ಹಳ್ಳಾ ಹಿಡಿದ ಮನಮೋಹನ ಸರಿನ್
ಕಮಿಟಿ:ಸಾಕ್ಷಿ ಸಂಗ್ರಹಕ್ಕೆ ತಿಣಕಾಡಿದ್ದ
ಮಹಾರಾಷ್ಟ್ರಕ್ಕೆ ಭಾರೀ ಹಿನ್ನೆಡೆ!!
ಇಂದು ಸೋಮವಾರ ಸರ್ವೋನ್ನತ ನ್ಯಾಯಾಲಯದ ಎದುರು ವಿಚಾರಣೆಗೆ ಬಂದಿದ್ದ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪ್ರಕರಣವನ್ನು ಮಾರ್ಚ 10ಕ್ಕೆ ಮುಂದೂಡಲಾಗಿದೆ.
2014 ರಲ್ಲಿ ಅಂದಿನ ಮು.ನ್ಯಾ.ಮೂ.ಎಮ್.ಆರ್ ಲೋಧಾ ಅವರು ಪ್ರಕರಣದ ವಿಚಾರಣೆಗಾಗಿ ಸಾಕ್ಷಿ ಕೇಳಲು ನಿ.ನ್ಯಾ.ಮೂ.ಮನಮೋಹನ್ ಸರಿನ್ ಕಮಿಟಿಯನ್ನು ನೇಮಕ ಮಾಡಿದ್ದರು.ನ್ಯಾಯಾಲಯದ ಅಧಿಕಾರವ್ಯಾಪ್ತಿಗೆ ಈ ಪ್ರಕರಣ ಬರುವದಿಲ್ಲವೆಂದು ಕರ್ನಾಟಕವು ವಾದಿಸುತ್ತಲೇ ಬಂದಿತ್ತು.
ವ್ಯಾಪ್ತಿಯ ಬಗ್ಗೆ ಉಭಯ ರಾಜ್ಯಗಳ ವಾದ ಕೇಳಲು ಮಾರ್ಚ 10 ನ್ನು ನ್ಯಾಯಾಲಯ ನಿಗದಿ ಮಾಡಿರುವದರಿಂದ ಪ್ರಕರಣವು ಮಹತ್ವದ ಘಟ್ಟ ತಲುಪಿದಂತಾಗಿದೆ.2004 ರಲ್ಲಿ ಮಹಾರಾಷ್ಟ್ರವು ಪ್ರಕರಣವನ್ನು ದಾಖಲಿಸಿದಾಗಿನಿಂದಲೂ ಸುಪ್ರೀಮ್ ಕೋರ್ಟಿನ ವ್ಯಾಪ್ತಿಯ ಕುರಿತು ವಾದ ವಿವಾದವನ್ನು ಆಲಿಸಲಾಗಿಲ್ಲ.ಈ ಬಗ್ಗೆ ನಿರ್ಧಾರ ಕೈಗೊಂಡ ನಂತರವಷ್ಟೇ ವಿಚಾರಣೆ ಕೈಗೆತ್ತಿಕೊಳ್ಳಬೇಕೆಂಬುದು ಕರ್ನಾಟಕದ ವಾದವಾಗಿದೆ.
ಕೃಪೆ ಅಶೋಕ ಚಂದರಗಿ