Breaking News

LOCAL NEWS

ಬೆಳಗಾವಿ: ಧೂಪದಾಳ ಜಲಾಶಯದಲ್ಲಿ ನಾಲ್ವರು ಯುವಕರ ಜಲಸಮಾಧಿ!

ಬೆಳಗಾವಿ ಪ್ರವಾಸಕ್ಕೆಂದು ಬಂದಿದ್ದ ಉತ್ತರ ಕನ್ನಡ ಜಿಲ್ಲೆಯ ಸಿರಿಗೇರೆ ಗ್ರಾಮದ ಯುವಕರು ಗೋಕಾಕ ತಾಲೂಕಿನ ಘಟಪ್ರಭಾ ಸಮೀಪದ ಧುಪದಾಳ ಜಲಾಶಯದಲ್ಲಿ ಈಜುತ್ತಿದ್ದಾಗ ಕೆಸರಿನಲ್ಲಿ ಸಿಲುಕಿ ನಾಲ್ವರು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಶಿರಸಿ ತಾಲೂಕಿನ ಮುಂಡಗೋಡ ಸಮೀಪದ ಹಳ್ಳಿಯಿಂದ ಬಂದಿದ್ದ 12 ಜನ ಯುವಕರ ಗುಂಪಿನಲ್ಲಿ ಆರೇಳು ಜನ ಈಜಾಡಲು ಹೋಗಿದ್ದರು. ಈ ವೇಳೆ ಈಜುವಾಗ ಜಲಾಶಯದ ಮಣ್ಣಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.‌ ಒಬ್ಬನನ್ನು ರಕ್ಷಿಸಲು ಹೋಗಿ ಇನ್ನೊಬ್ಬ …

Read More »

ಯಾರ ಹೆಗಲಿಗೆ ಯಾರು “ಕೈ” ಹಾಕಿದ್ರು ! ಇದು ಇವತ್ತಿನ ಪಾಲಿಟೀಕ್ಸ್ ಸೀನ್!!

ಬೆಳಗಾವಿ-ಸಮಾನತೆಯ ಸಂದೇಶ ಸಾರಿ, ವಿಶ್ವರತ್ನ ಎಂದೇ ಖ್ಯಾತಿ ಪಡೆದಿರುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ದಿನ ಬೆಳಗಾವಿಯಲ್ಲಿ ಸಮಾನತೆಯ ಸಂದೇಶ ಸಾರುವ ಅಪರೂಪದ ಪ್ರಸಂಗ ನಡೆಯಿತು. ಬೆಳಗಾವಿಯ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಇವತ್ತು ಬೆಳಗ್ಗೆ ಯಿಂದ ಗಣ್ಯಾತಿ ಗಣ್ಯರು ಆಗಮಿಸಿ ಬಾಬಾಸಾಹೇಬರಿಗೆ ಗೌರವ ಸಮರ್ಪಿಸುವ ಕಾರ್ಯ ನಡೆದಿತ್ತು.ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಅವರೂ ಸಹ ಇಲ್ಲಿಗೆ ಆಗಮಿಸಿದ್ದರು. ಅನೀಲ ಬೆನಕೆ ಬಾಬಾಸಾಹೇಬರಿಗೆ ಗೌರವ …

Read More »

ಬೆಂಗಳೂರಿಗೆ ಹಾರುವ ಮೊದಲು ಲಕ್ಷ್ಮಣ ಸವದಿ ಹೇಳಿದ್ದೇನು ಗೊತ್ತಾ??

ಬೆಳಗಾವಿ-ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಲಕ್ಷ್ಮಣ ಸವದಿ ಪರಾಭವಗೊಂಡು ರಾತ್ರಿ ಗಾಢ ನಿದ್ರೆಯಲ್ಲಿರುವಾಗ ಮದ್ಯರಾತ್ರಿ ಅವರನ್ಬು ಎಬ್ಬಿಸಿ ಬೆಂಗಳೂರಿಗೆ ಕರೆಯಿಸಿಕೊಂಡು ಅವರನ್ನು ಡಿಸಿಎಂ ಮಾಡಿದ ಬಿಜೆಪಿ ಪಕ್ಷಕ್ಕೆ ವಿದಾಯ ಹೇಳಲು ಇದೇ ಲಕ್ಷ್ಮಣ ಸವದಿ ಅವರು ಇವತ್ತು ಬೆಳ್ಳಂ ಬೆಳಗ್ಗೆ,ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಕಳುಹಿಸಿದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಾರಿದ್ರು. ಬೆಂಗಳೂರಿಗೆ ಹಾರುವ ಮುನ್ನ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ …

Read More »

ಸಂದಾನಕ್ಕೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷ ನೇರ್ಲಿಯನ್ನು ಎಳೆದಾಡಿದ ಸವದಿ ಬೆಂಬಲಿಗರು!!

ಬೆಳಗಾವಿ- ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ್ ನೇರ್ಲಿ ಹಾಗೂ ಕೆಲವು ಜನ ಆರ್ ಎಸ್ ಎಸ್ ಮುಖಂಡರು ಇಂದು ಬೆಳಗ್ಗೆ ಲಕ್ಷ್ಮಣ ಸವದಿ ಅವರ ಸಂಧಾನಕ್ಕೆ ಆಗಮಿಸಿದ್ದರು.ಬಿಜೆಪಿ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಳ್ಳಲು ಆಗಮಿಸಿದ ಬಿಜೆಪಿ ಸಂಧಾನಕಾರರನ್ನು ಸವದಿ ಬೆಂಬಲಿಗರು ತರಾಟೆಗೆ ತೆಗೆದುಕೊಂಡು ಎಳೆದಾಡಿದ ಘಟನೆ ಲಕ್ಷ್ಮಣ ಸವದಿ ಅವರ ಮನೆಯ ಅಂಗಳದಲ್ಲೇ ನಡೆದಿದೆ. ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ರಾಜೇಶ್ ನೇರ್ಲಿ,ಹಾಗೂ ಉಳಿದ ಸಂಧಾನಕಾರರನ್ನು ಲಕ್ಷ್ಮಣ ಸವದಿ …

Read More »

ಗೋಕಾಕ್ ಕ್ಷೇತ್ರದಲ್ಲಿ ದಾಖಲೆ ಇಲ್ಲದ ಐದು ಕೋಟಿ ವಶ!!

ಬೆಳಗಾವಿ-ಗೋಕಾಕ ಮತಕ್ಷೇತ್ರದ ವ್ಯಾಪ್ತಿಯ ಯದ್ದಲಗುಡ್ಡ ಚೆಕ್ ಪೋಸ್ಟ್ ನಲ್ಲಿ ಐದು‌ ಕೋಟಿ‌‌ ನಗದು ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕಿನ ಸಿಬ್ಬಂದಿ ದಾಖಲೆ ಇಲ್ಲದ ಐದು ಕೋಟಿ ರೂ ಗಳನ್ನು ಬ್ಯಾಂಕಿನ ವಾಹನದಲ್ಲೇ ಸಾಗಾಣಿಕೆ ಮಾಡುವಾಗ ಯದ್ದಲಗುಡ್ಡ ಚೆಕ್ಕ್ ಪೋಸ್ಟ್ ನಲ್ಲಿ ವಾಹನವನ್ನು ತಪಾಸಣೆ ಮಾಡಿದಾದ ನೋಟಿನ ಬಂಡಲ್ ಗಳು ಪತ್ತೆಯಾಗಿದ್ದು ಈ ಹಣಕ್ಕೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಪೋಲೀಸರು ಹಣವನ್ನು ವಶವಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

Read More »

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕಿಂಗ್ ಮೇಕರ್ ಆದ ರಮೇಶ್ ಜಾರಕಿಹೊಳಿ!!

ಬೆಳಗಾವಿ- ರಮೇಶ್ ಜಾರಕಿಹೊಳಿ ಹಠಮಾರಿ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮೇಲುಗೈ ಸಾಧಿಸಿರುವ ಸಾಹುಕಾರ್ ತಮ್ಮ ಪರಮಾಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ನಾಗೇಶ್ ಮನ್ನೋಳಕರ,ಅಥಣಿಯಿಂದ ಮಹೇಶ್ ಕುಮಟೊಳ್ಳಿ ರಾಮದುರ್ಗದಿಂದ ಚಿಕ್ಕ ರೇವಣ್ಣ,ಹಾಗು ಖಾನಾಪೂರ ಕ್ಷೇತ್ರದಿಂದ ವಿಠ್ಠಲ ಹಲಗೇಕರ ಬೈಲಹೊಂಗಲ ಕ್ಷೇತ್ರದಿಂದ ಜಗದೀಶ್ ಮೆಟಗುಡ್ ಅವರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ಬಿಜೆಪಿ ವರಿಷ್ಠರ ಮುಂದೆ ರಮೇಶ್ ಜಾರಕಿಹೊಳಿ ಶಿಫಾರಸು ಮಾಡಿದ್ದರು ಎಂದು ಹೇಳಲಾಗಿದೆ. …

Read More »

ಅನೀಲ ಬೆನಕೆಗೆ ಕೈಕೊಟ್ಟ ಬಿಜೆಪಿ,ಡಾ.ರವಿ ಪಾಟೀಲಗೆ ಒಲಿದ ಅದೃಷ್ಠ!!

ಕೊನೆಗೂ ರಿಲೀಸ್ ಆಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ! ಬೆಳಗಾವಿ-ಸಮೀಕ್ಷೆ,ಪರಶೀಲನೆ,ಪರಿಷ್ಕರಣೆ,ಸ್ಥಳೀಯ ಬಿಜೆಪಿ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹದ ಬಳಿಕ ಬಿಜೆಪಿ ಹೈಕಮಾಂಡ್ ಇವತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ 224 ರ ಪೈಕಿ 189 ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ.50 ಕ್ಕಿಂತ ಹೆಚ್ಚು ಹೊಸ ಮುಖಗಳಿಗೆ ಬಿಜೆಪಿ ಹೈಕಮಾಂಡ್ ಅವಕಾಶ ನೀಡಿದ್ದು ವಿಶೇಷ. ಮಾಜಿ ಡಿಸಿಎಂ …

Read More »

ಜನ ತೇಲು ಅಂದ್ರೆ ತೇಲ್ತೀನಿ. ಮುಳುಗು ಅಂದ್ರೆ ಮುಗಳ್ತೀನಿ-ಸವದಿ!

ಬೆಳಗಾವಿ-ಯಾರ ಬಗ್ಗೆಯೂ ನಾನು ಕಮೆಂಟ್ ಮಾಡುವುದಿಲ್ಲಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿ, ನಂತರ ಹೇಳುತ್ತೇನೆ ಇದೇ ತಿಂಗಳು 13 ರಂದು ಕ್ಷೇತ್ರದ ಸಭೆ ಕರೆದು ತೀರ್ಮಾನಿಸುತ್ತೇನೆ. ಜನರು ತೆಲೆಂದರೆ ತೇಲುತ್ತೇನೆ ಮುಳುಗಿ ಎಂದರೆ ಮುಳುಗುತ್ತೇನೆ, ಜನರು ಮನೆಯಲ್ಲಿ ಇರು ಎಂದರೆ ಇರುತ್ತೇನೆ.ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಅಥಣಿಯ ತಮ್ಮ ನಿವಾಸದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಜನರು ನನಗೆ ಸ್ಪರ್ಧೆ ಮಾಡೆಂದರೆ ಮಾಡುತ್ತೇನೆ.ಹತ್ತು ವರ್ಷಗಳಿಂದ ಜನರಿಗೆ ನಾ ಹೇಳಿದಂತೆ ಕೇಳಿದ್ದಾರೆಆದರೆ …

Read More »

ರೆಬೆಲ್ಸ್ ಬೇಟೆಗೆ, ಮಂಗಳವಾರ ಬೆಳಗಾವಿಗೆ ಕುಮಾರಣ್ಣ ಎಂಟ್ರಿ!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಈ ಬಂಡಾಯ ಅಭ್ಯರ್ಥಿಗಳನ್ಬು ಜೆಡಿಎಸ್ ಬುಟ್ಟಿಗೆ ಹಾಕಿಕೊಳ್ಳಲು ಮಂಗಳವಾರ ಮಾಜಿ ಸಿಎಂ ಕುಮಾರಣ್ಣ ಬೆಳಗಾವಿಗೆ ಬರ್ತಿದ್ದಾರೆ. ನಾಳೆ ಬೆಳಗ್ಗೆ ಸವದತ್ತಿ ಯಲ್ಲಮ್ಮನ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ,ಚೋಪ್ರಾ ಅವರನ್ನು ಕುಮಾರಸ್ವಾಮಿ ಭೇಟಿಯಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುವಂತೆ ಮನವೊಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕಿತ್ತೂರ ಕ್ಷೇತ್ರದ ಡಿ.ಬಿ ಇನಾಮದಾರ್ ಅವರಿಗೂ ಈ ಬಾರಿ ಕಾಂಗ್ರೆಸ್ …

Read More »

ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಘೋಷಿಸಿದ ಹೈಕಮಾಂಡ್!!

ಬೆಂಗಳೂರು-ಆಮ್ ಆದ್ಮಿ ಪಕ್ಷದಿಂದ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು ರಾಜ್ಯ 28 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ. ಬೆಳಗಾವಿ ನಿಪ್ಪಾಣಿ ಮತಕ್ಷೇತ್ರದಿಂದ ರಾಜೇಶ ಅಣ್ಣಾಸಾಹೇಬ ಬಸವಣ್ಣ, ಬೆಳಗಾವಿ ಉತ್ತರ ಮತಕ್ಷೇತ್ರದಿಂದ ರಾಜಕುಮಾರ ಟೋಪಣ್ಣವರ ಹಾಗೂ ಸವದತ್ತಿ ಮತಕ್ಷೇತ್ರದಿಂದ ಬಾಪುಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಆಮ್ ಆದ್ಮಿ ಪಕ್ಷ ಲಿಂಗಾಯತ ಸಮಾಜದ ಯುವ ನಾಯಕ ರಾಜೀವ ಟೋಪಣ್ಣವರ ಅವರಿಗೆ ಟಿಕೆಟ್ ನೀಡಿದೆ.ಲಿಂಗಾಯತ ಸಮಾಜ ಇವರ …

Read More »

ವಿಧಾನಸಭೆ ಚುನಾವಣೆ:ಬೆಳಗಾವಿಯಲ್ಲಿ, ನೋಡಲ್ ಅಧಿಕಾರಿಗಳ ಸಭೆ

ಬೆಳಗಾವಿ, -ವಿಧಾನಸಭಾ ಚುನಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಎಂ.ಸಿ.ಸಿ. ಸೇರಿದಂತೆ ನೇಮಿಸಲಾಗಿರುವ ವಿವಿಧ ನೋಡಲ್ ಅಧಿಕಾರಿಗಳು ತಮಗೆ ವಹಿಸಲಾಗಿರುವ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಏ.10) ನಡೆದ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾದರಿ ನೀತಿ ಸಂಹಿತೆ, ತರಬೇತಿ, ಸಾರಿಗೆ ನಿರ್ವಹಣೆ, ಗಣಕೀಕರಣ, ಸೈಬರ್ ಭದ್ರತೆ, …

Read More »

ಇವತ್ತು ಯಾವುದೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್!

ಬೆಳಗಾವಿ-ಅಳೆದು ತೂಗಿ,ಪರಿಷ್ಕರಣೆ ಮಾಡಿದ ಬಳಿಕ ಸಮೀಕ್ಷೆಯಲ್ಲಿ ಮೇಲುಗೈ ಸಾಧಿಸಿರುವ,ಗೆಲುವಿನ ಹೊಸ್ತಿಲಲ್ಲಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಬಿಜೆಪಿ ಹೈಕಮಾಂಡ್ ಇವತ್ತು ಯಾವುದೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯದ ಬಿಜೆಪಿ ನಾಯಕರು ಹೇಗಾದರೂ ಮಾಡಿ ಈ ಬಾರಿ ಪೂರ್ಣ ಬಹುಮತ ಸಾಧಿಸಲು ತಂತ್ರ ರೂಪಿಸಿದ್ದು 224 ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡಿಕೊಂಡು ದೆಹಲಿಗೆ ತೆರಳಿದ್ದು,ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ,ನಳೀನ್ ಕುಮಾರ್ …

Read More »

ಚಿಕ್ಕೋಡಿ ಸದಲಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಆಗ್ತಾರಾ ರಮೇಶ್ ಕತ್ತಿ!!

ಬೆಳಗಾವಿ- ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ,ಗಣೇಶ್ ಹುಕ್ಕೇರಿ ಸೋಲಿಲ್ಲದ ಸರ್ದಾರರು,ಜೊತೆಗೆ ಕೆಲಸಗಾರರು,ಕ್ಷೇತ್ರದ ಜನರ ಕ್ರೀಯಾಶೀಲ ಸೇವಕರು, ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿ ಅಪಾರ ಜನಮೆಚ್ಚುಗೆ ಗಳಿಸಿರುವ ಇವರ ವಿರುದ್ಧ ಅಭ್ಯರ್ಥಿ ನಿಲ್ಲಿಸಲು ಬಿಜೆಪಿ ನಾಯಕರು ಎಲ್ಲಿಲ್ಲದ ಕಸರತ್ತು ನಡೆಸಿದ್ದು,ಈ ಕ್ಷೇತ್ರದಿಂದ ರಮೇಶ್ ಕತ್ತಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾರೆ ಎನ್ನುವ ಸುದ್ದಿ ಬೆಳಗಾವಿ ಜಿಲ್ಲೆಯಾದ್ಯಂತ ಸಾಕಷ್ಟು ಪ್ರಚಾರ ಪಡೆದಿದೆ. ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ರಮೇಶ್ ಕತ್ತಿ …

Read More »

ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣಾ? – ರಮೇಶ್ ಜಾರಕಿಹೊಳಿ ಪ್ರಶ್ನೆ.

ಬೆಳಗಾವಿ-ಅಥಣಿ ಬಿಜೆಪಿ ಟಿಕೆಟ್‌ಗೆ ಸವದಿ – ಕುಮಟಳ್ಳಿ ಮಧ್ಯೆ ಫೈಟ್ ನಡೆದಿದ್ದು ಈ ವಿಚಾರವಾಗಿ ರಮೇಶ್ ಜಾರಕಿಹೊಳಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು,ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣಾ?,ದಯವಿಟ್ಟು ಅರಾಮಾಗಿರು ಎಂದು ರಮೇಶ್ ಸವದಿಗೆ ಟಾಂಗ್ ಕೊಟ್ಟಿದ್ದಾರೆ. ಮಹಾರಾಷ್ಟ್ರದ ಶಿನ್ನೊಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು,ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಆಗಲ್ಲ, ನನಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇದೆ, ಮಹೇಶ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಸಿಗುತ್ತೆ.ಮಹೇಶ್ ಜೊತೆಗೆ ಶ್ರೀಮಂತ ಪಾಟೀಲ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಳಗ,ಪಕ್ಕದ ಮಹಾರಾಷ್ಟ್ರಕ್ಕೆ ಶಿಪ್ಟ್!!

*ಇದು ಲಕ್ಷ್ಮೀ ಹೆಬ್ಬಾಳಕರ್  ಟೈಲೆಂಟ್….!!* *ಲಕ್ಷ್ಮೀ-ರಮೇಶ್ ಜಾರಕಿಹೊಳಿ ನಡುವಿನ ಟಾಕ್ ವಾರ್ ಸೈಲೆಂಟ್…!!* *ಆದ್ರೆ ಇಬ್ವರ ನಡುವಿನ ರಾಜಕೀಯ ಜಗಳ ಪರ್ಮನೆಂಟ್..!!* ಬೆಳಗಾವಿ-ಲಕ್ಷ್ಮೀ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ನಡುವೆ ಜೋರಾಗಿ ನಡೆಯುತ್ತಿದ್ದ ಟಾಕ್ ವಾರ್ ಕಳೆದ ಎರಡು ವಾರಗಳಿಂದ ಸೈಲೆಂಟ್ ಆಗಿದೆ.ಈ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಟೈಲೆಂಟ್  ಜಾಣ ನಡೆ ಅನುಸರಿಸಿ ಮೌನಕ್ಕೆ ಶರಣಾಗಿದ್ದಾರೆ. ಈ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವರೂ ಸಹ ಕಳೆದ ಎರಡು ವಾರಗಳಿಂದ ತಮ್ಮ …

Read More »