Breaking News

LOCAL NEWS

ಸುವರ್ಣಸೌಧದ ಅಂಗಳದಲ್ಲಿ ಸಿಟಿ ರವಿ ಕಾರಿಗೆ ಘೇರಾವ್ ಹಾಕಿದ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರು

ಬೆಳಗಾವಿ- ಸುವರ್ಣ ವಿಧಾನಸೌಧದ ಮೆಟ್ಟಿಲು ಬಳಿ ಸಿಟಿ ರವಿ ಕಾರಿಗೆ ಸಚಿವೆ ಹೆಬ್ಬಾಳ್ಕರ್ ಬೆಂಬಲಿಗರು ಮುತ್ತಿಗೆ ಹಾಕಿ. ಸಿಟಿ ರವಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸಿಟಿ ರವಿ ಕಾರಿನ ಡೋರ್ ಎಳೆದು ಹೊರ ತೆಗೆಯಲು ಯತ್ನಿಸಿದ ಹೆಬ್ಬಾಳಕರ್ ಬೆಂಬಲಿಗರು ಸಿಟಿ ರವಿ ಕುಳಿತುಕೊಂಡಿದ್ದ ಕಾರಿಗೆ ಘೇರಾವ್ ಹಾಕಿ ದಿಕ್ಕಾರದ ಘೋಷಣೆಗಳನ್ನು ಕೂಗಿದರು.ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿ ಬೆಂಬಲಗರನ್ನ ತಡೆದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.ಸ್ಥಳದಲ್ಲಿ ಕೆಲ ಕಾಲ …

Read More »

ಬೆಳಗಾವಿಯಲ್ಲಿ ಗಾಂಧಿ ತಾತ ಏರಿದ ಕಾರಿಗೆ ಹುಡುಕಾಟ…

ಬೆಳಗಾವಿ-ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್‌ ಅಧಿವೇಶನಕ್ಕೆ ಇದೀಗ ನೂರನೇ ವರ್ಷದ ಸಂಭ್ರಮಾಚರಣೆ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕಾಂಗ್ರೆಸ್‌ ಅಧಿವೇಶನದ ಸ್ಮರಣೆಗಾಗಿ ಡಿ. 26 ಮತ್ತು 27 ರಂದು ಕಾಂಗ್ರೆಸ್‌ ಅಧಿವೇಶನದ ಕಾರ್ಯಕ್ರಮ ಆಯೋಜಿಸಲಾಗಿದೆ.1924ರಲ್ಲಿ ಬೆಳಗಾವಿಗೆ ಆಗಮಿಸಿದ್ದ ಮಹಾತ್ಮ ಗಾಂಧೀಜಿ ಅವರನ್ನು ಕಾರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಗಾಂಧೀಜಿ ಅವರಿಗೆ ಬೆಳಗಾವಿಯ ಬೋರಾಗವೇಸ್‌ ಬಳಿಯಿರುವ ಜಾಂಬೋಟಕರ ಕುಟುಂಬದವರು ತಮ್ಮ ಕಾರನ್ನು ನೀಡಿದ್ದರು. ಹಾಗಾಗಿ, ಸರ್ಕಾರ ಆ …

Read More »

ನಮಗೆ ಲಾಲಿ ಪಾಪ್ ಬೇಡ, ಸಮಸ್ಯೆಗಳಿಗೆ ಪರಿಹಾರ ಬೇಕು- ಅಭಯ ಪಾಟೀಲ

ಬೆಳಗಾವಿ -ಬೆಳಗಾವಿಯಲ್ಲಿ ಸುವರ್ಣಸೌಧ ಆದಾಗಿನಿಂದ ಬೆಳಗಾವಿಗೆ ಅನ್ಯಾಯ ಆಗುತ್ತಲೇ ಇದೆ.ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವ ಬದಲು ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿ ಇದನ್ನು ಮಿನಿ ವಿಧಾಸೌದ ಮಾಡಿದ್ದಾರೆ. ಬೆಳಗಾವಿಯ ಸುವರ್ಣಸೌಧ ಭೂತ ಬಂಗಲೆಯಾಗಿದೆ.ಇದೊಂದು ಟೂರೀಂಗ್ ಟಾಕೀಸ್ ಆಗಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ವಿಧಾನಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ನಡೆದ ಚಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅಭಯ ಪಾಟೀಲ, ಬೆಂಗಳೂರಿನಲ್ಲಿ ನಡೆಯುವ …

Read More »

ವಿಧಾನಸಭೆಯಲ್ಲಿ ಖಡಕ್ ವಾದ ಮಂಡಿಸಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ….!

ಬೆಳಗಾವಿ -ವಿಧಾನಸಭೆಯಲ್ಲಿ ರಾಜ್ಯದ ಪರವಾಗಿ, ಬೆಳಗಾವಿಯ ಪರವಾಗಿ ಖಡಕ್ ವಾದ ಮಂಡಿಸಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಾಡದ್ರೋಹಿ ಎಂ ಈ ಎಸ್ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ. ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಲಕ್ಷ್ಮಣ ಸವದಿ ಮಹಾರಾಷ್ಟ್ರದ ಮತಿಗೇಡಿಯೊಬ್ಬ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡುವಂತೆ ಹೇಳಿಕೆ ಕೊಟ್ಡಿದ್ದಾನೆ. ಆದ್ರೆ ಇದು ಮುಂಬೈ ಕರ್ನಾಟಕ ಪ್ರದೇಶ ಮೊದಲು ಮುಂಬಯಿ ಕೇಂದ್ರಾಡಳಿತ ಪ್ರದೇಶ ಎಂದು …

Read More »

ಬೆಳಗಾವಿಗೆ ಕಾಂಗ್ರೆಸ್ ರಾಷ್ಟ್ರನಾಯಕರ ದಂಡು, ಇಂದು ಹೈ ಪವರ್ ಮೀಟೀಂಗ್

ಬೆಳಗಾವಿ- 1924 ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರು ನಡೆಸಿದ ಕಾಂಗ್ರೆಸ್ ಮಹಾ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಡಿಸೆಂಬರ್ 26 ಹಾಗೂ 27 ರಂದು ಬೆಳಗಾವಿಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮವನ್ನು ರಾಷ್ಟ್ರಮಟ್ಟದ ಕಾರ್ಯಕ್ರಮವನ್ನಾಗಿಸಲು ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರ ದಂಡು ಬೆಳಗಾವಿಗೆ ಆಗಮಿಸಿದೆ. ಇಂದು ಮಂಗಳವಾರ ಬೆಳಿಗ್ಗೆ 11-00 ಗಂಟೆಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಸಭೆಯಲ್ಲಿ ಎಐಸಿಸಿ …

Read More »

ವಿಧಾನಸಭೆಯಲ್ಲಿ ಬೆಳಗಾವಿ ಜಿಲ್ಲಾ ವಿಭಜನೆಯ ಕೂಗು…..

ಬೆಳಗಾವಿ- ವಿಧಾನಸಭೆಯಲ್ಲಿ ಇಂದು ಬೆಳಗಾವಿ ಜಿಲ್ಲಾ ವಿಭಜನೆಯ ಕೂಗು ಕೇಳಿ ಬಂತು ಪ್ರಶ್ನೋತ್ತರ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕಿ ಶಶಿಕಲಾ ಜೊಲ್ಲೆ ಚಿಕ್ಕೋಡಿ ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದು ಸರ್ಕಾರ ಕೂಡಲೇ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದರು. ಬೆಂಗಳೂರಿನ ನಂತರ ಬೆಳಗಾವಿ ಭೌಗೋಳಿಕವಾಗಿ ಅತೀ ದೊಡ್ಡ ಜಿಲ್ಲೆಯಾಗಿದೆ.ಹದಿನೈದು ತಾಲ್ಲೂಕುಗಳನ್ನು ಹದಿನೆಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಜಿಲ್ಲೆ ಮಾಡುವದು ಅಗತ್ಯವಾಗಿದೆ.ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಎದುರಾದ ಸಂಧರ್ಭದಲ್ಲಿ …

Read More »

ಕಾಲುವೆಗೆ ಉರುಳಿದ ಪುರಸಭೆ ವಾಹನ ಚಾಲಕನ ಸಾವು..

ಬೆಳಗಾವಿ-ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಪುರಸಭೆ ವಾಹನ ಉರುಳಿದ ಪರಿಣಾಮ ವಾಹನ ಚಾಲಕ ನೀರು ಪಾಲಾದ ಘಟನೆ ನಡೆದಿದೆ. ವಾಹನದಲ್ಲಿ ಸಿಲುಕಿದ್ದ ಚಾಲಕ ಗದಿಗೆಪ್ಪ ಕಾಮನ್ನವರ (40) ಸ್ಥಳದಲ್ಲೆ ಸಾವನ್ನೊಪ್ಪಿದ್ದಾನೆ.ಪ್ರಾಣಾಪಾಯಾದಿಂದ ಹೆಲ್ಪರ್ ಮಂಜುನಾಥ ಸಿಂಗನ್ನವರ ಪಾರಾಗಿದ್ದು ಪವಾಡ. ಬೆಳಗಾವಿ‌ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.ಪುರಸಭೆ ವ್ಯಾಪ್ತಿಯಲ್ಲಿ ಕಸ ಹೊತ್ತಯ್ಯುವ ವಾಹನ ಇದಾಗಿದ್ದು,ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಟಾಟಾ ಎಸ್ ವಾಹನ ಉರುಳಿದೆ‌ ರಭಸವಾಗಿ ಹರಿಯುವ …

Read More »

ಬೆಳಗಾವಿಯ ಮಾಲಿನ್ಯ ಕಚೇರಿಗೆ ಮುತ್ತಿಗೆ ಆತ್ಮಹತ್ಯೆಗೆ ಯತ್ನ

  ಬೆಳಗಾವಿ-ಬೆಳಗಾವಿಯ ಪರಿಸರ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಕಾರ್ಮಿಕರು ಸಾಮೂಹಿಕ ‌ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ನೇಣು ಹಗ್ಗ ಹಾಕಿಕೊಂಡು ನಿಂತಿರೋ 50ಕ್ಕೂ ಹೆಚ್ಚು ಕಾರ್ಮಿಕರು,ಬ್ರಹ್ಮಾನಂದ ಸಾಗರ್ ಜಾಗ್ರಿ ಇಂಡಸ್ಟ್ರಿ ಮತ್ತು ಅಶಕಿನ್ಸ್ ಬಯೋಪಿಲ್ಸ್ ಕಾರ್ಖಾನೆ ಸಿಬ್ಬಂದಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಇರೋ ಕಾರ್ಖಾನೆ ಇದಾಗಿದೆ. 300ಕ್ಕೂ ಹೆಚ್ಚು ಕಾರ್ಖಾನೆ ಕಾರ್ಮಿಕರು ಕಚೇರಿಗೆ ಮುತ್ತಿಗೆ ಹಾಕಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಳಗಾವಿ ಆಟೋ ನಗರದಲ್ಲಿ …

Read More »

ಮಗುವನ್ನು ಕೆರೆಗೆ ಎಸೆದ ರಾಕ್ಷಸಿ ತಾಯಿ ಅರೆಸ್ಟ್

ಬೆಳಗಾವಿ-ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿಯೊಬ್ಬಳು ಮೂರು ದಿನದ ಹೆಣ್ಣು ಮಗುವನ್ನು ಬಿಟ್ಟು ಪರಾರಿಯಾಗಿದ್ದ ಘಟನೆಯ ಬೆನ್ನಲ್ಲಿಯೇ ಈಗ ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ರಾಕ್ಷಸಿ ತಾಯಿಯೊಬ್ಬಳು, ಹೆತ್ತಮಗುವನ್ನು ಕೆರೆಗೆ ಎಸೆದ ಘಟನೆ ಕಣಬರ್ಗಿ ಕೆರೆಯಲ್ಲಿ ನಡೆದಿದೆ. ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು, ಕೆಟ್ಟ ಸಂಬಂಧಿಕರು ಇರಬಹುದು ಆದೆ ಕಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ನಂಬಿದ್ದಾರೆ. ಇದಕ್ಕೆ ತದ್ವಿರುದ್ದವಾಗ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಎರಡು ತಿಂಗಳ …

Read More »

ಆಸ್ಪತ್ರೆಯಲ್ಲಿ ಮಗು ಬಿಟ್ಟು ಪರಾರಿಯಾಗಿದ್ದ ತಾಯಿ ಅರೆಸ್ಟ್….

ಬೆಳಗಾವಿ- ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ,ಹೆತ್ತ ಮಗುವನ್ನು ಬಿಟ್ಟು ಪರಾರಿಯಾಗಿದ್ದ ಪಾಪಿ ತಾಯಿ ಅರೆಸ್ಟ್ ಆಗಿದ್ದಾಳೆ ಬೀಮ್ಸ್ ಆಸ್ಪತ್ರೆಯಲ್ಲಿ ಮಗುವನ್ನು ಬಿಟ್ಟು ಪರಾರಿಯಾಗಿದ್ದ ತಾಯಿ.ಬಿಬಿಜಾನ್ ಸದ್ದಾಮ್ ಹುಸೇನ್ ಸೈಯ್ಯದ್ ಬಂಧನವಾಗಿದೆ.ಮಗು ಜನನ ಆಗುತ್ತಿದ್ದಂತೆ ಮಗುವನ್ನು ಬಿಟ್ಟು ಹೋಗಿದ್ದ ಬಿಬಿಜಾನ್.ಬೈಲಹೊಂಗಲ ಮೂಲದವಳಾಗಿದ್ದಾಳೆ. ಬಿಬಿಜಾನ್ ಎಂಬಾತಳನ್ನು ಎಪಿಎಂಸಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ನಿನ್ನೆ ಮಗುವನ್ನು ಬಿಟ್ಟು ಪರಾರಿಯಾಗಿದ್ದ ಬಿಬಿಜಾನ್ ಪರಾರಿಯಾಗುತ್ತಿದ್ದಂತೆ ಮೂರು ದಿನದ ಮಗು ತೀರಿ ಹೋಗಿತ್ತು.ಬಿಬಿಜಾನ್ ಪರಾರಿಯಾಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ …

Read More »

ನೂರು ವರ್ಷದ ಹರ್ಷ, ನಮ್ಮ ಬೆಳಗಾವಿ ಶೈನಿಂಗ್…..!!

ಬೆಳಗಾವಿ – ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಏಕೈಕ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿತ್ತು,ಈ ಅಧಿವೇಶನ ನಡೆದಿದ್ದು ಬೆಳಗಾವಿ ಮಹಾನಗರದಲ್ಲಿ ಅದು ಬೆಳಗಾವಿ ಪಾಲಿಗೆ ಹೆಮ್ಮೆಯ ವಿಚಾರ, ಈ ಅಧಿವೇಶನ ನಡೆದು ನೂರು ವರ್ಷಗಳು ಗತಿಸಿವೆ ಹೀಗಾಗಿ ಬೆಳಗಾವಿ ಈಗ ರಾಷ್ಟ್ರದ ಗಮನ ಸೆಳೆಯುತ್ತಿದೆ. ಮಹಾತ್ಮ ಗಾಂಧಿ ಅವರು ಬೆಳಗಾವಿಯಲ್ಲಿ ನಡೆಸಿದ ಕಾಂಗ್ರೆಸ್ ಅಧಿವೇಶನಕ್ಕೆ ಈಗ ಶತಮಾನೋತ್ಸವದ ಸಂಭ್ರಮ ಈ ಕಾರ್ಯಕ್ರಮ ಡಿಸೆಂಬರ್ 26,ಹಾಗೂ 27 ರಂದು ಎರಡು …

Read More »

ಸೋನಿಯಾ, ರಾಹುಲ್,ಪ್ರೀಯಾಂಕಾ, ಬೆಳಗಾವಿಯಲ್ಲೇ ತಂಗುತ್ತಾರೆ.

ಬೆಳಗಾವಿ-ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೇಸ್ ಅಧಿವೇಶನ ನಡೆದು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ,ಈ ಕುರಿತು ಪೂರ್ವ ಭಾವಿ ಸಭೆ ನಡೆಸಿದ ಡಿಸಿಎಂ ಡಿಕೆಶಿ. ಸಭೆಯ ಬಳಿಕ ಮಾಧ್ಯಮಗೋಷ್ಠಿ‌ ನಡೆಸಿ ಸಮಾವೇಶದ ಕುರಿತು ಮಾಹಿತಿ ಹಂಚಿಕೊಂಡರು. ಗಾಂಧೀ ಬಾವಿಯಲ್ಲಿ ನೀರು ತಂದು ಚಲ್ಲಿ ಗೃಹಜ್ಯೋತಿ ಘೋಷಣೆ …

Read More »

ಹನಿ ಟ್ರ್ಯಾಪ್ ಲಕ್ಷ ಲಕ್ಷ ಡಿಮ್ಯಾಂಡ್ ಆರೋಪಿಗಳು ಅರೆಸ್ಟ್

ಬೆಳಗಾವಿ-ಹನಿ ಟ್ರ್ಯಾಪ್ ಮಾಡಿ ಲಕ್ಷ.. ಲಕ್ಷ.. ಹಣಕ್ಕೆ ‌ಬೇಡಿಕೆಯಿಟ್ಟಿದ್ದ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.ಲಾಡ್ಜ್‌ನಲ್ಲಿ ತಂಗಿದ್ದ ಪುರುಷ ಮಹಿಳೆ ರೂಂಗೆ ಹೋಗಿ ವಿಡಿಯೋ ಮಾಡಿಕೊಂಡಿದ್ದ ಕೀಚಕರು,ಲಾಡ್ಜ್ ನಲ್ಲಿ ಮಲಗಿದ್ದ,ಜೋಡಿಯ ಅರೆನಗ್ನ ವಿಡಿಯೋ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದರು ವಿಡಿಯೋ ಮಾಡಿಟ್ಟುಕೊಂಡು 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.9 ಲಕ್ಷ ಹಣ ಪಡೆದುಕೊಂಡು ಮತ್ತೆ 1 ಲಕ್ಷಕ್ಕೆ ಕಾಡುತ್ತಿದ್ದರು.ಒಂದು ಲಕ್ಷ ಕೊಡು ಇಲ್ಲವಾದರೆ ನಿನ್ನ ಖಾಸಗಿ ಕ್ಷಣದ ವಿಡಿಯೋ ಬಿಡುಗಡೆ ಮಾಡ್ತಿವಿ ಎಂದು ಬೆದರಿಕೆ …

Read More »

ಬೆಳಗಾವಿ ಜಿಲ್ಲೆಯಲ್ಲಿ, ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಮೂಡಲಗಿ : ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ ಘಟನೆ ಮೂಡಲಗಿ ಪಟ್ಟಣದ ಆರೋಗ್ಯ ಆಧಾರ್ ಆಸ್ಪತ್ರೆಯಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ನಿವಾಸಿ ಪೂಜಾ ಕಾಲತಿಪ್ಪಿ ಎಂಬುವರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡು ಗಂಡು ಒಂದು ಹೆಣ್ಣು ಈ ಮೂರು ಮಕ್ಕಳ ಆರೋಗ್ಯ ಉತ್ತಮವಾಗಿದೆ ಎಂದು ಅವುಗಳನ್ನು ಪರೀಕ್ಷಿಸಿದ ಮಕ್ಕಳು ತಜ್ಞ ಮಹಾಂತೇಶ ಕಡಾಡಿ ತಿಳಿಸಿದ್ದಾರೆ. ಆಸ್ಪತ್ರೆಯ ವೈದ್ಯರಾದ ಮಯೂರಿ ಕಡಾಡಿ, ವಿಜಯ್ ಬೆನಕಟ್ಟಿ, ಬಸವರಾಜ್ …

Read More »

ಎಸ್ ಎಂ ಕೃಷ್ಣ ನಿಧನ, ನಾಳೆ ಸರ್ಕಾರಿ ರಜೆ ಘೋಷಣೆ,

ಎಸ್​ಎಂ ಕೃಷ್ಣ ನಿಧನ: ರಾಜ್ಯದಲ್ಲಿ 3 ದಿನ ಶೋಕಾಚರಣೆ; ನಾಳೆ ಸರ್ಕಾರಿ ರಜೆ ಘೋಷಣೆ, ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಅಂತ್ಯಕ್ರಿಯೆ ಡಿಸೆಂಬರ್​ 10 ರಿಂದ ಡಿಸೆಂಬರ್ 12ರವರೆಗೆ ಶೋಕಾಚರಣೆಗೆ ಘೋಷಣೆ ಮಾಡಲಾಗಿದ್ದು, ಮೂರು ದಿನಗಳ ಕಾಲ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ಅಗಲಿದ ಹಿರಿಯ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ರಾಜ್ಯ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರು ವಿಧಿವಶರಾಗಿರುವ ಹಿನ್ನೆಲೆಯಲ್ಲಿ …

Read More »