Breaking News
Home / Breaking News (page 199)

Breaking News

ವಿನಯ ಕುಲಕರ್ಣಿಗೆ ಇಂದು ಬಿಡುಗಡೆಯ ಭಾಗ್ಯ….

ಬೆಳಗಾವಿ- ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆಯಿಂದಾಗಿ ಬಂಧನಕ್ಕೊಳಗಾಗಿ ಹಲವಾರು ತಿಂಗಳುಗಳಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಇಂದು ಬಿಡುಗಡೆಯಾಗಲಿದ್ದಾರೆ. ಮಾನ್ಯ ಸುಪ್ರೀಂ ಕೋರ್ಟ್ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ ಹಿನ್ನಲೆಯಲ್ಲಿ ಇಂದು ಶನಿವಾರ ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಲಿದೆ. ಪಂಚಮಸಾಲಿ ಸಮಾಜದ ಹೋರಾಟದ ನೇತ್ರತ್ವ ವಹಿಸಿದವರಲ್ಲಿ ವಿನಯ ಕುಲಕರ್ಣಿ ಅವರೂ ಒಬ್ಬರಾಗಿದ್ದು,ಅವದೇ …

Read More »

ಬೆಳಗಾವಿ ಕಾಂಗ್ರೆಸ್ ನಲ್ಲಿ ಮುಗಿಯದ ಸಿಂಬಾಲ್ ಕಿತ್ತಾಟ….!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಘೋಷಣೆಯಾಗಿ,ನಾಮಪತ್ರ ಸಲ್ಲಿಸಲು ನಾಳೆ ಭಾನುವಾರ,ಮತ್ತು ಸೋಮವಾರ ಎರಡೇ ದಿನ ಬಾಕಿ ಇದ್ದರೂ,ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯ ಮೇಲೆ ಎದುರಿಸಬೇಕೋ ಇಲ್ಲವೋ ಎಂದು ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಕಿತ್ತಾಟ ಮುಂದುವರೆದಿದೆ. ಶುಕ್ರವಾರ ಬೆಳಗಾವಿಯ ಪೈ ರೆಸಾರ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ,ಸತೀಶ್ ಜಾರಕಿಹೊಳಿ,ಕಾಂಗ್ರೆಸ್ ಮುಖಂಡ,ಆರ್ ವ್ಹಿ ದೇಶಪಾಂಡೆ,ಅವರು ಬೆಳಗಾವಿ ಮತ್ತು ಹುಬ್ಬಳ್ಳಿ ಮಹಾನಗರಪಾಲಿಕೆ ಚುನಾವಣೆಗೆ ಸಮಂಧಿಸಿದಂತೆ ಸರಣಿ ಸಭೆಗಳನ್ನು ನಡೆಸಿದರೂ ಬೆಳಗಾವಿ ಪಾಲಿಕೆ ಚುನಾವಣೆಯ ಕುರಿತು …

Read More »

ಚಿಹ್ನೆಯ ಮೇಲೆ ಪಾಲಿಕೆ, ಚುನಾವಣೆ ಎದುರಿಸಲು ಕಾಂಗ್ರೆಸ್ ನಿರ್ಧಾರ….!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂರನೇಯ ದಿನವಾದ ಇಂದು ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ಕಾವು ಏರತೊಡಗಿದೆ. ಬಿಜೆಪಿ ಪಕ್ಷದ ಚಿಹ್ನೆಯ ಮೇಲೆ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಎದುರಿಸುವ ನಿರ್ಧಾರ ಕೈಗೊಂಡಿದ್ದು,ಇಂದು ಬೆಂಗಳೂರಿನಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಕಾಂಗ್ರೆಸ್ ಪಕ್ಷವೂ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಸುವ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಗೊತ್ತಾಗಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ ಅವರು ಪಾಲಿಕೆ …

Read More »

ಪಾಲಿಕೆ ಇಲೆಕ್ಷನ್ ದಲ್ಲಿ ಕಸಬರ್ಗಿ ಗಾಳಿಪಟ,ಕಾಂಗ್ರೆಸ್ ವೋಟ್ ಬ್ಯಾಂಕ್ ಧೂಳಿಪಟ…??

ಈ ಚಿತ್ರ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ.30 ರಂದು ಓವೈಸಿ ಬರ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎಂಐಎಂ ಪಾರ್ಟಿಯ ಕಾರ್ಯಕರ್ತರು ಪ್ರಚಾರ ಶುರು ಮಾಡಿದ್ದಾರೆ. ಬೆಳಗಾವಿ-ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸಲು ಹಿಂದೇಟು ಹಾಕುವ ಲಕ್ಷಣಗಳು ಕಾಣಿಸುತ್ತಿದ್ದು ಜಾತ್ಯಾತೀತ ಸಿದ್ಧಾಂತ ಎಂದು ಹೇಳಿಕೊಳ್ಳುವ ಆಮ್ ಆದ್ಮೀ‌..ದೆಹಲಿ ಬದಲಾ ಹೈ ಬೆಲಗಾಮ್ ಬದಲೇಗಾ ಎನ್ನುವ ಘೋಷಣೆಯೊಂದಿಗೆ ಪಾಲಿಕೆ ಚುನಾವಣೆಯಲ್ಲಿ ಎಂಟ್ರಿ ಹೊಡೆದಿದೆ. ಜೊತೆಗೆ ಅಕ್ಬರ್ ಓವೈಸಿಯ …

Read More »

ಜನ ಸೇವೆಯೂ 24×7…..ಯೋಜನೆಗಳೂ 24×7…..!!!

ಬೆಳಗಾವಿ- ಬೆಳಗಾವಿ ನಗರ ರಾಜ್ಯದ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿದೆ,ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಳಗಾವಿ ನಗರದಲ್ಲಿ ನಾಲ್ಕು ದಿನಕ್ಕೊಮ್ಮೆ,ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಬರುತ್ತಿರುವದನ್ನು ಗಂಭೀರವಾಗಿ ತೆಗೆದುಕೊಂಡ ಶಾಸಕ ಅಭಯ ಪಾಟೀಲ ರದ್ದಾಗಿದ್ದ ಯೋಜನೆಯನ್ನು ಪುನರ್ ಮಂಜೂರು ಮಾಡಿಸಿ ಬೆಳಗಾವಿ ನಗರದ ಪ್ರತಿಯೊಂದು ಮನೆಗೂ 24%7 ನಿರಂತರವಾಗಿ ನೀರು ಪೂರೈಸುವ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಬೆಳಗಾವಿಯ ಭಗೀರಥ ಎನಿಸಿಕೊಂಡಿದ್ದಾರೆ‌. ಮೂರು ವರ್ಷದ ಹಿಂದೆ ಈ ಯೋಜನೆ ರದ್ದಾಗಿತ್ತು,ಇದನ್ನು …

Read More »

ಸಿಂಬಾಲ್… ಕೆಪಿಸಿಸಿ ಅಂಗಳದಲ್ಲಿ ಬೆಳಗಾವಿ ಬಾಲ್….!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ನೇಮಿಸಲಾದ ಕಾಂಗ್ರೆಸ್ ಮೇಲುಸ್ತುವಾರಿ ಸಮೀತಿ ಇಂದು ಬೆಳಗಾವಿಯಲ್ಲಿ ಸ್ಥಳೀಯ ನಾಯಕರ ಜೊತೆ,ಮಾಜಿ ನಗರಸೇವಕರ ಜೊತೆ,ಸಭೆ ಮಾಡಿದ್ರೂ ಪಾಲಿಕೆ ಚುನಾವಣೆ ಯನ್ನು ಪಕ್ಷದ ಚಿಹ್ನೆಯ ಮೇಲೆ ಮಾಡಬೇಕೋ..ಬಿಡಬೇಕೋ ಎನ್ನುವ ನಿರ್ಧಾರ ಕೈಗೊಳ್ಳುವಲ್ಲಿ ಸಫಲವಾಗಿಲ್ಲ. ಸುಮಾರು ಎರಡು ಘಂಟೆಗಳ ಕಾಲ ಬೆಳಗಾವಿಯ ನಾಯಕರ ಜೊತೆ ಮಾಜಿ ಸಚಿವ ಎಂ.ಬಿ ಪಾಟೀಲ,ಬಿ.ಕೆ ಹರಿಪ್ರಸಾದ ಸೇರಿದಂತೆ ಮೇಲುಸ್ತುವಾರಿ ಸಮೀತಿಯ ಸದಸ್ಯರು ಸಭೆ ಮಾಡಿದ್ರು,ಆದ್ರೆ ಸಭೆಯಲ್ಲಿ ಸ್ಥಳೀಯ ನಾಯಕರು,ಮಾಜಿ ನಗರ …

Read More »

ಬೆಳಗಾವಿಗೆ ನಾಯಕರ ದಂಡು…ಕೈ..ಕಮಲ ಟಿಕೆಟ್ ಗೆ ಡಿಮ್ಯಾಂಡು…!!!

ಬೆಳಗಾವಿಗೆ ಲೀಡರ್ ಗಳ ಲಗ್ಗೆ ಇವತ್ತಿನಿಂದ ಇಲೆಕ್ಷನ್ ಸುಗ್ಗಿ….. ಬೆಳಗಾವಿ- ಬೆಳಗಾವಿ ಮಹನಾಗರ ಪಾಲಿಕೆಯ ಚುನಾವಣೆಗೆ ಇವತ್ತಿನಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಲಿದೆ ಹೀಗಾಗಿ ಕಾಂಗ್ರೆಸ್ ಬಿಜೆಪಿ ನಾಯಕರು ಬೆಳಗಾವಿಗೆ ಆಗಮಿಸಿದ್ದಾರೆ. ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್,ಕಾಂಗ್ರೆಸ್ಸಿನ ಮಾಜಿ ಸಚಿವ ಎಂಬಿ ಪಾಟೀಲ,ಬಿ.ಕೆ ಹರೀಪ್ರಸಾದ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರು ಈಗ ಬೆಳಗಾವಿಯಲ್ಲಿ ಪಾಲಿಕೆ ಚುನಾವಣೆ ಕುರಿತು ಸರಣಿ ಸಭೆಗಳನ್ನು ಮಾಡಲಿದ್ದಾರೆ. ಬೆಳಗಾವಿ …

Read More »

ಸ್ವಾತಂತ್ರ್ಯೋತ್ಸವದ ದಿನವೇ ಅಗಲಿದ ಸ್ವಾತಂತ್ರ್ಯ ಹೋರಾಟಗಾರ….

ಬೆಳಗಾವಿ-ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಬೈಲಹೊಂಗಲ ತಾಲ್ಲೂಕಿನ ಸಂಪಗಾಂವಿ ತಾಲ್ಲೂಕು ಆಗಿತ್ತು,ಇದು ಬ್ರಿಟಿಷ್ ಅಧಿಕಾರಿಗಳ ಹೆಡ್ ಕ್ವಾಟರ್ ಕೂಡಾ ಆಗಿತ್ತು ಇಂತಹ ಕ್ರಾಂತಿಕಾರಿ ನೆಲದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಎಂ.ಕೆ ಹುಬ್ಬಳ್ಳಿ ಗ್ರಾಮದ ಮಹಾದೇವಪ್ಪಾ ಮಮದಾಪೂರ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ದಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮಹಾದೇವಪ್ಪ ಮಮದಾಪೂರ ಅವರನ್ನು ಗಾಂಧೀ ಚಿತಾಭಸ್ಮ ಸ್ಮಾರಕದ ಬಳಿ ಅವರನ್ನು ಸತ್ಕರಿಸಿ ಗೌರವಿಸಲಾಗುತ್ತಿತ್ತು,ಆದ್ರೆ ಈ ವರ್ಷ …

Read More »

ಚಿಹ್ನೆಯ ಮೇಲೆ ಚುನಾವಣೆ ಎದುರಿಸಲು,ಕಾಂಗ್ರೆಸ್ ಗ್ರೀನ್ ಸಿಗ್ನಲ್….

ಪಕ್ಷದ ಚಿಹ್ನೆಯ ಮೇಲೆ ಬೆಳಗಾವಿ ಪಾಲಿಕೆ ಚುನಾವಣೆ ಎದುರಿಸಲು ಕಾಂಗ್ರೆಸ್ ನಿರ್ಧಾರ… ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಕುರಿತು ಸೋಮವಾರ ಹೈಕೋರ್ಟ್ ತೀರ್ಪು ನೀಡಲಿದ್ದು ಚುನಾವಣೆ ನಡೆಯುತ್ತೋ ಇಲ್ಲವೋ ಅನ್ನೋದು ಸೋಮವಾರ ಫೈನಲ್ ಆಗಲಿದೆ. ಆದರೂ ರಾಜಕೀಯ ಪಕ್ಚಗಳು ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ,ಪಕ್ಷದ ಚಿಹ್ನೆಯ ಮೇಲೆಯೇ ಚುನಾವಣೆ ನಡೆಸುವಂತೆ ,ಕೆಪಿಸಿಸಿ ಅದ್ಯಕ್ಷರು ಬೆಳಗಾವಿ ನಗರ ಜಿಲ್ಲಾಧ್ಯಕ್ಷರಿಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ,ಜೊತೆಗೆ ಚುನಾವಣೆಯ …

Read More »

ವಿಗ್ ಹಾಕೊಂಡು,ಹೈಟ್ ಹೆಚ್ಚಿಸಿಕೊಂಡ,ಹೈಟೆಕ್ ವಂಚಕ ಅರೆಸ್ಟ್….!!!

ಬೆಳಗಾವಿ- ವಿಗ್ ಹಾಕೊಂಡು ಹೈಟ್ ಹೆಚ್ಚಿಸಿಕೊಂಡ ಹೈಟೆಕ್ ವಂಚಕ ಕೊನೆಗೂ ಪೋಲೀಸರ ಅತಿಥಿಯಾಗಿದ್ದಾನೆ.. ಪೊಲೀಸರಿಗೆ ಚೇಳೆ ಹಣ್ಣು ತನ್ನಿಸಿ ಪೊಲೀಸರಾಗಲು ಯತ್ನಿಸಿದ ಇಬ್ಬರು ಹೈಟೆಕ್ ವಂಚಕರು ಜೈಲು ಪಾಲಾಗಿದ್ದಾರೆ. ಸಬ್ ಇನ್ಸ್ಪೆಕ್ಟರ್ ಹುದ್ದೆಯ ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಫಿಜಿಕಲ್ ಟೆಸ್ಟ್ ನಡೆಯುವ ಸಂಧರ್ಭದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ಮಚ್ಚೆ ಕೆ ಎಸ್ ಆರ್ ಪಿ ಮೈದಾನದಲ್ಲಿ ಫಿಜಿಕಲ್ ಟೆಸ್ಟ್ ಪರೀಕ್ಷೆ ನಡೆಯುವಾಗ ಎತ್ತರ ಕಡಿಮೆ ಹಿನ್ನೆಲೆಯಲ್ಲಿ ಖತರನಾಕ್ ಐಡಿಯ ಮಾಡಿದ್ದ …

Read More »