Home / ಸಿನೆಮಾ / ಎಲ್ಲಾ ದಾಖಲೆಗಳನ್ನು ಮುರಿದ ಕಬಾಲಿ: ಮೊದಲ ದಿನವೇ ಬರೋಬ್ಬರಿ 250 ಕೋಟಿ ಗಳಿಕೆ

ಎಲ್ಲಾ ದಾಖಲೆಗಳನ್ನು ಮುರಿದ ಕಬಾಲಿ: ಮೊದಲ ದಿನವೇ ಬರೋಬ್ಬರಿ 250 ಕೋಟಿ ಗಳಿಕೆ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ವಿಶ್ವಾದ್ಯಂತ ಬಿಡುಗಡೆಗೊಂಡ ಮೊದಲ ದಿನವೇ 250 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುವ ಮೂಲಕ ಈವರೆಗಿನ ಎಲ್ಲಾ ದಾಖಲೆಗಳನ್ನು ಕಬಾಲಿ ಮುರಿದಂತಾಗಿದೆ.
ತಮಿಳುನಾಡಿನ ಥಿಯೇಟರ್ ಗಳಲ್ಲಿಯೇ ನೂರು ಕೋಟಿ ರೂಪಾಯಿ ಹಾಗೂ ದೇಶದ ವಿವಿಧ ಚಿತ್ರಮಂದಿರಗಳಲ್ಲಿ (150ಕೋಟಿ) ಕಬಾಲಿ 250 ಕೋಟಿ ಗಳಿಕೆ ಮಾಡಿರುವುದಾಗಿ ಚಿತ್ರದ ನಿರ್ಮಾಪಕ ಎಸ್ ತನು ತಿಳಿಸಿದ್ದಾರೆ. ಬಾಲಿವುಡ್ ನ ಪಿಕೆ, ಸುಲ್ತಾನ್ ಸಿನಿಮಾದ ದಾಖಲೆ ಸೇರಿದಂತೆ ಇತ್ತೀಚೆಗಿನ ಬಾಹುಬಲಿ ಸಿನಿಮಾದ ದಾಖಲೆಯನ್ನೂ ಕಬಾಲಿ ಸರಿಗಟ್ಟಲಿದೆ ಎಂದು ಹೇಳಲಾಗುತ್ತಿದೆ.
ವಿಶ್ವಾದ್ಯಂತ ಕಬಾಲಿ ಶುಕ್ರವಾರ ಸುಮಾರು 8ರಿಂದ 10 ಸಾವಿರ ಸ್ಕ್ರೀನ್ ಗಳಲ್ಲಿ ಬಿಡುಗಡೆಗೊಂಡಿತ್ತು. ಅಮೆರಿಕದ 480 ಸ್ಕ್ರೀನ್, ಮಲೇಶ್ಯಾದ 490 ಹಾಗೂ ಗಲ್ಫ್ ದೇಶಗಳಲ್ಲಿನ 500 ಸ್ಕ್ರೀನ್ ಗಳು ಇದರಲ್ಲಿ ಸೇರಿವೆ. ಸೂಪರ್ ಸ್ಟಾರ್ ರಜನಿ ಅಭಿನಯದ ಕಬಾಲಿ ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಶ್ರೀಲಂಕಾ, ಸ್ವಿಟ್ಜರ್ ಲ್ಯಾಂಡ್, ಡೆನ್ಮಾರ್ಕ್, ಹಾಲೆಂಡ್, ಸ್ವೀಡನ್, ದಕ್ಷಿಣ ಆಫ್ರಿಕಾ ಹಾಗೂ ನೈಜೀರಿಯಾಗಳಲ್ಲಿ ಬಿಡುಗಡೆಯಾಗಿತ್ತು.

About wasim

Check Also

ಸತೀಶ ಜಾರಕಿಹೊಳಿ ಹೈಕಮಾಂಡ್ ಚಿತ್ರದ ಆಡಿಶನ್ ಗೆ ಸಿದ್ಧರಾಮಯ್ಯ ಹಾಜರ್

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ನಿರ್ಮಾಣದ ಹೈಕಮಾಂಡ ಚಿತ್ರದ ಆಡಿಶನ್ ಬೆಳಗಾವಿಯಲ್ಲಿ ನಡೆಯಿತು ಇದರಲ್ಲಿ ಜ್ಯುನೀಯರ ಸಿದ್ಧರಾಮಯ್ಯ ಪಾಲ್ಗೊಂಡು ಎಲ್ಲರ …

Leave a Reply

Your email address will not be published. Required fields are marked *

WP Facebook Auto Publish Powered By : XYZScripts.com