Breaking News

Breaking News

ಯುವಕನ ಕೊಲೆ ಮಾಡಿ, ಬಾವಿಗೆ ಎಸೆದು ಹಂತಕರು ಪರಾರಿ!

ಬೆಳಗಾವಿ-ಯುವಕನ ಕೊಲೆ ಮಾಡಿ ಬಾವಿಗೆ ಎಸೆದು ಹಂತಕರು ಪರಾರಿಯಾದ ಘಟನೆ,ಬೆಳಗಾವಿ ತಾಲೂಕಿನ ಬಸರಿಕಟ್ಟಿ ಹೊರವಲಯದಲ್ಲಿ ನಡೆದಿದೆ. 32 ವರ್ಷದ ಮಾರುತಿ ಕನ್ನೀಕರ್ ಕೊಲೆಯಾದ ಯುವಕನಾಗಿದ್ದಾನೆ.ಬಸರಿಕಟ್ಟಿಯಲ್ಲಿ ಫೋಟೋ ಸ್ಟುಡಿಯೋ ಇಟ್ಟುಕೊಂಡಿದ್ದ ಮಾರುತಿ, ಜೊತೆಗೆ ಜಮೀನಿನಲ್ಲಿ ಕೋಳಿ ಫಾರಂ ಮಾಡಿಕೊಂಡಿದ್ದ, ಲನಿನ್ನೆ ರಾತ್ರಿ ಮನೆಯಿಂದ ಕೋಳಿ ಫಾರಂಗೆ ತೆರಳುತ್ತಿರೋದಾಗಿ ಹೇಳಿ ತೆರಳಿದ್ದ ಮಾರುತಿಯ ಶವ ಇಂದು ಬಾವಿಯಲ್ಲಿ ಪತ್ತೆಯಾಗಿದೆ‌. ಈ ವೇಳೆ ಊರ ಹೊರವಲಯದಲ್ಲಿ ಮದ್ಯಪಾನ ಮಾಡುತ್ತಿದ್ದ ಕೆಲ ಪರಿಚಯಸ್ಥ ಯುವಕರು,ಯುವಕರು ಕರೆದ …

Read More »

ಬೆಳಗಾವಿ ದಕ್ಷಿಣದಲ್ಲಿ ಕಾಂಗ್ರೆಸ್ಸಿಗೆ ಹೊಸ ಶಕ್ತಿ ತುಂಬಿದ ಪ್ರಭಾವತಿ!!

ಬೆಳಗಾವಿ-ದಶಕಗಳಿಂದ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ,ಓಬಿಸಿ ಘಟಕ ಸೇರಿದಂತೆ,ಪಕ್ಷದಲ್ಲಿ ಸಂಘಟನಾತ್ಮಕವಾಗಿ ಅತ್ಯಂತ ಕ್ರಿಯಾಶೀಲವಾಗಿರುವ ಪ್ರಭಾವತಿ ಚಾವಡಿ,ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಈಗ ಸಕ್ರೀಯವಾಗಿದ್ದಾರೆ‌. ಡಿ‌.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ರಾಮಯ್ಯ, ಸತೀಶ್ ಜಾರಕಿಹೊಳಿ ಅವರ ಆಶಿರ್ವಾದ ಪಡೆದು,ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಧುಮುಕಿರುವ ಪ್ರಭಾವತಿ ಚಾವಡಿ,ಅವರು ಕಾಲಿಗೆ ಚಕ್ರ ಕಟ್ಟಿಕೊಂಡು,ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ,ಅಲ್ಪಾವಧಿಯಲ್ಲಿ ಕ್ಷೇತ್ರದಲ್ಲಿ ಅಮೋಘವಾದ ಸಂಪರ್ಕ ಸಾಧಿಸಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಅವರು …

Read More »

ಗೋಕಾಕ್ ಫಾಲ್ಸ್ ನಲ್ಲಿ ಯುವಕನಿಗೆ ಚಾಕು ಇರಿತ!

ಬೆಳಗಾವಿ-ಹಳೇ ವೈಷಮ್ಯದ ಕಾರಣ ಜಾತ್ರೆಯ ಸಂಂಭ್ರಮದಲ್ಲಿದ್ದ ಯುವಕನಿಗೆ ಚಾಕು ಇರಿತವಾದ ಘಟನೆ ನಡೆದಿದೆ.ಗೋಕಾಕ್ ಫಾಲ್ಸ್‌ನ ಮಹಾಲಿಂಗೇಶ್ವರ ಜಾತ್ರೆಯಲ್ಲಿ ನಿನ್ನೆ ರಾತ್ರಿ ಕೃತ್ಯ ನಡೆದಿದ್ದುಗೋಕಾಕ ಫಾಲ್ಸ್ ನಿವಾಸಿ ವಿನೋದ ಬೇಟಗೇರಿ (28 ) ಎಂಬಾತನಿಗೆ ಚೂರಿ ಇರಿತವಾಗಿದೆ. ಗಂಬೀರ ಗಾಯಗೊಂಡ ವಿನೋದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.ಜಾತ್ರೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕ ಮೇಲೆ 7 ಜನರ ತಂಡದಿಂದ ದಾಳಿ ನಡೆದಿದೆ‌. ಓರ್ವ ಆರೋಪಿ ಪೊಲೀಸರ ವಶಕ್ಕೆ, 6 ಜನರಿಗೆ ಪೊಲೀಸರ …

Read More »

ಅರಭಾವಿ ಕ್ಷೇತ್ರದ ಯಜಮಾನನಿಗೆ ಬೆಳ್ಳಿಗದೆ!!

ಮೂಡಲಗಿ : ಎರಡು ತಿಂಗಳೊಳಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪ್ರತಿ ಮತಗಟ್ಟೆಗಳ ಮೂಲಕ ಕಾರ್ಯಕರ್ತರ ಪಡೆಯನ್ನು ಸಂಘಟಿಸಿ ಅರಭಾವಿ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಲು ಕಾರ್ಯಕರ್ತರು ಶ್ರಮಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶುಕ್ರವಾರ ಸಂಜೆ ತಾಲೂಕಿನ ಸುಣಧೋಳಿ ಗ್ರಾಮದ ಜಡಿಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯಾಗಿ ಅರಭಾವಿ ಕ್ಷೇತ್ರದಿಂದಲೇ ಕಣಕ್ಕಿಳಿಯುವುದಾಗಿ …

Read More »

ಬೆಳಗಾವಿಯ ರಾಜಹಂಸಗಡ ಕೋಟೆ, ಅಭಿವೃದ್ಧಿಯ ಕ್ರೆಡಿಟ್ ಗಾಗಿ ಕಾಂಗ್ರೆಸ್ ಬಿಜೆಪಿ ನಡುವೆ ಕಿತ್ತಾಟ!!

ಬೆಳಗಾವಿ-ಐತಿಹಾಸಿಕ ರಾಜಹಂಸಗಡ ಕೋಟೆ ಅಭಿವೃದ್ಧಿ ವಿಚಾರದಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ.2023ರ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ – ಬಿಜೆಪಿ ಕಿತ್ತಾಟ,ನಡೆದಿದ್ದು,ಇಂದು ಬಿಜೆಪಿ ಪಡೆ,ರಮೇಶ್ ಜಾರಕಿಹೊಳಿ ನೇತ್ರತ್ವದಲ್ಲಿ ರಾಜಹಂಸಗಡಕ್ಕೆ ಭೇಟಿ ನೀಡಲಿದೆ. ಬೆಳಗಾವಿ ಪಕ್ಕದಲ್ಲೇ ಇರುವ ರಾಜಹಂಸಗಡ ಕೋಟೆ ಅಭಿವೃದ್ಧಿ ಮಾಡುವ ಯೋಜನೆ ರೂಪಿಸಿದ್ದು ಮಾಜಿ ಶಾಸಕ ಸಂಜಯ ಪಾಟೀಲ,ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಯಾದಬಳಿಕ,ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಮುಂದಾಗಿ ಅವರೇ ಒಂದು ಯೋಜನೆ ರೂಪಿಸಿ,ಬಿಜೆಪಿ ಸರ್ಕಾರ …

Read More »

ಮಹಾ ಶಿವರಾತ್ರಿ ಉಪವಾಸದ ಸಮಯದಲ್ಲಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು?

ಮಹಾ ಶಿವರಾತ್ರಿ ಉಪವಾಸದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳು ಇಲ್ಲಿದೆ. ಫೆಬ್ರವರಿ 18 ರಂದು ಪ್ರಪಂಚದಾದ್ಯಂತ ಹಿಂದೂಗಳು ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸುತ್ತಾರೆ. ಇದು ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ಅಸಂಖ್ಯಾತ ಭಕ್ತರು ಶಿವನ ದೇವಾಲಯಗಳಿಗೆ ಭೇಟಿ ನೀಡಿ ದೇವರನ್ನು ಪೂಜಿಸುತ್ತಾರೆ ಮತ್ತು ಪ್ರಾರ್ಥನೆ ಮಾಡುತ್ತಾರೆ. ಉಪವಾಸ (ವ್ರತ) ಮಾಡುವ ಮೂಲಕ ಶಿವ ಆಶೀರ್ವಾದ ಪಡೆಯುತ್ತಾರೆ. ಉಪವಾಸ ಮಹಾ ಶಿವರಾತ್ರಿ ಹಬ್ಬದ ಪ್ರಮುಖ ಭಾಗವಾಗಿದೆ. ಶಿವರಾತ್ರಿಯಂದು ಕೆಲ …

Read More »

ಬೆಳಗಾವಿಯ ರಾಜಹಂಸಗಡದಲ್ಲಿ ನಾನಾ..ನೀನಾ!!

ಬೆಳಗಾವಿ- ಬೆಳಗಾವಿ ನಗರದ ಮಡಿಲಲ್ಲಿರುವ ಐತಿಹಾಸಿಕ ರಾಜಹಂಸಗಡ ಕೋಟೆ ಅಭಿವೃದ್ಧಿ ಹಾಗು ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ತ್ ಮೂರ್ತಿ ನಿರ್ಮಾಣದ ವಿಚಾರ ಈಗ ರಾಜಕೀಯ ಅಸ್ತ್ರವಾಗಿದೆ.ಇದರ ಕ್ರೆಡಿಟ್ ಪಡೆಯಲು ರಾಜಕೀಯ ಸಂಘರ್ಷ ಶುರುವಾಗಿದೆ. ನಿಜ ಹೇಳಬೇಂದ್ರೆ ಸಂಜಯ ಪಾಟೀಲರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾಗ ರಾಜಹಂಸಗಡ ಹಿಲ್ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದ್ದರು,ಇಲ್ಲಿ ಅತೀ ಎತ್ತರವಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸುವದಾಗಿ ಸಂಜಯ ಪಾಟೀಲ ಘೋಷಣೆ ಮಾಡುವದಷ್ಟೇ ಅಲ್ಲ,ಆಗಿನ …

Read More »

ಮೂರು ಜನ ಅರೆಸ್ಟ್, ಶವ ಪತ್ತೆ, ಗೋಕಾಕ್ ಮರ್ಡರ್ ಕೇಸ್ ಖೇಲ್ ಖತಂ!

ಬೆಳಗಾವಿ- ಗೋಕಾಕ್ ನಗರದ ಉದ್ಯಮಿ ಮುನ್ನಾ ಉರ್ಫ್ ರಾಜು ಝಂವರ ಕೊಲೆ ಪ್ರಕರಣವನ್ನು ಅಲ್ಪಾವಧಿಯಲ್ಲಿ ಭೇದಿಸುವಲ್ಲಿ ಬೆಳಗಾವಿ ಪೋಲೀಸ್ರು ಯಶಸ್ವಿಯಾಗಿದ್ದು,ಆರು ದಿನಗಳ ಕಾಲ ಸುದೀರ್ಘ ಕಾರ್ಯಾಚರಣೆ ನಡೆಸಿ ಕೊಲೆಯಾದ ರಾಜು ಝಂವರ್ ಶವ ಪತ್ತೆ ಮಾಡುವ ಮೂಲಕ ಕೊಲೆ ಪ್ರಕರಣ ಖೇಲ್ ಖತಂ ಮಾಡಿದ್ದಾರೆ. ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ,ಡಾ ಸಚೀನ್ ಶಂಕರ ಶಿರಗಾವಿ,.(36) ಚನ್ನಮ್ಮ ನಗರ ಗೋಕಾಕ್,ಡಾ.ಶಿವಾನಂದ ಕಾಡಗೌಡ ಪಾಟೀಲ ಸಿಟಿ ಹಾಸ್ಪಿಟಲ್ ಗೋಕಾಕ್ ಈ ಇಬ್ವರು …

Read More »

ಗೋಕಾಕ್ ಮರ್ಡರ್, ಕೊನೆಗೂ ಶವ ಪತ್ತೆ ಮಾಡಿದ ಪೋಲೀಸರು

ಬೆಳಗಾವಿ- ಗೋಕಾಕ್ ವ್ಯಾಪಾರಿ ಕಾಣೆಯಾಗಿ ಒಂದು ವಾರದವರೆಗೆ ಹಗಲು ರಾತ್ರಿ ಕಾರ್ಯಾಚರಣೆ ನಡೆಸಿದ ಪೋಲೀಸರು ಹತ್ಯೆಯಾಗಿದ್ದ ವ್ಯಾಪಾರಿಯ ಶವವನ್ನು ಇಂದು ರಾತ್ರಿ ಪತ್ತೆ ಮಾಡಿದ್ದಾರೆ. ಇಬ್ಬರು ವೈದ್ಯರು ಸೇರಿ ಗೋಕಾಕ್ ಮೂಲದ ವ್ಯಾಪಾರಿ ರಾಜು ಉರ್ಫ ಮುನ್ನಾ ಝಂವರ ಎಂಬಾತನ ಮರ್ಡರ್ ಮಾಡಿ,ಶವವನ್ನು ಕಾಲುವೆಗೆ ಎಸೆದಿದ್ದರು. ಆದ್ರೆ ಕಳೆದ ಆರು ದಿನಗಳಿಂದ ಶವ ಪತ್ತೆಯಾಗಿರಲಿಲ್ಲ ಇಂದು ರಾತ್ರಿ ಗೋಕಾಕ್ ತಾಲ್ಲೂಕಿನ ಪಂಚನಾಯಕನ ಹಟ್ಟಿಬಳಿ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಶವ ಪೈಪಿನಲ್ಲಿ …

Read More »

ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ!!

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಹುಕಾರ್ ಮತ ಬೇಟೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಅಭಿಮಾನಿಗಳ ಸಮಾವೇಶ ನಡೆಯಿತು.ರಮೇಶ್ ಜಾರಕಿಹೊಳಿ ಮೇಲೆ ಪುಷ್ಪಗಳನ್ನ ಸುರಿಸಿ ವೇದಿಕೆಗೆ ಅದ್ದೂರಿ ಸ್ವಾಗತ ಮಾಡಲಾಯಿತು. *ಬಿಜೆಪಿ ಪಕ್ಷದಲ್ಲಿದ್ರೂ ಪಕ್ಷಾತೀತವಾಗಿ ಸಮಾವೇಶ ಮಾಡುತ್ತಿರುವ ರಮೇಶ್ ಜಾರಕಿಹೊಳಿ ಅವರಿಗೆ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ಭಾರೀ ಬೆಂಬಲ ಸಿಗುತ್ತಿದೆ.ರಮೇಶ್ ಅಭಿಮಾನಿ ಬಳಗದಿಂದ ಅಭಿಮಾನದ ಕಾರ್ಯಕರ್ತರ ಸಮಾವೇಶ ಹೆಸರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಜನ ಅಭಿಮಾನಿಗಳು, ಆಪ್ತರು ಸಮಾವೇಶದಲ್ಲಿ …

Read More »