Breaking News
Home / LOCAL NEWS (page 39)

LOCAL NEWS

ಸ್ವಾಮೀಜಿ ಸೇರಿ ರಾಜ್ಯದ ಮೂವರು ಸಚಿವರಿಗೆ ಜೀವ ಬೆದರಿಕೆ ಪತ್ರ

ಬೆಳಗಾವಿ-ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀ ಸೇರಿ ಮೂವರು ಸಚಿವರಿಗೆ ಅನಾಮಿಕನೊಬ್ಬ ಜೀವ ಬೆದರಿಕೆ ಪತ್ರ ಬರೆದಿದ್ದಾನೆ. ಸಚಿವ ಸತೀಶ ಜಾರಕಿಹೊಳಿ,ದಿನೇಶ ಗುಂಡೂರಾವ್, ಪ್ರೀಯಾಂಕ್ ಖರ್ಗೆಗೂ ಜೀವ ಬೆದರಿಕೆ ಪತ್ರ ಬರೆಯಲಾಗಿದೆ.ಹಲವು ಪ್ರಗತಿಪರರು ವಿಚಾರವಾದಿಗಳಿಗೂ ಜೀವ ಬೆದರಿಕೆ ಹಾಕಲಾಗಿದೆ.ಸಪ್ಟಂಬರ್ 20 ರಂದು ಬೈಲೂರು ನಿಷ್ಕಲ ಮಂಟಪಕ್ಕೆ ಬಂದಿರುವ ಬೆದರಿಕೆ ಪತ್ರ ಈ ಪತ್ರ ದಲ್ಲಿ ಹಲವಾರು ಪ್ರಗತಿಪರ ವಿಚಾರವಾದಿಗಳ ಹೆಸರು ಪ್ರಸ್ತಾಪಿಸಲಾಗಿದೆ.ಕಳೆದ ತಿಂಗಳಷ್ಟೆ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬಂದಿತ್ತು.ಈಗ ಮತ್ತೆ …

Read More »

ವಿದ್ಯುತ್ ತಂತಿ ತಗುಲಿ ಹಾಸ್ಟೆಲ್ ವಿದ್ಯಾರ್ಥಿ ಸಾವು

ಬೆಳಗಾವಿ-ವಿದ್ಯುತ್ ತಂತಿ ತಗುಲಿ ಹಾಸ್ಟೆಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ,ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ತಲ್ಲೂರ ಗ್ರಾಮದಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಗಣೇಶ ಪೂಜೇರ (15) ಮೃತ ದುರ್ದೈವಿಯಾಗಿದ್ದಾನೆತಲ್ಲೂರಿನ ಬಸವೇಶ್ವರ ಯುವಕ ಮಂಡಳ ಪ್ರೌಢ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ,ಆಟ ಆಡುತ್ತಾ ಮೇಲ್ಛಾವಣಿ ಮೇಲೆ ತೆರಳಿದ ವಿದ್ಯಾರ್ಥಿ ವಿದ್ಯುತ್ ತಂತಿ ಹಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯರಗಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More »

ದಾಖಲೆ ನಿರ್ಮಿಸಿದ ಬೆಳಗಾವಿಯ ಗಣೇಶ್ ವಿಸರ್ಜನೆ ಮೆರವಣಿಗೆ….!

ಬೆಳಗಾವಿಯಲ್ಲಿ ಮೇಘಾ ಇವೆಂಟ್ ಸಕ್ಸೆಸ್ ಬೆಳಗಾವಿ- ಬೆಳಗಾವಿಯ ಗಣೇಶ ಹಬ್ನ ಐತಿಹಾಸಿಕ ಮತ್ತು ಅಭೂತಪೂರ್ವ, 350 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಲಕ್ಷಾಂತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ವಿಸರ್ಜನೆ ಮಾಡುವದು ಸುಲಭದ ಮಾತಲ್ಲ,ಇಂತಹ ಕಠಿಣವಾದ ಕೆಲಸವನ್ನು ಬೆಳಗಾವಿ ಜಿಲ್ಲಾಡಳಿತ ಅತ್ಯಂತ ಯಶಸ್ವಿಯಾಗಿ ಶಾಂತಿಯುತವಾಗಿ, ಸುಸಜ್ಜಿತವಾಗಿ ನಡೆಸಿದೆ. ಗುರುವಾರ ಸಂಜೆ ಬೆಳಗಾವಿಯಲ್ಲಿ ಆರಂಭವಾದ ಗಣೇಶ ವಿಸರ್ಜನಾ ಮೆರವಣಿಗೆ ಶುಕ್ರವಾರ ರಾತ್ರಿ 11 ಗಂಟೆಗೆ ಮುಕ್ತಾಯವಾಗಿದ್ದು 30 ಗಂಟೆಗಳ ಕಾಲ ನಡೆದ …

Read More »

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಆರು, ಅಂತಸ್ಥಿನ ಭವ್ಯ ಸರಕಾರಿ ಕಟ್ಟಡ…!!

ಬೆಳಗಾವಿ: 145×71 ಅಳತೆಯ 6 ಅಂತಸ್ಥಿನ ಭವ್ಯ ಸರಕಾರಿ ಕಟ್ಟಡ…ಕಟ್ಟಡದ ಸುತ್ತ ನಾಲ್ಕೂ ಕಡೆ ದ್ವಿಪಥ ರಸ್ತೆ… ಪ್ರವೇಶ ದ್ವಾರದ ಮುಂದೆ ಸುಂದರ ಉದ್ಯಾನವನ…ನೂರಾರು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ…! ಇದು ಯಾವುದೋ ದೆಹಲಿ, ಬೆಂಗಳೂರಿನಲ್ಲಿನ ಸರಕಾರಿ ಕಟ್ಟಡ ವರ್ಣನೆಯಲ್ಲ. ನಮ್ಮ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಲೆ ಎತ್ತಲಿರುವ ಸರಕಾರಿ ಕಚೇರಿಗಳ ಸಂಕೀರ್ಣ. ಹೌದು, ಹೃದಯಭಾಗದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರು ಅಂತಸ್ತಿನ ಭವ್ಯ ಹೆಟೆಕ್ ಕಟ್ಟಡ ತಲೆ ಎತ್ತಲಿದೆ. …

Read More »

ಬೆಳಗಾವಿಯಲ್ಲಿ ಮೋಡ ಬಿತ್ತನೆಗೆ ಮಾಡಿಸಿದ ಸತೀಶ್ ಜಾರಕಿಹೊಳಿ

  ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಬರಸ್ಥಿತಿಯ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹುದಲಿಯ ಬೆಳಗಾಂ ಶುಗರ್ಸ್ ಪ್ರೈ.ಲಿಮಿಟಡ್ ಮೋಡ ಬಿತ್ತನೆಗೆ ಮುಂದಾಗಿದ್ದು, ಮೋಡ ಬಿತ್ತನೆ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ(ಸೆ.29) ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು.ಮೋಡ ಬಿತ್ತನೆ ಕಾರ್ಯಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರ(ಡಿಜಿಸಿಎ) ಕಚೇರಿಯು ಗ್ರೀನ್ ಸಿಗ್ನಲ್ ನೀಡಿದೆ. ಸೆ.29 ಹಾಗೂ 30 …

Read More »

ಕರ್ನಾಟಕ ಬಂದ್, ಬೆಳಗಾವಿಯಲ್ಲಿ ಪ್ರತಿಭಟನೆಗೆ ಸೀಮಿತ…

ಬೆಳಗಾವಿ- ಇಂದು ವಿವಿಧ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು ಬೆಳಗಾವಿಯಲ್ಲಿ ಬಂದ್ ಬಿಸಿ ತಟ್ಟಿಲ್ಲ,ಇಲ್ಲಿ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದುಕೊಂಡಿದ್ದು ಬಂದ್ ಪ್ರತಿಭಟನೆಗೆ ಸೀಮಿತವಾಗಿದೆ. ಇಂದು ಬೆಳ್ಳಂ ಬೆಳಗ್ಗೆ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲಿ ಕಾವೇರಿ ನಮ್ಮದು,ಎಂದು ಬಿತ್ತಿಪತ್ರ ಹಿಡಿದು ಪ್ರತಿಭಟನೆ ಮಾಡುವ ಮೂಲಕ ತಮಿಳುನಾಡಿಗೆ ನೀರು ಬಿಟ್ಡಿರುವ ರಾಜ್ಯ ಸರ್ಕಾರದ ರಾಜ್ಯವಿರೋಧಿ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು …

Read More »

ಇಂದು ಬೆಳಗಾವಿಯಲ್ಲಿ ವಿನಾಯಕನಿಗೆ ಅದ್ಧೂರಿ ವಿದಾಯ….!!

ಶಾಂತಿ ಕದಡುವ, ಕಿಡಗೇಡಿಗಳ ಕಿವಿ ಹಿಂಡಲು ಸಜ್ಜಾದ ಖಾಕಿ ಪಡೆ….!! ಬೆಳಗಾವಿ- ಮಹಾರಾಷ್ಟ್ರದ. ಮುಂಬಯಿ ,ಪೂನಾ ಹೊರತು ಪಡೆಸಿದರೆ, ರಾಷ್ಟ್ರದಲ್ಲಿಯೇ ಅತ್ಯಂತ ಅದ್ಧೂರಿಯಾಗಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸುವದು ಬೆಳಗಾವಿಯಲ್ಲಿ ,ರಾಜ್ಯದಲ್ಲಿಯೇ ಅತ್ಯಂತ ವಿಭಿನ್ನವಾಗಿ ಗಡಿ ಭಾಗದ ಬೆಳಗಾವಿಯಲ್ಲಿ ಗಣೇಶ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಹಿನ್ನಲೆ ಮತ್ತು ಇತಿಹಾಸ ಹೊಂದಿರುವ ಸಾರ್ವಜನಿಕ ಶ್ರೀಗಣೇಶ ಪ್ರತಿಷ್ಠಾಪನೆ ವಿಚಾರದಲ್ಲಿ ಬೆಳಗಾವಿ ಮಹಾನಗರದ ಜನತೆ ಹೊಸ ಇತಿಹಾಸ …

Read More »

DCM ಮಾಡಲು ಬೆಳಗಾವಿಯಿಂದ ಪತ್ರ ಅಭಿಯಾನ…!!

ಬೆಳಗಾವಿ- ಲೋಕೋಪಯೋಗಿ ಇಲಾಖೆ ಸಚಿವ,ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ,ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಅವರನ್ನು ಉಪ ಮುಖ್ಯಮಂತ್ರಿ ಮಾಡುವಂತೆ ಬೆಳಗಾವಿ ಜಿಲ್ಲೆಯಲ್ಲಿ ಅವರ ಅಭಿಮಾನಿಗಳು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆಯುವ ಅಭಿಯಾನ ಆರಂಭಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು,ಅಭಿಮಾನಿಗಳು, ಹಾಗೂ ಹಲವಾರು ಜನ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ,ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಹಾಗು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ …

Read More »

ಬೆಳಗಾವಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗೋಕಾವಿ

ಬೆಳಗಾವಿ- ಬೆಳಗಾವಿ ಸರ್ಕಾರಿ ನೌಕರರ ಸಂಘದ ಪ್ರಭಾರಿ ಅಧ್ಯಕ್ಷರನ್ನಾಗಿ ಶಂಕರ ಗೋಕಾವಿ ಅವರನ್ನು ನೇಮಕ ಮಾಡಿ,ರಾಜ್ಯ ಅಧ್ಯಕ್ಷ ಷಡಕ್ಷರಿ ಅವರು ಆದೇಶ ಹೊರಡಿಸಿದ್ದಾರೆ‌. ಬೆಳಗಾವಿ ಜಿಲ್ಲಾ ನೌಕರರ ಸಂಘದ ಪ್ರಭಾರಿ ಅಧ್ಯಕ್ಷರಾಗಿದ್ದ ಬಸವರಾಜ್ ರಾಯವ್ವಗೋಳ ಅವರು ರಾಜಿನಾಮೆ ನೀಡಿರುವ ಕಾರಣ ಶಂಕರ ಗೋಕಾವಿ ಅವರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶಂಕರ ಗೋಕಾವಿ ಅವರು ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಶಾಖೆಯ ನೌಕರರ ಸಂಘದ ನಿರ್ದೇಶಕರಾಗಿದ್ದರು ಅವರನ್ನು ಬೆಳಗಾವಿ ಜಿಲ್ಲಾ ನೌಕರರ …

Read More »

ನಾಲ್ವರು ಬಾಲಕರು ಸೇರಿಕೊಂಡು ಓರ್ವ ಬಾಲಕನ ಕೊಲೆ ಮಾಡಿದ್ರು…

ಬೆಳಗಾವಿ- ನಾಲ್ವರು ಬಾಲಕರು ಸೇರಿಕೊಂಡು ಓರ್ವ ಬಾಲಕನನ್ನು ತಲವಾರ್ ನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಕ್ಕದ ಮಲ್ಲಾಪೂರ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಗೆಳೆಯರ ಮದ್ಯೆ ವಾಗ್ವಾದ ಆಗಿದೆ.ಇದು ವಿಕೋಪಕ್ಕೆ ಹೋಗಿ ನಾಲ್ಚರು ಬಾಲಕರು ಸೇರಿಕೊಂಡು ಮಲ್ಲಾಪೂರ ಗ್ರಾಮದ 16 ವರ್ಷದ ಪ್ರಜ್ವಲ್ ಸುಂಕದ ಎಂಬಾತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಪ್ರಜ್ವಲ್ ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಆದ್ರೆ ಕೊನೆಗೂ …

Read More »