ಬೆಳಗಾವಿ- ಕಳ್ಳರು ಬಂದಿದ್ದಾರೆ ಎಂದು ಬಡಾವಣೆಯ ಜನರಿಗೆ ಹೇಳಲು ಮನೆಯಿಂದ ಹೊರಗೆ ಓಡಿ ಬಂದ ಮಹಿಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಳಗಾವಿ ಪಕ್ಕದ ಶಿಂಧೋಳ್ಳಿ ಗ್ರಾಮದಲ್ಲಿ ನಡೆದಿದೆ. ಶಿಂಧೋಳ್ಳಿ ಹೊಸಗೇರಿ ಗಲ್ಲಿಯ ಭರಮಕ್ಕಾ ಪೂಜಾರಿ,ಎಂಬ ಮಹಿಳೆ ರಾತ್ರಿಹೊತ್ತು ಬಾವಿಗೆ ಬಿದ್ದು ಮೃತಪಟ್ಟಿದ್ದು ಇಂದು ಬೆಳಗ್ಗೆ ಮಹಿಳೆಯ ಶವ ಹೊರಗೆ ತೆಗೆಯಲಾಗಿದೆ. ಮಹಿಳೆ ಬಾವಿಗೆ ಆಕಸ್ಮಿಕವಾಗಿ ಬೀಳಲು ಕಳ್ಳರ ಘಟನೆ ಕಾರಣವೋ ಅಥವಾ ಬೇರೆ ಯಾವುದಾದ್ರು ಕಾರಣ ಇದೆಯೋ …
Read More »ಮಲಗಿ ಎದ್ದ ಆ ವಿಡಿಯೋ ಬೆಲೆ 25 ಲಕ್ಷ ರೂ…!!!
ಬೆಳಗಾವಿ ಮಹಾನಗರದಲ್ಲಿ ಹನಿಟ್ರ್ಯಾಪ್ ದಂಧೆ, ಜೋರಾಗಿದೆ. ಮಲಗಿದ್ದ ವೇಳೆ ಭುಜ ಮುಟ್ಟಿ ಎಬ್ಬಿಸಿದ ವಿಡಿಯೋವನ್ನಿಟ್ಟುಕೊಂಡು 25 ಲಕ್ಷ ರೂ ಡಿಮ್ಯಾಂಡ್ ಮಾಡಿ ಹದಿನೈದು ಲಕ್ಷ ರೂ ವಸೂಲಿ ಮಾಡಿ ಉಳಿದ ಹತ್ತು ಲಕ್ಷಕ್ಕಾಗಿ ಪೀಡಿಸುತ್ತಿರುವಾಗ ಹನಿ ಟ್ರಾಪ್ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ. ಬೆಳಗಾವಿ ನಗರದಲ್ಲಿ ಹನಿಟ್ರ್ಯಾಪ್ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸರು ಯುವತಿ ಸೇರಿದಂತೆ ನಾಲ್ವರನ್ನು ಬುಧವಾರ ಬಂಧಿಸಿದ್ದಾರೆ. ಶಹಾಪುರ ಬಸವಣ ಗಲ್ಲಿಯ ವಿದ್ಯಾರ್ಥಿನಿ ದಿವ್ಯಾ ಪ್ರದೀಪ …
Read More »ಅವರು ಗುಡ್ ಆಫೀಸರ್, ವಿಡಿಯೋ ವೈರಲ್ ಮಾಡಿದ್ದು ಸರಿಯಲ್ಲ ಕೋರ್ಟ್ ಅಸಮಾಧಾನ
ಬೆಳಗಾವಿ-ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ, ನಾಲ್ಕು ಮಾತುಗಳನ್ನು, ಮಾತಾಡಬೇಕಾಗುತ್ತದೆ.ಅಧಿಕಾರಿಗಳ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಮಾಡುವದು ಸರಿಯಲ್ಲ, ಅಧಿಕಾರಿಗಳು ಫೋಸ್ಟೆಡ್ ಬೆಳಗಾವಿ ಪಾಲಿಕೆ ಆಯುಕ್ತರು ಗುಡ್ ಆಫೀಸರ್ ಕೋರ್ಟ ನಿರ್ದೇಶನಗಳನ್ನು ಪಾಲಿಸಿದ್ದಾರೆ ಎಂದು ಹೈಕೋರ್ಟ್ ಪಾಲಿಕೆ ಆಯುಕ್ತರ ನ್ಯಾಯ ಪಾಲನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. ಸ್ಮಾರ್ಟ್ ಸಿಟಿಯೋಜನೆಯಡಿ ಅಕ್ರಮವಾಗಿ ರಸ್ತೆ ನಿರ್ಮಿಸಿದ ಪ್ರಕರಣ ಸಂಬಂಧ ಕೋರ್ಟ್ ಆದೇಶ ಪಾಲನೆ ಮಾಡಿದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಹೈಕೋರ್ಟ್ …
Read More »ಅರ್ಜಿ ವಜಾ, ಸಿಎಂ ಸಿದ್ರಾಮಯ್ಯಗೆ ಶಾಕ್….!!
ಬೆಂಗಳೂರು, ಸೆಪ್ಟೆಂಬರ್ 24: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭಾರೀ ಹಿನ್ನಡೆಯಾಗಿದೆ. ಕರ್ನಾಟಕ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದ್ದು, ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ತೀರ್ಮಾನವನ್ನು ಕೋರ್ಟ್ ಎತ್ತಿ ಹಿಡಿದಿದೆ. ಮಂಗಳವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಈ ಕುರಿತು ತೀರ್ಪು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು …
Read More »ಜಾಗೆ ಹ್ಯಾಂಡ್ ಓವರ್, ರಸ್ತೆ ಹ್ಯಾಂಗ್ ಓವರ್,….!!
ಜಾಗೆ ಹ್ಯಾಂಡ್ ಓವರ್, ರಸ್ತೆ ಹ್ಯಾಂಗ್ ಓವರ್,….!! ಬೆಳಗಾವಿ – ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ,ಸ್ಮಾರ್ಟ್ ಸಿಟಿ ಎಂಡಿ, ಮತ್ತು ಬೆಳಗಾವಿ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಬೆಳಗಾವಿಯ ಶಿವಸೃಷ್ಠಿ ಎದುರಿನ ರಸ್ತೆ ಅಗಲೀಕರಣದಲ್ಲಿ ಭೂಸ್ವಾಧೀನ ಮಾಡಿಕೊಳ್ಳದೇ ಆಕ್ರಮವಾಗಿ ನಿರ್ಮಿಸಿದ ರಸ್ತೆಯ ಜಾಗವನ್ನು ಭೂ ಮಾಲೀಕರ ಕುಟುಂಬದವರಿಗೆ ಹಸ್ತಾಂತರ ಮಾಡುವ ಮೂಲಕ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿದ್ದಾರೆ. ಇಂದು …
Read More »ಯುಥ್ ಕಾಂಗ್ರೆಸ್ ಇಲೆಕ್ಷನ್ ಬೆಳಗಾವಿಯಲ್ಲಿ ಬಿಗ್ ಫೈಟ್……!!
ಬೆಳಗಾವಿ- ರಾಜ್ಯಾದ್ಯಂತ ಯುಥ್ ಕಾಂಗ್ರೆಸ್ ಇಲೆಕ್ಷನ್ ನಡೆಯುತ್ತಿದೆ.ಬೆಳಗಾವಿ ಜಿಲ್ಲೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಯುಥ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಬೈಲಹೊಂಗಲದ ಕಾರ್ತಿಕ್ ಪಾಟೀಲ ಯರಗಟ್ಟಿಯ ಅಲ್ತಾಫ್ ಮುಲ್ಲಾ ನಡುವೆ ಬಿಗ್ ಪೈಟ್ ನಡೆಯುತ್ತಿದೆ. ಬೈಲಹೊಂಗಲದ ಕಾರ್ತಿಕ್ ಪಾಟೀಲ ಎರಡು ಬಾರಿ ಬೆಳಗಾವಿ ಜಿಲ್ಲಾ ಯುಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಈಗ ಮೂರನೇಯ ಬಾರಿಗೆ ಆಯ್ಕೆ ಬಯಸಿ ಸ್ಪರ್ದೆ ಮಾಡಿದ್ದಾರೆ ಯರಗಟ್ಟಿಯ ಅಲ್ತಾಫ್ ಮುಲ್ಲಾ ಕಾರ್ತಿಕ್ ಪಾಟೀಲರ ಪ್ರತಿಸ್ಪರ್ದಿಯಾಗಿದ್ದು …
Read More »ಅಧಿಕಾರಿಗಳ ವಿರುದ್ಧ ಹಕ್ಕು ಚುತಿ ಮಂಡನೆ ಶೆಟ್ಟರ್ ಎಚ್ಚರಿಕೆ…..!!
ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡುವ ಕಾರ್ಯಕ್ರಮಕ್ಕೆ ತಮ್ಮನ್ನು ಅಹ್ವಾನಿಸಿಲ್ಲ,ಈ ಕುರಿತು ಸಂಸತ್ತಿನಲ್ಲಿ ಹಕ್ಕುಚುತಿ ಮಂಡನೆ ಮಾಡುವದಾಗಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಮಾದ್ಯಮಗಳ ಜೊತೆ ಮಾತನಾಡಿ ಹಕ್ಕುಚುತಿ ಮಾಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲವು ಗ್ರಾಮಗಳಲ್ಲಿ ನಮ್ಮನ್ನು ಬಿಟ್ಟು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.ಈ ರೀತಿ ಅನೇಕ ಗ್ರಾಮಗಳಲ್ಲಿ ಆಗುತ್ತಿದೆ.ಅಭಿವೃದ್ಧಿ ಪೂಕರವಾದ ವ್ಯಕ್ತಿ ನಾನು …
Read More »ಡಿಸ್ಕೋ ಡ್ಯಾನ್ಸ್ ಗಲಾಟೆ, ಮೂವರಿಗೆ ಚೂರಿ ಇರಿತ,
ಬೆಳಗಾವಿ-ಬೆಳಗಾವಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ತಾಳಕ್ಕೆ ಕುಣಿಯುವಾಗ ನಡೆದ ಗಲಾಟೆಯಲ್ಲಿ ಮೂವರಿಗೆ ಚೂರಿ ಇರಿತವಾದ ಘಟನೆ ನಡೆದಿದೆ. ಚೂರಿ ಇರಿತದಿಂದ ಮೂವರು ಯುವಕರು ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಮೆರವಣಿಗೆ ಸಾಗುವ ಸಂಧರ್ಭದಲ್ಲಿ ನಡೆದಿದೆ.ಡ್ಯಾನ್ಸ್ ಮಾಡುವ ವೇಳೆ ಕಾಲು ತಾಗಿದ್ದಕ್ಕೆ ಕಿರಿಕ್. ಆಗಿದೆ, ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.ಈ ಗಲಾಟೆಯಲ್ಲಿ ಮೂವರು ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ …
Read More »ನಾನು ಗಟ್ಟಿಯಾಗಿದ್ದೇನೆ ಎಂದು ಹೊರಗಡೆ ಇದ್ದೇನೆ- ರಮೇಶ್ ಜಾರಕಿಹೊಳಿ
ಅಥಣಿ-ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ವಿಚಾರಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು,ದಲಿತರಿಗೆ ಒಕ್ಕಲಿಗರಿಗೆ ಬೈದರಿಯುವದು ಇನ್ನೂ ಪ್ರೂವಾಗಿಲ್ಲ.ಇದನ್ನು ಸಿಡಿ ಶಿವು ಮಾಡಿದ್ದಾನೆ, ಅವನ ವಿರೋಧಿಗಳನ್ನು ಎಲ್ಲರನ್ನೂ ಜೈಲಿಗೆ ಹಾಕುತ್ತಾನೆ.ಹೆಸರು ಹೇಳದೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಒಬ್ಬ ಗಟ್ಟಿ ಇದ್ದೇನೆ ಎಂದು ಹೊರಗಡೆ ಇದ್ದೇನೆ.ಸಿಡಿ ಶಿವು ಉಳಿದ ರಾಜಕೀಯ ವೈರಿಗಳನ್ನು ಜೈಲಿಗೆ ಹಾಕಿದ್ದಾನೆ.ನಾನು ಉಮೇಶ್ ಕತ್ತಿ ಜಾತಿ ಬಗ್ಗೆ ಪರಸ್ಪರ ನಿಂದನೆ ಮಾಡುತ್ತಿದ್ದೇವು. …
Read More »ಪೋಲಿಸ್ ಠಾಣೆ ಮುಂದೆಯೇ ಕುಡುಕನ ಹೈಡ್ರಾಮಾ….!!
ಬೆಳಗಾವಿ-ಪೋಲಿಸ್ ಠಾಣೆ ಮುಂದೆಯೇ ಕುಡುಕನ ಹೈಡ್ರಾಮಾ ನಡೆಸಿದ ಘಟನೆ,ಬೆಳಗಾವಿ ನಗರದ ಟಿಳಕವಾಡಿ ಪೋಲಿಸ್ ಠಾಣೆ ಮುಂದೆ ನಡೆದಿದೆ. ಕುಡುಕ ಅವಾಂತರ ಮಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದ ಬ್ರೇಕ್ ಫಾಸ್ಟ್ ಆಗಿದೆ. ಪೋಲಿಸ್ ಠಾಣೆ ಗೇಟ್ ಮುಂದೆ ಕುಡುಕನ ರಾದಾಂತಕ್ಕೆ ಪೊಲೀಸ್ ಸಿಬ್ಬಂದಿಗಳು ಹೈರಾಣಾದ ಪ್ರಸಂಗ ನಡೆದಿದೆ. ಕುಡಿದು ಮತ್ತಿನಲ್ಲಿ ಪೋಲಿಸರ ಜೊತೆಗೆ ವಾಗ್ವಾದಕ್ಕೀಳಿದ ಮದ್ಯಪಾನಿ,ಅವ್ಯಾಚ್ಛ ಶಬ್ದಗಳಿಂದಲೇ ಮಹಿಳಾ ಪೋಲಿಸ್ ಸಿಬ್ಬಂದಿಗಳಿಗೂ ನಿಂದಿಸಿದ್ದಾನೆ.ಮಗನ ವಿರುದ್ಧ ಕಂಪ್ಲೀಟ್ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಕ್ಕೆ …
Read More »