ಬೆಳಗಾವಿ- ಶಶಿಕಲಾ ಜೊಲ್ಲೆ ಮುಜರಾಯಿ ಇಲಾಖೆಯ ಸಚಿವರು ಇವರ ತವರಿನಲ್ಲೇ ಇವರ ಇಲಾಖೆಯ ಇಬ್ಬರು ಲಂಚುಬೋಕರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ತವರು ಜಿಲ್ಲೆಯಲ್ಲೇ ಮುಜರಾಯಿ ಇಲಾಖೆಯ ಭ್ರಷ್ಟಾಚಾರ ಬಟಾಬಯಲು ಆಗಿದೆ. ಬೆಳಗಾವಿ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ಇಬ್ಬರು ಭ್ರಷ್ಟರನ್ನು ಬಂಧಿಸಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾಗಿದ್ದ ಅನುದಾನ ಬಿಡುಗಡೆಗೆ ಲಂಚಕ್ಕೆ ಬೇಡಿಕೆಯಿಟ್ಟ ಇಬ್ಬರು ಅಧಿಕಾರಿಗಳು ಎಸಿಬಿ ಪೋಲೀಸರ ಅತಿಥಿಯಾಗಿದ್ದಾರೆ. *ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಮುಜರಾಯಿ …
Read More »ಬೆಳಗಾವಿ ಡಿಸಿ, ಹಿರೇಮಠ ಅವರಿಗೂ ಕೊರೋನಾ ಸೊಂಕು..
ಬೆಳಗಾವಿ- ಮಹಾಮಾರಿ ಕೊರೋನಾ ಈಗ ಸಾಮಾನ್ಯವಾಗಿದೆ ಯಾಕಂದ್ರೆ ಇದು ಎಲ್ಲರ ಬೆನ್ನಿಗೆ ಬಿದ್ದಿದೆ.ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರಿಗೂ ಸೊಂಕು ತಗಲಿರುವದು ದೃಡವಾಗಿದೆ. ಜಿಲ್ಲಾಧಿಕಾರಿಗಳು ರ್ಯಾಪೀಡ್ ಟೆಸ್ಟ್ ಮಾಡಿಸಿದ್ದರು ಅದರಲ್ಲಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅವರು RTPCR ಟೆಸ್ಟ್ ಮಾಡಿಸಿಕೊಂಡಿದ್ದರು ಅದರಲ್ಲಿಯೂ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಆದ್ರೆ ಈ ಕುರಿತು ಜಿಲ್ಲಾಡಳಿತ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
Read More »25 ಲಕ್ಷ ಗುಳುಂ ಮಾಡಲು ಸಾಂಗಲಿಯಿಂದ ಪಿಸ್ತೂಲು ತಂದಿದ್ದ…
ಬೆಳಗಾವಿ- ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡರದಿದ್ದ ಮಹಿಳೆಯ ಶೂಟೌಟ್ ಪ್ರಕರಣವನ್ನ ಸಂಕೇಶ್ವರ ಪೊಲೀಸರು ಬೇಧಿಸಿದ್ದು ಶೂಟೌಟ್ ನಡೆಸಿ ಮಹಿಳೆಯನ್ನ ಕೊಲೆ ಮಾಡಿದ್ದ ಬಿಜೆಪಿ ಪುರಸಭೆ ಸದಸ್ಯನನ್ನ ಪೊಲೀಸರು ಬಂಧಿಸಿದ್ದಾರೆ. ಸಂಕೇಶ್ವರ ವಾರ್ಡ ನಂಬರ್ 14 ರ ಬಿಜೆಪಿ ಪುರಸಭೆ ಸದಸ್ಯ ಉಮೇಶ ಕಾಂಬಳೆ ಎಂಬಾತನನ್ನ ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಳೆದ ಜನೇವರಿ 16 ರವಿವಾರದಂದು ನಾಡ ಪಿಸ್ತೂಲನಿಂದ ಶೈಲಾ ನಿರಂಜನ ಸುಭೇದಾರ, 56 ಮಹಿಳೆಗೆ ಎದೆಗೆ …
Read More »ರಮೇಶ್ ಜಾರಕಿಹೊಳಿಯನ್ನು ರಾಕ್ಷಸನಿಗೆ ಹೋಲಿಸಿದ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ರಮೇಶ್ ಜಾರಕಿಹೊಳಿಯನ್ನು ರಾಕ್ಷಸನಿಗೆ ಹೋಲಿಸಿದ್ದಾರೆ. ಬೆಳಗಾವಿ ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ನಾಲ್ಕೂವರೆ ಕೋಟಿ ರೂಪಾಯಿಯ ಪ್ಯಾಕೇಜ್ ಇದು,ಎರಡು ವರ್ಷದ ಹಿಂದೆಯೇ ನಾಲ್ಕೂವರೆ ಕೋಟಿ ರೂಪಾಯಿ ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿತ್ತು ಆದ್ರೆ ದುರ್ದೈವದಿಂದ ನಮ್ಮ ಸರ್ಕಾರ ಬಿತ್ತುರಮೇಶ್ ಜಾರಕಿಹೊಳಿಯವರು ನೀರಾವರಿ ಮಂತ್ರಿ …
Read More »ಶನಿವಾರ ಶಿವಸೇನೆ, ಕಾರ್ಯಕರ್ತರು ಬೆಳಗಾವಿಗೆ ಮುತ್ತಿಗೆ ಹಾಕ್ತಾರಂತೆ…..!!
ಬೆಳಗಾವಿ-ಗಡಿನಾಡಿನಲ್ಲಿ ಶಿವಸೇನೆಯ ಪುಂಡಾಟಿಕೆ ಮತ್ತೆ ಶುರುವಾಗಿದೆ.ಶನಿವಾರ ಶಿವಸೇನೆ ಕಾರ್ಯಕರ್ತರು ಬೆಳಗಾವಿಗೆ ಮುತ್ತಿಗೆ ಹಾಕಲು ನಿರ್ದರಿಸಿದ್ದಾರೆ. ಬೆಳಗಾವಿ,ಬೆಂಗಳೂರಿನಲ್ಲಿ ಶಿವಸೇನೆ ಮತ್ತು ಎಂಈಎಸ್ ಕಾರ್ಯಕರ್ತರ ಮೇಲೆ ಹಾಕಿರುವ ರಾಜದ್ರೋಹದ ಕೇಸ್ ವಾಪಸ್ ಪಡೆಯುವಂತೆ ಆಗ್ರಹಿಸಿ ಶನಿವಾರ ದಿ.22 ರಂದು ಶಿವಸೇನೆ ಕಾರ್ಯಕರ್ತರು ಕೊಲ್ಹಾಪೂರದಿಂದ ಬೆಳಗಾವಿಯವರೆಗೆ ಪಾದಯಾತ್ರೆ ನಡೆಸಿ ಬೆಳಗಾವಿಗೆ ಮುತ್ತಿಗೆ ಹಾಕುತ್ತಾರೆ ಎಂದು ಮರಾಠಿ ಮಾದ್ಯಮಗಳು ಸುದ್ದಿ ಮಾಡಿವೆ. ನಿರಂತರವಾಗಿ ಕಾಲು ಕೆದರಿ ಜಗಳಕ್ಕೆ ನಿಂತಿರುವ ಕೊಲ್ಹಾಪೂರದ ಶಿವಸೇನೆ ಮುಖಂಡ ವಿಜಯ ದೇವಣೆ …
Read More »ಬೆಳಗಾವಿ ಜಿಲ್ಲೆಯಲ್ಲಿ 89 ಪೊಲೀಸರಿಗೆ ಕೋವಿಡ್
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರನ್ನು ಬಿಟ್ಟು ಬಿಡದೇ ಕೊರೊನಾ ಮಹಾಮಾರಿ ಕಾಡುತ್ತಲೇ ಇದೆ.ಬೆಳಗಾವಿ ಜಿಲ್ಲೆಯಲ್ಲಿ ಒಟ್ಡು 89 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೊಂಕು ತಗಲಿದ್ದು ದೃಡವಾಗಿದೆ. ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲೇ 39 ಸಿಬ್ಬಂದಿಗೆ ಕೋವಿಡ್ ಸೊಂಕು ತಗಲಿದೆ.ಬೆಳಗಾವಿ ಎಪಿಎಂಸಿ ಠಾಣೆಯ 11 ಸಿಬ್ಬಂದಿ, ಶಹಾಪುರ ಠಾಣೆಯ ಮೂವರು ಸಿಬ್ಬಂದಿಗೆ ಸೊಂಕು ತಗಲಿದೆ. ಟಿಳಕವಾಡಿ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಕೋವಿಡ್ ಹಾಗೂ ಬೆಳಗಾವಿಯ ಓರ್ವ ಇನ್ಸ್‌ಪೆಕ್ಟರ್, ಇಬ್ಬರು ಪಿಎಸ್ಐ ಸೇರಿ ಕಮಿಷನರೇಟ್ …
Read More »ಮೋಬೈಲ್ ತೆಗೆದುಕೊಳ್ಳಲು ದುಡ್ಡು ಕೊಡದ ಅತ್ತಿಗೆಯ ಮರ್ಡರ್…
ಬೆಳಗಾವಿ ಮೊಬೈಲ್ ತೆಗೆದುಕೊಳ್ಳಲು ಹಣ ನೀಡಲು ನಿರಾಕರಿಸಿದ ಅತ್ತಿಗೆಯನ್ನೇ ಕೊಲೆ ಮಾಡಿದ್ದ ಮೈದುನನ್ನು ಪೊಲೀಸರು ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ಕ್ಷೀಪ್ರ ಕಾರ್ಯಾಚರಣೆಯಿಂದ ಆಕಸ್ಮಿಕ ಸಾವು ಪ್ರಕರಣ ಕೊಲೆಯ ರಹಸ್ಯವನ್ನು ಬಿಚ್ಚಿಡುವಂತೆ ಸಾರಿದೆ. ಮಹಾಂತೇಶ ನಗರದಲ್ಲಿ ವಾಸವಾಗಿದ್ದ ಬಸಲಿಂಗವ್ವ ಅದೃಶಿ ಎಮ್ಮಿನಕಟ್ಟಿ (೨೯) ಹತ್ಯೆಗೀಡಾಗಿದ್ದ ಮಹಿಳೆ. ಮಂಜುನಾಥ ಶಿವಪುತ್ರ ಎಮ್ಮಿನಕಟ್ಟಿ (೩೨) ಬಂಧಿತ ಆರೋಪಿಯಾಗಿದ್ದಾನೆ. ಮೂಲತಃ ಖಾನಾಪುರ ತಾಲೂಕಿನ ಗುಂಡೆನಟ್ಟಿ ಗ್ರಾಮದವರಾದ ಇವರು ಹೊಟ್ಟೆಪಾಡಿಗಾಗಿ ಬೆಳಗಾವಿ ನಗರಕ್ಕೆ ಬಂದು …
Read More »ತುಂಬು ಗರ್ಭಿಣಿ ಆಕಳಿಗೆ ಸೀಮಂತ…
ಚಿಕ್ಕೋಡಿಯಲ್ಲಿ ಹಸುಗೆ ಸೀಮಂತ ಕಾರ್ಯ ನೆರವೇರಿಸಿ ಸಂಭ್ರಮಿಸಿದ ಕುಟುಂಬಸ್ಥರು ಚಿಕ್ಕೋಡಿ: ತುಂಬು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡುವುದು ವಾಡಿಕೆ.ಆದರೇ, ಇಲ್ಲೋಂದು ಗ್ರಾಮದಲ್ಲಿ ಮನೆಯಲ್ಲಿದ್ದ ಏಳು ತಿಂಗಳ ತುಂಬು ಗರ್ಭಿಣಿ ಆಕಳಿಗೆ ಸೀಮಂತ ಕಾರ್ಯನೆರವೇರಿಸಿ ಸಂಭ್ರಮಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಅಪ್ಪಾಸಾಹೇಬ ಪಾಟೋಳೆ ಎಂಬುವವರು ತಮ್ಮ ಆಕಳಿಗೆ ಸೀಮಂತ ಕಾರ್ಯಕ್ರಮ ನೆರೆವೇರಿಸಿದವರು. ಕಳೆದ ಹಲವಾರು ವರ್ಷಗಳಿಂದ ಅಪ್ಪಾಸಾಹೇಬ ಪಾಟೋಳೆ ಅವರು ತಮ್ಮ ಮನೆಯಲ್ಲಿರುವಂತಹ ಆಕಳುಗಳಿಗೆ ವಿಶೇಷ ಸ್ಥಾನಮಾನ ನೀಡುವದಲ್ಲದೇ …
Read More »ಬಡ್ಡಿ ವ್ಯವಹಾರ, ಶೂಟೌಟ್ ಮಹಿಳೆಯ ಮರ್ಡರ್…
ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಶೂಟೌಟ್ ನಡೆಸಿ ಮಹಿಳೆಯ ಕೊಲೆ ಚಿಕ್ಕೋಡಿ: ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಸಂಕೇಶ್ವರ ಪಟ್ಟಣದಲ್ಲಿ ನಡೆದಿದ್ದು ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈಗಾಗಲೇ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ಶೈಲಾ ನಿರಂಜನ ಸುಭೇದಾರ (56) ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ.ಈ …
Read More »ಮಾಸ್ಕ್ ಹಾಕೊಳ್ರಿ ಅಂದಿದ್ದಕ್ಕೆ ಕಿರಿಕ್ ಮಾಡಿದ ಡಾಕ್ಟರ್…..!!!
ಬೆಳಗಾವಿ- ಇವತ್ತು ವಿಕೆಂಡ್ ಕರ್ಫ್ಯು ,ಬೆಳ್ಳಂ ಬೆಳಿಗ್ಗೆ ಪೋಲೀಸರು ಅನಗತ್ಯವಾಗಿ ಸುತ್ತಾಡುವ,ವಾಹನಗಳನ್ನು,ಸೀಜ್ ಮಾಡುವದು,ಜೊತೆಗೆ ಹೆಲ್ಮೆಟ್, ಮಾಸ್ಕ ಹಾಕಿಕೊಳ್ಳದ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯಾಚರಣೆ ಶುರು ಮಾಡಿಕೊಂಡಿದ್ದರು. ಬೆಳಗಾವಿಯ ಚನ್ನಮ್ಮಾ ವೃತ್ತ ದಲ್ಲಿ ,ಮಾಸ್ಕ್ ಹಾಕಿಕೊಳ್ಳಿ ಅಂದಿದ್ದಕ್ಕೆ ವೈದ್ಯೆ ಪೋಲೀಸ್ ಅಧಿಕಾರಿಗಳಿಗೆ ಕಿರಿಕ್ ಮಾಡಿದ ಘಟನೆಯೂ ನಡೆಯಿತು. ಡಿಸಿಪಿ ಜತೆಗೆ ಕಿರಿಕ್ ಮಾಡಿದ ಡಾಕ್ಟರ್, ಕೆಲ ಹೊತ್ತು ಅಧಿಕಾರಿಗಳ ಜೊತೆಗೆ ವಾಗ್ವಾದ ಮಾಡಿದ್ರು. ಕಾರಿನಲ್ಲಿ ಮಾಸ್ಕ್ ಹಾಕದೇ ಹೋಗುತ್ತಿದ್ದ ವೈದ್ಯೆ …
Read More »