ಬೆಳಗಾವಿ- ಹುಷಾರ್ ..! ಈ ಬಡಾವಣೆಯೊಳಗೆ ಅಪರಿಚಿತರು ಎಂಟ್ರಿಯಾದ್ರೆ 500ರೂ ದಂಡ ಹಾಕುತ್ತಿದ್ದು ಹಾಗಂತ ಗಲ್ಲಿಯ ಪ್ರವೇಶ ದ್ವಾರದಲ್ಲಿರುವ ಬೋರ್ಡ ಮೇಲೆ ಬರೆಯಲಾಗಿದೆ. ಬೆಳಗಾವಿಯಲ್ಲಿ ಮೂರು ಕರೋನ ಪಾಸಿಟಿವ್ ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ, ಬೆಳಗಾವಿಯ ಗಲ್ಲಿ ಗಲ್ಲಿಗೂ ಆವರಿಸಿದ ಕರೋನ ಆತಂಕ ಈ ರೀತಿಯ ನಿರ್ಬಂಧಗಳಿಗೆ ಎಡೆಮಾಡಿದೆ. ಅಪರಿಚಿತರು ಒಳಗೆ ಬಾರದಂತೆ ಮುಳ್ಳಿನ ಬೇಲಿ, ಸಿಮೆಂಟ್ ಪೈಪ್ ಹಾಕಿ ನಿರ್ಭಂದ ಮಾಡಲಾಗಿದ್ದು ಗಲ್ಲಿಗಳ ಒಳಗಡೆ ಅಪರಿಚಿತರಿಗೆ ನೋ ಎಂಟ್ರಿ.. ಬೆಳಗಾವಿಯ …
Read More »ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 51ಜನರ ವರದಿ ನೆಗೆಟೀವ್ .ಮೂರು ವರದಿ ಪಾಸಿಟೀವ್ ,ಆರು ಜನ ಶಂಕಿತರ ವರದಿ ನಿರೀಕ್ಷೆಯಲ್ಲಿ.
ಬೆಳಗಾವಿ- ಕೊರೊನಾ ಶಂಕಿತರ ಇನ್ನೂ 6 ಜನರ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತವಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 831 ಜನರ ಮೇಲೆ ನಿಗಾ ಇಡಲಾಗಿದೆ. 253 ಜನರಿಗೆ 14 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು 33 ಜನರಿಗೆ ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗಿದೆ 403 ಜನರ 14 ದಿನಗಳ ಹೋಮ್ ಕ್ವಾರಂಟೈನ್ ಕಂಪ್ಲೀಟ್ ಆಗಿದೆ. 142 ಜನರ …
Read More »ಹಿರೇಬಾಗೇವಾಡಿ,ಬೆಳಗುಂದಿ ಬಫರ್ ಝೋನ್,ಕ್ಯಾಂಪ್ ಕಸಾಯಿಗಳ್ಲಿ- ಕಾಂಟೋನ್ಮೆಂಟ್ ಝೋನ್ – ಡಿಸಿ ಆದೇಶ
ಕರೊನಾ ಸೋಂಕು ದೃಢ: ಹಿರೇಬಾಗೇವಾಡಿ, ಬೆಳಗುಂದಿ ಹಾಗೂ ಕಸಾಯಿಗಲ್ಲಿ ಕಂಟೈನ್ಮೆಂಟ್ ಝೋನ್ ಆಗಿ ಜಿಲ್ಲಾಧಿಕಾರಿ ಘೋಷಣೆ ————————————————————————– ಬೆಳಗಾವಿ, ಏ.೩(ಕರ್ನಾಟಕ ವಾರ್ತೆ): ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ, ಬೆಳಗುಂದ ಗ್ರಾಮದಲ್ಲಿ ಮತ್ತು ಬೆಳಗಾವಿ ನಗರದ ಕ್ಯಾಂಪ್ ನ ಕಸಾಯಿಗಲ್ಲಿಯಲ್ಲಿ ಕರೊನಾ ವೈರಸ್ ಸೋಂಕು ದೃಢಪಟ್ಟಿರುವುದರಿಂದ(ಪಾಸಿಟಿವ್) ಸದರಿ ಗ್ರಾಮ ಮತ್ತು ಕಸಾಯಿಗಲ್ಲಿಯ ಭೌಗೋಳಿಕ ಪ್ರದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶವಾಗುವವರೆಗೆ ನಿಷೇಧಿತ(ಕಂಟೈನ್ಮೆಂಟ್ ಝೋನ್) ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ …
Read More »ಸಂಪೂರ್ಣ ಬಂದ್ “ಆಡಿಯೋ ತುಣುಕು” ನಕಲಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸ್ಪಷ್ಟನೆ
ಸಂಪೂರ್ಣ ಬಂದ್ “ಆಡಿಯೋ ತುಣುಕು” ನಕಲಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸ್ಪಷ್ಟನೆ ಬೆಳಗಾವಿ, ಏ.೪(ಕರ್ನಾಟಕ ವಾರ್ತೆ): ಕರೊನಾ ಹಿನ್ನೆಲೆಯಲ್ಲಿ ಶನಿವಾರ(ಏ.೪)ದಿಂದ ಸೋಮವಾರದವರೆಗೆ ದಿನಸಿ, ತರಕಾರಿ ಮಾರಾಟ ಸೇರಿದಂತೆ ಎಲ್ಲವೂ ಸಂಪೂರ್ಣ ಬಂದ್ ಎಂಬ “ನಕಲಿ ಆಡಿಯೋ” ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸಂಪೂರ್ಣ ಸುಳ್ಳು ಮಾಹಿತಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಕೈಗೊಳ್ಳಲಾಗುವ ಪ್ರತಿಯೊಂದು ಕ್ರಮಗಳ ಕುರಿತು …
Read More »ಮೂರು ಜನ ಸೊಂಕಿತರ ಜೊತೆ 37 ಜನರ ಪ್ರಾಥಮಿಕ ಸಂಪರ್ಕ,ಎಲ್ಲರ ಸ್ಯಾಂಪಲ್ ಪರೀಕ್ಷೆಗೆ ರವಾನೆ….!!!!
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮೂರು ಕೊರೊನಾ ಪಾಸಿಟಿವ್ ಪತ್ತೆ ವಿಚಾರವಾಗಿ ಸೋಂಕು ಪೀಡಿತ ವ್ಯಕ್ತಿ ಸಂಖ್ಯೆ 126ರ ಟ್ರಾವೆಲ್ ಹಿಸ್ಟ್ರಿ ಹೀಗಿದೆ ಮಾರ್ಚ್ 4 ರಂದು ಬೆಳಗಾವಿಯಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಪ್ರಯಾಣ. ಮಾರ್ಚ್ 19 ರಂದು ದೆಹಲಿಯಿಂದ ಬೆಳಗಾವಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಆಗಮನ. ನಂತರ ಎಂದಿನಂತೆ ಕಸಾಯಿ ಖಾನೆ ಕೆಲಸದಲ್ಲಿ ಭಾಗಿ. ಕಸಾಯಿಖಾನೆಯಲ್ಲಿ ಕೆಲಸ ಮಾಡಿದ್ದರ ಹಿನ್ನಲೆಯಲ್ಲಿ ಕಸಾಯಿಖಾನೆಯಲ್ಲಿ ಸಂಪರ್ಕಕ್ಕೆ ಬಂದವರಿಗೂ ಜಿಲ್ಲಾಡಳಿತ ತೀವ್ರ …
Read More »ಬೆಳಗಾವಿಯ ಗಲ್ಲಿ , ಗಲ್ಲಿ ,ಗಳಲ್ಲಿ ಸಂಪರ್ಕ ರಸ್ತೆಗಳಿಗೆ ಬೇಲಿ…..!!
ಶಾಕಿಂಗ್ ನ್ಯುಸ್ ಬೆಳಗಾವಿ ಜಿಲ್ಲೆಯ ಮೂವರಿಗೆ ಕೊರೋನಾ ಸೊಂಕು ಕನಫರ್ಮ…
ಶಾಕಿಂಗ್ ನ್ಯುಸ್ ಬೆಳಗಾವಿಯ ಮೂವರಿಗೆ ಕೊರೋನಾ ಸೊಂಕು ಕನಫರ್ಮ… ಬೆಳಗಾವಿ – ಇಂದು ಬೆಳಿಗ್ಗೆಯೇ ಬೆಳಗಾವಿ ಜಿಲ್ಲೆಯ ಮೂವರಿಗೆ ಕೊರೋನಾ ಸೊಂಕು ಇರುವ ಬಗ್ಗೆ ಪಾಸಿಟೀವ್ ರಿಪೋರ್ಟ್ ಬಂದಿತ್ತು ಆದ್ರೆ ಈ ಮಾಹಿತಿಯನ್ನು ಜಿಲ್ಲಾಡಳಿತ ದೃಡ ಪಡಿಸಿರಲಿಲ್ಲ, ಇಂದು ಸಂಜೆ ರಾಜ್ಯ ಸರ್ಕಾರ ಅಧಿಕೃತವಾದ ಹೆಲ್ತ ಬುಲಿಟೀನ್ ಬಿಡುಗಡೆ ಮಾಡಿ,ಜಿಲ್ಲೆಯ ಮೂವರಿಗೆ ಕೊರೋನಾ ಸೊಂಕು ಇರುವ ಬಗ್ಗೆ ದೃಡ ಪಡಿಸಿದೆ. ಬೆಳಗಾವಿ ಜಿಲ್ಲೆಯ ಮೂವರು ದೆಹಲಿಯ ನಿಜಾಮುದ್ದೀನ್ ಧರ್ಮ ಸಭೆಯಲ್ಲಿ …
Read More »—– ಹೋಲಸೇಲ್ ತರಕಾರಿ ಮಾರಾಟಕ್ಕೆ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಸ್ಥಳ ನಿಗದಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ
ಎಪಿಎಂಸಿ ವರ್ತಕರ ಸಭೆ; ನಿಯಮ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ——————————————————————– ಹೋಲಸೇಲ್ ತರಕಾರಿ ಮಾರಾಟಕ್ಕೆ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಸ್ಥಳ ನಿಗದಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಏ.೩(ಕರ್ನಾಟಕ ವಾರ್ತೆ): ಕರೋನಾ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಜನಸಂದಣಿ ಕಡಿಮೆಗೊಳಿಸುವ ದೃಷ್ಟಿಯಿಂದ ನಗರದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಹೋಲಸೇಲ್ ತರಕಾರಿ ಮಾರಾಟಕ್ಕೆ ಸ್ಥಳ ನಿಗದಿಪಡಿಸಲಾಗಿದ್ದು, ಸೋಮವಾರದಿಂದ ನಿಗದಿತ ನಾಲ್ಕು ಸ್ಥಳಗಳಲ್ಲಿ ಮಾತ್ರವೇ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ …
Read More »100 ಕುಟುಂಬಗಳಿಗೆ ಆಹಾರ ಸಾಮುಗ್ರಿಗಳ ಕಿಟ್ ವಿತರಿಸಿದ ಹುಕ್ಕೇರಿ ಹಿರೇಮಠದ ಶ್ರೀಗಳು
ನಾಳೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶಾಖೆಯಿಂದ ಅಗತ್ಯ ದಿನಸಿ ಕಾರ್ಯಕ್ರಮ ವಿತರಣೆ ಬೆಳಗಾವಿ ನಗರದ ಹುಕ್ಕೇರಿ ಹಿರೇಮಠ ಶಾಖೆಯ ಸುವಿಚಾರ ಚಿಂತನ ಬಳಗದಿಂದ ಪ್ರತಿ ತಿಂಗಳು ಮೊದಲ ಭಾನುವಾರ ನಡೆಸುವ ಸುವಿಚಾರ ಚಿಂತನ ಕಾರ್ಯಕ್ರಮ ರದ್ದಾಗಿದ್ದು ಅದರ ಬದಲು ಕೊರೋನೊ ವೈರಸ್ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಲಾಕ್ ಡೌನ ಮಾಡಿದ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಏ.5 ಭಾನುವಾರ ಜಿಲ್ಲಾಧಿಕಾರಿಗಳ ಆದೇಶದಂತೆ …
Read More »ದೆಹಲಿಗೆ ಹೋಗಿ ಬಂದವರ ೬೨ ಜನರಲ್ಲಿ ರೋಗದ ಲಕ್ಷಣಗಳು ಕಂಡುಬಂದಿಲ್ಲ.ಡಿಸಿ
ಬೆಳಗಾವಿ,- ನವದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಒಟ್ಟು ೬೨ ಜನರಲ್ಲಿ ಯಾರಿಗೂ ರೋಗದ ಲಕ್ಷಣಗಳು ಕಂಡುಬಂದಿಲ್ಲ. ೪೨ ಜನರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ೩೩ ಜನರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರು ಮತ್ತೆ ಯಾರಾದರೂ ಇದ್ದಲ್ಲಿ ತಕ್ಷಣವೇ ಸ್ವಯಂ ಪ್ರೇರಣೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಂಡು ಜಿಲ್ಲಾಡಳಿಕ್ಕೆ ಮಾಹಿತಿಯನ್ನು ನೀಡಬೇಕು. ಮರ್ಕಜ್ …
Read More »