ಬೆಳಗಾವಿ- ಬೆಳಗಾವಿ ಮಹಾನಗರಕ್ಕೆ ನಿರಂತರವಾಗಿ ನೀರು ಪೂರೈಸುವ 24*7 ಯೋಜನೆಯ ಕಾಮಗಾರಿ ನಡೆದಿದ್ದು ಕಣಬರ್ಗಿಯಲ್ಲಿ ಅಳವಡಿಸಲು ತರಲಾಗಿದ್ದ ಪೈಪುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪೈಪುಗಳು ಸುಟ್ಟು ಭಸ್ಮವಾಗಿವೆ. ಈ ಘಟನೆ ಇಂದು ಬೆಳಗಿನ ಜಾವ ಮೂರು ಗಂಟೆಗೆ ಬೆಳಗಾವಿಯ ಕಣಬರ್ಗಿಯ ಜ್ಯೋತಿರ್ಲಿಂಗ್ ಗಲ್ಲಿಯ ಬಳಿ ನಡೆದಿದ್ದು ಮೂವತ್ರಕ್ಕೂ ಹೆಚ್ಚು ಪಿಯುಸಿ ಪೈಪ್ ಗಳು ಬೆಂಕಿಗಾಹುತಿಯಾಗಿವೆ. ಎಲ್ ಆ್ಯಂಡ್ ಟಿ ಕಂಪನಿ ಕಣಬರ್ಗಿಯಲ್ಲಿ ಅಳವಡಿಸಲು ಪೈಪುಗಳನ್ನು ದಾಸ್ತಾನು ಮಾಡಿತ್ತು ನಿನ್ಬೆ ಮದ್ಯ …
Read More »ಬೆಳಗಾವಿಯ ಸಾಂಬ್ರಾದಿಂದ ಎಲ್ಲಾ ವಿಮಾನ ರದ್ದುಗೊಳಿಸಿದ ಸ್ಪೈಸ್‌ಜೆಟ್…!!!
ಅತೀ ಹೆಚ್ಚು ಪ್ರಯಾಣಿಕರು ಭೇಟಿ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ಧಾಣದಿಂದ ಸ್ಪೈಸ್ ಜೆಟ್ ಎಲ್ಲಾ ವಿಮಾನ ಸೇವೆಗಳನ್ನು ರದ್ದು ಮಾಡಿದೆ. ವಿಮಾನ ಪ್ರಯಾಣಿಕರಿಗೆ ಇದೊಂದು ಶಾಕಿಂಗ್ ಸುದ್ದಿ ಬೆಳಗಾವಿ, ಡಿಸೆಂಬರ್ 07; ಸ್ಪೈಸ್‌ಜೆಟ್ ಬೆಳಗಾವಿ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸಿದೆ. ಡಿಸೆಂಬರ್ 10ರಿಂದ ಯಾವುದೇ ವಿಮಾನಗಳು ಸಂಚಾರ ನಡೆಸುವುದಿಲ್ಲ. ಕಡಿಮೆ ಖರ್ಚಿನಲ್ಲಿ ವಿಮಾನ ಸೇವೆ ಒದಗಿಸುವ ಸ್ಪೈಸ್ ಜೆಟ್ ಬೆಳಗಾವಿಯಿಂದ ಎಲ್ಲಾ …
Read More »ಮರಾಠಾ ಸಮುದಾಯದ ಸಂಘಟನೆಗಾಗಿ ಹೊಸ ವರಸೆ…!!
ಬೆಳಗಾವಿ- ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಮಾಜದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಗಮನಿಸಿರುವ ಇತರ ಸಮಾಜಗಳ ನಾಯಕರು ಪಂಚಮಸಾಲಿ ಸಮಾಜದ ಹೋರಾಟದಿಂದ ಪ್ರೇರಣೆ ಪಡೆದು ತಮ್ಮ ಸಮಾಜಗಳಿಗೂ ನ್ಯಾಯ ದೊರಕಿಸಿಕೊಡಲು ಮುಂದಾಗಿದ್ದಾರೆ. ಪಂಚಮಸಾಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ಬೃಹತ್ ಸಮಾವೇಶಗಳು ನಡೆಯುತ್ತಿವೆ.ಈ ಸಮಾವೇಶಗಳಲ್ಲಿ ಆಯಾ ಕ್ಷೇತ್ರದ ಪಂಚಮಸಾಲಿ ಸಮಾಜದ ನಾಯಕರನ್ನು ಪ್ರಮೋಟ್ ಮಾಡಲಾಗುತ್ತಿದೆ. ಪಂಚಮಸಾಲಿ …
Read More »ಬೆಳಗಾವಿ,ಗಡಿ,ಗಲಾಟೆ, 330 ಬಸ್ ಸೇವೆ ತಾತ್ಕಾಲಿಕ ಸ್ಥಗಿತ…
ಬೆಳಗಾವಿ-ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನಲೆ, ಉಭಯ ರಾಜ್ಯಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದ 330 ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ವಿಭಾಗದ ಡಿಟಿಒ ಕೆ.ಕೆ. ಲಮಾಣಿ ಅವರು ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಮಾಹಿತಿ ನೀಡಿದ್ದು,ಮಹಾರಾಷ್ಟ್ರಕ್ಕೆ ಸಂಚರಿಸಬೇಕಿದ್ದ ಬಸ್‌ಗಳನ್ನು ಬಾರ್ಡರ್‌ನಲ್ಲಿ ನಿಲುಗಡೆ ಮಾಡಲಾಗಿದೆ. ಬಸ್ ಸೇವೆ ಸ್ಥಗಿತದಿಂದಬೆಳಗಾವಿ ವಿಭಾಗಕ್ಕೆ ನಿತ್ಯ 10 ಲಕ್ಷ, ಚಿಕ್ಕೋಡಿ ವಿಭಾಗಕ್ಕೆ 20 ಲಕ್ಷ ನಿತ್ಯ ನಷ್ಟ …
Read More »ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ದಾಳಿ…!!
ಬೆಳಗಾವಿ- ಮಹಾರಾಷ್ಡ್ರದ ಪೂನೆಯಲ್ಲಿ ರಾಜ್ ಠಾಕ್ರೆ ಸಾರಥ್ಯದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಕರ್ನಾಟಕದ ಬಸ್ ಗಳ ಮೇಲೆ ದಾಳಿ ಮಾಡಿ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ನಿನ್ನೆ ಮಂಗಳವಾರ ನಡೆದಿದೆ. ನಿನ್ನೆ ಮಂಗಳವಾರ ಬೆಳಗ್ಗೆ ಕರವೇ ಕಾರ್ಯಕರ್ತರು ಬೆಳಗಾವಿಯ ಹಿರೇಬಾಗೇವಾಡಿ ಬಳಿ ಮಹಾರಾಷ್ಟ್ರದ ಗೂಡ್ಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಬೆನ್ನಲ್ಲಿಯೇ ನಿನ್ನೆ ಮಧ್ಯಾಹ್ನ ಮನಸೇ ಕಾರ್ಯಕರ್ತರು ಮಹಾರಾಷ್ಟ್ರದ ಪೂನೆಯ ಬಸ್ ನಿಲ್ದಾಣಕ್ಕೆ ನುಗ್ಗಿ ಕರ್ನಾಟಕದ ಬಸ್ ಗಳಿಗೆ …
Read More »ಬೆಳಗಾವಿ ಉತ್ತರದ ಕಾಂಗ್ರೆಸ್ ಬಾಲ್ ಈಗ ಎಐಸಿಸಿ ಅಂಗಳದಲ್ಲಿ…!!!
ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಎಲ್ಲಿಲ್ಲದ ಲಾಭಿ ನಡೆದಿದೆ. ಬೆಂಗಳೂರು ಮಟ್ಟದಲ್ಲಿ ಸೀಮೀತವಾಗಿದ್ದ ಲಾಭಿ ಈಗ ದೆಹಲಿಗೆ ತಲುಪಿದೆ. ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಕಾಂಗ್ರೆಸ್ಸಿನ ಹಳೆಯ ಹುಲಿಗಳು, ಮತ್ತು ಹೊಸ,ಹೊಸ ಕಲಿಗಳು ಕಸರತ್ತು ನಡೆಸಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ.ಯಾಕಂದ್ರೆ ಕಾಂಗ್ರೆಸ್ಸಿನ ಹಳೆಯ ನಿಷ್ಠಾವಂತ ಕಾರ್ಯಕರ್ತ ಹಾಶಮ್ ಬಾವಿಕಟ್ಟಿ, ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಚಿರಪರಿಚಿತ, ಹೀಗಾಗಿ ಇವರು ದೆಹಲಿ ಮಟ್ಟದಲ್ಲಿ ಲಾಭಿ …
Read More »ಹಿರಿಯ ಐಎಎಸ್ ಅಧಿಕಾರಿ ಎನ್. ಜಯರಾಮ್ Best CEO ಅವಾರ್ಡ್ ಗೆ ಭಾಜನ…
ಬೆಳಗಾವಿ-ಸಾರ್ವಜನಿಕ ಆಡಳಿತದಲ್ಲಿ ಉತ್ಕರ್ಷ ಸೇವೆ ಸಲ್ಲಿಸಿದ್ದಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಎನ್. ಜಯರಾಮ ಅವರಿಗೆ IIMM ಸಂಸ್ಥೆಯ 2022 ನೇ ಸಾಲಿನ ‘Best CEO’ ಅವಾರ್ಡ್ ದೊರೆತಿದೆ. ಇತ್ತೀಚೆಗೆ ಚೆನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ Indian Institute of Material Management ನ ರಾಷ್ಟ್ರೀಯ ಅಧ್ಯಕ್ಷ ಎಚ್. ಕೆ. ಶರ್ಮ ಈ ಪ್ರಶಸ್ತಿ ನೀಡಿದರು. ಸಾರ್ವಜನಿಕ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ, ಪೌರಾಡಳಿತ, ಸ್ಕಿಲ್ ಡೆವಲಪಮೆಂಟ್, ಬೆಂಗಳೂರು ಜಲಮಂಡಳಿ ಮುಖ್ಯಸ್ಥರಾಗಿ ಕುಡಿಯುವ …
Read More »ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ, ಪುಂಡರ ಅರೆಸ್ಟ್..
ಬೆಳಗಾವಿ ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ ಪುಂಡ ಎಂಇಎಸ್ ನಾಯಕರನ್ನು ಪೊಲೀಸರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಂಧಿಸಿದರು. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರು ಇಲ್ಲಿನ ಮರಾಠಿ ಭಾಷಿಕರ ಸಮಸ್ಯೆ ಆಗಲಿಸಲು ಬೆಳಗಾವಿಗೆ ಆಗಮಿಸುತ್ತಿದ್ದರು. ಅವರಿಗೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಸರಕಾರಕ್ಕೆ ಪತ್ರ ಬರೆದು ಬೆಳಗಾವಿ ಗಡಿ ಪ್ರವೇಶಿಸದಂತೆ ಮಾಡಿದ್ದು ಖಂಡನೀಯ ಎಂಇಎಸ್ ಛಾಪಾಗಳು ಮರಾಠಿ ಸುದ್ದಿಗಾರರಿಗೆ ಎಂಇಎಸ್ …
Read More »ಕರವೇ ನಾರಾಯಣಗೌಡ್ರ ಬೆಳಗಾವಿ ನಡೆಗೆ ಹಿರೇಬಾಗೇವಾಡಿಯಲ್ಲೇ ತಡೆ…??
ಬೆಳಗಾವಿ-ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ್ರು ಇಂದು ಬೆಳಗಾವಿಗೆ ಆಗಮಿಸುತ್ತಿದ್ದು ಅವರು ಬೆಳಗಾವಿ ಮಹಾನಗರ ಪ್ರವೇಶ ಮಾಡದಂತೆ ತಡೆಯಲು ಹಿರೇಬಾಗೇವಾಡಿ ಟೋಲ್ ಬಳಿ ಬಿಗಿ ಪೋಲೀಸ್ ಬಂದೋಬಸ್ತಿ ಮಾಡಲಾಗಿದೆ. ಬೆಳಗಾವಿ ಮಹಾನಗರದಲ್ಲಿ ಭಾಷಾ ಧ್ವೇಷದ ಕಿಡಿ ಹೊತ್ತಿದಾಗ, ಬೆಳಗಾವಿ ಪೋಲೀಸ್ರು ವಾಟಾಳ್ ನಾಗರಾಜ್ ಸೇರಿದಂತೆ ಎಲ್ಲ ಕನ್ನಡಪರ ಹೋರಾಟಗಾರರನ್ನು ಹಿರೇಬಾಗೇವಾಡಿ ಟೋಲ್ ಬಳಿ ತಡೆಯುತ್ತಾರೆ. ಇಂದು ಕರವೇ ಅಧ್ಯಕ್ಷ ನಾರಾಯಣಗೌಡ್ರು ಸಾವಿರಾರು ಕಾರ್ಯಕರ್ತರ ಜೊತೆಗೆ ಬೆಳಗಾವಿಗೆ ಮುತ್ತಿಗೆ ಹಾಕಿ ನಾಡದ್ರೋಹಿಗಳ ವಿರುದ್ಧ …
Read More »ಮಹಾರಾಷ್ಟ್ರದ ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ- ಬೆಳಗಾವಿ ಡಿಸಿ ಆದೇಶ
ಬೆಳಗಾವಿ- ನಾಳೆ ಮಂಗಳವಾರ ಮಹಾರಾಷ್ಟ್ರದ ಇಬ್ವರು ಸಚಿವರು ಬೆಳಗಾವಿಗೆ ಬರಲಿದ್ದು, ಈ ಇಬ್ವರು ಸಚಿವರು ಬೆಳಗಾವಿ ಗಡಿ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿ ಬೆಳಗಾವಿ ಜಿಲ್ಕಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ,ಮತ್ತು ಶಂಬುರಾಜೆ ದೇಸಾಯಿ ಇಬ್ಬರೂ ಬೆಳಗಾವಿ ಗಡಿ ಪ್ರವೇಶ ಮಾಡದಂತೆ ಕ್ರಮ ಜರುಗಿಸಲು ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಆಗಮಿಸಿ ಬೆಳಗಾವಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ,ಶಾಂತಿಗೆ …
Read More »