Breaking News

Breaking News

ಪಂಚಮಸಾಲಿ ಸಮಾಜದ ಮುಖಂಡ ಆರ್ ಕೆ ಪಾಟೀಲ ಇನ್ನಿಲ್ಲ.

ಬೆಳಗಾವಿ- ಪಂಚಮಸಾಲಿ ಸಮಾಜದ ಬೆಳಗಾವಿ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ ನಿಧನರಾಗಿದ್ದಾರೆ.ಅವರಿಗೆ 58 ವರ್ಷ ವಯಸ್ಸಾಗಿತ್ತು.ಚಿಕ್ಕೋಡಿ ತಾಲೂಕಿನ,ಡೋಣವಾಡದವರಾಗಿದ್ದ ಆರ್.ಕೆ. ಪಾಟೀಲ ವೃತ್ತಿಯಲ್ಲಿ ವಕೀಲರಾಗಿದ್ದರು. ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಗಳಲ್ಲಿ ಸಕ್ರೀಯವಾಗಿದ್ದರು ಅಲ್ಪ ಕಾಲದ ಅನಾರೋಗ್ಯದ ನಂತರ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತುತ್ತಿರುವಾಗ ಗುರುವಾರ ಬೆಳಗ್ಗೆ ನಿಧನರಾದರು. ಅವರಿಗೆ ಪತ್ನಿ, ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಡೋಣವಾಡದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ

Read More »

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ ಮುನಿ ಮಹಾರಾಜರ ಸಮಾಧಿ ಮರಣ, ನ. 13 ರಂದು ಯಮಸಲ್ಲೇಖ ವೃತ ಸ್ವೀಕರಿಸಿದ್ದ ಜ್ಞಾನೇಶ್ವರ ಮುನಿ ಮಹಾರಾಜರು,ಎಂಟು ದಿನಗಳ ಬಳಿಕ ನಿನ್ನೆ ಸಂಜೆ 5 ಸಮಾಧಿ ಮರಣ ಹೊಂದಿದ್ದಾರೆ. ಜ್ಞಾನೇಶ್ವರ ಮುನಿ ಮಹಾರಾಜರು,ದೇವಲಾಪುರದ ಅಷ್ಟಮ ನಂದೀಶ್ವರ ಕ್ಷೇತ್ರದ ಸಂಸ್ಥಾಪಕರಾಗಿದ್ದರು. ಇಂದು ಬೆಳಗ್ಗೆ 11 ರಿಂದ ಮುನಿಗಳ ಅಂತಿಮ ದರ್ಶನದ …

Read More »

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ ತನ್ನ ಗಂಡನನ್ನು ಮುಗಿಸಲು ಊರಿನ ರೌಡಿಗೆ ಸುಫಾರಿ ಕೊಟ್ಟು ಗಂಡನ ಕೊಲೆ ಮಾಡಿಸಿ ಇಪ್ಪತ್ತು ವರ್ಷಗಳ ಸುಖ ಸಂಸಾರಕ್ಕೆ ಬತ್ತಿ ಇಟ್ಡ ಘಟನೆ ಬೆಳಗಾವಿ ಜಿಲ್ಲೆಯ ನೇಸರಗಿ ಠಾಣಾ ವ್ಯಾಪ್ತಿಯ ವಣ್ಣೂರಿನಲ್ಲಿನಡೆದಿದೆ.ನೀಲಮ್ಮನ ಗೆಳೆಯ ಸುಪಾರಿ ತಗೊಂಡು ಮರ್ಡರ್ ಮಾಡಿದ ರೌಡಿ ಕೊಲೆಯಾದ ಗಂಡ ಅದೊಂದು ಹತ್ತೊಂಬತ್ತು ವರ್ಷದ ಸುಂದರ …

Read More »

ಪಾರ್ಟಿ ಮಾಡಲು ಹೋದಾಗ. ಬಸ್ ಚಾಲಕ ನಿಗೂಢ ಸಾವು

ಬೆಳಗಾವಿ – ಗೆಳೆಯರ ಜೊತೆ ಪಾರ್ಟಿ ಮಾಡಲು ಹೋದಾಗ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನೊಪ್ಪಿದ ಘಟನೆ ಬೆಳಗಾವಿ ಪಕ್ಕದ ಹಿಂಡಲಗಾ ಸುಳಗಾ ಗ್ರಾಮದ ಹದ್ದಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬೆಳಗಾವಿ ಮಹಾನಗರದ ಶಹಾಪೂರ್ ಪ್ರದೇಶದ ಬಶೀರ್ ಚಿಕ್ಕೋಡಿ ಅಳ್ವಾನ್ ಗಲ್ಲಿಯ ನಿವಾಸಿ ಎಂದು ಗುರುತಿಸಲಾಗಿದೆ. KSRTC ಬಸ್ ಚಾಲಕನಾಗಿದ್ದ ಬಶೀರ್ ಚಿಕ್ಕೋಡಿ ಇಂದು ಗೆಳೆಯರ ಜೊತೆ ಸೇರಿಕೊಂಡು ಹಿಂಡಲಗಾ ಸುಳಗಾ ಹತ್ತಿರ ಪಾರ್ಟಿ ಮಾಡಲು ಹೋಗಿದ್ದ ಈ ಸಂಧರ್ಭದಲ್ಲಿ ಬಶೀರ್ ಮೃತಪಟ್ಡಿದ್ದಾನೆ …

Read More »

ಬೆಳಗಾವಿಯಲ್ಲಿ ಡಿ.9ರಿಂದ ಚಳಿಗಾಲ ಅಧಿವೇಶನ

ಬೆಳಗಾವಿ-ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಅಧಿವೇಶನ ಕರೆಯುವ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‍ ಅವರಿಗೆ ಕಡತ ರವಾನಿಸಿದ್ದು, ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ.ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಡಿ.9 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಸಲು ಸರಕಾರ ನಿರ್ಧರಿಸಿದೆ. ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನದ ದಿನಾಂಕ, ಸ್ಥಳ ನಿಗದಿ ಮಾಡಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿತ್ತುಅದರಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಕಾನೂನು ಮತ್ತು …

Read More »

ಇಂದು ರಾಜ್ಯಾದ್ಯಂತ ವಕ್ಫ್ ಬೋರ್ಡ್ ಚುನಾವಣೆ, ಬೆಳಗಾವಿಯಲ್ಲಿ ಮತದಾನ.

ಬೆಳಗಾವಿ – ಬಹು ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಕ್ಫ್ ಬೋರ್ಡ್ ಚುನಾವಣೆ ನಡೆಯುತ್ತಿದೆ. ಬೆಳಗಾವಿ ಸೇರಿದಂತೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಇಂದು ಮತದಾನ ನಡೆಯಲಿದೆ. ಬೆಳಗಾವಿ ವಿಭಾಗದ ಮತದಾನ ಬೆಳಗಾವಿ ನಗರದ ರೀಜನಲ್ ಕಮಿಷ್ನರ್ ಕಚೇರಿಯಲ್ಲಿ ನಡೆಯಲಿದೆ. ಈಗಾಗಲೇ ಸಂಸದ,ಶಾಸಕಾಂಗ ಮತ್ತು ಬಾರ್ ಕೌನ್ಸಿಲ್ ವಿಭಾಗದ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ‌. ಮುತವಲ್ಲಿ ವಿಭಾಗದ ಎರಡು ಮಹತ್ವದ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ಈ ಚುನಾವಣೆ ಸಚಿವ …

Read More »

ಸಾವಿಗೆ ನ್ಯಾಯ ಬೇಕು, ಗುಪ್ತ ಪತ್ರದಲ್ಲಿ ರುದ್ರಣ್ಣನ ಸಾವಿನ ರಹಸ್ಯ..!!!

ಬೆಳಗಾವಿ- ಬೆಳಗಾವಿ ತಹಶೀಲ್ದಾರ್ ಕಚೇರಿಯ SDC ಕ್ಲಾರ್ಕ್ ರುದ್ರಣ್ಣ ಯಡವಣ್ಣವರ್ ತಹಶೀಲ್ದಾರ್ ಚೇಂಬರ್ ನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ನನ್ನ ಸಾವಿಗೆ ತಹಶೀಲ್ದಾರ್ ಸೇರಿದಂತೆ ಮೂವರು ಕಾರಣ ಎಂದು ಮೆಸ್ಸೇಜ್ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ರುದ್ರಣ್ಣ ಯಡವಣ್ಣವರ ಸಾವಿಗೆ ಕಾರಣರಾದ ಬೆಳಗಾವಿ ತಹಶೀಲ್ದಾರ್ ಬಸವರಾಜ್ ನಾಗರಾಳ್ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲಾಗಿ ಈ ಮೂವರು ಆರೋಪಿಗಳು ನೀರೀಕ್ಷಣಾ ಜಾಮೀನು ಪಡೆದಿರುವ ಬೆನ್ನಲ್ಲಿಯೇ ಈಗ ಗುಪ್ತ ಪತ್ರವೊಂದು …

Read More »

ಬೆಳಗಾವಿ ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ

ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ಕಾಂಪೌಂಡ್ ಬಳಿಯೇ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ಮರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಿಹಾಳ ಹಾಗೂ ಮಾವಿನಕಟ್ಟಿ ಗ್ರಾಮದ ಬಳಿಯ ಬೆಳಗಾವಿ ವಿಮಾನ ನಿಲ್ದಾಣದ ಕಾಂಪೌಂಡ್ ಸಮೀಪದ ಹೊಲದಲ್ಲಿ ಮೃತದೇಹ ಪತ್ತೆಯಾಗಿದೆ. ಯುವಕನ ಜೇಬಿನಲ್ಲಿ ದ್ವಿಚಕ್ರ ವಾಹನದ ಕೀಲಿ ಕೈ ಪತ್ತೆಯಾಗಿದೆ. ಯುವಕನ ಗುರುತು ಪತ್ತೆಯಾಗಿಲ್ಲ. ಕಲ್ಲಿನಿಂದ ತಲೆಗೆ ಜಜ್ಜಿ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಂಡು …

Read More »

ಮೀನು ಹಿಡಿಯಲು ಹೋದ ತಂದೆ, ಇಬ್ಬರು ಮಕ್ಕಳು ನೀರು ಪಾಲು

  ಬೆಳಗಾವಿ-ಮೀನು ಹಿಡಿಯಲು ಹೋದ ತಂದೆ ಹಾಗೂ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ,ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಘಟಪ್ರಭಾ ನದಿಯಲ್ಲಿ ನಡೆದಿದೆ. ಬೆನಕನಹೊಳಿ ಗ್ರಾಮದ ಲಕ್ಷ್ಮಣರಾಮ ಅಂಬಲಿ (49) ರಮೇಶ್ ಅಂಬಲಿ (14),ಯಲ್ಲಪ್ಪ ಅಂಬಲಿ (12) ಘಟಪ್ರಭಾ ನದಿಯಲ್ಲಿ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.ಭಾನುವಾರ ಸಂಜೆ ನದಿಯಲ್ಲಿ ಬಲೆ ಹಾಕುವ ವೇಳೆ ಅವಘಡ ಸಂಭವಿಸಿದೆ.ಮೂವರಿಗೂ ಎಸ್‌ಡಿಆರ್‌ಎಫ್ ತಂಡದಿಂದ ಶೋಧಕಾರ್ಯ ನಡೆಯುತ್ತಿದೆ.ಸ್ಥಳಕ್ಕೆ ಯಕಮನಮರಡಿ ಠಾಣೆ ಪೊಲೀಸರ …

Read More »

ಚಳಿಗಾಲದ ಅಧಿವೇಶನದ ದಿನಾಂಕ ನಿಗದಿಪಡಿಸಿ

ಬೆಳಗಾವಿ-ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಈ ಭಾಗದ ಅಭಿವೃದ್ಧಿಗೆ ದಿಕ್ಸೂಚಿಯಾಗಿರುವ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ ಮೊದಲನೆಯ ವಾರದಿಂದ ಅಧಿವೇಶನ ಆರಂಭವಾಗಲಿದೆ ಎಂದು ವಿಧಾನಸಭಾಧ್ಯಕ್ಷರು ಮುನ್ಸೂಚನೆ ನೀಡಿದ್ದು ಸರ್ಕಾರ ಕೂಡಲೇ ಬೆಳಗಾವಿ ಅಧಿವೇಶನದ ದಿನಾಂಕ ನಿಗದಿಪಡಿಸಬೇಕೆಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ದಿನಾಂಕವನ್ನು ಇತ್ತೀಚಿಕೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ನಿರ್ಧಾರ ಮಾಡಬೇಕಿತ್ತು, ಆದ್ರೆ ಸುವರ್ಣಸೌಧದ ಬದಲಾಗಿ ಬೆಂಗಳೂರಿನಲ್ಲೇ ಅಧಿವೇಶನ ನಡೆಸುವ …

Read More »