Breaking News

LOCAL NEWS

ಮಾದ್ಯಮಗಳ ಹದ್ದಿನ ಕಣ್ಣು….ಸತೀಶ ಜಾರಕಿಹೊಳಿ ಕೈಯಲ್ಲಿ ನಿಂಬೆಹಣ್ಣು……!!!!!!

ಬೆಳಗಾವಿ-ಇತ್ತೀಚಿನ ದಿನಗಳಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಫುಲ್ ಚೇಂಜ್ ಆಗಿದ್ದಾರೆ ಕ್ಷೇತ್ರದ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಸ್ವತಹ ಜನರ ಸಮಸ್ಯೆ ಆಲಿಸಿ ಅದಕ್ಕೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುತ್ತಿದ್ದಾರೆ ಪ್ರತಿ ವರ್ಷ ಡಿಸೆಂಬರ 6 ರಂದು ಸ್ಮಶಾನದಲ್ಲಿ ಮೂಢನಂಬಿಕೆ ವಿರೋಧಿಸಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ ರಾಷ್ಟ್ರದ ಗಮನ ಸೆಳೆದಿದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಕೈಯಲ್ಲಿ ಇತ್ತೀಚಿನ ದಿನಗಳಲ್ಲಿ ಲಿಂಬೆಹಣ್ಣು ಕಾಣಿಸುತ್ತಿದೆ ಇದು ನಂಬಿಕೆಗೆ ದೂರವಾದರೂ ಸತ್ಯ …

Read More »

ತಿಲ್ಲಾರಿ ಡ್ಯಾಂ ನಲ್ಲಿ ಬೆಳಗಾವಿಯ ಕಾಲೇಜು ಹುಡಗಿ ನೀರು ಪಾಲು

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಕಾಲೇಜುವೊಂದರ ಸುಮಾರು ಹದಿನೈದು ಜನ ಕಾಲೇಜು ಹುಡುಗರು,ಮೂವರು ಜನ ಹುಡುಗರು ತಿಲ್ಲಾರಿ ಡ್ಯಾಂ ಗೆ ಪಿಕನಿಕ್ ಗೆ ಹೋದ ಸಂಧರ್ಭದಲ್ಲಿ ಈಜಲು ಹೋದ ಹುಡುಗಿಯೊಬ್ಬಳು ನೀರು ಪಾಲಾದ ಘಟನೆ ಗುರುವಾರ ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ ಖಾನಾಪೂರ ತಾಲ್ಲೂಕಿನ ಇಟಗಿ ಗ್ರಾಮದ ಸುಚಿತ್ರಾ ಘಾಡಿ ಬೆಳಗಾವಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು ತನ್ನ ಗೆಳತಿಯರ ಜೊತೆ ತಿಲ್ಲಾರಿ ಡ್ಯಾಂ ಗೆ ಹೋದ ಸಂಧರ್ಭದಲ್ಲಿ ಈ ಘಟನೆ …

Read More »

ಅಭಿವೃದ್ಧಿಯ ಇಚ್ಛಾಶಕ್ತಿ ಅಂದ್ರೆ ಇದಪ್ಪ….

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರವನ್ನು ಬೆಳಗಾಗುವಷ್ಟರಲ್ಲಿ ಅಭಿವೃದ್ಧಿ ಮಾಡಿ ತೋರಿಸಬೇಕು ಎನ್ನುವ ಛಲದೊಂದಿಗೆ ಫುಲ್ ಸ್ಪೀಡ್ ನಲ್ಲಿ ಓಡಾಡುತ್ತಿದ್ದಾರೆ,ಅಧಿಕಾರಿಗಳ ಜೊತೆ ಸಭೆ ನಡೆಸೋದು ಗ್ರಾಮಗಳಿಗೆ ಭೇಟಿ ನಿಡೋದು ಅವರ ದಿನಚರಿಯಾಗಿದೆ ಬೆಳಿಗ್ಗೆ ಸಾಂಬ್ರಾದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಗೋಜಗಾ ಗ್ರಾಮಕ್ಕೆ ಭೇಟಿ ಕೊಟ್ಟು ಅಲ್ಲಿಯ ಸಮಸ್ಯೆ ಆಲಿಸಿ ಬೆಳಗಾವಿಗೆ ಮರಳಿದ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ನೀರಾವರಿ ನಿಗಮದ ಕಚೇರಿಯಲ್ಲಿ …

Read More »

ಶಾಸಕರ ಅಜ್ಮೇರ್ ಭೇಟಿಗೆ ರಾಜಕೀಯ ಬಣ್ಣ ಬೇಡ- ಸತೀಶ

ಬೆಳಗಾವಿ: ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಶಾಸಕರೊಡನೆ ಅಜ್ಮಿರ್ ಪ್ರವಾಸ ಕೈಗೊಂಡಿರುವ ಹಿಂದೆ ರಾಜಕೀಯ ಉದ್ದೇಶ ಇಲ್ಲ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಗುರುವಾರ ಜಿಪಂ ಅಧ್ಯಕ್ಷರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಸಚಿವ ರಮೇಶ ಜಾರಕಿಹೊಳಿ ಶಾಸಕರೊಂದಿಗೆ ಅಜ್ಮಿರ್ ಪ್ರವಾಸ ಕೈಗೊಂಡಿರುವ ಹಿಂದೆ ಯಾವುದೇ ರಾಜಕೀಯವಿಲ್ಲ. ಅದ ಸಹಜ ಪ್ರವಾಸ. ಈ ಹಿಂದೆ ಅಶೋಕ ಪಟ್ಟಣ ಸೇರಿದಂತೆ ನಾನು ಪ್ರವಾಸಕ್ಕೆ ಹೋಗಿದ್ದೆ ಅದಕ್ಕೆ ರಾಜಕೀಯ ಕಲ್ಪಿಸುವುದು ಸರಿಯಲ್ಲ …

Read More »

ಎನಿ ಪ್ರಾಬಲಮ್…ಡೋಂಟ್ ವರೀ……ಉದ್ಯಮಿಗಳಿಗೆ ಅಭಯ ಹಸ್ತ

ಬೆಳಗಾವಿ- ಬೆಳಗಾವಿಯ ಪ್ರಸಿದ್ದ ಉದ್ಯಮಬಾಗ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಇನ್ನಿತರ ಸವಲತ್ತುಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ಫೌಂಡ್ರಿ ಕ್ಲಸ್ಟರ್ ಭವನದಲ್ಲಿ ಸುಧೀರ್ಘ ಸಂವಾದ ನಡೆಸಿ ಉದ್ಯಮಿಗಳ ಸಮಸ್ಯೆಗಳನ್ನು ಆಲಿಸಿದರು ಲಘು ಭಾರತೀಯ ಉದ್ಯೋಗ ವತಿಯಿಂದ ಈ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು ಸಭೆಯಲ್ಲಿ ಉದ್ಯಮಬಾಗ ಪ್ರದೇಶಕ್ಕೆ ಸಮರ್ಪಕ ವಿದ್ಯುತ್ ಪೂರೈಕೆ,ರಸ್ತೆಗಳ ದುರಸ್ಥಿ,,ಬೀದಿ ದೀಪಗಳ ಅಳವಡಿಕೆ,ಕುಡಿಯುವ ನೀರಿನ ಸಮರ್ಪಕ ಪೂರೈಕೆ ,ತೆರಿಗೆಯಲ್ಲಿ ರಿಯಾಯತಿ …

Read More »

ಸಾಂಬ್ರಾದಲ್ಲಿ ಹೆಬ್ಬಾಳಕರ ಡೆವಲಪ್ಮೆಂಟ್ ಎಕ್ಸಪ್ರೆಸ್ ಟೇಕಪ್ ….!!!

ಬೆಳಗಾವಿ- ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದಲ್ಲಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು ಗ್ರಾಮದ ರಸ್ತೆ ನಿರ್ಮಾಣ, ಸೇರಿದಂತೆ ಒಟ್ಟು ಒಂದು ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು ಸಾಂಬ್ರಾ ಗ್ರಾಮದ ಮಂಗಳವಾರ ಪೇಠ,ಶುಕ್ರವಾರ ಪೇಠದಲ್ಲಿ ರಸ್ತೆ ಡಾಂಬರೀಕರಣ,ಮಾರುತಿ ಗಲ್ಲಿ ಮತ್ತು ಕಲ್ಮೇಶ್ವರ ನಗರದಲ್ಲಿ ಫೆವರ್ಸ ಹಾಕುವ ಕಾಮಗಾರಿ,ಮಹಾದೇವ …

Read More »

ಸಂಬಾಜಿರಾವ್ ಬಿಡೆಗೆ ಕರ್ನಾಟಕ ಪ್ರವೇಶ ನಿಷೇಧ

ಬೆಳಗಾವಿ ಮಹಾರಾಷ್ಟ್ರದ ಮುಖಂಡ ಸಂಭಾಜಿರಾವ್ ಬಿಡೆಗೆ ಮತ್ತೆ ಕರ್ನಾಟಕ ಪ್ರವೇಶ ನಿರ್ಬಂಧ.ಮಾಡಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಬೆಳಗಾವಿ ಜಿಲ್ಲಾಧಿಕಾರಿಗಳು ಇದೇ ತಿಂಗಳು 21ರ ಮಧ್ಯರಾತ್ರಿ 12 ಗಂಟೆಯಿಂದ 11 ದಿನಗಳ ಕಾಲ್ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿಷೇಧ.ಮಾಡಿದ್ದಾರೆ ಜುಲೈ 31 ರ ಮಧ್ಯಾಹ್ನ 12 ಗಂಟೆಯ ವರೆಗೂ ಮಹಾ ಮುಖಂಡ ಸಂಭಾಜಿರಾವ್ ಗೆ ನಿರ್ಬಂಧ.ವಿಧಿಸಲಾಗಿದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ …

Read More »

ಗಾಂಜಾ ವಿರುದ್ಧ ಸಿಸಿಬಿ ಸಮರ ,ನಾಲ್ವರ ಬಂಧನ

ಬೆಳಗಾವಿ- ಬೆಳಗಾವಿ ನಗರದಲ್ಲಿ ಕಾಲೇಜು ವಿಧ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸುವಲ್ಲಿ ಸಿಸಿಬಿ ಪೋಲೀಸರು ಯಶಸ್ವಿಯಾಗಿದ್ದಾರೆ ಬೆಳಗಾವಿ ನಗರದಲ್ಲಿ ವಿದ್ಯಾರ್ಥಿಗಳು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೋಲೀಸ್ ಗಾಂಜಾ ಮಾರಾಟಗಾರರ ವಿರುದ್ಧ ಸಮರ ಸಾರಿದೆ. ಬೆಳಗಾವಿಯ ಗ್ಯಾಂಗ್ ವಾಡಿಯಲ್ಲಿ ದುರ್ಗಾದೇವಿ ಮಂದಿರದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಅಶೋಕ ನಗರ ಮತ್ತು ಫೋರ್ಟ್ ರಸ್ತೆಯ ನಿವಾಸಿಗಳಾದ ಸರ್ಜು ಗೋವಿಂದ ಲೋಂಡೆ‌,ನಿಖಾಬ ಪೀರಜಧೆ,ತಬ್ರೇಜ್ ನರಗುಂದ,ಸಾದಾಬ ಪೀರಜಾದೆ …

Read More »

ಸ್ಮಾರ್ಟ್ ಸಿಟಿ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್….ವಾಹನ ಸವಾರರೇ ಹುಷಾರ್…..!!!

ಸ್ಮಾರ್ಟ್ ಸಿಟಿ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್….ವಾಹನ ಸವಾರರೇ ಹುಷಾರ್…..!!!ಬೆಳಗಾವಿ- ಬೆಳಗಾವಿ ನಗರ ಐತಿಹಾಸಿಕ ನಗರ ,ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ನಗರ,ರಾಜ್ಯದ ಎರಡನೇಯ ರಾಜಧಾನಿಯ ಪಟ್ಟಕ್ಕೇರಲಿರುವ ನಗರ,ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ನೂರು ಕೋಟಿ ಅನುದಾನ ಪಡೆಯುತ್ತಿರುವ ನಗರ ಇಷ್ಟೆಲ್ಲಾ ಗೌರವಗಳಿಗೆ ಕಾರಣವಾಗಿರು ಬೆಳಗಾವಿ ನಗರದ ರಸ್ತೆಗಳ ಸ್ಥಿತಿ ನೋಡಿ ಛೀ…ಅನಬೇಕೋ…ಥೂ..ಅನಬೇಕೋ ತಿಳಿಯುತ್ತಿಲ್ಲ ಬೆಳಗಾವಿ ಮಹಾನಗರ ಪಾಲಿಕೆಗೆ ಸರ್ಕಾರ ಪ್ರತಿ ವರ್ಷ ತಪ್ಪದೇ ನೂರು ಕೋಟಿ ಅನುದಾನ ಕೊಡತೈತಿ ನಮ್ಮ …

Read More »

ಪ್ರಾಥಮಿಕ ಶಾಲೆಗೆ ಶಾಸಕಿ ಭೇಟಿ,ಪರಿಸ್ಥಿತಿ ನೋಡಿ ದಂಗಾದ ಹೆಬ್ಬಾಳಕರ

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದ ಬಳಿಕ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ ಇಂದು ಸೋನೋಲಿ ಗ್ರಾಮಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಗ್ರಾಮಸ್ಥರು ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಗೆ ಅವರನ್ನು ಕರೆದುಕೊಂಡು ಹೋಗಿ ಕ್ಷೇತ್ರದ ಶಾಸಕರಿಗೆ ಶಾಲೆಯ ದರ್ಶನ ಮಾಡಿಸಿದರು ಶಾಲೆಯ ದ್ವಾರದಲ್ಲಿ ರಸ್ತೆಯಲ್ಲಿ ನೀರು ನಿಂತಿದೆ ಮಳೆಯ ನೀರು ಶಾಲೆಯ ದ್ವಾರದ ಬಳಿಯ ಗೋಬರ್ ಗ್ಯಾಸ್ ಹೊಂಡದಲ್ಲಿ ನೀರು ತುಂಬಿಕೊಂಡಿದೆ …

Read More »

ಬೆಳಗಾವಿಯಲ್ಲಿ ಶುರುವಾಯ್ತು ತ್ರೀಡಿ ಲೇಸರ್ ತಂತ್ರಜ್ಞಾನ

ಬೆಳಗಾವಿ-ನಗರದ ಪ್ರತಿಷ್ಠಿತ ಜಿಐಟಿ ಕಾಲೇಜಿನಲ್ಲಿ ತ್ರೀಡಿ ಲೇಸರ್ ತಂತ್ರಜ್ಞಾನ ಆರಂಭಿಸಲಾಗಿದೆ ಎಂದು ಪ್ರಾಚಾರ್ಯ ಎ.ಎಸ್. ದೇಶಪಾಂಡೆ ತಿಳಿಸಿದ್ದಾರೆ ಪತ್ರಿಕಾಗೋಷ್ಠಿ.ನಡೆಸಿದ ಅವರು ಜಿಐಟಿ ಕಾಲೇಜಿನಲ್ಲಿ ತ್ರಿಡಿ ಲೇಸರ್ ತಂತ್ರಜ್ಞಾನದ ಕೇಂದ್ರ ಆರಂಭಿಸಲಾಗಿದೆ. ಇಂಡಸ್ಟ್ರಿ-4 ತಂತ್ರಜ್ಞಾನ ಮಾದರಿಯ ಈ ವ್ಯವಸ್ಥೆಗೆ ಭಾರತ ಸೇರಿದಂತೆ ಜಾಗತಿಕವಾಗಿ ಬೇಡಿಕೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ ಈ ಕೇಂದ್ರಕ್ಕಾಗಿ 75 ಲಕ್ಷ ರೂ ಖರ್ಚಾಗಿದ್ದು, ರಾಜ್ಯ ಸರಕಾರ ಶೇ 50 …

Read More »

ಅಜಮೇರ ಖ್ವಾಜಾ ಗರೀಬನ್ ನವಾಜ ದರ್ಗಾಗೆ ಜಾದರ್ ಅರ್ಪಿಸಿದ ರಮೇಶ ಜಾರಕಿಹೊಳಿ

ಬೆಳಗಾವಿ- ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗೆ ಹರಕೆ ಹೊತ್ತಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಇಂದು ತಮ್ಮ ಪ್ರಮುಖ ಬೆಂಬಲಿಗರು ಹಾಗು 13 ಜನ ಶಾಸಕರೊಂದಿಗೆ ರಾಜಸ್ತಾನದ ಅಜಮೇರ ನಲ್ಲಿರುವ ಖ್ವಾಜಾ ಗರೀಬನ್ನ ನವಾಜ ದರ್ಗಾ ದರ್ಶನ ಪಡೆದು ಜಾದರ್ ಅರ್ಪಿಸಿ ತಮ್ಮ ಹರಕೆ ತೀರಿಸಿದ್ದಾರೆ ವಿಧಾನಪರಿಷತ್ತ ಸದಸ್ಯ ವಿವೇಕರಾವ ಪಾಟೀಲ ಸೇರಿದಂತೆ ಹದಿಮೂರು ಜನ ಶಾಸಕರು ಬೆಳಗಾವಿಯ ಕಾಂಗ್ರೆಸ್ ಮುಖಂಡರಾದ ಹಾಶಮ ಭಾವಿಕಟ್ಟಿ ,ಸನೀಲ ಹನಮಣ್ಣವರ ,ಉತ್ತಮ ಪಾಟೀಲ ,ಕಿರಣ …

Read More »

ಮುಖ್ಯಮಂತ್ರಿ ಕುಮಾರಸ್ವಾಮಿ ಅಶಕ್ತರಲ್ಲ- ಸಚಿವ ಜಾರ್ಜ

ಬೆಳಗಾವಿ ಈಗಾಗಲೇ ಕುಮಾರಸ್ವಾಮಿ ಹೇಳಿದ್ದಾರೆ ಕಾಂಗ್ರೆಸನಿಂದ ತೊಂದರೆ ಇಲ್ಲ ಎಂದು. ಆದರೆ ಸಿಎಂ ಸಮಸ್ಯೆಗಳನ್ನು ಸ್ಪಂದಿಸುವ ವಿಚಾರದಲ್ಲಿ ಕಣ್ಣೀರು ಹಾಕಿದ್ದಾರೆ ಅವರು ವೀಕ್ ಸಿಎಂ ಆಗಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ‌.ಜಾಜ್೯ ಹೇಳಿದರು. ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಕುಮಾರಸ್ವಾಮಿ ಪವರ್ ಫುಲ್ ಇದ್ದಾರೆ. ಯಂಗ್ ಸ್ಟಾರ್ ಇದ್ದಾರೆ ಎಂದು ಯಾರಿಗೂ ಸರಕಾರ ನಡೆಸುವುದು ಸುಲಭವಲ್ಲ. ಕುಮಾರಸ್ವಾಮಿ ಅಷ್ಟೇ ಅಲ್ಲಾ ಎಲ್ಲರಿಗೂ ಸರಕಾರ ನಡೆಸುವುದು ಹೂವಿನ ಹಾಸಿಗೆ ಅಲ್ಲ. ಅದೊಂದು …

Read More »

ರಾಕಸಕೊಪ್ಪ ಜಲಾಶಯ ಭರ್ತಿ ,ನೀರು ಬಿಡುಗಡೆ

ಬೆಳಗಾವಿ- ಹಲವಾರು ದಶಕಗಳ ಬಳಿಕ ಮಳೆಗಾಲದಲ್ಲಿ ಅಲ್ಪಾವಧಿಯಲ್ಲಿ ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದ್ದು ಜಲಾಶಯದ ಎರಡು ಗೇಟ್ ಗಳನ್ನು ತೆರದು ನೀರು ಬಿಡುಗಡೆ ಮಾಡಲಾಗಿದೆ ಕಳೆದ ವರ್ಷ ರಾಕಸಕೊಪ್ಪ ಜಲಾಶಯ ಸೆಪ್ಟಂಬರ್ ತಿಂಗಳಲ್ಲಿ ಭರ್ತಿಯಾಗಿತ್ತು ಕಳೆದ ಒಂದು ವಾರದಿಂದ ಸಹ್ಯಾದ್ರಿಯ ಮಡಿಲಲ್ಲಿ ವರ್ಷಧಾರೆ ನಿರಂತರವಾಗಿರುವದರಿಂದ ಈ ವರ್ಷ ಜುಲೈ ತಿಂಗಳಲ್ಲಿಯೇ ಜಲಾಶಯ ಭರ್ತಿಯಾಗಿರುವದು ಸಂತಸದ ಸಂಗತಿಯಾಗಿದೆ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು ಮುಂಜಾಗೃತಾ ಕ್ರಮವಾಗಿ ಜಲಾಶಯದಿಂದ …

Read More »

ಹರ್ಷ ತಂದ ವರ್ಷಧಾರೆ….ನದಿ ತೀರ ನೋಡಬಾರೆ….!!!!

ಬೆಳಗಾವಿ: ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿವೆ. ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಳಗಾವಿ ನಗರದಲ್ಲಿ ಮಾರ್ಕಂಡೇಯ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿ ಪಾತ್ತದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜಿಲ್ಲೆಯ ಮಲಪ್ರಬಾ, ಘಟಪ್ರಭಾ ಸೇರಿದಂತೆ ಜಿಲ್ಲೆಯ ಸಪ್ತ ನದಿಗಳ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಇರುವ …

Read More »