Breaking News
Home / Breaking News (page 133)

Breaking News

ಶಾಸಕರು ತಮಟೆ ಬಾರಸಿದ್ರು…ಡಿಸಿ ಡೊಳ್ಳ ಬಾರಸಿದ್ರು..ಜನ ಹೂವು ಹಾರಸಿದ್ರು…!!

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಸಾಲಹಳ್ಳಿ (ಕದಾಂಪೂರ) ಗ್ರಾಮದಲ್ಲಿ ವಾಸ್ತವ್ಯ ——————————————————————– ಗ್ರಾಮದ ಪ್ರತಿ ಮನೆಗಳಿಗೆ ಶೀಘ್ರ ಕುಡಿಯುವ ನೀರು: ಶಾಸಕ ಮಹಾದೇವಪ್ಪ ಯಾದವಾಡ ಬೆಳಗಾವಿ, ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು. ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ ಮೂಲಕ ಪಹಣಿ, ಪಿಂಚಣಿ ಆದೇಶ ಪ್ರತಿಗಳು ಸೇರಿದಂತೆ ಕಂದಾಯ ದಾಖಲೆಗಳನ್ನು ಗ್ರಾಮದ ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ರಾಮದುರ್ಗ …

Read More »

ಮಿಡಿಯಾ ಬಳಗದ ಕಲ್ಯಾಣಕ್ಕಾಗಿ ದಿಲೀಪ ಅವರ ಹೊಸ ಐಡಿಯಾ….!!!

ಬೆಳಗಾವಿ ಜಿಲ್ಲಾ ಪತ್ರಕರ್ತರ ಭದ್ರತೆಗಾಗಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಲವು ವಿಶೇಷ ಯೋಜನೆಗಳ ಘೋಷಣೆ ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಪತ್ರಕರ್ತರ ಭದ್ರತೆ ಮತ್ತು ಶ್ರೇಯೋಭಿವೃದ್ಧೀಗಾಗಿ ನಿವೇಶನ ಮಂಜೂರಾತಿ ಸೇರಿದಂತೆ ಹಲವಾರು ವಿಶಿಷ್ಠ ಯೋಜನೆಗಳನ್ನು ಸಂಘದ ಗೌರವಾಧ್ಯಕ್ಷ ಭೀಮಶಿ ಜಾರಕಿಹೊಳಿ ಮತ್ತು ಅಧ್ಯಕ್ಷ ದಿಲೀಪ ಕುರಂದವಾಡೆ  ಅವರು ಘೋಷಿಸಿದರು. ಶುಕ್ರವಾರ ಇಲ್ಲಿಯ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯೋಜನೆಗಳ ವಿವರ ನೀಡಿದ …

Read More »

ಈಶ್ವರಪ್ಪ ರಾಜಿನಾಮೆ ಕೊಡಬಾರ್ದು- ರಮೇಶ್ ಜಾರಕಿಹೊಳಿ

ಈಶ್ವರಪ್ಪ ರಾಜಿನಾಮೆ ಕೊಡಬಾರ್ದು- ರಮೇಶ್ ಜಾರಕಿಹೊಳಿ ಸಿಡಿ ಕೇಸ್, ಈಶ್ವರಪ್ಪ ಕೇಸ್ ಸಿಐಡಿ ತನಿಖೆಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯ ಬೆಳಗಾವಿ: ಸಿಡಿ ಪ್ರಕರಣ ಮತ್ತು ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಗುರುವಾರ ಬಡಸ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ ವಿಚಾರದಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ನನ್ನ ವಿರುದ್ಧ …

Read More »

ಇಂದು ಸಂಜೆ ಧಿಡೀರ್ ಬೆಳಗಾವಿಗೆ ,ಡಿಕೆಶಿ,ಸಿದ್ರಾಮಯ್ಯ,ಸುರಜೇವಾಲಾ…

ಇಂದು ಸಂಜೆ ಬೆಳಗಾವಿಗೆ ಧಿಡೀರ್, ಕಾಂಗ್ರೆಸ್ ದಿಗ್ಗಜರು… ಬೆಳಗಾವಿ- ಬೆಳಗಾವಿಯ ಹಿಂಡಲಗಾ ಗ್ರಾಮದ ಗುತ್ತಿಗೆದಾರ್ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ,ಈಗ ರಾಜ್ಯದ ಗಮನ ಸೆಳೆಯುತ್ತಿದೆ.ಸಂತೋಷ ಪಾಟೀಲ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ಇಂದು ಸಂಜೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ,ಸುರಜೇವಾಲಾ,ಡಿಕೆ ಶಿವಕುಮಾರ್ ,ಸಿದ್ರಾಮಯ್ಯ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಇಂದು ಸಂಜೆ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸುವ ಈ ಮೂವರು ಕಾಂಗ್ರೆಸ್ ನಾಯಕರು ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಕುಟುಂಬಸ್ಥರನ್ನು …

Read More »

ಪೊಲೀಸ ಸಿಬ್ಬಂದಿಗೆ 20 ಸಾವಿರ ವಸತಿಗೃಹಗಳ ನಿರ್ಮಾಣ : ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ,ಏಪ್ರಿಲ್ 12: ಪೊಲೀಸ್ ಇಲಾಖೆ ರಾಜ್ಯದಲ್ಲಿ ಉತ್ತಮ ಸೇವೆ ಒದಗಿಸುತ್ತಿದೆ. ಪೊಲೀಸ್ ಸಿಬ್ಬಂದಿ ನೆಮ್ಮದಿಯಿಂದ ತಮ್ಮ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಈಗಿರುವ ವಸತಿ ಗೃಹಗಳಿಗಿಂತ ದೊಡ್ಡ ಮಟ್ಟದಲ್ಲಿ 20 ಸಾವಿರ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 10 ಸಾವಿರ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು. ನಗರದ ಮಚ್ಚೆ ಕೆ.ಎಸ್.ಆರ್.ಪಿ 2ನೇ ಪಡೆಯ ತರಬೇತಿ …

Read More »

ಮರಾಠಾ ಸಮುದಾಯಕ್ಕೆ ಟಿಕೆಟ್ ಕೊಡಿ ಅಂದ್ರು…ವಿಭಜನೆ ವಿಚಾರ ಬಿಟ್ಟು ಬಿಡಿ ಅಂದ್ರು…!!

ಬೆಳಗಾವಿ: ಉತ್ತರ ಕರ್ನಾಟಕ ವಿಶೇಷವಾಗಿ ಬೆಳಗಾವಿ ಹಾಗೂ ಬೀದರ್ ಜಿಲ್ಲೆಯಲ್ಲಿ ಮರಾಠಿ ಮತದರಾರರ ಸಂಖ್ಯೆ ಹೆಚ್ಚಿದ್ದು, ಈ ಸಮುದಾಯಕ್ಕೆ ಆದ್ಯತೆ ನೀಡಬೇಕಿದೆ. ಬೆಳಗಾವಿ ಜಿಲ್ಲೆಯಲ್ಲಿ ಮರಾಠಾ ಸಮುದಾಯದ ಮತದಾರರೇ ನಿರ್ಣಾಯಕ ಆಗಿರುವ ಹಲವಾರು ಕ್ಷೇತ್ರಗಳಿವೆ.ಈ ಕ್ಷೇತ್ರಗಳಲ್ಲಿ ಪಕ್ಷದಲ್ಲಿರುವ ಮರಾಠಿ ನಾಯಕರನ್ನು ಗುರುತಿಸಿ ಮುಂಬರುವ ಚುನಾವಣೆಯ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಆಗ್ರಹಿಸಿದರು ಎಂದು ತಿಳಿದು ಬಂದಿದೆ. …

Read More »

ಸಾವಿಗೆ ಈಶ್ವರಪ್ಪ ಕಾರಣ ಎಂದು ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ ಗುತ್ತಿಗೆದಾರನ ಆತ್ಮಹತ್ಯೆ…

ಸಾವಿಗೆ ಈಶ್ವರಪ್ಪ ಕಾರಣ ಎಂದು ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ ಗುತ್ತಿಗೆದಾರನ ಆತ್ಮಹತ್ಯೆ… ಬೆಳಗಾವಿ-ಸಚಿವ ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಕಮಿಷನ್ ಆರೋಪ ವಿಚಾರವಾಗಿ ಸಚಿವ ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ್ ನನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಗುತ್ತಿಗೆದಾರ ಸಂತೋಷ ಪಾಟೀಲ ಉಡುಪಿಯ ಲಾಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಧ್ಯಮ ಪ್ರತಿನಿಧಿಗಳ ಮೊಬೈಲ್‌ಗೆ ಡೆತ್‌ನೋಟ್ …

Read More »

ಹಿಂದು ಮುಸ್ಲೀಂ ಒಂದೇ ತಾಯಿಯ ಮಕ್ಕಳು – ಯಡಿಯೂರಪ್ಪ

*ರಾಜ್ಯದಲ್ಲಿ ಕೋಮು ಸೌಹಾರ್ದತೆ ಕೆಡಿಸಲು ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿಂದು- ಮುಸ್ಲೀಂ ಒಂದೇ ತಾಯಿಯ ಮಕ್ಕಳು ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಸರ್ಕಾರಕ್ಕೆ ಸಲಹೆ ನೀಡಿದ್ರು….. ಬೆಳಗಾವಿ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಸಲಹೆ …

Read More »

ಬೆಳಗಾವಿಗೆ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಬರುತ್ತಿರುವದು ಯಾತಕ್ಕೆ ಗೊತ್ತಾ…???

ಬೆಳಗಾವಿ ಜಿಲ್ಲಾ ಬಿಜೆಪಿ ರಾಜಕೀಯದ ಅಳಿಯು, ಉಳಿಯುವಿನ ವರದಿ ಹೈಕಮಾಂಡ್ ಸಲ್ಲಿಸಲಿರುವ ಅರುಣ್ ಸಿಂಗ್! (ಬೆಳಗಾವಿ ಸುದ್ದಿ ಗ್ರೌಂಡ್ ರಿಪೋರ್ಟ್ ) ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಗುಂಪುಗಾರಿಕೆಯಿಂದ ಸೋರಗಿದೆ. ಜಿಲ್ಲೆಯಲ್ಲಿ ಪರಿಷತ್ ಚುನಾವಣೆ ಫಲಿತಾಂಶದ ಬಳಿಕ ಎಲ್ಲವೂ ಸರಿಯಲ್ಲ. ಜಾರಕಿಹೊಳಿ, ಕತ್ತಿ ಎರಡು ಪ್ರಭಲ ಗುಂಪುಗಳು ನಡುವೆ ಪೈಪೋಟಿ ಆರಂಭವಾಗಿದೆ‌. ಜಿಲ್ಲೆಯಲ್ಲಿ ಒಳ ಜಗಳ, ಇದರಿಂದ ಮುಂದಿನ ದಿನದಲ್ಲಿ ಪಕ್ಷದ ಮೇಲೆ ಆಗೋ ಪರಿಣಾಮದ ಮಾಹಿತಿ ಪಡೆಯಲು ಸ್ವತಃ …

Read More »

ಪೋಲೀಸರ ಈ ಕಾರ್ಯಕ್ಕೆ ಬಹುಮಾನ ಸಿಗಲೇ ಬೇಕು….

.ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಗಾಂಜಾ ಧಂದೆಯನ್ನು ತಡೆಯಲು ಬೆಳಗಾವಿ ಪೋಲೀಸರು ಯುದ್ಧ ಸಾರಿದ್ದು,ಈ ವಿಚಾರದಲ್ಲಿ ಇವತ್ತು ಭರ್ಜರಿ ದಾಳಿಯೂ ನಡೆದಿದ್ದು ಸಂತಸದ ಸಂಗತಿಯಾಗಿದೆ. ಬೆಳಗಾವಿಯ ಸಿಸಿಬಿ ಇನೆಸ್ಪೆಕ್ಟರ್ ನಿಂಗನಗೌಡ ಪಾಟೀಲ ಅವರು ಬೆಳಗಾವಿಯಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ, ಮಹಾರಾಷ್ಟ್ರದ ಇಬ್ಬರು ಡ್ರಗ್ ಫೆಡ್ಲರ್ ಗಳನ್ಬು ಬಂಧಿಸಿ 8 kg 300 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಮಿರಜ್ ನಗರದ ಇಬ್ಬರು ಡ್ರಗ್ ಫೆಡ್ಲರ್ ಗಳಾದ,ಅಮನ್ ಅಕ್ರಂ ಜಮಾದಾರ್,ಹಾಗೂ …

Read More »