಏಕಿ ಕುಸಿದಿರುವದರಿಂದ ಹೈರಾಣಾಗಿರುವ …

Read More »

ಮಹಾದಾಯಿ ಕಾನೂನು ತೊಡಕು ನಿವಾರಣೆ ನಂತರ ಕಾಮಗಾರಿ-ರಮೇಶ್ ಜಾರಕಿಹೊಳಿ

ಬೆಳಗಾವಿ-ಮಹಾದಾಯಿ ನದಿ ನೀರಿನ ಹಂಚಿಕೆ ಕುರಿತು ಸರ್ವೋಚ್ಛ ನ್ಯಾಯಾಲಯದ ಐತೀರ್ಪಿನ್ವಯ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಪೂರ್ಣಪ್ರಮಾಣದಲ್ಲಿ ಕಾನೂನು ತೊಡಕು ನಿವಾರಣೆಯ ನಂತರ ಕಳಸಾ ಬಂಡೂರಿ ನಾಲಾ ಯೋಜನೆಯ ಅನುಷ್ಟಾನವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ನೀರಾವರಿ ಖಾತೆ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಅಂತಿಮ ತೀರ್ಪು ಬರುವ ಜುಲೈ ತಿಂಗಳಿನಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ನಾಡಿದ್ದು …

Read More »

ಜಿಲ್ಲೆಯ 12 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ

ಬೆಳಗಾವಿ,ಬೇಸಿಗೆ ಆರಂಭಗೊಂಡಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಅಧಿಕಾರಿಗಳು ಈಗಿನಿಂದಲೇ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ‌.ಎಲ್.ಅತೀಕ್ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಫೆ.29) ನಡೆದ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ 12 ಗ್ರಾಮ ಪಂಚಾಯತಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡುಬಂದಿದ್ದು, ಮಾರ್ಚವರೆಗೆ ಇನ್ನೂ ಹೆಚ್ಚಿನ ಸಂಖ್ಯೆಯ …

Read More »

ಬಿಜೆಪಿ ಸಿಂಬಾಲ್,ಎಂಈಎಸ್ ಕಂಗಾಲ್,ಕಾಂಗ್ರೆಸ್ಸಿಗೆ ಸವಾಲ್…!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಗ್ರಹಣ ಹಿಡಿದಿದೆ‌.ಚುನಾವಣೆ ಯಾವಾಗ ನಡೆಯುತ್ತದೆ ಅನ್ನೋದು ಗೊತ್ತಿಲ್ಲ.ಆದ್ರೆ ಚುನಾವಣೆಯ ಕಾವು ಆರಂಭವಾಗಿರುವುದು ಸತ್ಯ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸಿಂಬಾಲ್ ಮೇಲೆ ಚುನಾವಣೆ ಎದುರಿಸಲು ನಿರ್ಧರಿಸಿದೆ .ಬಿಜೆಪಿಯ ಈ ನಿರ್ಧಾರ ಮಹಾರಾಷ್ಟ್ರ ಏಕೀಕರಣ ಸಮೀತಿಗೆ ನಡುಕ ಹುಟ್ಟಿಸಿದೆ.ಕಾಂಗ್ರೆಸ್ ಚಿಂತೆಗೆ ಬಿದ್ದಿದೆ ,ಜೆಡಿಎಸ್ ಬಂಡಾಯ ನಾಯಕರಿಗೆ ಬಲೆ ಹಾಕಲು ಚಿಂತನೆ ಮಾಡುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಷ್ಟು ದಿನ ಭಾಷಾ ಆಧಾರದ ಮೇಲೆ ಚುನಾವಣೆ ನಡೆಯುತ್ತಿತ್ತು.ಕನ್ನಡ …

Read More »

ಮಲ್ಲಮ್ಮನ‌ ಬದುಕು ನಮಗೆ ಆದರ್ಶವಾಗಲಿ: ಸಚಿವೆ ಶಶಿಕಲಾ ಜೊಲ್ಲೆ

  ಬೆಳಗಾವಿ :ರಾಜ್ಯ ಮತ್ತು ಪ್ರಜೆಗಳಿಗೆ ಸಂಕಟ ಬಂದಾಗ ಕೈಗೆ ಖಡ್ಗ ತೆಗೆದುಕೊಂಡು ಕೆಚ್ಚೆದೆಯ ಹೋರಾಟ ಮಾಡಿದ ವೀರವನಿತೆಯರ ಬದುಕು ನಾವು ಮಾದರಿಯಾಗಿಟ್ಟುಕೊಳ್ಳಬೇಕು. ಇಂತಹ ವೀರ ಮಹಿಳೆಯರ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ‌ ಜೊಲ್ಲೆ ಕರೆ ನೀಡಿದರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಬೆಳವಡಿ ಮಲ್ಲಮ್ಮ …

Read More »

ಮಹಾದಾಯಿ ವಿಚಾರದಲ್ಲಿ ಸದ್ಯಕ್ಕೆ ಸಂಬ್ರಮ ಬೇಡ- ರಮೇಶ್ ಜಾರಕಿಹೊಳಿ

ಬೆಳಗಾವಿ- ಕೇಂದ್ರ ಸರ್ಕಾರ ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸಿದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಜಲಸಂಪನ್ಮೂಲ ಸಚಿವರನ್ನು ಸ್ವಾಗತಿಸಲು ಬೆಳಗಾವಿಯ ರಾಣಿ ಚನ್ಬಮ್ಮ ಏರ್ಪೋರ್ಟಿನಲ್ಲಿ ನೂರಾರು ರೈತರು ಆಗಮಿಸಿದ್ದರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದ್ರು, ಬೆಳಗಾವಿ ಏರ್‌ಪೋರ್ಟ್ ಎದುರು ರಮೇಶ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ. ಕನ್ನಡಪರ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರಿಂದ ಕ್ಷೀರಾಭಿಷೇಕ.ಆಡಲಾಯಿತು. ವಿಮಾನ ನಿಲ್ದಾಣದಲ್ಲಿ ರೈತರಿಂದ ಸಚಿವರಿಗೆ ಅಭಿನಂದನೆ ಸಲ್ಲಿಸಲಾಯಿತು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ …

Read More »

ಮಲಪ್ರಬಾ ನದಿ ನೀರಿನ ಬಳಕೆ ಕುರಿತು ವಿವಾದ ಸಲ್ಲದು- ಜಗದೀಶ್ ಶೆಟ್ಟರ್

ಬೆಳಗಾವಿ- ಮಲಪ್ರಭಾ ನದಿಯಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಸುತ್ತಮುತ್ತಲಿನ ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಡಿಪಿಆರ್ ರೆಡಿಯಾಗುತ್ತಿದೆ ಈ ಯೋಜನೆಯ ಕುರಿತು ನಮ್ಮ ನಮ್ಮಲ್ಲಿಯೇ ಜಗಳಾಡುವದು ಸರಿಯಲ್ಲ ಕುಡಿಯುವ ನೀರು ಎಲ್ಲರಿಗೂ ಬೇಕು ಆತಂತರಿಕ ಕಚ್ಚಾಟ ಬೇಡ ಎಂದು ಬೃಹತ್ತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೋರಾಟಗಾರರಿಗೆ ಕಿವಿಮಾತು ಹೇಳಿದರು. ಬೆಳಗಾವಿಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮಲಪ್ರಭಾ …

Read More »

ಬೆಳಗಾವಿ ಜಿಲ್ಲೆಗೂ ಒಂದು ಸಾವಿರ ಕೋಟಿ ಬಂಡವಾಳ- ಜಗದೀಶ್ ಶೆಟ್ಟರ್

ಬೆಳಗಾವಿ-ಬೆಳಗಾವಿಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ 162ಕಂಪನಿಗಳು ಭಾಗವಹಿಸಿವೆ 9,500 ಉದ್ಯೋಗವಕಾಶವಿದ್ದು ಹದಿನಾರು ಸಾವಿರಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಭಾಗವಹಿಸಿದ್ದು ಯುವ ಬಂಧುಗಳು ಕಂಪನಿಗಳು ನಡೆಸುವ ಸಂದರ್ಶನಗಳನ್ನು ಎದುರಿಸಿ ಉದ್ಯೋಗಾವಕಾಶಗಳನ್ನು ಪಡೆಯಬೇಕೆಂದು ಬೃಹತ್ತ್ ಕೈಗಾರಿಕಾ,ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಶುಭ ಹಾರೈಸಿದರು ಬೆಳಗಾವಿಯಲ್ಲಿ ಬೆಳಗಾವಿ,ಧಾರವಾಡ ವಿಭಾಗದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು ಕೈಗಾರಿಕೆಗಳು ಬೆಳೆದರೆ ಹೆಚ್ಚಿನ ಉದ್ಯೋಗವಾಕಾಶ ಸಿಗಲು ಸಾಧ್ಯ ಇದಕ್ಕೂ ಮೊದಲು ಕೈಗಾರಿಕೆಗಳು ಬೆಂಗಳೂರಿಗೆ ಸೀಮೀತವಾಗಿದ್ದವು,ಅನೇಕ …

Read More »

ಹಿಂಡಲಗಾ ಜೈಲಿನಲ್ಲಿ ಕಾಶ್ಮೀರಿ ವಿಧ್ಯಾರ್ಥಿಗಳನ್ನು ಭೇಟಿಯಾದ ಬೆಂಗಳೂರಿನ ಮೂವರು ವಕೀಲರು

ಬೆಳಗಾವಿ : ಹುಬ್ಬಳ್ಳಿ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೂವರು ವಕೀಲರು ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಗ್ರಹಕ್ಕೆ ಮೂವರು ನ್ಯಾಯವಾದಿಗಳು ಭೇಟಿ ನೀಡಿದ್ದಾರೆ.‌ ಬೆಳ್ಳೆಂಬೆಳ್ಳಗ್ಗೆ ವಕೀಲರ ತಂಡ ಆರೋಪಿಗಳನ್ನು ಭೇಟಿ ಮಾಡಿ, ವಕಾಲತ್ತು ಅರ್ಜಿಗೆ ಸಹಿ ಹಾಕಿಸಿಕೊಳ್ಳುವ ಪ್ರಕ್ರಿಯೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಿಂದ ಆಗಮಿಸಿದ ಮೂವರು ವಕೀಲರು ತಂಡ ಆರೋಪಿಗಳ ಬಳಿ …

Read More »

ದೆಹಲಿಯಲ್ಲೇ ಠಿಖಾನಿ ಹೂಡಿ ಮಹಾದಾಯಿ ಗೆಜೆಟ್ ಹೊರಡಿಸುವಲ್ಲಿ ಯಶಸ್ವಿಯಾದ ಜಾರಕಿಹೊಳಿ ಸಾಹುಕಾರ್….!!!

ಬೆಳಗಾವಿ- ರಮೇಶ್ ಜಾರಕಿಹೊಳಿ ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಮಹಾದಾಯಿ ಕುರಿತು ಕರ್ನಾಟಕಕ್ಕೆ ಮಹಾ ಗೆಲುವು ಸಿಕ್ಕಿದೆ ದೆಹಲಿಯಲ್ಲಿ ಗೋವಾ ಸರ್ಕಾರ ಮಹಾದಾಯಿ ಗೆಜೆಟ್ ಪ್ರಕಟಿಸಿದಂತೆ ಕೇಂದ್ರ ಸರ್ಕಾರದ ಮುಂದೆ ತಿಪ್ಪರಲಾಗ ಹಾಕಿದ್ರೂ ಇದನ್ನು ಲೆಕ್ಕಿಸದ ಕೇಂದ್ರ ಸರ್ಕಾರ ನಿನ್ನೆ ರಾತ್ರಿ ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸಿ ಮಹಾಯಿಯ ನೀರು ಬಳಿಸಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ಅನುಮತಿ ಸಿಕ್ಕಿದೆ. ರಮೇಶ್ ಜಾರಕಿಹೊಳಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮಾನ್ಯ …

Read More »

ಹಾಲಿನಲ್ಲಿ ವಿಷ..,ಹುಷಾರ್……..!!!!

ಬೆಳಗಾವಿ- ಹಾಲಿಗೆ ಪಾಮ್ ಆಯಿಲ್ ಮಾನವನ ಜೀವಕ್ಕೆ ಅತ್ಯಂತ ಅಪಾಯಕಾರಿ ಆಗಿರುವ ರಾಸಾಯನ ಬೆರೆಸಿ ಹಾಲು ಮಾರುವ ದಂಧೆಗೆ ಅಥಣಿ ಪೋಲೀಸರು ಬ್ರೇಕ್ ಹಾಕಿದ್ದಾರೆ. ಅಥಣಿಯಲ್ಲಿ ಸರಣಿ ಕಾರ್ಯಾಚರಣೆ ನಡೆಸಿರುವ ಪೋಲೀಸರು ಇಂದು ಅಥಣಿ ಠಾಣೆಯ ವ್ಯಾಪ್ತಿಯಲ್ಲಿರುವ ಅರಳಿಹಟ್ಟಿ ಗ್ರಾಮದ ಹದ್ದಿಯಲ್ಲಿರುವಜಾಧವ ತೋಟದ ಮೇಲೆ ದಾಳಿ ಮಾಡಿ ಹಾಲಿಗೆ ಮಿಕ್ಸ ಮಾಡಲು ತರಲಾಗಿದ್ದ ಪಾಮ್ ಆಯಿಲ್‌ ಡಬ್ಬಿಗಳನ್ನು ವಿಷಕಾರಿ ರಾಸಾಯನಗಳಾದ maybi,lactose,lactiz,ಪೌಡರಿನ ಚೀಲಗಳನ್ನು ,ಮೂರು ಮಿಕ್ಸರ್ ಗಳು ಸೇರಿದಂತೆ ಇತರ …

Read More »

ನೌಕರಿ ಬೇಕಾ.‌..ನೌಕರಿ ….ಹಾಗಾದ್ರೆ ಹೊಡಿ ಒಂಬತ್ತ್ ಸರ್ಟಿಪಿಕೇಟ್ ತಗೊಂಡ ಬೆಳಗಾವಿ ಗಾಡಿ ಹತ್ತ್….!!!!!!

ಪ್ರಾದೇಶಿಕ ಉದ್ಯೋಗ ಮೇಳ: ಸಿದ್ಧತೆ ಪೂರ್ಣ ————————————————————— ಹನ್ನೆರಡು ಸಾವಿರ ಅಭ್ಯರ್ಥಿಗಳ ನೋಂದಣಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ನಿರುದ್ಯೋಗಿ ಯುವಕ-ಯುವತಿಯರಿಗೆ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಾವಕಾಶ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಪ್ರಾದೇಶಿಕ ಉದ್ಯೋಗ ಮೇಳ ೨೦೨೦ ಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮೇಳದ ಯಶಸ್ವಿಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ನಿರುದ್ಯೋಗಿಗಳಿಗಾಗಿ ಬೆಳಗಾವಿಯ ಶಿವಬಸವ ನಗರದ ಎಸ್. ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬೃಹತ್ ಪ್ರಾದೇಶಿಕ ಉದ್ಯೋಗ …

Read More »

ಕೇಳಿದ್ದು ಅಭಿಪ್ರಾಯ, ಹೇಳಿಕೊಂಡಿದ್ದು ಸಮಸ್ಯೆ ,ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಮಸ್ಯೆಗಳ ಗೆಜೆಟ್.,..!!!

ಬೆಳಗಾವಿ ಈಗ ಸ್ಮಾರ್ಟ್ ಸಿಟಿ,ಹೀಗಾಗಿ ಈ ವರ್ಷ ಸ್ಮಾರ್ಟ್ ಬಜೆಟ್ ಮಂಡಿಸುವದು ಪಾಲಿಕೆ ಆಡಳಿತಾಧಿಕಾರಿ ಆಗಿರುವ ಡಿಸಿ ಬೊಮ್ಮನಹಳ್ಳಿ ಅವರ ಸಂಕಲ್ಪವಾಗಿದ್ದು,ಇಂದು ಬಜೆಟ್ ಕುರಿತು ಬುದ್ದಿಜೀವಿಗಳ,ಸಂಘ ಸಂಸ್ಥೆಗಳ ಅಭಿಪ್ರಾಯ ಆಲಿಸಿದರು. ಇಂದು ಬೆಳಗಾವಿ ಪಾಲಿಕೆ ಕಚೇರಿಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಬುದ್ದಿ ಜೀವಿಗಳು,ಚಿಂತಕರು,ಸಂಘ ಸಂಸ್ಥೆಗಳ ಪ್ರತಿನಿಧಿ ಗಳು,ಮಾಜಿ ಮಹಾಪೌರರು,.ಮಾಜಿ ನಗರಸೇವಕರು ಭಾಗವಹಿಸಿದ್ದರು. ಸಭೆಯಲ್ಲಿ ಒಬ್ಬೊಬ್ಬರಾಗಿ ನಗರದಲ್ಲಿರುವ ಸಮಸ್ಯೆಗಳನ್ನು ಹೇಳಿಕೊಂಡರು,ಆರಂಭದಲ್ಲಿ ಉದ್ಯಮಿಗಳು ಮಾತನಾಡಿ ನಗರದ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ,ಸರಿಯಾದ …

Read More »

ನಾಟಕ ಮಾಡಿ, ಕನ್ನಡ ಮತ್ತು ಮರಾಠಿ ಶಾಲೆಯನ್ನು ಹೈಟೆಕ್ ಮಾಡ್ತಾರಂತೆ

ಬೆಳಗಾವಿ- ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಬೆಳಗಾವಿ ನಗರದಲ್ಲಿ ಅಪಾರ ಜನ ಮೆಚ್ವುಗೆ ಗಳಿಸಿರುವ ಬೆಳಗಾವಿಯ ರೋಟರಿ ನಾರ್ಥ ವಿಂಗ್ ನವರು ನಗರದಲ್ಲಿ ಭಾಷಾ ಸೌಹಾರ್ದತೆ ಕಾಪಾಡಲು ವಿನೂತನವಾದ ಸಾಮಾಜಿಕ ಕಾರ್ಯ ಮಾಡಲು ಯೋಜನೆ ರೂಪಿಸಿದ್ದಾರೆ. ಇಂದು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೋಟರಿ ಕ್ಲಬ್ ಪದಾಧಿಕಾರಿಗಳು ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಒಂದು ಕನ್ನಡ,ಒಂದು ಮರಾಠಿ ಶಾಲೆಯನ್ನು ದತ್ತು ಪಡೆದು ಎರಡೂ ಶಾಲೆಗಳಲ್ಲಿ ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಇಂಗ್ಲಿಷ್ …

Read More »

ಬೆಳಗಾವಿ ಉದ್ಯೋಗ ಮೇಳಕ್ಕೆ 200 ಕಂಪನಿಗಳು, 10 ಸಾವಿರ ಉದ್ಯೋಗದಾತರು ಬರುವ ನಿರೀಕ್ಷೆ- ಡಿಸಿ

ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸುವ ಮಹತ್ತರ ಉದ್ದೇಶದಿಂದ ಎರಡು ದಿನಗಳ ಬೃಹತ್ಪ್ರಾದೇಶಿಕ ಉದ್ಯೋಗ ಮೇಳವನ್ನು ಬೆಳಗಾವಿ ನಗರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿಯ ಶಿವಬಸವ ನಗರದಲ್ಲಿರುವ ಎಸ್.ಜಿ. ಬಾಳೇಕುಂದ್ರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಕಾಲೇಜ್ ಆವರಣದಲ್ಲಿ ಫೆ.28 ಶುಕ್ರವಾರ ಹಾಗೂ 29 ಶನಿವಾರ ಉದ್ಯೋಗ ಮೇಳ ನಡೆಯಲಿದೆ. ಬೆಳಗಾವಿ, …

Read More »