Breaking News

Tag Archives: Belgaum news

71ಸಾವಿರ ಟನ್ ಕಬ್ಬು ನುರಿಸಿ ಒಂದು ಲಕ್ಷ ಇಪ್ಪತ್ತು ಸಾವಿರ ಬ್ಯಾಗ ಸಕ್ಕರೆ ಉತ್ಪಾದಿಸಿದ ಮಾರ್ಕಂಡೇಯ ಶುಗರ್ಸ

ಬೆಳಗಾವಿ- ಹಲವಾರು ದಶಕಗಳಿಂದ ಅನೇಕ ಅಡತಡೆ ಗಳನ್ನು ಎದುರಿಸಿದ ಕಾಕತಿಯ ಮಾರ್ಕಂಡೇಯ ಶುಗರ್ಸ ಕೊನೆಗೂ ಕಬ್ಬು ನುರಿಸಲು ಆರಂಭಿಸಿದ್ದು ಪ್ರಸಕ್ತ ಹಂಗಾಮಿನಲ್ಲಿ 71 ಸಾವಿರ ಟನ್ ಕಬ್ಬು ನುರಿಸುವಲ್ಲಿ ಯಶಸ್ವಿಯಾಗಿದೆ. ದಿ.ರಾಮಭಾವು ಪೋತದಾರ ಅವರ ಕನಸಿನ ಕೂಸಾಗಿದ್ದ ಮಾರ್ಕಂಡೇಯ ಸಕ್ಕರೆ ಕಾರ್ಖಾನೆ ಕಬ್ಬು ನುಡಿಸಲು ಆರಂಭಿಸಿದೆ ಟ್ರೈಲ್ ಬೇಸ್ ನಲ್ಲಿ 71 ಸಾವಿರ ಟನ್ ಕಬ್ಬು ನುರಿಸಿ 50 kg ಯ ಒಂದು ಲಕ್ಷ 20 ಸಾವಿರ ಸಕ್ಕರೆ ಉತ್ಪಾದಿಸಿದೆ …

Read More »

ಫೆ.28, 29 ರಂದು ಬೆಳಗಾವಿಯಲ್ಲಿ ಪ್ರಾದೇಶಿಕ ಉದ್ಯೋಗ ಮೇಳ

ಪೂರ್ವಸಿದ್ಧತೆ ಸಭೆ: ೧೦೦ ಕ್ಕೂ ಅಧಿಕ ಉದ್ಯೋಗದಾತರು ಭಾಗವಹಿಸುವ ನಿರೀಕ್ಷೆ- ಡಾ.ಬೊಮ್ಮನಹಳ್ಳಿ ————————————————————— ನಗರದಲ್ಲಿ ಫೆ.೨೮, ೨೯ರಂದು ಪ್ರಾದೇಶಿಕ ಉದ್ಯೋಗ ಮೇಳ ಬೆಳಗಾವಿ,  ಇದೇ ತಿಂಗಳು ೨೮ ಹಾಗೂ ೨೯ ರಂದು ಬೆಳಗಾವಿ-ಧಾರವಾಡ ಜಿಲ್ಲೆಗಳ ಪ್ರಾದೇಶಿಕ ಉದ್ಯೋಗಮೇಳವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು. ಪ್ರಾದೇಶಿಕ ಉದ್ಯೋಗ ಮೇಳ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಫೆ.೧೬) ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯೋಗಾಂಕ್ಷಿಗಳ …

Read More »

ಎಲ್ಲರಿಗೂ ಸೂರು ಪ್ರಧಾನಿ ಆಶಯ-ಸುರೇಶ ಅಂಗಡಿ

ದಿಶಾ ಸಮಿತಿಯ ತ್ರೈಮಾಸಿಕ ಸಭೆ; ಎಲ್ಲರಿಗೂ ಸೂರು ಪ್ರಧಾನಿ ಆಶಯ —————————————————————— ವಸತಿ ಯೋಜನೆ ಚುರುಕುಗೊಳಿಸಲು ಕೇಂದ್ರ ಸಚಿವ ಸುರೇಶ್ ಅಂಗಡಿ ಸೂಚನೆ ‌ ಬೆಳಗಾವಿ, ಫೆ.೧೫(ಕರ್ನಾಟಕ ವಾರ್ತೆ): ದೇಶದ ಪ್ರತಿ ಕುಟುಂಬಕ್ಕೂ ೨೦೨೨ ರ ವೇಳೆಗೆ ಮನೆ ಒದಗಿಸಬೇಕು ಎಂಬುದು ಪ್ರಧಾನಮಂತ್ರಿಗಳ ಕನಸಾಗಿದೆ. ಆದ್ದರಿಂದ ಎಲ್ಲರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಕಟ್ಟುನಿಟ್ಟಿನ ಸೂಚನೆ ನೀಡಿದರು. …

Read More »

ಬೆಳಗಾವಿಯ ಮರಾಠಿ ಸಂಘ,ಸಂಸ್ಥೆಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ 20 ಕೋಟಿ ಡೋನೇಶನ್…!!!

ಕರ್ನಾಟಕದ ಮರಾಠಿ ಸಂಸ್ಥೆಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ 20 ಕೋಟಿ…… ಬೆಳಗಾವಿ- ಗಡಿಭಾಗದ ಬೆಳಗಾವಿ,ನಿಪ್ಪಾಣಿ,ಖಾನಾಪೂರ ಸೇರಿದಂತೆ ಕರ್ನಾಟಕದಲ್ಲಿರುವ ಸರ್ಕಾರಿ ಮರಾಠಿ,ಶಾಲೆಗಳಿಗೆ,ಮರಾಠಿ ಸಂಘ ಸಂಸ್ಥೆಗಳಿಗೆ, ಮರಾಠಿ ಗ್ರಂಥಾಲಯ,ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಸಂಘಟನೆಗಳಿಗೆ ಧನ ಸಹಾಯ ಮಾಡಲು ಮಹಾರಾಷ್ಟ್ರ ಸರ್ಕಾರ ಅರ್ಜಿಗಳನ್ನು ಅಹ್ವಾನಿಸಿದೆ. ಸರ್ಕಾರಿ ಮರಾಠಿ ಶಾಲೆಗಳ ಎಸ್ ಡಿ ಎಂ ಸಿ ಗಳು ಮಹಾರಾಷ್ಟ್ರ ಸರ್ಕಾರದ ಸಹಾಯ ಕೋರಿ ಮಹಾರಾಷ್ಟ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.ಅರ್ಜಿ ಸಲ್ಲಿಸಲು ಫೆಬ್ರುವರಿ 20 ಕೊನೆಯ ದಿನಾಂಕ …

Read More »

ರಾಜಕೀಯದಿಂದ ದೂರ ಉಳಿಯುತ್ತೇನೆ .ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತೇನೆ- ರಮೇಶ್ ಜಾರಕಿಹೊಳಿ

ರಾಜಕೀಯದಿಂದ ಇನ್ನು ದೂರ…! ಜಲ ಸಂಪನ್ಮೂಲಕ್ಕೆ ಆದ್ಯತೆ: ಸಚಿವ ರಮೇಶ್ ಬೆಂಗಳೂರು: ರಾಜ್ಯದ ಜಲ ಸಂಪತ್ತನ್ನು ಉಳಿಸಿ ಸಮರ್ಪಕವಾಗಿ ಬಳಸಲು ತಾವು ಬದ್ಧರಾಗಿರುವುದಾಗಿ ಜಲ ಸಂಪನ್ಮೂಲ ಸಚಿವ ರಮೇಶ್ ಲ.ಜಾರಕಿಹೊಳಿ ಹೇಳಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದ ಅವರು, ಶುಕ್ರವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ ಅವರು, ತಮಗೆ ಈ ಜವಾಬ್ದಾರಿ ವಹಿಸಿದ ಮುಖ್ಯಮಂತ್ರಿಗಳಿಗೆ …

Read More »

ಖಾನಾಪೂರದ ಕಾಡಿನಲ್ಲೂ ಅಭಿವೃದ್ದಿಯ ಕಮಾಲ್ ….!!

ಬೆಳಗಾವಿ-ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡುತ್ತಿದ್ದಾರೆ  .ಕ್ಷೇತ್ರದ ಕಾಡಿನಂಚಿನಲ್ಲಿರುವ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಅವರ ಅನುದಾನದಲ್ಲಿ (ಅಂದಾಜು ವೆಚ್ಚ 75 ಲಕ್ಷ ರೂಪಾಯಿ) ಖಾನಾಪುರ ತಾಲೂಕಿನ ತೋರಲಿ ಕ್ರಾಸ್ ನಿಂದ ಹಬ್ಬನಹಟ್ಟಿಯ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದ್ದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಪ್ರಚಾರದ ಹಂಗಿಲ್ಲದೇ ಕ್ಷೇತ್ರದಲ್ಲಿ ಅಬಿವೃದ್ಧಿಯ ಹೊಳೆ ಹರಿಸುತ್ತಿರುವ ಅಂಜಲಿ ನಿಂಬಾಳ್ಕರ್ ಕಾಡುವಾಸಿಗಳ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ …

Read More »

ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯ ಕತ್ತು ಹಿಸುಕಿದ ಪಾಪಿ ಪತಿ

ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯನ್ನು ಕೊಲೆ ಮಾಡಿದ ಪಾಪಿ ಪತಿ ಬೆಳಗಾವಿ: ಹೆಣ್ಣು ಹಡೆದರೆ ಪಾಪ,ಹಡೆದವಳಿಗೆ ಅದರ ಶಾಪ ಎನ್ನುವಂತೆ ಹೆಣ್ಣು ಹಡೆದ ಹೆಣ್ಣು ಅದೆಷ್ಟೋ ಕಷ್ಟ ಅನುಭವಿಸುತ್ತಾಳೆ,ಕೊನೆಗೆ ಈ ಪಾಪಿ ಸಮಾಜದಲ್ಲಿ ಯಾವ ರೀತಿ ತನ್ನ ಜೀವ ಕೊಡುತ್ತಾಳೆ ಅನ್ನೋದಕ್ಕೆ ಬೆಳಗಾವಿಯಲ್ಲಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿಯಾಗಿದೆ.ಪ್ರೇಮಿಗಳ ದಿನದಂದೇ ಪಾಪಿ ಪತಿಯೊಬ್ಬ ತನ್ನ ಮಡದಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕತ್ತು ಹಿಸುಕಿ ಪತಿಯಿಂದಲೇ ಪತ್ನಿಯ ಹತ್ಯೆಗೈದಿರುವ …

Read More »

ಬೆಳಗಾವಿಯ ಕೋಟೆ ಕೆರೆಯಲ್ಲಿ ಅಪರಿಚಿತ ಶವ ಪತ್ತೆ

ಸುಸೈಡ್ ಸ್ಪಾಟ್ ಆಗುತ್ತಿದೆಯಾ,ಬೆಳಗಾವಿಯ ಕೋಟೆ ಕೆರೆ… ಬೆಳಗಾವಿ- ಬೆಳಗಾವಿಯ ಕೋಟೆ ಕೆರೆಯಲ್ಲಿ ಇಂದು ಅಪರಿಚಿತ ಶವ ದೊರೆತಿದ್ದು ಈ ಕೆರೆ ದಿನಕಳೆದಂತೆ ಸುಸೈಡ್ ಸ್ಪಾಟ್ ಆಗುತ್ತಿದೆ ಇಂದು ಕೋಟೆ ಕೆರೆಯಲ್ಲಿ ದೊರೆತಿರುವ ಅಪರಿಚಿತ ವ್ಯೆಕ್ತಿಯ ಶವ ,50 ರಿಂದ 55 ವರ್ಷದ ವ್ಯೆಕ್ತಿಯ ಶವವಾಗಿದೆ ಎಂದು ಪೋಲಿಸರು ಅಂದಾಜಿಸಿದ್ದು ನೀಲಿ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈ ವ್ಯೆಕ್ತಿಯ ಕುರಿತು ಮಾಹಿತಿ ಇದ್ದಲ್ಲಿ ಕೂಡಲೇ ಬೆಳಗಾವಿಯ ಮಾರ್ಕೆಟ್ ಠಾಣೆಗೆ …

Read More »

ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲಿ ಬೋರ್ಡ್ ಹಾಕಿ- ಸುರೇಶ ಅಂಗಡಿ

ಬೆಳಗಾವಿ ಸ್ಮಾಟ್೯ಸಿಟಿ ಕಾಮಗಾರಿ ಮಾಡುವ ಮುಂಚೆ ನಗರದಲ್ಲಿ ಸಾರ್ವಜನಜಕರಿಗೆ ತಿಳಿಯುವಂತೆ ನಾಮಫಲಕ ಅಳಡಿಕೆ ಮಾಡಿ ಎಂದು ಕೇಂದ್ರ ಸಚಿವ ಸುರೇಶ‌ ಅಂಗಡಿ ಹೇಳಿದರು. ಬೆಳಗಾವಿ ಸ್ಮಾಟ್೯ಸಿಟಿ ಸಲಹಾ ಸಮಿತಿಯ ಸಭೆಯಲ್ಲಿ‌ ಮಾತನಾಡಿದರು. ನಗರದಲ್ಲಿ ಸ್ಮಾಟ್೯ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಗುತ್ತಿಗೆ ಪಡೆದವರು ಕಾಮಗಾರಿ ಪ್ರಗತಿಯಲ್ಲಿವೆ ಎಂದು ನಾಮಫಲಕ ಅಳವಡಿಸಿದರೆ ಸಾರ್ವಜನಿಕರಿಗೆ ಸಹಾಯವಾಗುತ್ತದೆ ಎಂದರು. ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ‌ ಕೋರೆ ಮಾತನಾಡಿ, ವೈಟ್ ಟಾಪಿಂಗ್ ಬಗ್ಗೆ ಯಾವ ರೀತಿ ಯೋಜನೆ ಮಾಡುತ್ತಿರಿ. ದಂಡುಮಂಡಳಿಯ …

Read More »

ನಾಳೆ ಬೆಳಗಾವಿಯಲ್ಲಿ ಬೃಹತ್ ಕನ್ನಡದ ಚಳುವಳಿ…

ಮರಾಠಿ ಸಾಹಿತ್ಯ ಸಮ್ಮೇಳನಗಳ ನೆಪದಲ್ಲಿ ಮರಾಠಿಗರಿಗೆ ಎಮ್ ಇ ಎಸ್ ಪ್ರಚೋದನೆಯ ವಿರುದ್ಧ ಸೋಮವಾರ ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟಿಸಲಿವೆ. ಬೆಳಗಾವಿ ಡಿಸಿ,ಎಸ್ಪಿ,ಪೋಲೀಸ್ಆಯುಕ್ತರಿಗೆ ಮನವಿ ಸಲ್ಲಿಸಿ ಬೆಳಗಾವಿಯಲ್ಲಿ ಎಂಈಎಸ್ ಮತ್ತು ಶಿವಸೇನೆಯ ಪುಂಡಾಟಿಕೆಗೆ ಲಗಾಮು ಹಾಕುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಿವೆ ಬೆಳಗಾವಿ ಜಿಲ್ಲೆಯ ಬೆಳಗಾವಿ,ಖಾನಾಪುರ,ನಿಪ್ಪಾಣಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಗಡಿವಿವಾದವನ್ನು ಕೆದಕುವ,ಪ್ರಚೋದಿಸುವ ಚಟುವಟಿಕೆಗಳು ನಡೆದಿದ್ದು ಇವುಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ …

Read More »