Breaking News

Breaking News

ಬೆಳಗಾವಿ ಜಿಲ್ಲೆಯ ವೀರ ಯೋಧ ನಿಧನ

ಮೂಡಲಗಿ:ಕಲ್ಲೋಳಿ ಪಟ್ಟಣದ ವೀರ ಯೋಧ ಶ್ರೀ ಪ್ರವೀಣ್ ಸುಭಾಸ್ ಖಾನಗೌಡ್ರ (24) ಅವರು ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಿಧನರಾದರು. ನಮ್ಮ ಹೆಮ್ಮೆಯ ವೀರ ಯೋಧ ದೇಶದ ರಕ್ಷಣೆಗಾಗಿ ಅವರು ಸಲ್ಲಿಸಿದ ಸೇವೆ ಎಂದೆಂದಿಗೂ ಅಮರ. ಕಲ್ಲೋಳಿ ಪಟ್ಟಣದಲ್ಲಿ 2000 ನೇ ಇಸ್ವಿಯಲ್ಲಿ ಜನಿಸಿದ ಪ್ರವೀಣ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕಲ್ಲೋಳಿ, ಖನಗಾಂವ ಗ್ರಾಮದಲ್ಲಿ ಮುಗಿಸಿ,ಪಿಯುಸಿ,ಪದವಿ ಶಿಕ್ಷಣವನ್ನು ಗೋಕಾಕದಲ್ಲಿ ಮುಗಿಸಿದರು. ಫೇ 12,2020 ರಲ್ಲಿ …

Read More »

ಭೀಮಗಡ ಅಭಯಾರಣ್ಯದಲ್ಲಿ ಸಫಾರಿ ಯೋಜನೆ ಕೈಬಿಡಲು ಒತ್ತಾಯ

ಬೆಳಗಾವಿ-ರಾಜ್ಯಸರ್ಕಾರ ಖಾನಾಪುರ ತಾಲೂಕಿನ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಸಫಾರಿ ಯೋಜನೆ ಕೈಬಿಡುವಂತೆ ಆಗ್ರಹಿಸಿ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಪದಾಧಕಾರಿಗಳು ಗುರುವಾರ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮತ್ತು ಉಪ ಅರಣ್ಯಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಖಾನಾಪುರ ತಾಲೂಕಿನ ಭೀಮಗಡ ಅಭಿಯಾರಣ್ಯದಲ್ಲಿ ಸಫಾರಿ ಯೋಜನೆ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ 18 ಕಿ.ಮೀ. ಸಫಾರಿಗಾಗಿ …

Read More »

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವರ್ಕ್ ಫ್ರಾಮ್ ಹೋಮ್….!!!

  ಬೆಳಗಾವಿ- ರಸ್ತೆ ಅಪಘಾತದದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಚವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಇಲಾಖೆಯ ಕಾರ್ಯವೈಖರಿಯನ್ನು ಆನ್ ಲೈನ್ ಮೂಲಕ ಪರಶೀಲಿಸುತ್ತಿದ್ದು ವರ್ಕ್ ಫ್ರಾಮ್ ಹೋಮ್ ಸಿಸ್ಟಮ್ ಅನುಸರಿಸುತ್ತಿದ್ದಾರೆ. ಸೋಮವಾರ,ಸಿಎಂ ಸಿದ್ರಾಮಯ್ಯ ಅವರೊಂದಿಗೆ ವಿಡಿಯೋ ಸಂವಾದದ ಮೂಲಕ ನಡೆದ 2025-2026 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರುಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ …

Read More »

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರ ಸದಸ್ಯತ್ವ ರದ್ದು……!!!

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಂದು ಕಡೆ ಅಧಿಕಾರಿಗಳ ನಡುವೆ ತಿಕ್ಕಾಟ ಇನ್ನೊಂದು ಕಡೆ ಪಾಲಿಕೆ ಆಯುಕ್ತರನ್ನೇ ವರ್ಗಾವಣೆ ಮಾಡುವಂತೆ ಪಾಲಿಕೆ ಸಿಬ್ಬಂದಿಗಳ ಸಂಘ ಪಟ್ಟು ಹಿಡಿದ ಬೆನ್ನಲ್ಲಿಯೇ ಇಂದು ಇಬ್ಬರು ಪಾಲಿಕೆ ಸದಸ್ಯರ ಸದಸ್ಯತ್ವ ರದ್ದಾಗಿದೆ. ಬೆಳಗಾವಿ-ಬೆಳಗಾವಿ ನಗರದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾದ ತಿನಿಸುಕಟ್ಟೆ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ತಮ್ಮ ಕುಟುಂಬದವರಿಗೆ ಮಳಿಗೆಗಳನ್ನು ಪಡೆದ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ಇಬ್ಬರು …

Read More »

ಬೆಳಗಾವಿಯಲ್ಲಿ ವ್ಯಕ್ತಿಯೋರ್ವನ ಕೊಲೆ

ಬೆಳಗಾವಿ-ಇಲ್ಲಿನ ರಾಮತೀರ್ಥ ನಗರದಲ್ಲಿ ವ್ಯಕ್ತಿಯೋರ್ವನ ಭೀಕರ ಕೊಲೆಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಈ ಪ್ರಕರಣ ಸಂಬಂಧ ಪೊಲೀಸರು ಮೃತನ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕೋಡಿ ತಾಲೂಕಿನ ಅಮಿತ ರಾಯಬಾಗ ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಪತ್ನಿ, ಇಬ್ಬರು ಮಕ್ಕಳೊಂದಿಗೆ ರಾಮತೀರ್ಥ ನಗರದಲ್ಲಿ ವಾಸವಾಗಿದ್ದರು. ಮನೆಯಲ್ಲಿ ಮಲಗಿದ್ದ ವೇಳೆ ಕತ್ತು ಹಿಸುಕು ಕೊಲೆ ಮಾಡಲಾಗಿದೆ. ಪತಿ ನಿತ್ಯ ಮದ್ಯ ಕುಡಿದು ಗಲಾಟೆ ಮಾಡುತ್ತಿದ್ದರಿಂದ ಪತ್ನಿಯೇ ಕೊಲೆ ಮಾಡಿರಬಹುದು ಎಂದು …

Read More »

ಕುಂಭಮೇಳದಿಂದ ವಾಪಸ್ ಬರುವಾಗ ಬೆಳಗಾವಿಯ ನಾಲ್ವರ ಸಾವು

ಬೆಳಗಾವಿ- ಮಹಾ ಕುಂಭಮೇಳಕ್ಕೆ ಹೋಗಿ ವಾಪಾಸ್ ಆಗುವಾಗ ಟಿ.ಟಿ ವಾಹನ ಅಪಘಾತಕ್ಕೀಡಾಗಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.ಬೆಳಗಾವಿಯ ಶಹಾಪುರ ನಿವಾಸಿ ಡ್ರೈವರ್ ಸಾಗರ್(55), ಗಣೇಶಪುರ ನಿವಾಸಿ ನೀತಾ ಪಾಟೀಲ್(50) ಮೃತರ ಗುರುತು ಪತ್ತೆಯಾಗಿದ್ದು ಉಳಿದವರ ಗುರುತು ಪತ್ತೆ ಹೆಚ್ಚುತ್ತಿದ್ದಾರೆ ಮಹಾ ಕುಂಭ ಮೇಳಕ್ಕೆ ಹೋಗಿ ವಾಪಾಸ್ ಆಗ್ತಿದ್ದ ಭಕ್ತರ ವಾಹನ ಅಪಘಾತ‌ಕ್ಕೀಡಾಗಿದೆ. ಬೆಳಗಾವಿಯ ನಾಲ್ವರ ದುರ್ಮರಣ ಹೊಂದಿದ್ದಾರೆ.ಇಬ್ಬರು ಸ್ಥಳೀಯ ಇಂದೋರ್ ನಿವಾಸಿಗಳು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಇಂದೋರ್ …

Read More »

ಇವರು ನೀಡಿದ ಚಿಕಿತ್ಸೆ ಅದ್ಭುತ , ಬೆಳಗಾವಿಯ ವ್ಯಕ್ತಿ ಇವರ ಔಷಧಿಯಿಂದ ಬದುಕಿದ್ದು ಪವಾಡ…!!

ನಾಟಿ ವೈದ್ಯ ಲೋಕೇಶ್ ಟೇಕಲ್ ಅವರು ನೀಡಿದ ಚಿಕಿತ್ಸೆ ನೋಡಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ನಾಟಿ ವೈದ್ಯ ನೀಡಿದ ಚಿಕಿತ್ಸೆಯ ಕುರಿತು ಸದನದಲ್ಲೂ ಮಾತಾಡಿದ್ದಾರೆ. ಇವರ ಚಿಕತ್ಸೆಯ ಚಮತ್ಕಾರ ನೋಡಿ ಕೇಂದ್ರ ಸರ್ಕಾರವೂ ಈ ನಾಟಿ ವೈದ್ಯರಿಂದ ಚಿಕಿತ್ಸಾ ವಿಧಾನದ ಬಗ್ಗೆ ICMR ಮೂಲಕ ವರದಿ ಪಡೆದಿದೆ. ಅನೇಕ ರೋಗಗಳಿಗೆ ಈ ನಾಟಿ ವೈದ್ಯರ ಬಳಿ ಔಷಧಿ ಇದೆ. ಇವರಿಂದ ಔಷಧಿ ಪಡೆದ ಸಾವಿರಾರು …

Read More »

ಬೆಳಗಾವಿ ಗ್ರಾಮಂತರ ಜಿಲ್ಲೆ ರಾಜ್ಯದಲ್ಲೇ ನಂ.1 – ವಿಜಯೇಂದ್ರ

ಬೆಳಗಾವಿ-ಕಾರ್ಯಕರ್ತರ ಸಂಕಲ್ಪ ಪೂರಿತ ಬದ್ಧತೆ ಭಾರತೀಯ ಜನತಾ ಪಾರ್ಟಿಯ ಸಂಘಟನಾ ಶಕ್ತಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಳಗಾವಿ ಗ್ರಾಮಾಂತರ ಜಿಲ್ಲೆಯು ಸಂಘಟನಾ ಪರ್ವದಲ್ಲಿ ಬೂತ್ ಕಮಿಟಿ ರಚನೆಯಲ್ಲಿ ರಾಜ್ಯದಲ್ಲಿ ಶೇ 100% ಗುರಿ ತಲುಪುವ ಮೂಲಕ ಸಂಘಟನಾ ಪರ್ವ ಅಭಿಯಾನದ ಅತ್ಯುನ್ನತ ಗುರಿ ಸಾಧಿಸಿದ್ದಾರೆ, ಇದಕ್ಕಾಗಿ ರಾಜ್ಯ ಅಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಅವರು ಹೆಚ್ಚಿನ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲಿಕ್ಕೆ ಶಕ್ತಿಯನ್ನು ತುಂಬಿದ್ದಾರೆ ಪ್ರೇರಣಾದಾಯಕ ಮಾತುಗಳನ್ನು ಆಡಿದ್ದಾರೆ, ಈ …

Read More »

ಬೆಳಗಾವಿಯ ಸಿಂಹ ಇನ್ನಿಲ್ಲ

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಭೂತರಾಮನಟ್ಟಿ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹೆಣ್ಣು ಸಿಂಹ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಮೃಗಾಲಯ ಅಧಿಕಾರಿಗಳು ತಿಳಿಸಿದ್ದಾರೆ. ನಿರುಪಮಾ ಎಂಬ 15 ವರ್ಷ ಈ ಹೆಣ್ಣು ಸಿಂಹವು ಕಳೆದ 15 ದಿನಗಳಿಂದ ವನ್ಯಜೀವಿ ವೈದ್ಯರ ಸಲಹೆಯಂತೆ ಉಪಚರಿಸಲಾಗುತ್ತಿತ್ತು. ಆದರೆ, ಇಂದು ಮಧ್ಯಾಹ್ನ 12.55ಕ್ಕೆ ಚಿಕಿತ್ಸೆ ಫಲಕಾರಿ ಆಗದೇ ಮೃಗಾಲಯದಲ್ಲಿ ಸಾವನ್ನಪ್ಪಿದೆ. ವನ್ಯಜೀವಿ ವೈದ್ಯರ ಸಲಹೆಯಂತೆ ಮರಣೋತ್ತರ ಪರೀಕ್ಷೆ ಮಾಡಿ …

Read More »

ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ

ಬೆಳಗಾವಿ- ಪ್ರತಿವರ್ಷ ಕಬ್ಬು ಕಟಾವ್ ಮಾಡುವ ಹಂಗಾಮು ಶುರುವಾದ್ರೆ ಸಾಕು ಪಕ್ಕದ ಮಹಾರಾಷ್ಟ್ರ ದಿಂದ ಬೆಳಗಾವಿ ಜಿಲ್ಲೆಗೆ ಸಾವಿರಾರು ಕುಟುಂಬಗಳು ಕಬ್ಬು ಕಟಾವ್ ಬರುತ್ತವೆ.ಈ ಕುಟುಂಬಗಳ ಬಡತನದ ಕಹಾನಿ ಕೇಳಿದ್ರೆ ಕಣ್ಣೀರು ಕಪಾಳಕ್ಕೆ ಬರುವದರಲ್ಲಿ ಸಂದೇಹವಿಲ್ಲ. ಕಬ್ಬು ಕಟಾವ್ ಮಾಡಲು ಗೋಕಾಕಿಗೆ ಬಂದಿದ್ದ ಮಹಾರಾಷ್ಟ್ರ ಮೂಲದ ಕುಟುಂಬದಲ್ಲಿ ಕರಾಳ ಘಟನೆ ನಡೆದಿದೆ. ಪತಿ ತನ್ನ ಪತ್ನಿಯನ್ನೇ ಭೀಕರವಾಗಿ ಹತ್ಯೆ ಮಾಡಿದ ಬಳಿಕ ತಾಯಿಯ ಶವಕ್ಕೆ ಮಗು ಅಪ್ಪಿಕೊಂಡು ಅಳುತ್ತಿರುವ. ದೃಶ್ಯ …

Read More »