Breaking News

LOCAL NEWS

ನಾಳೆ ಬೆಳಗಾವಿಯಲ್ಲಿ ಕಿಚ್ಚ ಸುದೀಪ ರೋಡ್ ಶೋ

ಬೆಳಗಾವಿ :ಖ್ಯಾತ ಚಲನಚಿತ್ರ ನಟ ಕಿಚ್ಚ ಸುದೀಪ್ ಮೇ 1 ರಂದು (ಸೋಮವಾರ) ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಪರವಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಸಂಜೆ 4.30 ಕ್ಕೆ ಶ್ರೀ ನಗರ ಗಾರ್ಡನ್ ನಿಂದ ಸಾಯಿ ಮಂದಿರ, ದತ್ತ ಮಂದಿರ, ಮಹಾಂತೇಶ ನಗರ ಗ್ಲಾಸ್ ಹೌಸ್ ವರೆಗೆ ಬೃಹತ್ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿಕೊಡಲಿದ್ದಾರೆ.

Read More »

ಅಥಣಿಯಲ್ಲಿ ಕಾಂಗ್ರೆಸಿಗೆ ಮತ್ತೊಂದು ಬಿಗ್ ಶಾಕ್ : ಪಕ್ಷಕ್ಕೆ ವಿದಾಯ ಹೇಳಿದ ಕಟ್ಟಾ ಕಾಂಗ್ರೆಸ್ಸಿಗ !

ಅಥಣಿ :ಅಥಣಿಯ ಪಂಚಮಸಾಲಿ ಸಮುದಾಯದ ಪ್ರಮುಖ ನಾಯಕ, ಹಿರಿಯ ನ್ಯಾಯವಾದಿ ಹಾಗೂ ಕಟ್ಟಾ ಕಾಂಗ್ರೆಸ್ಸಿಗ ಸುನಿಲ್ ಸಂಕ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಅವರು ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಮತ್ತು ಚಿಕ್ಕೋಡಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ರಾವ್ ಚಿಂಗಳೆ ಅವರಿಗೆ ಶನಿವಾರ ತಮ್ಮ ರಾಜೀನಾಮೆ ರವಾನಿಸಿದ್ದಾರೆ. ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳುತ್ತಿದ್ದೇನೆ. ಆದ್ದರಿಂದ ಕಾಂಗ್ರೆಸ್ ಪಕ್ಷದ …

Read More »

ಯಾರ ಹೆದರಿಕೆಗೂ ಮಣಿಯಬೇಡಿ, ನಿಮ್ಮ ಜೊತೆ ನಾನಿದ್ದೇನೆ-ಬಾಲಚಂದ್ರ ಜಾರಕಿಹೊಳಿ.

ಮೂಡಲಗಿ: ಯಾರ ಹೆದರಿಕೆಗೂ ಮಣಿಯಬೇಡಿ, ನಿಮ್ಮ ಜೊತೆ ನಾನಿದ್ದೇನೆ. ಯಾರಾದರೂ ನಿಮಗೆ ಈ ಚುನಾವಣೆಯಲ್ಲಿ ಅಂಜಿಕೆ ಹಾಕಿದರೇ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುವಂತೆ ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಅಭಯ ನೀಡಿದರು. ಶುಕ್ರವಾರ ಸಂಜೆ ತಾಲೂಕಿನ ಕಲ್ಲೋಳ್ಳಿ ಪಟ್ಟಣದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಈ ಚುನಾವಣೆಯಲ್ಲಿ ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ ಹೆದರಿಕೆ ಹಾಕುತ್ತಿರುವುದು ನನ್ನ …

Read More »

ಬೆಳಗಾವಿ: ದೊಡ್ಡವಾಡ ಜೋಡಿ ಕೊಲೆ : ಶಿಕ್ಷೆ ಪ್ರಕಟ

ಬೆಳಗಾವಿ :ಜಮೀನು ವಿವಾದದಿಂದ ದಾಯಾದಿಗಳನ್ನೇ ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ 2 ಲಕ್ಷ ರೂಪಾಯಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬೈಲಹೊಂಗಲ ತಾಲೂಕು ದೊಡವಾಡ ಗ್ರಾಮದ ಮಹಾದೇವ ಹಾಲನ್ನವರ ಶಿಕ್ಷೆಗೊಳಗಾದ ವ್ಯಕ್ತಿ. ಮಹಾದೇವ ಅವರ ತಂದೆ ಯಲ್ಲಪ್ಪ ಮತ್ತು ಸಹೋದರ ನಡುವೆ ಜಮೀನು ವಿವಾದ ಇತ್ತು. ಈ ವಿವಾದ ಕಾರಣಕ್ಕೆ ಯಲ್ಲಪ್ಪ ಅವರ ಸಹೋದರರಾದ ಅರ್ಜುನ ಹಾಲನ್ನವರ ಮತ್ತು ಸಿದ್ದಪ್ಪ ಹಾಲನ್ನವರ …

Read More »

ಬೆಳಗಾವಿಯಲ್ಲಿ 70 ರೌಡಿಶೀಟರ್ ಮನೆ ಮೇಲೆ ದಾಳಿ !

ಬೆಳಗಾವಿ :ಬೆಳಗಾವಿ ನಗರದಲ್ಲಿ ಡಿಸಿಪಿ ನೇತೃತ್ವದಲ್ಲಿ ಪೊಲೀಸರು ಶುಕ್ರವಾರ ಬೆಳಗ್ಗೆ ಒಟ್ಟು 70 ರೌಡಿ ಶೀಟರ್‌ಗಳ ಮನೆ ಮೇಲೆ ದಾಳಿ ಕೈಗೊಳ್ಳಲಾಗಿದೆ. ಎಸಿಪಿ ಅಪರಾಧ ಮತ್ತು ಮಾರ್ಕೆಟ್‌ , ಖಡೇಬಜಾರ , ಹಾಗೂ ಬೆಳಗಾವಿ ಗ್ರಾಮೀಣ ಉಪವಿಭಾಗದ ಎಸಿಪಿ ಅವರು ಹಾಗೂ ನಗರದ ಎಲ್ಲ ಠಾಣೆಯ ಪಿಐ ಹಾಗೂ ಸಿಬ್ಬಂದಿಯವರು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು. ದಾಳಿ ಕಾಲಕ್ಕೆ ಖಡೇಬಜಾರ ಪೊಲೀಸ್ ಠಾಣಾ ಹದ್ದಿಯ ಜಾಲಗಾರ ಗಲ್ಲಿಯಲ್ಲಿ ವಾಸಿಸುತ್ತಿದ್ದ ಒಬ್ಬ ರೌಡಿ …

Read More »

ಅಥಣಿಯಲ್ಲಿ ಸವದಿಗೆ ಬಿಗ್ ಶಾಕ್ : ಬಿಜೆಪಿ ಸೇರ್ಪಡೆಗೊಂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ !

ಬೆಳಗಾವಿ–ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್ ಆಕಾಂಕ್ಷಿಗಳನ್ನು ಒಂದು ಮಾತು ಸಹ ಕೇಳದೆ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ. ಇದು ನಮ್ಮ ಪಾಲಿಗೆ ಬಹಳ ದೊಡ್ಡ ಅನ್ಯಾಯ. ಇಂತಹ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಯಾವುದೇ ಷರತ್ತು ಇಲ್ಲದೆ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಬಿಜೆಪಿಯ ತತ್ವ ಸಿದ್ಧಾಂತದಿಂದ ನಾನು ಪ್ರೇರೇಪಿತನಾಗಿದ್ದು ಬರುವ ದಿನಗಳಲ್ಲಿ ಬಿಜೆಪಿಗಾಗಿ ದುಡಿಯುವೆ ; ಧರೆಪ್ಪ ಠಕ್ಕಣ್ಣವರ ಅಥಣಿ : ಅಥಣಿಯಲ್ಲಿ ಈ ಬಾರಿ ಬಿಜೆಪಿ ತ್ಯಜಿಸಿ …

Read More »

ಬೆಳಗಾವಿಯಲ್ಲಿ, ಬೊಮ್ಮಾಯಿ ಬೆನ್ನು ತಟ್ಟಿದ ಸಿದ್ದರಾಮಯ್ಯ…!!!

ಬೆಳಗಾವಿ : ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಾಮುಖಿಯಾದ ಪ್ರಸಂಗ ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಈ ಕ್ಷಣಕ್ಕೆ ಸಾಕ್ಷಿಯಾದರು. ಕೆಲವೇ ಕಾಲ ಉಭಯ ಪಕ್ಷಗಳ ನಾಯಕರು ಕುಶಲೋಪರಿ ವಿಚಾರಿಸಿ ತಮ್ಮ ತಮ್ಮ ಅಭ್ಯರ್ಥಿಗಳ ಪ್ರಚಾರಕ್ಕೆ ತೆರಳಿದರು. ಬೆಂಗಳೂರಿನಿಂದ ಬಂದ ಮಲ್ಲಿಕಾರ್ಜುನ ಖರ್ಗೆ ಚಿಕ್ಕೋಡಿ, ಬಸವರಾಜ ಬೊಮ್ಮಾಯಿ ಯಮಕನಮರಡಿಗೆ ತೆರಳಿದರೆ ಸಿದ್ದರಾಮಯ್ಯ ಮಾಜಿ ಸಚಿವ ಡಿ.ಬಿ.ಇನಾಮದಾರ …

Read More »

ರಮೇಶ್ ಜಾರಕಿಹೊಳಿ, ಗುರಿ ಇಟ್ಟರೆ ಗೆಲುವು ಖಚಿತ- ಸಿಎಂ ಬೊಮ್ಮಾಯಿ ವಿಶ್ವಾಸ.

*ಅಭಿವೃದ್ಧಿ ಪರ ಬೆಳಗಾವಿ ಜಿಲ್ಲೆಯಲ್ಲಿ ಜಾತಿ-ಹಣದ ರಾಜಕಾರಣ ನಡೆಯುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌* ಬೆಳಗಾವಿ: ಬೆಳಗಾವಿ ಜಿಲ್ಲೆ ಅಭಿವೃದ್ಧಿ ಪರ ಜಿಲ್ಲೆ. ಇಲ್ಲಿ ಜಾತಿ ರಾಜಕಾರಣ, ಹಣದ ರಾಜಕಾರಣ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ ಪರ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೆಳಗಾವಿ ಇದು ಗಂಡು ಮೆಟ್ಟಿದ ನಾಡು. ಚೆನ್ನಮ್ಮ, …

Read More »

ಯಾರನ್ನೋ ಹೆದರಿಸಲು ನಾನು ಶಾಸಕನಾಗುತ್ತಿಲ್ಲ- ಬಾಲಚಂದ್ರ ಜಾರಕಿಹೊಳಿ.

ಗೋಕಾಕ : ಪ್ರತಿ ಮತಗಟ್ಟೆಗಳಲ್ಲಿ ಕನಿಷ್ಠ ಶೇ 75-80 ರಷ್ಟು ಮತಗಳು ಬಿಜೆಪಿಗೆ ಮತ ಚಲಾಯಿಸುವಂತೆ ಮಾಡಿದರೆ ಮಾತ್ರ ನಮ್ಮ ಗೆಲುವಿನ ಗುರಿಯನ್ನು ತಲುಪಬಹುದು. ಈ ನಿಟ್ಟಿನಲ್ಲಿ ಮತಗಟ್ಟೆಗಳ ಪ್ರಮುಖರು ಪ್ರತಿ ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ಬೀಳಲು ಶಕ್ತಿ ಮೀರಿ ಶ್ರಮಿಸುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ಮಂಗಳವಾರ ಸಂಜೆ ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ …

Read More »

ಬುಧವಾರ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಇನಾಮದಾರ ಅಂತ್ಯಕ್ರಿಯೆ

ಬೆಳಗಾವಿ :ಮಾಜಿ ಸಚಿವ ಡಿ.ಬಿ. ಇನಾಮದಾರ ಅವರ ಅಂತ್ಯಕ್ರಿಯೆ ಏಪ್ರಿಲ್ 26 ರಂದು ಮಧ್ಯಾಹ್ನ 12 ಗಂಟೆಗೆ ನೇಗಿನಾಳ ಗ್ರಾಮದ ಅವರ ತೋಟದ ಮನೆ ಬಳಿ ನಡೆಯಲಿದೆ. ಡಿ.ಬಿ.ಇನಾಮದಾರ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಪ್ರಾರ್ಥಿವ ಶರೀರ ಇಂದು ಮಧ್ಯರಾತ್ರಿ ಬರಲಿದೆ. ಏಪ್ರಿಲ್ 26 ರಂದು ಬೆಳಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ನೇಗಿನಾಳ ಬಿ.ಡಿ. ಇನಾಮದಾರ ಹೈಸ್ಕೂಲ್ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ …

Read More »

ಕಿತ್ತೂರು ಧಣಿ,ಶುದ್ಧ ಹಸ್ತದ ರಾಜಕಾರಣಿ,ಡಿ.ಬಿ ಇನಾಮದಾರ್ ಇನ್ನಿಲ್ಲ.

ಬೆಳಗಾವಿ- ಮಾಜಿ ಸಚಿವ, ರಾಯಲ್ ಲೀಡರ್, ಕಿತ್ತೂರು ಕ್ಷೇತ್ರದ ಧನಿ ಡಿ.ಬಿ ಇನಾಮದಾರ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ‌. ಒಂದು ತಿಂಗಳ ಹಿಂದೆ ಅವರ ಆರೋಗ್ಯ ಹದಗೆಟ್ಟಿಧದರಿಂದ, ಡಿ.ಬಿ ಇನಾಮದಾರ್ ಅವರನ್ನು ಬೆಂಗಳೂರಿನ ಮನಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು,ಚಿಕಿತ್ಸೆ ಫಲಕಾರಿ ಆಗದೇ ಇಂದು ಬೆಳಗ್ಗೆ ಇಹಲೋಕವನ್ನು ತ್ಯೇಜಿಸಿದ್ದಾರೆ. ಕಿತ್ತೂರು ಕ್ಷೇತ್ರದ ಶಾಸಕರಾಗಿ,ಹಲವಾರು ಬಾರಿ ಮಂತ್ರಿಗಳಾಗಿ, ಹಲವಾರು ದಶಕಗಳ ಕಾಲ ರಾಣಿ ಶುಗರ್ಸ್ ಅಧ್ಯಕ್ಷರಾಗಿ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಿರುವ ಡಿ‌ಬಿ ಇನಾಮದಾರ್ ಕಿತ್ತೂರು …

Read More »

ಚುನಾವಣಾ ಪ್ರಚಾರದಲ್ಲಿ ಸುರೇಶ ಅಂಗಡಿ ಸಾವನ್ನು ಮತ್ತೊಮ್ಮೆ ಕೆದಕಿದ ಡಿಕೆಶಿ !

ಬೈಂದೂರು :ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಸಾವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಕೆದಕಿದ್ದಾರೆ. ಬೈಂದೂರಿನಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಸಮಯದಲ್ಲಿ ಜನ ಸಾಕಷ್ಟು ತೊಂದರೆ ಅನುಭವಿಸಿದರು. ಬಿಜೆಪಿ ಕೇಂದ್ರ ಸಚಿವ ಸುರೇಶ್ ಅಂಗಡಿ ಸತ್ತಾಗ ಆತನನ್ನು ಅವರ ಊರಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಈ ಸರ್ಕಾರಗಳಿಂದ ಸಾಧ್ಯವಾಗಲಿಲ್ಲ. ಆಕ್ಸಿಜನ್ ಇಲ್ಲದೆ 36 ಜನ ಸತ್ತಾಗ ಕೇವಲ 3 …

Read More »

ನಾಳೆ ಬೆಳಗಾವಿ ಜಿಲ್ಲೆಗೆ ಧಿಡೀರ್ ರಾಹುಲ್ ಗಾಂಧಿ ಬರ್ತಾರೆ..!

ಬೆಳಗಾವಿ :ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿಸಿದ್ದು ಸೋಮವಾರ ಬೆಳಗಾವಿ ಜಿಲ್ಲೆಯ ರಾಮದುರ್ಗಕ್ಕೆ ಆಗಮಿಸಲಿದ್ದಾರೆ. ರಾಮದುರ್ಗದಲ್ಲಿ ಅವರು ಕಬ್ಬು ಬೆಳೆಗಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ರಾಹುಲ್ ಗಾಂಧಿ ಇಂದು ಕೂಡಲಸಂಗಮಕ್ಕೆ ಆಗಮಿಸಿದ್ದು ಅಲ್ಲಿಂದ ವಿವಿಧ ಕಾರ್ಯಕ್ರಮ ಮುಗಿಸಿ ಸೋಮವಾರ ಮಧ್ಯಾನ 12ಕ್ಕೆ ರಾಮದುರ್ಗ ಮತ ಕ್ಷೇತ್ರದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸುವರು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಾಜಿ …

Read More »

ಜಾಹೀರಾತು, ಪೇಡ್ ನ್ಯೂಸ್ ಮೇಲೆ ನಿಗಾ ಇಡ್ರಿ!

ಬೆಳಗಾವಿ, ): ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಾರ್ತಾಭವನದಲ್ಲಿ ಆರಂಭಿಸಲಾಗಿರುವ ಮಾಧ್ಯಮ ಕಣ್ಗಾವಲು ಘಟಕಕ್ಕೆ ಗೋಕಾಕ ಹಾಗೂ ಯಮಕನಮರಡಿ ವಿಧಾನಸಭಾ ಮತಕ್ಷೇತ್ರಗಳ ಸಾಮಾನ್ಯ ವೀಕ್ಷಕರಾದ ಹಿರಿಯ ಐ.ಎ.ಎಸ್. ಅಧಿಕಾರಿ ಎಸ್.ಮಾಲಾರವಿಙ್ಞ ಅವರು ಭೇಟಿ ಪರಿಶೀಲಿಸಿದರು. ಎಲೆಕ್ಟ್ರಾನಿಕ್ ಹಾಗೂ ಮುದ್ರಣ‌ ಮಾಧ್ಯಮ ಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಮೇಲೆ‌ ನಿಗಾ ವಹಿಸಬೇಕು. ಪೇಡ್ ನ್ಯೂಸ್ ಅಥವಾ ಜಾಹೀರಾತು ಕಂಡುಬಂದರೆ ಅದಕ್ಕೆ ಸಂಬಂಧಿಸಿದ ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂದು ನಿರ್ದೇಶನ ನೀಡಿದರು. ಇದಲ್ಲದೇ …

Read More »

ಆಕ್ಷೇಪಣೆಗಳ,ಸುಧೀರ್ಘ ವಿಚಾರಣೆ, ರತ್ನಾ ಮಾಮನಿ ನಾಮಪತ್ರ ಅಂಗೀಕಾರ!

ಬೆಳಗಾವಿ- ಸವದತ್ತಿ ಯಲ್ಲಮ್ಮನ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರತ್ನಾ ಮಾಮನಿಯವರ ನಾಮಪತ್ರ ತಿಸ್ಕರಿಸಬೇಕು ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರಿಂದ ನಿನ್ನೆಯಿಂದ ಎಲ್ಲರ ಗಮನ ಸೆಳೆದಿದ್ದ ಈ ವಿಚಾರ,ಇವತ್ತು ವಿಚಾರಣೆಯಾಗಿ ರತ್ನಾ ಮಾಮನಿ ನಾಮಪತ್ರ ಇವತ್ತು ಅಂಗೀಕಾರಾಗಿದ್ದುಸವದತ್ತಿ ಬಿಜೆಪಿ ಅಭ್ಯರ್ಥಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರು ಸಲ್ಲಿಸಿದ್ದ ನಾಮಪತ್ರವನ್ನು ಅಸಿಂಧು ಎಂದು ಘೋಷಿಸಬೇಕು ಅಂತ ವಿಪಕ್ಷಗಳಿಗೆ ಹಿನ್ನೆಡೆಯಾಗಿದೆ. ಫಾರ್ಮ್ ನಂಬರ್ ೨೬ …

Read More »