ರಸ್ತೆ ವಾಹನ ಸಂಚಾರ ಗಣತಿ ಫೆ.೧೯ ರಿಂದ
ಬೆಳಗಾವಿ, ಫೆ.೧೭(ಕರ್ನಾಟಕ ವಾರ್ತೆ): “ಕರ್ನಾಟಕ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆವತಿಯಿಂದ
ರಸ್ತೆ ವಾಹನ ಸಂಚಾರ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಈ ಗಣತಿ ಕಾರ್ಯವು ಫೆ. 19 ರ ಬೆಳಿಗ್ಗೆ 6 ಗಂಟೆಯಿಂದ ಫೆ.26 ರ ಬೆಳಿಗ್ಗೆ 6.00 ಗಂಟೆಯ ವರೆಗಿನ ಒಟ್ಟು 7 ದಿನಗಳ ಕಾಲ ಸತತವಾಗಿ ನಡೆಯಲಿದೆ.
ಲೋಕೋಪಯೋಗಿ ಇಲಾಖೆಯ ಎಲ್ಲ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ರಸ್ತೆಗಳ
ಬದಿಯಲ್ಲಿ ತಾತ್ಕಾಲಿಕ ಗಣತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಗಣತಿ ಕೇಂದ್ರಗಳಿದ್ದಲ್ಲಿ ವಾಹನಗಳ ರಸ್ತೆ ಸಂಚಾರ ಗಣತಿ ಕೇಂದ್ರವಿದೆ. ನಿಮ್ಮವಾಹನಗಳನ್ನು ನಿಧಾನವಾಗಿ ಚಲಿಸಿ” ಎಂದು ಸೂಚನಾ ಫಲಕಗಳನ್ನು ತೂಗು ಬಿಟ್ಟಿರುತ್ತಾರೆ. ಎಲ್ಲ ವಾಹನ ಚಾಲಕರು ಹಾಗೂ ಸಾರ್ವಜನಿಕರು ವಾಹನ ಗಣತಿ ಕೇಂದ್ರಗಳ ಮುಂದೆ ತಮ್ಮ ವಾಹನಗಳನ್ನು
ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗುವ ಮೂಲಕ ವಾಹನ ಗಣತಿ ಕಾರ್ಯದಲ್ಲಿ ಸಹಕರಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಬೆಳಗಾವಿ ವೃತ್ತದ ಅಧೀಕ್ಷಕ ಎಂಜಿನಿಯರ್ ಬಿ.ವೈ.ಪವಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
***
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ