Breaking News

LOCAL NEWS

ಮೀನು ಹಿಡಿಯಲು ಹೋದ ತಂದೆ, ಇಬ್ಬರು ಮಕ್ಕಳು ನೀರು ಪಾಲು

  ಬೆಳಗಾವಿ-ಮೀನು ಹಿಡಿಯಲು ಹೋದ ತಂದೆ ಹಾಗೂ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ,ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಘಟಪ್ರಭಾ ನದಿಯಲ್ಲಿ ನಡೆದಿದೆ. ಬೆನಕನಹೊಳಿ ಗ್ರಾಮದ ಲಕ್ಷ್ಮಣರಾಮ ಅಂಬಲಿ (49) ರಮೇಶ್ ಅಂಬಲಿ (14),ಯಲ್ಲಪ್ಪ ಅಂಬಲಿ (12) ಘಟಪ್ರಭಾ ನದಿಯಲ್ಲಿ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.ಭಾನುವಾರ ಸಂಜೆ ನದಿಯಲ್ಲಿ ಬಲೆ ಹಾಕುವ ವೇಳೆ ಅವಘಡ ಸಂಭವಿಸಿದೆ.ಮೂವರಿಗೂ ಎಸ್‌ಡಿಆರ್‌ಎಫ್ ತಂಡದಿಂದ ಶೋಧಕಾರ್ಯ ನಡೆಯುತ್ತಿದೆ.ಸ್ಥಳಕ್ಕೆ ಯಕಮನಮರಡಿ ಠಾಣೆ ಪೊಲೀಸರ …

Read More »

ಚಳಿಗಾಲದ ಅಧಿವೇಶನದ ದಿನಾಂಕ ನಿಗದಿಪಡಿಸಿ

ಬೆಳಗಾವಿ-ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಈ ಭಾಗದ ಅಭಿವೃದ್ಧಿಗೆ ದಿಕ್ಸೂಚಿಯಾಗಿರುವ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ ಮೊದಲನೆಯ ವಾರದಿಂದ ಅಧಿವೇಶನ ಆರಂಭವಾಗಲಿದೆ ಎಂದು ವಿಧಾನಸಭಾಧ್ಯಕ್ಷರು ಮುನ್ಸೂಚನೆ ನೀಡಿದ್ದು ಸರ್ಕಾರ ಕೂಡಲೇ ಬೆಳಗಾವಿ ಅಧಿವೇಶನದ ದಿನಾಂಕ ನಿಗದಿಪಡಿಸಬೇಕೆಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ದಿನಾಂಕವನ್ನು ಇತ್ತೀಚಿಕೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ನಿರ್ಧಾರ ಮಾಡಬೇಕಿತ್ತು, ಆದ್ರೆ ಸುವರ್ಣಸೌಧದ ಬದಲಾಗಿ ಬೆಂಗಳೂರಿನಲ್ಲೇ ಅಧಿವೇಶನ ನಡೆಸುವ …

Read More »

ಬೆಳಗಾವಿಯ KLE ಆಸ್ಪತ್ರೆಯಲ್ಲಿ, ರೊಬೋಟಿಕ ಮೂಲಕ ಶಸ್ತ್ರಚಿಕಿತ್ಸೆ

ಕೆಎಲ್ಇ ಸಾಧನೆ ಕಳೆದ 2 ವರ್ಷಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ್ದ, ಅವಶ್ಯವಿರುವ ತಪಾಸಣೆಗೊಳ್ಪಡಿಸಿದಾಗ ರೋಗಿಯು ದೀರ್ಘಕಾಲದ ಕ್ಯಾಲ್ಸಿಫಿಕ್ ಪ್ಯಾಂಕ್ರಿಯಾಟೈಟಿಸ್ ಎಂಬ ರೋಗದಿಂದ ಬಳಲುತ್ತ, ಮೇದೋಜ್ಜೀರಕ ಗ್ರಂಥಿಯ ನಾಳದಲ್ಲಿ ಹರಳುಗಳಿರುವದು ಕಂಡುಬಂದಿತು. ಅತ್ಯಂತ ಸಂಕೀರ್ಣವಾದ ಪರಿಸ್ಥಿಯಾಗಿದ್ದರಿಂದ ರೊಬೋಟಿಕ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಿ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಾಜಿ …

Read More »

ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ

ಬೆಳಗಾವಿ-ಬೆಳಗಾವಿ ಮಹಾನಗರದ ವಡ್ಡರವಾಡಿಯಲ್ಲಿ ಮಹಿಳೆಯ ಮೇಲೆ ಅಮಾನೀಯವಾಗಿ ಹಲ್ಲೆ ಮಾಡಲಾಗಿದೆ.ಮನಬಂದಂತೆ ಥಳಿಸಿ ಮೈಮೇಲಿನ ಬಟ್ಟೆಯನ್ನು ಹರಿದು ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿದೆ. ಮಹಿಳೆಯ ಮೇಲೆ ಮನಬಂದಂತೆ ಥಳಿತ, ಹರಿದ ಬಟ್ಟೆ ಕೈಯಲ್ಲಿ ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿರುವ ತಾಯಿ ಈ ಎಲ್ಲ ದೃಶ್ಯ ಕಂಡುಬಂದಿದ್ದು ಬೆಳಗಾವಿ ನಗರದ ವಡ್ಡರವಾಡಿಯಲ್ಲಿ. ಹೌದು ಕಳೆದ ಮೂರು ದಿನಗಳ ಹಿಂದೆ ರಾತ್ರಿ 09ಗಂಟೆ ವಡ್ಡರವಾಡಿಯಲ್ಲಿ ಅಮಾನವೀಯ ಘಟನೆ ನಡೆದುಹೋಗಿತು. ನಿಮ್ಮ ಮಗಳು ವೇಶ್ಯಾವಾಟಿಕೆ ಮಾಡ್ತಿದ್ದಾಳೆ ಅಂತಾ …

Read More »

ಕಾರು ಅಡ್ಡಗಟ್ಟಿ, ಪಿಸ್ತೂಲ್ ತೋರಿಸಿ ಕಾರಿನಲ್ಲಿದ್ದ 75 ಲಕ್ಷ ದೋಚಿ,ಕಾರಿನ ಸಮೇತ ಪರಾರಿಯಾದ ಖಧೀಮರು

ಬೆಳಗಾವಿ -ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ 75ಲಕ್ಷ ಎಗರಿಸಿದ ಘಟನೆ,ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಳಿ ನಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಹೊರಟ್ಟಿದ ಕಾರನ್ನು ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ ಖದೀಮರು ಪಿಸ್ತೂಲ್ ತೋರಿಸಿ ಕಾರಿನಲ್ಲಿ ಇದ್ದವರನ್ನು ಕೆಳಗೆ ಇಳಿಸಿ ಕಾರಿನಲ್ಲಿದ್ದ 75 ಲಕ್ಷರೂ ಗಳನ್ನು ಕಾರಿನ ಸಮೇತ ದೋಚಿಕೊಂಡು ಪರಾರಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಇನೋವಾ ಕಾರು ಅಡ್ಡಗಟ್ಟಿ ಬಂದೂಕು ತೋರಿಸಿ.ಕಾರು ಚಾಲಕ ಮತ್ತು …

Read More »

IPS, IAS ಅಧಿಕಾರಿಗಳ ಫೇಸ್ ಬುಕ್ ಅಕೌಂಟ್ ಹ್ಯಾಕ್ ಮಾಡಿದ ಹ್ಯಾಕರ್ಸ್ ಖಾಲಿ ಬಲೆಗೆ.

ಬೆಳಗಾವಿ: ಐಪಿಎಸ್, ಐಎಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸಬುಕ್ ಖಾತೆ ತೆರೆದು ಮೋಸ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿಗಳು ಎಸ್ಪಿ ಅವರ ಸ್ನೇಹಿತರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬೆಂಗಳೂರಿನಿಂದ ಸಿಆರ್ ಪಿಎಫ್ ಅಧಿಕಾರಿಯೊಬ್ಬರು ಬೇರೆಡೆ ವರ್ಗಾವಣೆ ಆಗಿದ್ದಾರೆ. ಅವರ ಮನೆಯಲ್ಲಿ‌ 12 …

Read More »

ಮೂವರು ಆರೋಪಿಗಳಿಗೆ ನೀರೀಕ್ಷಣಾ ಜಾಮೀನು ಮಂಜೂರು

ಬೆಳಗಾವಿ- ಬೆಳಗಾವಿ ತಹಶೀಲ್ದಾರ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ,ಮೂವರೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.ಬೆಳಗಾವಿ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಪ್ತ ಸಹಾಯಕ ಸೋಮು ದೊಡವಾಡಿ, ತಹಶೀಲ್ದಾರ ಬಸವರಾಜ ನಾಗರಾಳ, ತಹಶೀಲ್ದಾರ್ ಕಚೇರಿಯ ಎಫ್‌ಡಿಎ ಅಶೋಕ ಕಬ್ಬಲಿಗೇರ‌ಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದೆ.ತಹಶೀಲ್ದಾರ ಬಸವರಾಜ ನಾಗರಾಳ ಪರ ನ್ಯಾಯವಾದಿ ರವಿರಾಜ ಪಾಟೀಲ ವಕಾಲತ್ತು …

Read More »

ಕಾಮಗಾರಿಯನ್ನು ಬೇಗ ಶುರು ಮಾಡಲು ಸೂಚನೆ..

ಬೆಳಗಾವಿ: ಕೇಂದ್ರ ಸರ್ಕಾರವು ಬೆಳಗಾವಿ ನಗರದಲ್ಲಿ ಪ್ರಸ್ತುತ ಇರುವ ರಾಜ್ಯ ಕಾರ್ಮಿಕ ವಿಮಾ ನಿಗಮದ 50 ಹಾಸಿಗೆಗಳ ಆಸ್ಪತ್ರೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಕೇಂದ್ರ ಕಾರ್ಮಿಕ ವಿಮಾ ನಿಗಮದ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸುಮಾರು 152.2 ಕೋಟಿ ರೂ.ಗಳ ಅನುದಾನದಡಿ ಟೆಂಡರ ಪ್ರಕ್ರಿಯೆ ಮುಗಿದು ಹಲವು ತಿಂಗಳು ಕಳೆದರು ಇದುವೆರೆಗೆ ಕಾಮಗಾರಿ ಪ್ರಾರಂಭಗೊAಡಿರುವುದಿಲ್ಲ ಆದಷ್ಟು ಬೇಗನೇ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸುವಂತೆ ರಾಜ್ಯ ಕಾರ್ಮಿಕ ವಿಮಾ ನಿಗಮದ ಪ್ರಾದೇಶಿಕ …

Read More »

ಅದಲ್ ಬದಲ್ ಕೈಂಚಿ ಕದಲ್… ಅಣ್ಣಾಸಾಹೇಬ್ ಜಾಗಕ್ಕೆ ಅಪ್ಪಾಸಾಹೇಬ್…!!

ಬೆಳಗಾವಿ – ಕಳೆದ ವಿಧಾನಸಭೆ ಚುನಾವಣೆ,ಲೋಕಸಭೆ ಚುನಾವಣೆ ಹಾಗೂ ಇಂದು ನಡೆದ ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಗಮನಿಸಿದರೆ, ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಪ್ರಭಾವಶಾಲಿಗಳಾಗಿದ್ದಾರೆ. ಗೋಕಾಕ್ ಜೊತೆಗೆ ಜಿಲ್ಲೆ ಯಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಹೋದರರಾದ ಬಾಲಚಂದ್ರ,ರಮೇಶ್ ಹಾಗೂ ಸತೀಶ್ ಅವರು ಒಂದೇ ವೇದಿಕೆಯಲ್ಲಿ ಕುಳಿತು ಎಲ್ಲರು ಒಪ್ಪುವ ಒಮ್ಮತದ ನಿರ್ಣಯ ಕೈಗೊಳ್ಳುವ ಮೂಲಕ ತಮ್ಮ ಕುಟುಂಬದ …

Read More »

ಗುರುವಾರ ಬೆಳಗಾವಿಗೆ ಕೇಂದ್ರ ರೇಲ್ವೆ ಸಚಿವ ಸೋಮಣ್ಣ

ಬೆಳಗಾವಿ -ಗುರುವಾರ ದಿನಾಂಕ 14 ರಂದು ಕೇಂದ್ರದ ರಾಜ್ಯ ರೇಲ್ವೆ ಸಚಿವ ವಿ.ಸೋಮಣ್ಣ ಅವರು ಬೆಳಗಾವಿಗೆ ಬರಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಬೆಳಗಾವಿ ಮಹಾನಗರಕ್ಕೆ ಆಗಮಿಸುವ ಅವರು 11 ಗಂಟೆಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಧಾರವಾಡ- ಕಿತ್ತೂರು- ಬೆಳಗಾವಿ ರೈಲು ಮಾರ್ಗದ ಪ್ರಗತಿ ಪರಶೀಲನೆ ಮಾಡಲಿದ್ದಾರೆ ಜೊತೆಗೆ ಬೆಳಗಾವಿ ಜಿಲ್ಲೆಯ ಜಲ ಜೀವನ್ ಮಶೀನ್ ಯೋಜನೆಯ ಪ್ರಗತಿ ಪರಶೀಲನೆ ಮಾಡಲಿದ್ದಾರೆ. ಇದಾದ ಬಳಿಕ ಸಚಿವ ವ.ಸೋಮಣ್ಣ ಅವರು ಕೆಎಲ್ಇ ಸಂಸ್ಥೆಯ …

Read More »

ಅಪ್ಪಾಸಾಹೇಬ್ ಕುಲಗೋಡೆ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಹೊಸ ಸಾರಥಿ.

ಬೆಳಗಾವಿ- ಬೆಳಗಾವಿಯ ತ್ರೀಸ್ಟಾರ್ ಹೊಟೇಲ್ ನಲ್ಲಿ ನಡೆದ ಹೈ ಪವರ್ ಮೀಟೀಂಗ್ ನಲ್ಲಿ ರಾಯಬಾಗದ ಕಾಂಗ್ರೆಸ್ ಧುರೀಣ ಅಪ್ಪಾಸಾಹೇಬ್ ಕುಲಗೋಡೆ ಅವರು ಬೆಳಗಾವಿಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವ ನಿರ್ಣಯ ಹೊರಬಿದ್ದಿದೆ.ಸಭೆಯ ಬಳಿಕ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯವನ್ನು ಮಾದ್ಯಮಗಳಿಗೆ ತಿಳಿಸಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್‌‌ ಅಧ್ಯಕ್ಷ ಸ್ಥಾನಕ್ಕೆ ಅಚ್ಛರಿ ಹೆಸರು ಅಂತಿಮವಾಗಿದೆ.ನೂತನ ಅಧ್ಯಕ್ಷರಾಗಿ ರಾಯಭಾಗದ ಅಪ್ಪಾಸಾಹೇಬ್ ಕುಲಗೋಡೆ ಆಯ್ಕೆಯಾಗಿದ್ದಾರೆ.ಜಾರಕಿಹೊಳಿ ಬ್ರದರ್ಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ …

Read More »

ಹತ್ತು ಗಂಟೆಗೆ ಹೆಸರು ಹೆಳ್ತಾರೆ, ಹನ್ನೊಂದು ಗಂಟೆಗೆ ನಾಮಿನೇಶನ್ ಕೊಡ್ತಾರೆ…..!!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಲಿದೆ. ಸಹಕಾರಿ ರಂಗದ ಬೆಳಗಾವಿಯ ಹಿರಿಯರು ಇಂದು ಬೆಳಗ್ಗೆ 10 ಗಂಟೆಗೆ ನೂತನವಾಗಿ ಆಯ್ಕೆಯಾಗಲಿರುವ ಅಧ್ಯಕ್ಷ ಉಪಾಧ್ಯಕ್ಷರ ಹೆಸರುಗಳನ್ನು ಬಹಿರಂಗ ಮಾಡ್ತಾರೆ. ಹಿರಿಯರು ಸೂಚಿಸಿದ ಇಬ್ಬರು ಹನ್ನೊಂದು ಗಂಟೆಗೆ ನಾಮಿನೇಶನ್ ಮಾಡ್ತಾರೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆತುತ್ತದೆ. ಮಾಜಿ ಸಂಸದ ರಮೇಶ್ ಕತ್ತಿ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳ ಆಯ್ಕೆ …

Read More »

ಗುರಿ ಇಟ್ಟಿದ್ದು ನವಿಲಿಗೆ ಗುಂಡು ತಾಕಿದ್ದು ಆ ಯುವಕನಿಗೆ…!!

ಖಾನಾಪೂರ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಲೇ ಇದೆ,ಎನ್ನುವದಕ್ಕೆ ಇತ್ತೀಚಿಗೆ ಖಾನಾಪೂರ ಅರಣ್ಯದಲ್ಲಿ ನಡೆದಿರುವ ಗುಂಡಿನ ದಾಳಿಯೇ ಅದಕ್ಕೆ ಸಾಕ್ಷಿಯಾಗಿದೆ.ನವೀಲು ಬೇಟೆಯಾಡಲು ಹಾರಿಸಿದ ಗುಂಡು ಓರ್ವನನ್ನು ಬಲಿ ಪಡೆದಿದೆ.ಬೇಟೆಗಾರರಿಗೆ ಬ್ರೇಕ್ ಹಾಕುವವರು ಯಾರು ? ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ. ಬೆಳಗಾವಿ: ಬೆಳಗಾವಿಯಲ್ಲಿ ಮಧ್ಯರಾತ್ರಿ ಗುಂಡಿನ ದಾಳಿಗೆ ಯುವಕ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ದೂರು ದಾಖಲಾಗಿದ್ದು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಳಗಾವಿ …

Read More »

ತಡರಾತ್ರಿ, ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ….

ಬೆಳಗಾವಿ- ಕುಂದಾನಗರಿ ಬೆಳಗಾವಿಯಲ್ಲಿ ತಡರಾತ್ರಿ ಅಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ. ಆಟೋ ಬೆಳಗಾವಿ ಬಸ್ ನಿಲ್ಧಾಣದಿಂದ ಅಲಾರವಾಡ್ ಕ್ರಾಸ್ ಗೆ ಹೊರಟಿತ್ತು ದಾರಿಮದ್ಯೆ ಪ್ರಯಾಣಿಕ ಮತ್ತು ಚಾಲಕನ ನಡುವೆ ವಾಗ್ವಾದ ನಡೆದಿದೆ.ಈ ಸಂಧರ್ಭದಲ್ಲಿ ಪ್ರಯಾಣಿಕ ಚಾಕುವಿನಿಂದ ಅಟೋ ಚಾಲಕನ ಕತ್ತು ಸೀಳಿದ್ದಾನೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಟೋ ಚಾಲಕ ಅದೇ ಪರಿಸ್ಥಿತಿಯಲ್ಲಿ ಬಸ್ ನಿಲ್ಧಾಣದವರೆಗೂ ಬಂದಿದ್ದಾನೆ‌. ನಂತರ ಸ್ಥಳೀಯರು ಆಟೋ ಚಾಲಕನಿಗೆ …

Read More »

ಬೆಳ್ಳಂ ಬೆಳಗ್ಗೆ,ತಲಾಠಿ ಮನೆಯ ಮೇಲೆ ಲೋಕಾಯುಕ್ತ ದಾಳಿ

ಬೆಳಗಾವಿ-ಗ್ರಾಮ ಲೆಕ್ಕಾಧಿಕಾರಿ ಮನೆ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಡವಳೇಶ್ವರ ಎಂಬಾತನ ಮೇಲೆ ದಾಳಿ ನಡೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದಲ್ಲಿರುವ,ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿರೋ ಲೋಕಾಯುಕ್ತರು ತನಿಖೆ ನಡೆಸಿದ್ದಾರೆ.ಮನೆಯಲ್ಲಿ ದಾಳಿ ಸಂದರ್ಭ ಒಂದು ಲಕ್ಷ ರೂ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ನಿಪ್ಪಾಣಿ ಪಟ್ಟಣದ ಬಾಡಿಗೆ ಮನೆ ಇದಾಗಿದೆ.ದಾಖಲೆ ಪರಿಶೀಲನೆ ಕಾರ್ಯ ಮುಂದುವರೆದಿದೆ. ಈ‌ …

Read More »