Breaking News

LOCAL NEWS

ನೀರಿನಲ್ಲಿ ಧುಮುಕಿ ಕರೆಂಟ್ ಕಟ್ ಮಾಡಿ ಅನಾಹುತ ತಪ್ಪಿಸಿದ ರಿಯಲ್ ಹಿರೋ…!!

ಬೆಳಗಾವಿ- ನದಿಗಳು ಉಕ್ಕಿ ಹರಿಯುತ್ತಿವೆ.ನದಿ ತೀರದ ಗದ್ದೆಗಳು ಸಮುದ್ರದ ಸ್ವರೂಪ ಪಡೆದುಕೊಂಡಿವೆ.ಇಂತಹ ಪರಿಸ್ಥಿತಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು, ನೀರಿನಲ್ಲಿ ಧುಮುಕಿ ಜಲಾವ್ರತಗೊಂಡಿದ್ದ ಟಿಸಿ ಏರಿ ಕರೆಂಟ್ ಕಟ್ ಮಾಡಿ ದೊಡ್ಡ ಅನಾಹುತ ತಪ್ಪಿಸಿ,ಕರ್ತವ್ಯದಲ್ಲೂ ಜನಪರ ಕಾಳಜಿ ತೋರಿಸಿದ ಆ ಪಾವರ್ ಮ್ಯಾನ್ ನಿಜವಾಗಲೂ ರಿಯಲ್ ಹಿರೋ…. ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ.ಸಮುದ್ರಗಳಂತಾದ ಚಿಕ್ಕೋಡಿ ಉಪವಿಭಾಗದ ನದಿಗಳು ಅಪಾಯದ ಮಟ್ಟ ಮೀರಿ ಪಕ್ಕದ ಹೊಲಗದ್ದೆಗಳನ್ನು ಆಕ್ರಮಿಸಿಕೊಂಡಿವೆ.ಪ್ರವಾಹ ಸಮಯದಲ್ಲಿ ಕರ್ತವ್ಯ ನಿಷ್ಠೆ ಮೆರೆದ …

Read More »

ಈರಣ್ಣ ಕಡಾಡಿ, ಕೇಂದ್ರ ಕಾನೂನು ಮಂತ್ರಿಗಳನ್ನು ಭೇಟಿಯಾಗಿದ್ದು ಏಕೆ ಗೊತ್ತಾ.??*

ಬೆಳಗಾವಿ: ನೋಟರಿ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡ ವಕೀಲರಿಗೆ ಒಂದು ಗೌರವದ ವೃತ್ತಿ ಬದುಕು ನೀಡುವಂತೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಕರ್ನಾಟಕ ರಾಜ್ಯ ನೋಟರಿಗಳ ಸಂಘದ ಪದಾಧಿಕಾರಿಗಳು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಮೂಲಕ ಭೇಟಿ ಮಾಡಿ ಮನವಿ ಸಲ್ಲಿಸಿದರು. ರಾಜ್ಯದಾದ್ಯಂತ ನೋಟರಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಪೂರ್ಣ ಪ್ರಮಾಣದಲ್ಲಿ ನೋಟರಿ ವೃತ್ತಿಯಲ್ಲಿ ತೊಡಗಿರುವ ನೋಟರಿಗಳಿಗೆ ಕೋರ್ಟ ಆವರಣದಲ್ಲಿಯೇ …

Read More »

ಬಿಜೆಪಿಯಲ್ಲಿ ಬಂಡಾಯ ಯಾತ್ರೆಗೆ, ಜೋಡಿ ಸ್ಪೋಟ…!!

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸಿದೆ.ಲೋಕಸಭಾ ಚುನಾವಣೆಯ ನಂತರ ರಾಜಕಾರಣದ ಒಳ ಸಂಘರ್ಷ ಈಗ ಬಹಿರಂಗವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಒಳ ಒಪ್ಪಂದ ಆಗಿದೆ.ವಿಜಯೇಂದ್ರ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಮೈಸೂರ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ ವಿಜಯೇಂದ್ರ ಡಿಕೆಶಿ ಉಪಕಾರ ತೀರಿಸಲು ಹೊರಟಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಯತ್ನಾಳ ಗಂಭೀರ ಆರೋಪ ಮಾಡಿದ್ದು, ಅದಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ …

Read More »

ದೇವರಾಯಿ ಗ್ರಾಮದ ಬಳಿ ಕರಡಿ ದಾಳಿ: ರೈತನಿಗೆ ಗಾಯ

  ಖಾನಾಪುರ: ತಾಲ್ಲೂಕಿನ ದೇವರಾಯಿ ಗ್ರಾಮದ ಬಳಿ ಸೋಮವಾರ ಸಂಜೆ ದನಗಳನ್ನು ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವೃದ್ಧ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ರೈತ ನಾರಾಯಣ ಚೌರಿ (65) ಅವರ ಮೇಲೆ ಹಿಂದಿನಿಂದ ದಾಳಿ ನಡೆಸಿದ ಕರಡಿ ಅವರ ಬೆನ್ನು ಮತ್ತು ಮೈಮೇಲೆ ಪರಚಿ ಗಾಯಗೊಳಿಸಿದೆ. ನಾಗರಗಾಳಿ ಅರಣ್ಯ ವ್ಯಾಪ್ತಿಯ ದೇವರಾಯಿ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ನಾರಾಯಣ ಅವರ ಚೀರಾಟ …

Read More »

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಎರಡು ಕೋಟಿ…

“ಕಾಂಗ್ರೆಸ್ ಅಧಿವೇಶನ-ಶತಮಾನೋತ್ಸವ” ಸಭೆ ಅರ್ಥಪೂರ್ಣ ಆಚರಣೆಗೆ ಕ್ರಮ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ, ): ರಾಷ್ಟ್ತಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಶತಮಾನದ ಮೈಲಿಗಲ್ಲನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ಶತಮಾನೋತ್ಸವವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು. ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜು.29) ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳಗಾವಿಯಲ್ಲಿ …

Read More »

ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ*

ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭೇಟಿ ಮಾಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು. ನದಿ ತೀರದ ಸಂತ್ರಸ್ತರು ಯಾವ ಕಾರಣಕ್ಕೂ ಆತಂಕ ಮಾಡ್ಕೊಬೇಡಿ. ಧೈರ್ಯದಿಂದ ಇರಿ. ಸದಾ ನಾವು ನಿಮ್ಮೊಂದಿಗೆ ಇದ್ದೇವೆ. ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಘಟಪ್ರಭಾ ನದಿ ತೀರದ ಸಂತ್ರಸ್ತರ ಬಗ್ಗೆ ಕಾಳಜಿ- ಕನಿಕರ ಭಾವನೆಗಳನ್ನು ಹೊಂದಿದ್ದಾರೆ. ಪ್ರವಾಹದಿಂದ ನದಿ ತೀರದ ಗ್ರಾಮಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಸಂತ್ರಸ್ತರಿಗೆ ಅನುಕೂಲವಾಗಲು ಅವರನ್ನು …

Read More »

ಮನೆ ಹಾನಿಗೆ ತಕ್ಷಣ ಪರಿಹಾರ ಕೊಡಿ- ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ,-( ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸೋಮವಾರ (ಜು.29) ಖಾನಾಪೂರ ತಾಲೂಕಿನಲ್ಲಿ ಮುಳುಗಡೆಯಾಗಿರುವ ಸೇತುವೆ ವೀಕ್ಷಿಸಿ, ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖಾನಾಪೂರ-ಗೋವಾ ಮಾರ್ಗದ ಮಲಪ್ರಭಾ ಸೇತುವೆ, ರುಮೇವಾಡಿ ಸೇತುವೆ ವೀಕ್ಷಿಸಿ, ಗಾಡಿಕೊಪ್ಪ ಗ್ರಾಮದ ಜನರ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿದರು. ನಂತರ ಹೀರೆ ಹಟ್ಟಿಹೋಳಿ ಗ್ರಾಮಕ್ಕೆ ಭೇಟಿ ಅಲ್ಲಿನ ಗ್ರಾಮಸ್ಥರ …

Read More »

ವರದೇ ಹರೀ… ಪಂಡರೀನಾಥ ಮಹಾರಾಜ್ ಕೀ..ಜೈ…!!

ಪಂಡರಪೂರದಲ್ಲಿ ತಪ್ಪಿಸಿಕೊಂಡ ನಾಯಿ 200 ಕೀ.ಮೀ ಕ್ರಮಿಸಿ ಮರಳಿ ಮನೆಗೆ ಬಂದಿತ್ತು. ಬೆಳಗಾವಿ- ಆಷಾಢ ಏಕಾದಶಿಯ ನಿಮಿತ್ಯ ದಿಂಡಿ ಯಾತ್ರೆಯಲ್ಲಿ ವಿಠ್ಠಲನ ಭಕ್ತರ ಜೊತೆ ಮಹಾರಾಷ್ಟ್ರದ ಪಂಡರಪೂರಕ್ಕೆ ಹೋಗಿದ್ದ ನಾಯಿ, ಪಂಡರಪೂರದಲ್ಲಿ ತಪ್ಪಿಸಿಕೊಂಡು 200 ಕೀ ಮೀ. ಏಕಾಂಗಿಯಾಗಿ ಕ್ರಮಿಸಿ ಈಗ ಮನೆಗೆ ತಲುಪಿರುವ ಘಟನೆ ನಿಪ್ಪಾಣಿ ಪಕ್ಕದ ಯಮಗರ್ಣಿ ಗ್ರಾಮದಲ್ಲಿ ನಡೆದಿದೆ. ಯಮಗರ್ಣಿ ಗ್ರಾಮದಿಂದ ಪಂಡರಪೂರಕ್ಕೆ ದಿಂಡಿ ಯಾತ್ರೆ ಹೋಗಿತ್ತು, ಊರಿನ ಭಕ್ತರ ಜೊತೆ ಜ್ಞಾನದೇವ ಕಂಬಾರ ಅವರ …

Read More »

ಪ್ರವಾಹ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಹೆಬ್ಬಾಳಕರ್

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕುವೆಂಪು ನಗರದಲ್ಲಿರುವ ಗೃಹ ಕಚೇರಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ , ಲಕ್ಷ್ಮೀ ಪುತ್ರ ಮೃನಾಲ ಅವರು ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಬೆಳಗಾವಿ ಜಿಲ್ಲೆಯ ಖಾನಾಪೂರ ಪ್ರದೇಶದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ,ನದಿ …

Read More »

ಕುಮಾರಸ್ವಾಮಿ ಅಪೋಲೋ ಆಸ್ಪತ್ರೆಗೆ ದಾಖಲು…

ಬೆಂಗಳೂರು-ಮುಡಾ ಹಗರಣ ವಿರೋಧಿಸಿ ಆಗಸ್ಟ್ 3ರಿಂದ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್‌ ನಾಯಕರ ಸಮನ್ವಯ ಸಭೆ ಜೆಡಿಎಸ್‌ ಕಚೇರಿಯಲ್ಲಿ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತಸ್ರಾವವಾಗಿದೆ. ಈ ವೇಳೆ ಬಟ್ಟೆಯಿಂದ ಮೂಗನ್ನು ಒರೆಸಿಕೊಂಡರೂ ರಕ್ತಸ್ರಾವ ನಿಲ್ಲಲಿಲ್ಲ. ಹೀಗಾಗಿ ಜೊತೆಯಲ್ಲಿದ್ದ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ತಂದೆಯನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಕರೆದೊಯ್ದರು. ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ …

Read More »

ನಿಪ್ಪಾಣಿ, ಹುಕ್ಕೇರಿ, ಕಾಗವಾಡ ಹಾಗೂ ಚಿಕ್ಕೋಡಿ ತಾಲ್ಲೂಕುಗಳ ಆಯ್ದ ಗ್ರಾಮಗಳ‌ ಶಾಲೆಗಳಿಗೆ ಮಾತ್ರ ರಜೆ

ಗೋಕಾಕ, ಮೂಡಲಗಿ ತಾಲ್ಲೂಕಿನ‌ ಶಾಲೆಗಳಿಗೆ ಜು.29 ಹಾಗೂ 30 ರಂದು ರಜೆ ಘೋಷಣೆ ——————————– ನಿಪ್ಪಾಣಿ, ಹುಕ್ಕೇರಿ, ಕಾಗವಾಡ ಹಾಗೂ ಚಿಕ್ಕೋಡಿ ತಾಲ್ಲೂಕುಗಳ ಆಯ್ದ ಗ್ರಾಮಗಳ‌ ಶಾಲೆಗಳಿಗೆ ಮಾತ್ರ ರಜೆ ಬೆಳಗಾವಿ, – ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗೋಕಾಕ‌ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಮಾತ್ರ ಅಂಗನವಾಡಿ ಕೇಂದ್ರಗಳು, ಎಲ್ಲ‌ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸೋಮವಾರ (ಜುಲೈ 29) ಹಾಗೂ ಮಂಗಳವಾರ (ಜುಲೈ 30) ರಜೆ‌ ಘೋಷಿಸಲಾಗಿರುತ್ತದೆ. …

Read More »

ಗೋಕಾಕಿನಲ್ಲಿ ಹೊಸ ಬಾಂಬ್ ಸಿಡಿಸಿದ ರಮೇಶ್ ಜಾರಕಿಹೊಳಿ

ಕೂಡಲಸಂಗಮದಿಂದ ಬಳ್ಳಾರಿವರಗೆ ಯಾತ್ರೆ ಬೆಳಗಾವಿ-ಗೋಕಾಕ್ ನಗರದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಹೊಸ ಬಾಂಬ್ ಸಿಡಿಸಿದ್ದಾರೆ.ಮುಡಾಹಗರಣಕ್ಕಿನಂತ ದೊಡ್ಡ ಹಗರಣ ವಾಲ್ಮೀಕಿ ಹಗರಣವಾಗಿದ್ದು,ವಾಲ್ಮೀಕಿ ಜನಾಂಗಕ್ಕೆ ಸರ್ಕಾರ ಮೋಸ‌ ಮಾಡಿದೆ.ಬಿಜೆಪಿಯ ದಿಲ್ಲಿ ಹೈಕಮಾಂಡ್ ಗೆ ಪರ್ಮಿಷನ್ ಕೇಳಿದ್ದಿನಿ. ಮಹರ್ಷಿ ವಾಲ್ಮೀಕಿ ನಿಗಮದ ಹಗರಣದ ತನಿಖೆಗೆ ಆಗ್ರಹಿಸಿ, ಕೂಡಲಸಂಗಮದಿಂದ ಬಳ್ಳಾರಿವರಗೆ ಯಾತ್ರೆ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಾನು ಬಸನಗೌಡ ಯತ್ನಾಳ್ ಇಬ್ಬರ ಹೆಸರು ಮಾತ್ರ ಈಗ ಹೇಳ್ತಿನಿ,ನಮ್ಮ …

Read More »

LOVE…..ಬೆಂಗಳೂರ TO ಬೆಳಗಾವಿ……!!!

ಬೆಳಗಾವಿ -ಸೋಶಿಯಲ್ ಮೀಡಿಯಾ ಬೆಳೆದಿದೆ, ಜಗತ್ತು ಚಿಕ್ಕದಾಗಿದೆ.ಸಂಪರ್ಕ ಸರಳವಾಗಿದೆ.ಹೀಗಾಗಿ ಪ್ರೀತಿ ಪ್ರೇಮದ ವ್ಯಾಪ್ತಿಯೂ ದೊಡ್ಡದಾಗಿದೆ.ಬೆಂಗಳೂರಿನ ಹುಡುಗಿ, ಬೆಳಗಾವಿ ಹುಡುಗ ಇಬ್ಬರ ನಡುವೆ ಇನ್ಸ್ಟಾಗ್ರಾಮ್ ನಲ್ಲಿ ಲವ್ ಆಗಿದೆ. ಬೆಂಗಳೂರಿನ ಹುಡುಗಿ ಈಗ ಬೆಳಗಾವಿ ತಲುಪಿದ್ದಾಳೆ. ನಾವಿಬ್ರು ಲವ್ ಮಾಡುತ್ತೇವೆ.ನಮ್ಮ ಮದುವೆ ಮಾಡಿಸಿ ಅಂತಾ ಈ ಜೋಡಿ ಈಗ ಬೆಳಗಾವಿ ಪೋಲೀಸರ ಮೊರೆ ಹೋದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಸ್ತೂರಬಾ ನಗರದ ನಿವಾಸಿ ಪ್ರೀಯಾಂಕಾ ಕೋಟ್ಯಾಧೀಶೆ, ಪ್ರೀಯಾಂಕಾ ಚಿಕ್ಕವಳಾಗಿದ್ದಾಗ ತಂದೆ …

Read More »

ಜಲಾವ್ರತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಸಾಹುಕಾರ್….!!

ಬೆಳಗಾವಿ- ಇಂದು ಬೆಳ್ಳಂ ಬೆಳಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯನ್ನು ಪರಶೀಲಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಗೋಕಾಕ್ ಲೋಳಸೂರು ಸೇತುವೆ ಸೇರಿದಂತೆ ಅನೇಕ ಜಲಾವ್ರತ ಪ್ರದೇಶಗಳಿ ಭೇಟಿ ನೀಡಿದ ರಮೇಶ್ ಜಾರಕಿಹೊಳಿ ನೆರೆಹಾವಳಿಯಿಂದ ಸಾರ್ವಜನಿಕರು ಹೆದರುವ ಅಗತ್ಯವಿಲ್ಲ, ನಾನು ನಿಮ್ಮ ಜೊತೆಗೆ ಇದ್ದೇನೆ.ಯಾವುದೇ ರೀತಿಯ ತೊಂದರೆ ಆಗದಂತೆ ಅಧಿಕಾರಿಗಳಿಗೆ ಎಲ್ಲ ರೀತಿಯ ನೆರವು ನೀಡುವಂತೆ ಸೂಚನೆ ಕೊಡುತ್ತೇನೆ …

Read More »

ಖಾನಾಪೂರ ಕಾಡಂಚಿನ ಅಮಗಾಂವ್ ಗ್ರಾಮದ ಮಹಿಳೆಯ ಸಾವು…

ಬೆಳಗಾವಿ- ಇತ್ತೀಚಿಗೆ ಖಾನಾಪೂರದ ಭೀಮಗಡ ಅಭಯಾರಣ್ಯ ಪ್ರದೇಶದಲ್ಲಿ ಇರುವ ಅಮಗಾಂವ್ ಎಂಬ ಊರಿನಲ್ಲಿ ಮಹಿಳೆಯೊಬ್ಬಳು ರಾತ್ರಿ ಎದೆನೋವು,ತಲೆ ನೋವು ಅಂತಾ ಇಡೀ ರಾತ್ರಿ ನರಳಿದ್ದು ಬೆಳಗಿನ ಜಾವ ಆ ಮಹಿಳೆಯನ್ನು ಅಮಗಾಂವ್ ಊರಿನ ಜನ ಕಟ್ಟಿಗೆಯ ಸ್ಟೇಚರ್ ನಲ್ಲಿ ಹತ್ತು ಕಿ.ಮೀ ವರೆಗೆ ಕಾಡಿನಲ್ಲಿ ಹೊತ್ತು ಮುಖ್ಯ ರಸ್ತೆಯವರೆಗೆ ತಂದು ನಂತರ ಅಂಬ್ಯುಲೆನ್ಸ್ ಮೂಲಕ ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಹಲವಾರು ದಿನಗಳ ಕಾಲ ವೈದ್ಯರು ಆ ಮಹಿಳೆಯನ್ನು ಉಳಿಸಲು …

Read More »
Sahifa Theme License is not validated, Go to the theme options page to validate the license, You need a single license for each domain name.