Breaking News

LOCAL NEWS

ಬೆಳಗಾವಿಯಲ್ಲಿ ಭಕ್ತಿಯಿಂದ ವಿಘ್ನೇಶ್ವರನಿಗೆ ವಿದಾಯ…

ಬೆಳಗಾವಿ- ಬೆಳಗಾವಿ ಬೆಳಗಾವಿಯಲ್ಲಿ ಯಾವ ರೀತಿ ಗಣೇಶ ಉತ್ಸವ ಯಾವ ರೀತಿ ನಡೆಯುತ್ತದೆಯೋ ದೇಶದ ಯಾವ ಭಾಗದಲ್ಲೂ ಆ ರೀತಿ ಉತ್ಸವ ನಡೆಯೋದಿಲ್ಲ ಯಾಕಂದ್ರೆ ಮಹಾರಾಷ್ಟ್ರದ ಪಕ್ಕದಲ್ಲಿರುವ ಬೆಳಗಾವಿ ಮಹಾನಗರದಲ್ಲಿ ಅತ್ಯಂತ ಅದ್ದೂರಿಯಾಗಿ ಉತ್ಸವ ಆಚರಿಸುತ್ತಾರೆ ಅದು ಮಹಾರಾಷ್ಟ್ರದ ಜನರಿಗೂ ಗೊತ್ತು ಇಲ್ಲಿಯ ಗಣೇಶ ವಿಸರ್ಜನೆ ಅಹೋರಾತ್ರಿ 40 ಗಂಟೆಗಳಗಳ ಕಾಲ ನಡೆಯುತ್ತದೆ. ಪ್ರತಿ ವರ್ಷ ಯಾವ ಸಮಯಕ್ಕೆ ಗಣೇಶ ವಿಸರ್ಜನೆ ಆರಂಭ ವಾಗುತ್ತಿತ್ತೋ ಈ ವರ್ಷ ಆ ಸಮಯಕ್ಕೆ …

Read More »

ಇಂದು ನಾರಾಯಣಗೌಡ್ರು ಬೆಳಗಾವಿಗೆ,ಪೀರಣವಾಡಿಗೆ

ಬೆಳಗಾವಿ-ಕರ್ನಾಟಕ ರಕ್ಷಣಾ ವೇದಿಕೆ      ರಾಜ್ಯಾಧ್ಯಕ್ಷರಾದ ಟಿ.ಎ ನಾರಾಣಗೌಡ್ರು ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ 1-00 ಗಂಟೆಗೆ ಬೆಳಗಾವಿಗೆ ಆಗಮಿಸಲಿರುವ ಅವರು, ಪೀರನವಾಡಿಯ ಛತ್ರಪತಿ ಶಿವಾಜಿ ಮಹಾರಾಜ,ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಿದ್ದಾರೆ. ಮದ್ಯಾಹ್ನ 1-00 ಗಂಟೆಗೆ ಬೆಳಗಾವಿಗೆ ಆಗಮಿಸುವ ಅವರು ಮದ್ಯಾಹ್ನ 2-00 ಗಂಟೆಗೆ ಪೀರನವಾಡಿಯಲ್ಲಿ ಇಬ್ಬರೂ ಮಹಾಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಈ ಸಂಧರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು,ಕನ್ನಡದ …

Read More »

ಬೆಳಗಾವಿಯ ಶಂಕರ ಗೌಡರಿಗೆ ಮತ್ತೆ ಭಂಪರ್ ಲಾಟ್ರಿ….!

ಬೆಳಗಾವಿ-:ಬೆಳಗಾವಿ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲರು ಬಿಜೆಪಿ ಸರ್ಕಾರದಲ್ಲಿ ಲಾಟ್ರಿ ಮೇಲೆ ಲಾಟ್ರಿ ಹೊಡೆಯುತ್ತಲೇ ಬಂದಿದ್ದು,ಇವರಿಗೆ ಸರ್ಕಾರ ಉನ್ನತ ಹುದ್ದೆ ನೀಡಿ ಇಂದು ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಬೆಳಗಾವಿಯ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲರನ್ನು ಸರ್ಕಾರ ಇಂದು ಕ್ಯಾಬಿನೇಟ್ ದರ್ಜೆಯ ಸ್ಥಾನಮಾನದೊಂದಿಗೆ ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಹೊರಡಿಸಿದ ಆದೇಶವನ್ನು ಹಿಂದಕ್ಕೆ ಪಡೆದು ಇಂದು ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ …

Read More »

ವಲಸಿಗರನ್ನು ಓಡಿಸುವ ಫೇಸ್ ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ- ವಲಸಿಗರನ್ನು ಓಡಿಸಿ ಕರ್ನಾಟಕವನ್ನು ಉಳಿಸಿ ಎಂಬ ತಲೆಬರಹದ ಫೇಸ್ ಬುಕ್ ಪೇಜ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರವೊಂದನ್ನು ಪೋಸ್ಟ್ ಮಾಡಿರುವ ಹಿನ್ನಲೆಯಲ್ಲಿ ಈ ಫೇಸ್ ಬುಕ್ ಪೇಜ್ ವಿರುದ್ದ ಬೆಳಗಾವಿಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯ ಖಡೇಬಝಾರ್ ಪೋಲೀಸ್ ಠಾಣೆಯಲ್ಲಿ ವಲಸಿಗರನ್ನು ಓಡಿಸಿ ಎಂಬ ಪೇಜ್ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿದ್ದಕ್ಕೆ ಪ್ರಕರಣ ದಾಖಲಾಗಿದೆ ಈ ಫೇಸ್ ಬುಕ್ ಪೇಜ್ ವಿರುದ್ದ IPC ಸೆ,505 ,153A,505/2 …

Read More »

ಬೆಳಗಾವಿಯಲ್ಲಿ ಹಿಂದೂ ಮೃತವ್ಯೆಕ್ತಿಯ ಅಂತ್ಯಕ್ರಿಯೆ ಮಾಡಿದ ಮುಸ್ಲೀಂ ಯುವಕರು….

ಬೆಳಗಾವಿ- ಮಾನವೀಯತೆ ಅನ್ನೋದು ಎಲ್ಲ ಧರ್ಮ ಜಾತಿಗಳನ್ನು ಮೀರಿದ್ದು,ಎನ್ನುವದನ್ನು ಬೆಳಗಾವಿಯ ಮುಸ್ಲಿಂ ಯುವಕರು ತೋರಿಸಿದ್ದಾರೆ,ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಬೆಳಗಾವಿಯ 70 ವರ್ಷದ ವೃದ್ದನನ್ನು ಮುಸ್ಲಿಂ ಯುವಕರು ಹಿಂದೂ ಧರ್ಮದ ವಿಧಿವಿದಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದಿದ್ದಾರೆ. ನಿನ್ನೆ ರಾತ್ರಿ ಬೆಳಗಾವಿ ಮಹಾನಗರದ ಸರಾಫ್ ಗಲ್ಲಿಯಲ್ಲಿ ಕೊರೋನಾ ಮಹಾಮಾರಿಯಿಂದ 70 ವರ್ಷದ ವ್ಯೆಕ್ತಿಯೊಬ್ಬ ಮೃತ ಪಟ್ಟಿದ್ದ,ಕೊರೋನಾಗೆ ಹೆದರಿ ಅಂತ್ಯಕ್ರಿಯೆಗೆ ಜನ ಬಾರದ ಹಿನ್ನಲೆಯಲ್ಲಿ ಮುಸ್ಲೀಂ ಯುವಕರೇ ಮೃತ ವ್ಯೆಕ್ತಿಯ ಅಂತ್ಯಕ್ರಿಯೆ …

Read More »

ಮೂರ್ತಿ ವಿವಾದ ಬಗೆ ಹರಿಸಿ ಜನಮನಗೆದ್ದ ಸಾಹುಕಾರ್….!

ಬೆಳಗಾವಿ-ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸರ್ಕಾರ ಉರುಳಿಸುತ್ತಾರೆ ಅಂದಾಗ,ಯಾರೂ ನಂಬಿರಲಿಲ್ಲ,ಸರ್ಕಾರ ಬೀಳಿಸಿದ ಬಳಿಕ ಅವರು ಜಲಸಂಪನ್ಮೂಲ ಮಂತ್ರಿ ಆಗ್ತಾರೆ ಎನ್ನುವ ಮಾತು ಕೇಳಿ ಬಂದಾಗಲೂ,ಆ ಖಾತೆ ನಿಭಾಯಿಸಲು ಅವರಿಂದ ಸಾದ್ಯವೇ ಇಲ್ಲ ಎಂದವರಿಗೆ ರಮೇಶ್ ಜಾರಕಿಹೊಳಿ ನಾನ,ಬ್ಯಾರೇ ನನ್ನ ಸ್ಟೈಲೇ ಬ್ಯಾರೇ ಅಂತ ತೋರಿಸಿಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ರಚಿಸಿದ್ದಾಯ್ತು ಅವರು ಜಲಸಂಪನ್ಮೂಲ ಖಾತೆಯ ಮಂತ್ರಿ ಆಗಿದ್ದೂ ಆಯ್ತು,ಜಲ ಸಂಪನ್ಮೂಲ ಮಂತ್ರಿಯಾಗಿ,ಕೋವಿಡ್ ಲಾಕ್ ಡೌನ್ ನಡುವೆಯೂ ಮಹಾಮಾರಿ ಕೊರೋನಾಗೆ ಅಂಜದೇ ರಾಜ್ಯಾದ್ಯಂತ ಸಂಚರಿಸಿ …

Read More »

ಕಾಕತಿ ಮರ್ಡರ್ ಕೇಸ್ ನಲ್ಲಿ ನಾಲ್ಕು ಜನ ಆರೋಪಿಗಳ ಅರೆಸ್ಟ್….!

ಬೆಳಗಾವಿ- ಮೊನ್ನೆ ರಾತ್ರಿ ಬೆಳಗಾವಿ ಪಕ್ಕದ ಕಾಕತಿಯಲ್ಲಿ ನಡೆದ ಮರ್ಡರ್ ಕೇಸ್ ಗೆ ಸಮಂಧಿಸಿದಂತೆ,ಕಾಕತಿ ಪೋಲೀಸರು ನಾಲ್ಕು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮೊನ್ನೆ ರಾತ್ರಿ ನಾಲ್ಕು ಜನ ಗೆಳೆಯರು ಕೂಡಿಕೊಂಡು ಎಣ್ಣೆ ಪಾರ್ಟಿ ಮುಗಿಸಿ ಮನೆಗೆ ಹೋಗುವಾಗ ಕಾಕತಿ ಪೆಟ್ರೋಲ್ ಬಂಕ್ ಬಳಿ ಪರಸ್ಪರ ಜಗಳಾಡುತ್ತಿದ್ದರು,ಇದನ್ನು ಗಮನಿಸಿದ ಯುವಕನೊಬ್ಬ ರಾತ್ರಿ ಹೊತ್ತಾಗಿದೆ ಜಗಳಾಡಬೇಡಿ ಎಂದು ಬುದ್ದಿವಾದ ಹೇಳಲು ಹೋದಾಗ,ನಾಲ್ಕು ಜನ ಗೆಳೆಯರು ಸೇರಿ ಬುದ್ದಿವಾದ ಹೇಳಲು ಹೋದ ಯುವಕನ …

Read More »

ಮುಂದಿನ ವರ್ಷ ಅಬಕಾರಿ ಇಲಾಖೆಯ ಎಲ್ಲಾ ವರ್ಗದ ಸಿಬ್ಬಂದಿಗೆ ಬಡ್ತಿ

ಅನಧಿಕೃತ ಮದ್ಯ ಮಾರಾಟ ತಡೆಯಲು ಗೋವಾ- ಬೆಳಗಾವಿ ಗಡಿಯಲ್ಲಿ ಹೆಚ್ಚಿನ ನಿಗಾ: ಅಬಕಾರಿ ಸಚಿವ ಎಚ್. ನಾಗೇಶ್ …………………………………………………………. ಬೆಳಗಾಾಾವ— ಲಾಕ್ ಡೌನ್ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ಶೇ. 50 ಆದಾಯ ಕಡಿಮೆ ಆಗಿದ್ದು, ಒಟ್ಟಾರೆ 3 ಸಾವಿರ ಕೋಟಿ ಇಲಾಖೆಗೆ ನಷ್ಟವಾಗಿದೆ‌‌. ಬಾರ್ ಮತ್ತು ರೆಸ್ಟೊರೆಂಟ್ ತೆರೆದ ಬಳಿಕ ಅಬಕಾರಿ ಇಲಾಖೆಯ ಅದಾಯ ಹೆಚ್ಚಲಿದೆ ಎಂದು ಅಬಕಾರಿ ಸಚಿವರಾದ ಎಚ್. ನಾಗೇಶ ಅವರು ತಿಳಿಸಿದರು. ಸುವರ್ಣ ವಿಧಾನಸೌಧದಲ್ಲಿ ಶನಿವಾರ …

Read More »

ಪ್ರತಿ ಮನೆಗೆ ನೀರು ತಲುಪಿಸಲು ಸಚಿವ ಈಶ್ವರಪ್ಪ ಸೂಚನೆ

ಬೆಳಗಾವಿ-ರಾಜ್ಯದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬುದು ಸರ್ಕಾರದ ಉದ್ಧೇಶ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆಯ ಬಗ್ಗೆ ಅನೇಕ ದೂರುಗಳಿವೆ. ಆದ್ದರಿಂದ ಘಟಕಗಳ ಸಮರ್ಪಕ ಕಾರ್ಯನಿರ್ವಹಣೆಯ ಬಗ್ಗೆ ಖಚಿತಪಡಿಸಿಕೊಂಡು ಮುಂಬರುವ ದಿನಗಳಲ್ಲಿ ಘಟಕಗಳ ದುರಸ್ತಿ ಮತ್ತು ನಿರ್ವಹಣೆಯ ಬಗ್ಗೆ ಸಮರ್ಪಕ ಯೋಜನೆ ರೂಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶನಿವಾರ (ಆ.29) ನಡೆದ …

Read More »

ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಗಂಡಸರು ಅಲ್ಲ ಹೆಂಗಸರು ಅಲ್ಲ-ವಾಟಾಳ್

ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಗಂಡಸರು ಅಲ್ಲ ಹೆಂಗಸರು ಅಲ್ಲ ವಿಚಿತ್ರ ರಾಜಕಾರಣಿಗಳು ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಲೇವಡಿ ಮಾಡಿದ್ದಾರೆ. ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ಮಾತನಾಡಿದ ವಾಟಾಳ್ ನಾಗರಾಜ್ , ಅಂಗಡಿಯಿಂದ ಹಿಡಿದು ಮುಂಗಟ್ಟುವರೆಗೂ ಎಲ್ಲರದ್ದು ಇದೇ ಪರಿಸ್ಥಿತಿ, ಎಲ್ಲರೂ ಮರಾಠಾ ಏಜೆಂಟರು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದು.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ಆಗ್ರಹ ಪಡಿಸಿದ್ದಾರೆ. ಯಾವ ಉದ್ದೇಶಕ್ಕಾಗಿ ಸುವರ್ಣಸೌಧ ನಿರ್ಮಾಣ …

Read More »

ನೀರಾವರಿ ಇಲಾಖೆಯಿಂದ ಬೆಳಗಾವಿ ಜಿಲ್ಲೆಗೆ ಬಂಪರ್ ಲಾಟರಿ….!

ಬೆಳಗಾವಿ ಜಿಲ್ಲೆಗೆ ಹದಿನೆಂಟು ನೀರಾವರಿ ಯೋಜನೆಗಳು* – *ಡಿಪಿಆರ್ ತಯಾರಿಸಲು ಅನುಮತಿಸಿದ ಸಚಿವ ರಮೇಶ್ ಜಾರಕಿಹೊಳಿ‌.* ಬೆಳಗಾವಿ ಜಿಲ್ಲೆಗೆ *11 ಹೊಸ ಏತ ನೀರಾವರಿ ಯೋಜನೆ* ಗಳನ್ನು ಜಾರಿಗೊಳಿಸುವ ಜಲಸಂಪನ್ಮೂಲ ಸಚಿವರಾದ  ರಮೇಶ್ ಜಾರಕಿಹೊಳಿ‌* ಅವರ ಪ್ರಸ್ತಾಪಗಳಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕ ನೀರಾವರಿ ನಿಗಮ ನಿಯಮಿತವು ಅನುಮತಿ ನೀಡಿದೆ. ನಿನ್ನೆ ನಡೆದ ನಿಗಮದ ಅಂದಾಜು ಪರಿಶೀಲನಾ ಸಭೆಯಲ್ಲಿ ಈ *11 ಏತ ನೀರಾವರಿ ಯೋಜನೆ* ಗಳ ಅನುಷ್ಠಾನಕ್ಕೆ …

Read More »

ರಾಯಣ್ಣನನ್ನು ಅಪ್ಪಿಕೊಂಡ ಸರ್ಕಾರ….!

ಬೆಳಗಾವಿ- ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ ಪೀರಣವಾಡಿ ಗ್ರಾಮದ ಮೂರ್ತಿ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಮಂತ್ರಿಗಳ ದಂಡು ಪೀರನವಾಡಿಗೆ ದೌಡಾಯಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ,ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ,ಅಬಕಾರಿ ಸಚಿವ ಎನ್ ನಾಗೇಶ ಅವರು ಇಂದು ಪೀರನವಾಡಿ ಗ್ರಾಮಕ್ಕೆ ಭೇಟಿ ನೀಡಿ,ರಾಷ್ಟ್ರ ಪುರುಷರಾದ ಛತ್ರಪತಿ ಶಿವಾಜಿ,ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿ ಗೌರವ ಸಮರ್ಪಿಸಿದರು. ಅಭಿಮಾನಿಗಳ ಜಯಘೋಶಗಳ ನಡುವೆ ಮೂವರು ಜನ ಸಚಿವರು …

Read More »

ಮೂರ್ತಿ ವಿವಾದ ಇಷ್ಟು ಬೇಗ ಇತ್ಯರ್ಥ. ಆಗುತ್ತದೆ ಎಂದು ಗೊತ್ತಿರಲಿಲ್ಲ.

ಬೆಳಗಾವಿ-ನಾಲ್ಕು ದಿನದ ಹಿಂದೆ ಬೆಳಗಾವಿಗೆ ಭೇಟಿ ನೀಡುವ ತೀರ್ಮಾನ ಕೈಗೊಂಡಿದ್ದೆ, ಇಷ್ಟು ಸುಲಭವಾಗಿ ಮೂರ್ತಿ ವಿವಾದ ಇತ್ಯರ್ಥ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದುಬೆಳಗಾವಿಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಅಚ್ಚರಿ ವ್ಯೆಕ್ತ ಪಡಿಸಿದ್ದಾರೆ. ಇಂದು ಬೆಳಿಗ್ಗೆ ಬೆಳಗಾವಿಗೆ ಆಗಮಿಸಿದ ಅವರು ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದರು ಶಿವಾಜಿ, ರಾಯಣ್ಣ ಮೂರ್ತಿ ವಿವಾದ ಇತ್ಯರ್ಥವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಇಬ್ಬರ ಹೋರಾಟ ಸ್ಮರಣೀಯ. ಕೆಲ ಸಂಕುಚಿತ ಭಾವನೆ ಬೇರೆ ಬೇರೆ …

Read More »

ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ತಂದೆ

ಬೆಳಗಾವಿ-ಮೂವರು ಮಕ್ಕಳಿಗೆ ವಿಷ ಉಣಿಸಿ ತಾನೂ ವಿಷ ಸೇವಸಿ ವ್ಯೆಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಗೋಕಾಕ ತಾಲ್ಲೂಕಿನ ಕಡಬಗಟ್ಟಿ ಅರಣ್ಯ ಪ್ರದೇಶದಲ್ಲಿ ವ್ಯೆಕ್ತಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆತ್ಮ ಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಮೂಲತಹ ಹುಕ್ಕೇರಿ ತಾಲೂಕಿನ ರಾಜಕಟ್ಟಿ ಗ್ರಾಮದ ಮಾರುತಿ ಯಲ್ಲಪ್ಪಾ ಪೂಜಾರಿ,(37) ,ಇತನ ಮಕ್ಕಳಾದ ಸಮರ್ಥ (8) ಯಲ್ಲಪ್ಪ(6),ಪೂಜಾ (4) ಎಂದು ಗುರುತಿಸಲಾಗಿದೆ. ಈತ …

Read More »

ಪೀರನವಾಡಿ ವಿವಾದ ಎಡಿಜಿಪಿ ಸಂಧಾನ ಸಕ್ಸೆಸ್…..!

. ಬೆಳಗಾವಿ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನೆ ವಿವಾದ ಸಂಬಂಧಿಸಿದಂತೆ ಇಂದು ಬೆಳಗಾವಿಯಲ್ಲಿ ಎಡಿಜಿಪಿ ಅಮರಕುಮಾರ್ ಪಾಂಡೆ ಅವರು ನಡೆಸಿದ, ಸಂಧಾನಸಭೆ ಸಕ್ಸಸ್ ಆಗಿದೆ ಎಡಿಜಿಪಿ ಅಮರಕುಮಾರ ಪಾಂಡೆ ಅವರು ನಡೆಸಿದ ಕನ್ನಡಿಗರ – ಮರಾಠಿಗ ಭಾಷಿಕ ಮುಖಂಡರ ಜೊತೆ ನಡೆದ ಸಭೆ ಸಫಲವಾಗಿದೆ. ಪೀರನವಾಡಿಯ ಲಕ್ಷ್ಮೀ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಾಯಕರ ಸಭೆಯಲ್ಲಿ ಸೌಹಾರ್ದಯುತ ಸಲಹೆಗಳು ಪ್ರಸ್ತಾಪವಾಗಿ ವಿವಾದಕ್ಕೆ ಬಹುತೇಕ …

Read More »