Breaking News

LOCAL NEWS

ರಿಯಾಲಿಟಿ ಶೋ ವಿರುದ್ಧ ಹಳ್ಳಿ ಹೈದ ಗರಂ….!!!

ಬೆಳಗಾವಿ ಹಳ್ಳಿ ಹೈದಾ ಪ್ಯಾಟೆಗೆ ಬಂದ್ ಶೋನ‌ ನಿರ್ಗಮಿತ ದೇವೇಂದ್ರ ದೊಡ್ಡನಾಯಕರ ರಿಯಾಲಿಟಿ ಶೋ ವಿರುದ್ಧ ಗಂಭೀರ ಆರೋಪಾಡಿದ್ದು ಇದೊಂದು ರಿಯಾಲಿಟಿ ಶೋ ಅಲ್ಲವೇ ಅಲ್ಲ ಎಂದು ಮಾದ್ಯಮಗಳ ಎದುರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಕಿತ್ತೂರಿನಲ್ಲಿ ಕುಸ್ತಿ ಆಡಿಕೊಂಡು ಬೆಳೆದ ನನಗೆ ಕೆಲ ತಿಂಗಳುಗಳ ಹಿಂದೆ ಶೋನ ಪ್ರಮುಖರು ಆಗಮಿಸಿ ನಿಮಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದರು. ಆದರೆ ನಾನು ರಿಯಾಲಿಟಿ ಶೋನಲ್ಲಿ ನೀಡಿದ್ದ ಟಾಸ್ಕಗಳನ್ನು ಪೂರ್ತಿ ಮಾಡಿದ್ದೇನೆ. …

Read More »

ಅಂಬರೀಶ್ ನಿರ್ಮಿಸಿದ ಮನೆಗಳು ಖಾಲಿ…..ಬಡವರು ಝೋಪಡಿಯಲ್ಲೇ ಜ್ವಾಲಿ…!!!!

ಬೆಳಗಾವಿ- ಬೆಳಗಾವಿಯ ಶ್ರೀನಗರದಲ್ಲಿ ನಿರ್ಮಿಸಿರುವ ಮನೆಗಳನ್ನು ನೋಡಿದ್ರೆ ಕನ್ವರಲಾಲ್ ಅಂಬರೀಶ್ ನೆನಪಾಗುತ್ತಾರೆ ಯಾಕಂದ್ರೆ ಅಂಬರೀಶ್ ಅವರು ವಸತಿ ಸಚಿವರಾಗಿದ್ದಾಗ ಬಹುಮಹಡಿ ಕಟ್ಟಡ ನಿರ್ಮಿಸಿ ಬಡವರಿಗೆ ಆಶ್ರಯ ನೀಡಲು ಕೋಟ್ಯಾಂತರ ರೂ ಅನುದಾನ ನೀಡಿದ್ದರು. ಆಗಿನ ಜಿಲ್ಲಾಧಿಕಾರಿಯಾಗಿದ್ದಾಗ ಎನ್ ಜಯರಾಂ ಅವರ ಮನವಿ ಮೇರೆಗೆ ವಸತಿ ಸಚಿವರಾಗಿದ್ದ ಅಂಬರೀಶ್ ಅವರು ಶ್ರೀನಗರಕ್ಕೆ ಭೇಟಿ ನೀಡಿ ಅಲ್ಲಿ ಗುಡಿಸಿಲಲ್ಲಿ ವಾಸವಾಗಿದ್ದ ಬಡವರ ಜನಜೀವನ ನೋಡಿ ಮರಗಿದ್ದ ಅಂಬರೀಶ ಕಟ್ಟಡ ಸಮಚ್ಛಯ ನಿರ್ಮಿಸಲು ಅಗತ್ಯ …

Read More »

ಕೊಲ್ಹಾಪೂರ ಬೆಂಗಳೂರು ರೈಲಿಗೆ ಚನ್ನಮ್ಮ ಎಕ್ಸಪ್ರೆಸ್ ಎಂದು ನಾಮಕರಣ ಮಾಡಿದ್ದೇ ಜಾಫರ ಷರೀಪ್

ಬೆಳಗಾವಿ-ಕೇಂದ್ರದ ರೆಲ್ವೆ ಸಚಿವರಾಗಿ ಭಾರತೀಯ ರೈಲನ್ನು ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಪರಿವರ್ತನೆ ಮಾಡಿ ರೆಲ್ವೆ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದ ಬ್ರಾಡ್ ಗೇಜ್ ಪಿತಾಮಹ ಮಾಜಿ ಕೇಂದ್ರ ಸಚಿವ ಸಿಕೆ ಜಾಫರ್ ಷರೀಪ್ ಇಂದು ಬೆಳಗಿನ ಜಾವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಕೇಂದ್ರದ ರೆಲ್ವೆ ಸಚಿವರಾಗಿದ್ದ ಸಂಧರ್ಭದಲ್ಲಿ ಸಿ ಕೆ ಜಾಫರ್ ಷರೀಪ್ ಕೊಲ್ಹಾಪೂರ ಬೆಂಗಳೂರು ನಡುವೆ ಓಡಾಡುವ ರೈಲಿಗೆ ರಾಣಿ ಚನ್ನಮ್ಮ ಎಕ್ಸಪ್ರೆಸ್ ಎಂದು ನಾಮಕರಣ …

Read More »

ಕುದ್ರೆಮನಿ ಗ್ರಾಮದಲ್ಲಿ ಚಿರತೆ ಪತ್ತೆ …..ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭ …!!!

ಕಳಗಾವಿ- ಹಿಂಡಾಲ್ಕೋ ಆವರಣದಲ್ಲಿ ಕಾಣಿಸಿಕೊಂಡ ಚಿರತೆ ಇಂದು ಬೆಳಿಗ್ಗೆ ಕುದ್ರೆಮನಿ ಗ್ರಾಮದಲ್ಲಿ ಪತ್ತೆಯಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯುವ ಕಾರ್ಯಾಚರಣೆ ಆಭಿಸಿದ್ದಾರೆ ಇಂದು ಬೆಳಿಗ್ಗೆ ಕುದ್ರೆಮನಿ ಗ್ರಾಮದ ಹದ್ದಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಆರ್ ಎಫ್ ಓ ಕಡೋಲ್ಕರ್ ತಮ್ಮ ತಂಡದೊಂದಿಗೆ ಕುದ್ರೆಮನಿ ಗ್ರಾಮಕ್ಕೆ ತೆರಳಿದ್ದು ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ ಬೋನಿನಲ್ಲಿ ನಾಯಿ ಇಟ್ಟು ಚಿರತೆ ಹಿಡಿಯವ ತಯಾರಿಯಲ್ಲಿದ್ದು …

Read More »

ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಡೆವಲಪ್ಮೆಂಟ್ ಎಕ್ಸಪ್ರೆಸ್…..!!!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ನಿನ್ನೆಯಷ್ಟೇ ಹತ್ತು ಹೊಸ ಬಸ್ ಗಳ ಸೇವೆ ಒದಗಿಸಿಕೊಟ್ಟ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ. ಮಹತ್ವದ ಕೂಡು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು ಇಂದು ಶುಕ್ರವಾರ ದೇಸೂರ ಗ್ರಾಮದಲ್ಲಿ ಅಕ್ಷರಶಃ ಲಕ್ಷ್ಮೀ ವಾರ ಆಗಿತ್ತು ಹಲವಾರು ವರ್ಷಗಳಿಂದ ಹದಗೆಟ್ಟು ಹೋಗಿದ್ದ ನಾಲ್ಕು ಗ್ರಾಮಗಳನ್ನು ಕೂಡಿಸುವ ದೇಸೂರ,ನಂದಿಹಳ್ಳಿ,ಗಜಪತಿ,ಕುಕಡೊಳ್ಳಿ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಾಲ್ಕೂ ಗ್ರಾಮಗಳ ಹಿರಿಯರ ಸಮ್ಮುಖದಲ್ಲಿ ಪೂಜೆ …

Read More »

ಶೀಘ್ರದಲ್ಲಿಯೇ ರಾಜ್ಯದಲ್ಲಿ ನರ್ಸಿಂಗ್ ಯುನಿವರ್ಸಿಟಿ ಸ್ಥಾಪನೆ – ಡಿಕೆ ಶಿವಕುಮಾರ್

ಬೆಳಗಾವಿ- ರಾಜ್ಯದಲ್ಲಿ ನರ್ಸಿಂಗ್ ವಿಶ್ವ ವಿದ್ಯಾಲಯ ಸ್ಫಾಪಿಸುವ ನಿಟ್ಟಿನಲ್ಲಿ ಕಾನೂನು ಸಲಹೆ ಪಡೆದು ತಜ್ಞರ ಅಭಿಪ್ರಾಯ ಪಡೆದು ರಾಜೀವ ಗಾಂಧಿ ಯುನಿವರ್ಸಿಟಿ ಜೊತೆ ಸಮಾಲೋಚನೆ ಮುಂದುವರೆದಿದ್ದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವದು ಎಂದು ಜಲಸಂಪನ್ಮೂಲ ,ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಭರವಸೆ ನೀಡಿದ್ದಾರೆ ಬೆಳಗಾವಿಯಲ್ಲಿ ಕೆಎಲ್ಈ ಸಂಸ್ಥೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ನರ್ಸಿಂಗ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ …

Read More »

ಡಿ ಕೆ ಶಿವಕುಮಾರ್ ಸಂದಾನ ಸಫಲ ಪ್ರತಿಭಟನೆ ಕೈಬಿಟ್ಟ ರೈತರು

ಬೆಳಗಾವಿ- ಎಫ್ ಆರ್ ಪಿ ದರ ನಿಗದಿ ಕಬ್ಬಿನ ಬಾಕಿ ಬಿಲ್ ಗಾಗಿ ಹಲವಾರು ದಿನಗಳಿಂದ ಬೆಳಗಾವಿ ರೈತರು ನಡೆಸುತ್ತಿದ್ದ ರೈತರ ಅಹೋ ರಾತ್ರಿ ಧರಣಿ ಅಂತ್ಯಗೊಂಡಿದೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ರೈತರ ಜೊತೆ ನಡೆಸಿದ ಸಂಧಾನ ಸಫಲವಾಗಿದೆ ಡಿಸಿ ಕಚೇರಿ ಎದುರು ರೈತರು ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಡಿ ಕೆ ಶಿವಕುಮಾರ್ ರಾಜ್ಯ ಸರ್ಕಾರ ರೈತರ ಪರವಾಗಿದೆ ರೈತರ …

Read More »

26 ರಂದು ಬೆಳಗಾವಿಯಲ್ಲಿ ನೇಕಾರರ ಯುವಜನ ಸಮಾವೇಶ

ಬೆಳಗಾವಿ ಮಹಾರಾಷ್ಟ್ರ ಮಾದರಿಯಲ್ಲಿ ನೇಕಾರ ಸಮಾಜ ಸೇರಿದಂತೆ ಆರು ಸಮುದಾಯದವರ ಜಾಗೃತಿ ಮೂಡಿಸಲು ನ.26ರಂದು ಬೆಳಗಾವಿಯಲ್ಲಿ ಯುವಜನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು‌ ಗಜಾನನ ಗುಂಜೇರಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಂಶ ಪಾರಂಪರಿಕ ನೂರಾರು ವರ್ಷಗಳಿಂದ ನೇಕಾರಿಕೆ ವೃತ್ತಿಯಲ್ಲಿ ತಮ್ಮ ಬದುಕನ್ನು ನಡೆಸುತ್ತಿರುವ ಕರ್ನಾಟಕ ನೇಕಾರ ಸಮುದಾಯಗಳಾದ ದೇವಾಂಗ,‌ಕುರುವಿನ ಶೆಟ್ಟಿ, ಸ್ವಕುಳ ಸಾಳಿ, ಪದ್ಮಸಾಲಿ ಸೇರಿದಂತೆ ಆರು ಜಾತಿಗಳಿಗೆ ಮಹಾರಾಷ್ಟ್ರ ಮಾದರಿಯಲ್ಲಿ ವಿಶೇಷ ಶೈಕ್ಷಣಿಕ ಮತ್ತು ಅರ್ಥಿಕ ಮೀಸಲಾತಿ ಪಡೆದುಕೊಳ್ಳುವುದು, …

Read More »

ರಮೇಶ ಜಾರಕಿಹೊಳಿ ಪ್ರಾಮಾಣಿಕರಿದ್ದಾರೆ ಕಬ್ಬಿನ ಬಿಲ್ ಕೊಡ್ತಾರೆ – ಡಿಕೆ ಶಿವಕುಮಾರ್

ಬೆಳಗಾವಿ- ರಮೇಶ್ ಜಾರಕಿಹೊಳಿ ದೊಡ್ಡವರು ಅವರ ಬಗ್ಗೆ ನಾನು ಮಾತನಾಡುವದಿಲ್ಲ ಅವರು ಪ್ರಾಮಾಣಿಕರಿದ್ದು ರೈತರ ಬಿಲ್ ಕೊಡುತ್ತಾರೆ ಬೆಳಗಾವಿ ಜಿಲ್ಲಾ ಮಂತ್ರಿಗಳು ಆಗಿರುವ ಅವರು ಮುಖ್ಯಮಂತ್ರಿಗಳ ಜತೆ ಸೇರಿ ರೈತರ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುತ್ತಾರೆ ಎಂದು ಬೆಳಗಾವಿಯಲ್ಲಿ ಜಲಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಉತ್ತಮ ವಾತಾವರಣ ಇದೆ ಪಕ್ಷದ ಹೈಕಮಾಂಡ್ ನನಗೆ ಕೆಲವು ಜವಾಬ್ದಾರಿ …

Read More »

ಎಂಜಿನ್ ರೇಡಿಯೇಟರ್ ಬಿಸಿ ನೀರು ಸಿಡಿದು ನಾಲ್ಕು ವಿಧ್ಯಾರ್ಥಿಗಳಿಗೆ ಗಾಯ

ಬೆಳಗಾಬಿ- ಎಂಜಿನ್ ನ ರೇಡಿಯೇಟರ್ ನಲ್ಲಿರುವ ಬಿಸಿನೀರು ಸಿಡಿದು ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ ಸಂಕೇಶ್ವರ ಪಟ್ಟಣದ ಎಸ್ ಡಿ‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳೇ ಗಂಭೀರ ಗಾಯಗೊಂಡಿದ್ದಾರೆ ಶಾಲೆಯ ವಾಹನದಲ್ಲಿ ಇಂದು ಬೆಳಗ್ಗೆ ಸಂಕೇಶ್ವರಕ್ಕೆ ತೆರುಳುವಾಗ ಹುಕ್ಕೇರಿ ತಾಲೂಕಿನ ಗೋಟೂರು‌ ಗ್ರಾಮದ ಬಳಿ ಘಟನೆ ನಡೆದಿದೆ ಲಚಕೇತ ಕೋಳಿ (೬) ಸಿದ್ಧಾರ್ಥ ಪಾಟೀಲ (೫) ಶ್ರೀಶೈಲಕುಮಾರ ಮಠಪತಿ (೪) ಅನುರಾಧಾ ಮಠಪತಿ (೬) ಗಂಭೀರಗಾಯಗೊಂಡಿರುವ ವಿದ್ಯಾರ್ಥಿಗಳಾಗಿದ್ದು …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಹೊಸ ಬಸ್ ಭಾಗ್ಯ….!!

ಬೆಳಗಾವಿ: ಬೆಳಗಾವಿಯ ಗ್ರಾಮೀಣ ಕ್ಷೇತ್ರದಲ್ಲಿರುವ ಸುವರ್ಣ ವಿಧಾನಸೌಧ ಗುರುವಾರ ತನ್ನ ತವರು ಕ್ಷೇತ್ರದ ಅಭಿವೃದ್ದಿಗೆ ಸಾಕ್ಷಿಯಾಯಿತು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸುವರ್ಣ ವಿಧಾನಸೌಧದ ಎದುರು 10 ಹೊಸ ಬಸ್‍ಗಳಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಹೊಸ ಬಸ್‍ಗಳಿಗೆ ಪೂಜೆ ನೆರವೆರಿಸಿ ಹಸಿರು ನಿಶಾನೆ ತೋರಿಸಿ ತಮ್ಮ ಕ್ಷೇತ್ರದ ಹತ್ತು ಮಾರ್ಗಗಳಲ್ಲಿ ಹತ್ತು ಬಸ್‍ಗಳನ್ನು ಬಿಳ್ಕೊಟ್ಟು ಮಾಧ್ಯಮದವರ ಜತೆ ಮಾತನಾಡಿದ ಶಾಸಕಿ …

Read More »

ಸಾವಗಾಂವ ಕೆರೆಯಲ್ಲಿ ‌ನೀರು ಪಾಲಾದ ಬೆಳಗಾವಿಯ ನಾಲ್ಕು ಯುವಕರು

ಬೆಳಗಾವಿ- ನಗರದ ಸಮೀಪದ ಸಾವಗಾಂವ ಕೆರೆಯಲ್ಲಿ ಈಜಲು ಹೋದ ನಾಲ್ಕು ಜನ ಯುವಕರು ನೀರು ಪಾಲಾದ ಘಟನೆ ಇಂದು ಸಂಜೆ ನಡೆದಿದೆ ಬೆಳಗಾವಿ ಭಾಗ್ಯನಗರದ,ಚೈತನ್ಯ ಗಜಾನನ ಬಾಂಧುರ್ಗೆ ಶಹಾಪೂರಿನ ಗೌತಮ ನತೀನ ಕಲಘಟಗಿ,ಬೆನಕನಹಳ್ಳಿಯ ಸಾಯಿಲ್ ಯುವರಾಜ ಬೆನಕೆ ,ಹಿಂಡಲಾ ವಿಜಯನಗರದ ಅಮಾನ್ ಮುಖೇಶ್ ಸಿಂಗ್ ಇವರೆಲ್ಲರೂ ಮೃತ ದಯರ್ದೈವಿಗಳಾಗಿದ್ದು ಮೃತಪಟ್ಟ ನಾಲ್ಕು ಜನ ಯುವಕರು 16 ವರ್ಷದವರಾಗಿದ್ದಾರೆ ಇಂದು ಮದ್ಯಾಹ್ನ ಗೆಳೆಯನ ಬರ್ತಡೇ ಆಚರಿಸಲು ಮನೆಯಲ್ಲಿ ಹೇಳಿ ಹೋದ ನಾಲ್ಕು …

Read More »

ಸಿಎಂ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಗರಂ..!!!

ಬೆಳಗಾವಿ- ಮುಖ್ಯಮಂತ್ರಿ ಕುಮಾರಸ್ವಾಮಿ ರೈತ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಪ್ರತಿಭಟಿಸಿದರು ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಕಾರ್ಯಕರ್ತೆಯರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯೆಕ್ತಪಡಿಸಿದರು ಸಿಎಂ ಕುಮಾರಸ್ವಾಮಿ ರೈತ ಮಹಿಳೆಯನ್ನು ಎಲ್ಲಿ ಮಲಗಿದ್ದಿ ? ಅಂತ ಪ್ರಶ್ನೆ ಮಾಡಿ ರೈತರನ್ನು ಗೂಂಡಾಗಳೆಂದು ಕರೆದು ಮಹಿಳಾ ಸಮಾಜಕ್ಕೆ ಮತ್ತು ರೈತ ಸಮುದಾಯಕ್ಕೆ ಅವಮಾನ ಮಾಡಿದ್ದು ಕೂಡಲೇ ಮುಖ್ಯಮಂತ್ರಿ …

Read More »

ಡಿಸೆಂಬರ್ 10 ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ,

ಬೆಳಗಾವಿ, ನವೆಂಬರ್ 18 (ಕರ್ನಾಟಕ ವಾರ್ತೆ) ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 10 ರಿಂದ 20 ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದ್ದು, ಅಧಿವೇಶನ ಸುಗಮವಾಗಿ ನಡೆಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು. ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರ (ನ.19) ನಡೆದ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. …

Read More »

ಬೆಳಗಾವಿ ಜಿಲ್ಲೆಯಲ್ಲಿ ಕರದಂಟಿನ ಬೆಲ್ಲಿಗೆ ಸೆಡ್ಡು ಹೊಡೆದ ಸಕ್ಕರೆ …!!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಈಗ ರಿಯಲ್ ಪಾಲಿಟಿಕ್ಸ ಆರಂಭವಾಗಿದೆ ಸೇಡಿಗೆ ಸೇಡು ತೀರಿಸಿಕೊಳ್ಳಲು ಅವಮಾನ ಮಾಡಿದವರನ್ನು ಅವಮಾನ ಮಾಡಲು ಈಗ ಬಡ ರೈತರನ್ನು ಮುಂದೆ ಮಾಡಿ ಸಂಘರ್ಷ ಆರಂಭವಾಗಿರುವದು ರೈತ ಸಂಘರ್ಷ ಅಲ್ಲ ಇದೊಂದು ರಾಜಕೀಯ ಸಂಘರ್ಷ ಎನ್ನುವದು ಎಲ್ಲರಿಗೂ ಗೊತ್ತಾಗಿದೆ ರೈತರು ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಸಮರ ಸಾರಿದ್ದಾರೆ ಬೆಳಗಾವಿ ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಉಳಿಸಿಕೊಂಡಿದ್ದರೂ ಜಿಲ್ಲಾ …

Read More »