ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ನಾಮಕರಣದ ವಿಚಾರವಾಗಿ ಗಂಭೀರ ಚರ್ಚೆ ನಡೆಯಿತು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಬೆಳಗಾವಿಯ ಕ್ಲಬ್ ರಸ್ತೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕ ದಿವಂಗತ ಬಿ. ಶಂಕರಾನಂದ ಅವರ ಹೆಸರು ನಾಮಕರಣದ ವಿಚಾರವನ್ನು ಪ್ರಸ್ತಾಪಿಸಿ ಎಲ್ಲರ ಗಮನ ಸೆಳೆದರು. ಶಾಸಕ ಅಭಯ ಪಾಟೀಲ ಅವರು ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಬಿ.ಶಂಕರಾನಂದ ಅವರ ಜನ್ಮ ಶತಮಾನೋತ್ಸವದ …
Read More »ದೆಹಲಿಯಿಂದ ಬೆಳಗಾವಿಗೆ ಮರಳಿದ ರಮೇಶ್ ಜಾರಕಿಹೊಳಿ ಹೇಳಿದ್ದೇನು ಗೊತ್ತಾ..??
ಬೆಳಗಾವಿ: ವಿಜಯಪುರ ಶಾಸಕಬಸನಗೌಡ ಪಾಟೀಲ್ ಯತ್ನಾಳ್ ನೇತೃತದಲ್ಲಿ ವಕ್ಫ್ ಭೂಕಬಳಿಕೆ ವಿರುದ್ಧ ರೈತರ ಪರವಾಗಿ ಮೊದಲ ಹಂತದ ಹೋರಾಟ ನಡೆಸಿದ ತಂಡವು ದೆಹಲಿಗೆ ತೆರಳಿ ವರದಿಯನ್ನು ಜಗದಂಬಿಕಾ ಪಾಲ್ ನಾಯಕತ್ವದ ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಿ ಬೆಳಗಾವಿಗೆ ವಾಪಸ್ಸಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ತಂಡದ ಹೋರಾಟವನ್ನು ಜೆಪಿಸಿ ಮುಕ್ತವಾಗಿ ಕೊಂಡಾಡಿದೆ. ಅದು ದೇಶದ …
Read More »ಪ್ರೀಯತಮೆಗಾಗಿ ಡಬಲ್ ಮರ್ಡರ್ ಮಾಡಿದ ಕ್ರೂರಿ ಲವರ್
ಬೆಳಗಾವಿ- ನನ್ನ ಮಗಳ ಜೊತೆ ಮಾತಾಡಬೇಡ ಎಂದಿದ್ದಕ್ಕೆ ಕ್ರೂರಿ ಲವರ್ ನೊಬ್ಬ ಹುಡುಗಿಯ ತಾಯಿ ಮತ್ತು ಹುಡುಗಿಯ ತಮ್ಮ ಇಬ್ಬರನ್ನೂ ಮರ್ಡರ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿಪ್ಪಾಣಿ ತಾಲ್ಲೂಕಿನ ಅಕ್ಟೋಳ ಗ್ರಾಮದ ಬಾಳೋಬಾ ಮಾಳ ಪ್ರದೇಶದಲ್ಲಿ ಇಬ್ಬರ ಕೊಲೆಯಾಗಿದೆ. ಮಂಗಲ್ ಸುಕಾಂತ ನಾಯಿಕ. ವಯಸ್ಸು: 50, ಹುಡುಗಿಯ ತಾಯಿ, ಪ್ರಜ್ವಲ್ ಸುಕಾಂತ ನಾಯಿಕ, ವಯಸ್ಸು: 18 ವರ್ಷ, ಸಾ: ಬಾಳೋಬಾ …
Read More »ಸಂತೋಷ್ ಪದ್ಮಣ್ಣವರ್ ಮರ್ಡರ್ ಕೇಸ್ ನಲ್ಲಿ ಡಾಕ್ಟರ್ ಅರೆಸ್ಟ್
ಬೆಳಗಾವಿ- ಬೆಳಗಾವಿಯ ಬಡ್ಡಿ ದಂಧೆಯ ಉದ್ಯಮಿ ಸಂತೋಷ್ ಪದ್ಮಣ್ಣವರ್ ಕೊಲೆ ಪ್ರಕರಣದಲ್ಲಿ ಭಾಗಿಯಾದ BAMS ಡಾಕ್ಟರ್ ಪ್ರಶಾಂತ್ ಶಿವಾನಂದ ನನ್ನು ಬೆಳಗಾವಿಯ ಮಾಳ ಮಾರುತಿ ಠಾಣೆಯ ಪೋಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಸಂತೋಷ್ ಪದ್ಮಣ್ಣವರ್ ಕೊಲೆ ಪ್ರಕರಣದಲ್ಲಿ ಸಂತೋಷ್ ಪದ್ಮಣ್ಣವರ್ ಪತ್ನಿ ಮತ್ತು ಆಕೆಯ ಗೆಳೆಯ ಸೇರಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಪೋಲೀಸರ ತನಿಖೆಯಲ್ಲಿ ಪದ್ಮಣ್ಣವರ್ ಕೊಲೆಯಲ್ಲಿ ಡಾಕ್ಟರ್ ಪಾತ್ರ ಕಂಡು ಬಂದಿರುವದರಿಂದ ಈಗ ಡಾಕ್ಟರ್ ಸಹಿತ ಜೈಲುಪಾಗಿದ್ದಾನೆ. …
Read More »ಶವ ಸಿಕ್ಕಿದ್ದು ವರ್ಷದ ಹಿಂದೆ, ಅದೊಂದು ಮರ್ಡರ್ ಎಂದು ಪತ್ತೆಯಾಗಿದ್ದು ಇವತ್ತು…
ಬೆಳಗಾವಿ, ರಾಯಬಾಗ ತಾಲೂಕಿನ ಇಟ್ನಾಳ ಬಳಿ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದ್ದ ಅನಾಥ ಶವದ ಪ್ರಕರಣ 11 ತಿಂಗಳ ಬಳಿಕ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಇಟ್ನಾಳ ಗ್ರಾಮದ ಮಲ್ಲಪ್ಪ ಕಂಬಾರ ಹತ್ಯೆಯಾಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಲ್ಲಪ್ಪ ಕಂಬಾರ ಪತ್ನಿ ದಾನವ್ವ ,ಪ್ರಕಾಶ ಉರ್ಫ ಶಿವಬಸವ ಬೆನ್ನಾಳಿ ಮತ್ತು ರಾಮಪ್ಪ ಮಾದರ ಬಂಧಿತ ಆರೋಪಿಗಳು. ಕಳೆದ ವರ್ಷ ಡಿಸೆಂಬರ್ 27 ರಂದು ಕೃಷ್ಣಾ ನದಿಯಲ್ಲಿ ಅನಾಥ ಶವ ಪತ್ತೆಯಾಗಿತ್ತು. ಇದೊಂದು ಸಹಜ …
Read More »ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ನಿಂದನೆ, ಆರೋಪಿ ಅರೆಸ್ಟ್
ಬೆಳಗಾವಿ -ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಅವಾಚ್ಯ ಶಬ್ದಗಳ ನಿಂದನೆ ಮಾಡಿರುವ ವಿಚಾರವಾಗಿ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ತುಮಕೂರಿನ ಸಮಾಜಿಕ ಜಾಲತಾಣದಲ್ಲಿ ನಿಂದನೆ ಹಿನ್ನೆಲೆಯಲ್ಲಿ ಆರೋಪಿಯನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ಮೋಹಿತ್ ನರಸಿಂಹಮೂರ್ತಿ(38) ಬಂಧನ ಆಗಿದೆ. ಆರೋಪಿಯನ್ನು ಬೆಳಗಾವಿ ಕೋರ್ಟ್ ಗೆ ಹಾಜರು ಪಡಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿಗೆ ನಿಂದನೆ ಹಿನ್ನೆಲೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು, ಸಚಿವರು ಆಪ್ತ ವಿಜಯ …
Read More »50 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ಕೊಲೆಗೈದ ತಮ್ಮ.
ಬೆಳಗಾವಿ-ಜಗತ್ತು ಎಲ್ಲಿ ಹೊರಟಿದೆ ನೋಡಿ ಜನ ದುಡ್ಡಿಗಾಗಿ ಏನೆಲ್ಲಾ ಮಾಡ್ತೀದ್ದಾರೆ ನೋಡಿ,50 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮ ಕೊಲೆಗೈದಿದ್ದಾನೆ.ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯಲ್ಲಿ. ಮೃತನ ಶವ ಪತ್ತೆಯಾಗುತ್ತಿದ್ದಂತೆ ಊರು ಬಿಟ್ಟವರು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಬಳಿ ನಡೆದಿದ್ದ ಘಟನೆ ತನಿಖೆಯ ಬಳಿಕ ಬೆಳಕಿಗೆ ಬಂದಿದೆ. ಹಣಮಂತ ಗೋಪಾಲ ತಳವಾರ(35) ಕೊಲೆಯಾಗಿದ್ದ ದುರ್ದೈವಿ. ಬಸವರಾಜ ತಳವಾರ ತನ್ನ …
Read More »ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ.
ಬೆಳಗಾವಿ-ಸಾಲಗಾರರ ಕಾಟಕ್ಕೆ ಬೇಸತ್ತು ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ,ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ದಿಗ್ಗೇವಾಡಿ ಗ್ರಾಮದ ಅಪ್ಪಾಸಾಬ ಕಂಬಾರ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ಘಟನೆ ನೆದಿದ್ದು,ಆತ್ಮಹತ್ಯೆಗೂ ಮುನ್ನ ಸೆಲ್ಪಿ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ.ರೇಖಾ ಸಮಗಾರ ಹಾಗೂ ಭೀಮು ವಾಳಕೆ ಹೆಸರು ಹೇಳಿ ಸೆಲ್ಪಿ ವಿಡಿಯೋ ಮಾಡಿದ ಬಳಿಕ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರಿಂದ ಅಂದಾಜು 50 ಸಾವಿರ ಸಾಲ ಪಡೆದಿದ್ದ ಅಪ್ಪಾಸಾಬ,50 ಸಾವಿರಕ್ಕೆ …
Read More »ಬ್ಯಾಂಕ್ ಸಿಬ್ಬಂಧಿಯಿಂದಲೇ ಎಟಿಎಂ ಕಳ್ಳತನ, ಶಾಕ್ ಆದ ಪೋಲೀಸರು
ಬೆಳಗಾವಿ–ಎಚ್‌ಡಿಎಫ್‌ಸಿ ಬ್ಯಾಂಕ್ ಸಿಬ್ಬಂದಿಯಿಂದಲೇ ಎಟಿಎಂ ಕಳ್ಳತನ ಮಾಡಿರುವ ಕೃತ್ಯ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. HDFC ಎಟಿಎಂ ನಲ್ಲಿ ಹಣ ಎಗರಿಸಿದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.ಎಂಟು ಲಕ್ಷ ಹಣ ಎಟಿಎಂ ನಿಂದ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಖಾಕಿ ಬಲೆಗೆ ಬಿದ್ದಿದ್ದಾನೆ.ಬೆಳಗಾವಿ ನಗರದ ಆರೋಪಿ ಕೃಷ್ಣಾ ಸುರೇಶ್ ದೇಸಾಯಿ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ. ಕೃಷ್ಣಾ ಎಟಿಎಂಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ.ತನ್ನ ಬಳಿಯೇ ಇರ್ತಿದ್ದ ಎಟಿಎಂ ಮಷೀನ್ ಕೀಯನ್ನು …
Read More »ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!
ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ ಮುಸ್ಲಿಂ ಸಮಾಜವನ್ನು ಸಂಘಟಿಸಿ ಆಯೋಗಗಳ ಎದುರು ಎಲ್ಲ ಮುಸ್ಲೀಂರನ್ನು ಹಾಜರುಪಡಿಸಿ, ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಪ್ರತಿಪಾದಿಸಿ ಕನ್ನಡದ ಹಿತವನ್ನು ಕಾಪಾಡಿದ ಬೆಳಗಾವಿಯ ನೂರುದ್ದೀನ್ ಸೇಠ ಅವರನ್ನು ಬೆಳಗಾವಿಯ ಕನ್ನಡಿಗರು,ರಾಜ್ಯದ ಜನ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ, ನೂರುದ್ದೀನ್ ಸೇಠ ಅವರ ಸುಪುತ್ರರಾದ ಫಿರೋಜ್ ಸೇಠ ಅವರ ನಂತರ …
Read More »